ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾನವ ಶಿಶು ಮತ್ತು ಭ್ರೂಣ

(ಅಮೆರಿಕನ್ ಮಾನವ ಶಾಸ್ತ್ರಜ್ಞ Stephen Jay Gould ಅವರ ಬರೆದಿರುವ Ever Since Darwin ಪುಸ್ತಕದ Human Baby as Embryos ಆಧ್ಯಾಯದ ಅನುವಾದ) ಸ್ವಿಸ್ ಪ್ರಾಣಿಶಾಸ್ತ್ರಜ್ಞ ಅಡಾಲ್ಫ್ ಪೋರ್ಟ್‌ಮನ್ ನನ್ನ ನೆಚ್ಚಿನ ವಿಜ್ಞಾನಿಗಳಲ್ಲಿ ಒಬ್ಬರು. ಪೋರ್ಟ್‌ಮನ್ ತಮ್ಮ ಅಧ್ಯಯನದಲ್ಲಿ, ಸಸ್ತನಿಗಳ ಸಂತಾನೋತ್ಪತ್ತಿ ತಂತ್ರಗಳ ಎರಡು ಮೂಲ ಮಾದರಿಗಳನ್ನು ಗುರುತಿಸಿದ್ದಾರೆ. "ಆದಿಮ" (Primitive) ಎಂದು ಗುರುತಿಸಲ್ಪಡುವ ಕೆಲವು ಸಸ್ತನಿಗಳು, ಕಡಿಮೆ ಗರ್ಭಾವಧಿ ಹೊಂದಿರುತ್ತವೆ ಮತ್ತು ಪೂರ್ಣವಾಗಿ ಬೆಳವಣಿಗೆಯಾಗಿರದ (ಚಿಕ್ಕ ಗಾತ್ರದ, ಕೂದಲುರಹಿತ, ಮುಚ್ಚಿದ ಕಣ್ಣು, ಮುಚ್ಚಿದ ಕಿವಿಗಳನ್ನು ಹೊಂದಿದ ಮತ್ತು ಅಸಹಾಯಕ) ಹೆಚ್ಚಿನ ಸಂಖ್ಯೆಯ ಮರಿಗಳಿಗೆ ಜನ್ಮ ನೀಡುತ್ತದೆ. ಈ ಸಸ್ತನಿಗಳ ಜೀವಿತಾವಧಿಯು ಅಲ್ಪಾವಧಿಯದಾಗಿದ್ದು, ದೇಹದ ಗಾತ್ರಕ್ಕೆ ಹೋಲಿಸಿದರೆ ಚಿಕ್ಕ ಮೆದುಳನ್ನು ಹೊಂದಿರುತ್ತವೆ ಮತ್ತು ಅವುಗಳ ಸಾಮಾಜಿಕ ನಡವಳಿಕೆಯು ಸರಳವಾಗಿರುತ್ತದೆ. ಪೋರ್ಟ್‌ಮನ್ ಈ ಮಾದರಿಯನ್ನು ಆಲ್ಟ್ರಿಷಿಯಲ್ (Altricial) ಎಂದು ಉಲ್ಲೇಖಿಸುತ್ತಾರೆ.  ಮತ್ತೊಂದೆಡೆ, ಅನೇಕ "ಮುಂದುವರಿದ" ಸಸ್ತನಿಗಳು ದೀರ್ಘಾವಧಿಯ ಗರ್ಭಧಾರಣೆ, ದೀರ್ಘಾವಧಿಯ ಜೀವಿತಾವಧಿ, ದೊಡ್ಡ ಮೆದುಳು, ಸಂಕೀರ್ಣವಾದ ಸಾಮಾಜಿಕ ನಡವಳಿಕೆಗಳನ್ನು ಹೊಂದಿರುವ, ಮತ್ತು ಕೆಲವು ಪ್ರಾಣಿಗಳು ಚೆನ್ನಾಗಿ ಬೆಳವಣಿಗೆಯಾದ, ಕಡಿಮೆ ಸಂಖ್ಯೆಯ ಶಿಶುಗಳಿಗೆ ಜನ್ಮ ನೀಡುತ್ತವೆ ಮತ್ತು  ಅ...

ಮಡ್ಡಿ

  ಮಡ್ಡಿ ನಮ್ಮ ದೇಶ ಮತ್ತು ಶ್ರೀಲಂಕಾದ ಒಣ ಕಾಡುಗಳಲ್ಲಿ ಕಾಣಬರುವ ಸಾಮಾನ್ಯ ಮರ. ಆಯುರ್ವೇದದ ಕೆಲವು ಔಷಧ ಗಳಲ್ಲಿ ಬಳಸುವ ನೋನಿ ಇದರ ಹತ್ತಿರದ ಸಂಬಂಧಿ. ಇದನ್ನು ರುಬಿಯೇಸಿಯೆ ಕುಟುಂಬಕ್ಕೆ ಸೇರಿಸಲಾಗಿದೆ. ಕಾಫಿ ಸಹ ರುಬಿಯೇಸಿಯೆ ಕುಟುಂಬಕ್ಕೆ ಸೇರಿದ ಸಸ್ಯ.

ಪೇಪರ್ ಕಣಜ

ಬಹಳ ವರ್ಷಗಳ ಹಿಂದೆ ನಮ್ಮ ಮನೆಯ ಲೆಟರ್​ಬಾಕ್ಸ್​ನಲ್ಲಿ ಒಂದು ಕೀಟ ಗೂಡು ರಚಿಸಿತ್ತು. ಆ ಗೂಡು ನೋಡಲು ಷಟ್ಕೋನಾಕೃತಿಯಲ್ಲಿದ್ದರಿಂದ ಅದನ್ನು ನಾನು ಜೇನು ಹುಳು ಎಂದೆ ತಿಳಿದುಕೊಂಡಿದ್ದೆ. ಆದರೆ ನನ್ನ ತಂದೆ ಹೇಳಿದ ಅನಂತರ ತಿಳಿಯಿತು ಅದು ಜೇನು ಹುಳು ಅಲ್ಲ ಬದಲಿಗೆ ಕಣಜವೆಂದು. ಅಷ್ಚೆ ಅಲ್ಲದೆ ಅದರ ಕಡಿತ ತುಂಬ ನೋವಿನಿಂದ ಕೂಡಿರುತ್ತದೆ ಅದರ ತಂಟೆಗೆ ಹೋಗಬಾರದೆಂದು ಎಚ್ಚರಿಸಿದ್ದರು.

ಸಗಣಿ ಓಡುಹುಳು

ಪ್ರತೃತಿಯಲ್ಲಿ ಸಾವಯವ ವಸ್ತುಗಳು ಪುನಾರವರ್ತನೆಗೆ ಒಳಗಾಗುತ್ತದೆ. ಹೀಗೆ ಆಗದಿದ್ದರೆ ನಮ್ಮ ಪರಿಸರ ನಿಂತನೀರಾಗುತ್ತಿತ್ತು. ನಾವು ತಿಂದು ಉಳಿದ ಆಹಾರವನ್ನೆ ತೆಗೆದುಕೊಳ್ಳಿ ಅದನ್ನು ಕಾಗೆ, ಇರುವೆ ಮುಂತಾದ ಪಕ್ಷಿ ಪ್ರಾಣಿಗಳು ತಿಂದು ಇನ್ನಷ್ಟು ಮುರಿಯುವಂತೆ ಮಾಡುತ್ತವೆ, ನಂತರ ಸೂಕ್ಷ್ಮ ಜೀವಿಗಳು ಇನ್ನಷ್ಟು ಮುರಿದು ಕೊನೆಯದಾಗಿ ಮೂಲಧಾತುವಾಗಿ ಪರಿಸರಕ್ಕೆ ಸೋರಿ ಮತ್ತೆ ಪುನರಾವರ್ತನೆಗೊಳ್ಳುತ್ತವೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಬೈನೆ ಅಥವಾ ಬಗನಿ

ನೀವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ತಿರುಗಾಡುವಾಗ, ತಾಳೆ ಜಾತಿಗೆ ಸೇರಿದ, ತ್ರಿಕೋನಾಕಾರದ ವಿಚಿತ್ರವಾದ ಎಲೆಗಳನ್ನು ಹೊಂದಿರುವ ಸಸಿಗಳನ್ನು ಅಥವಾ ಮರಗಳನ್ನು ನೋಡಿರಬಹುದು. ಇದು ಮತ್ಯಾವುದು ಅಲ್ಲದೆ ಬಗನಿ ಅಥವಾ ಬೈನೆ ಮರ. ಇದು ಭಾರತ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತದೆ.

ಅಶೋಕ

ಬಹುಶಃ ನಾವೆಲ್ಲ ಅಶೋಕ ಮರದ ಹೆಸರನ್ನು ಕೇಳಿರುತ್ತೇವೆ. ಸುಂದರ ಹೂವನ್ನು ತಳೆಯುವ ಈ ಮರ ಭಾರತದಲ್ಲಿ ಸಾಂಸ್ಕೃತಿಕವಾಗಿ ಮುಖ್ಯವಾದ ಮರ. ಇದು ಮೂಲತಃ ಭಾರತ, ಮ್ಯಾನ್ಮಾರ್ ಮತ್ತು ಮಲಯ ದೇಶಗಳಲ್ಲಿ ಕಂಡುಬರುತ್ತದೆ.

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.