ಮಡ್ಡಿ ನಮ್ಮ ದೇಶ ಮತ್ತು ಶ್ರೀಲಂಕಾದ ಒಣ ಕಾಡುಗಳಲ್ಲಿ ಕಾಣಬರುವ ಸಾಮಾನ್ಯ ಮರ. ಆಯುರ್ವೇದದ ಕೆಲವು ಔಷಧ ಗಳಲ್ಲಿ ಬಳಸುವ ನೋನಿ ಇದರ ಹತ್ತಿರದ ಸಂಬಂಧಿ. ಇದನ್ನು ರುಬಿಯೇಸಿಯೆ ಕುಟುಂಬಕ್ಕೆ ಸೇರಿಸಲಾಗಿದೆ. ಕಾಫಿ ಸಹ ರುಬಿಯೇಸಿಯೆ ಕುಟುಂಬಕ್ಕೆ ಸೇರಿದ ಸಸ್ಯ.
ಹೂವಿನ ಬಣ್ಣ ಬಿಳಿ ಮತ್ತು ಐದು ಪಕಳೆಗಳನ್ನು ಹೊಂದಿರುತ್ತದೆ |
ಮಡ್ಡಿಯನ್ನು ಮೊರಿಂಡ ಜೀನಸ್‌ಗೆ ವರ್ಗೀಕರಿಸಲಾಗಿದೆ. ಮೊರಿಂಡ ಲ್ಯಾಟಿನ್‌ನ ಎರಡು ಪದಗಳಿಂದ ಮೂಡಿದೆ. ಮೊರಸ್ ಎಂದರೆ ಮಲ್‌ಬರಿ ಹಣ್ಣು ಮತ್ತು ಇಂಡಿಕಾ ಎಂದರೆ ಭಾರತದಿಂದ ಬಂದಿರುವುದು ಎನ್ನುವ ಅರ್ಥವನ್ನು ನೀಡುತ್ತದೆ. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಅಲ್ಲದೆ, ಥಾಯ್ಲೆಂಡ್, ಇಂಡೋನೇಷ್ಯಾ, ಲಾವೋಸ್, ವಿಯೆಟ್ನಾಂ ಮತ್ತು ಕಾಂಬೋಡಿಯ ದೇಶಗಳಲ್ಲು ಕಂಡು ಬರುತ್ತದೆ.
ಮಡ್ಡಿ ನಿತ್ಯಹರಿದ್ವರ್ಣದ ಸಣ್ಣ ಗಾತ್ರದ ಮರ. ಇದು ಸುಮಾರು ೫ರಿಂದ ೧೦ ಮೀಟರ್‌ಗಳಷ್ಟು ಎತ್ತರ ಬೆಳೆಯಬಹುದು. ಇದರ ಎಲೆ ಸರಳ ರೀತಿಯಲ್ಲಿ ಎದುರು ಬದರು ಮತ್ತು ವಿರಳವಾಗಿರುತ್ತವೆ. ಹಾಗಾಗಿ ಇದರ ನೆರಳು ದಟ್ಟವಾಗಿರುವುದಿಲ್ಲ. ಇದರ ಕಾಂಡದ ಮೇಲೆ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಮರದ ಬಣ್ಣ ಹಳದಿ. ಮಾರ್ಚ್‌ನಿಂದ ಜೂನ್‌ವರೆಗು ಹೂಗಳನ್ನು ತಳೆದರೆ ಜೂನ್‌ನಿಂದ ಆಗಸ್ಟ್‌ವರೆಗೆ ಕಾಯಿ ಮತ್ತು ಹಣ್ಣುಗಳನ್ನು ಬಿಡುತ್ತವೆ. ಹೂವಿನ ಬಣ್ಣ ಬಿಳಿ ಮತ್ತು ಕೊಳವೆ ರೀತಿಯಲ್ಲಿ ಐದು ಪಕಳೆಗಳನ್ನು ಹೊಂದಿರುತ್ತದೆ. ಕಾಯಿಗಳು ತೆಳು ಹಸಿರು ಬಣ್ಣದಾಗಿದ್ದು ಮೇಲೆ ಕಣ್ಣಿನಂತ ಆಕಾರವನ್ನು ಹೊಂದಿರುತ್ತದೆ. ಹಣ್ಣಾದ ಬಳಿಕ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಚಿಕ್ಕ ಸಸ್ತನಿಗಳು ಇದರ ಬೀಜವನ್ನು ಪಸರಿಸುತ್ತವೆ. ಕೀಟಗಳು ಪರಾಗಸ್ಪರ್ಶ ಮಾಡುತ್ತವೆ. ಇವು ಒಣ ಪ್ರದೇಶಗಳಲ್ಲಿ ಬದುಕುವುದರಿಂದ ಬರ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.
ಮಡ್ಡಿಯ ಮರದಿಂದ ಕೃಷಿ ಮತ್ತು ಮನೆ ಬಳಕೆಯ ಉಪಕರಣಗಳನ್ನು ತಯಾರಿಸುತ್ತಾರೆ. ಇದರ ಬೇರಿನ ತೊಗಟೆಯನ್ನು ಬಣ್ಣ ತಯಾರಿಸಲು ಬಳಸಲಾಗುತ್ತದೆ. ಈ ಬಣ್ಣಕ್ಕೆ ಮೊರಿಂಡೊನ್ ಎನ್ನುವ ಹೆಸರಿದೆ ಮತ್ತು ವ್ಯವಹಾರಿಕವಾಗಿ ಸುರಂಜಿ ಎಂದು ಕರೆಯಲಾಗುತ್ತದೆ. ಈ ಬಣ್ಣದಿಂದ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೆ ಕೆಂಪು, ಕಂದು ಮತ್ತು ಕೆನ್ನೀಲಿ ಬಣ್ಣಗಳನ್ನು ಲೇಪಿಸಬಹುದು. ಇಷ್ಟೇ ಅಲ್ಲದೇ ಆಯುರ್ವೇದ ಮತ್ತು ಸಿದ್ಧ ಔಷಧಗಳಲ್ಲು ಈ ಮರದ ಬಳಕೆಯಿದೆ.
ಕಾಂಡದ ಮೇಲೆ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತವೆ |
ಮಡ್ಡಿ ನಿತ್ಯಹರಿದ್ವರ್ಣದ ಸಣ್ಣ ಗಾತ್ರದ ಮರ |
ಕಾಯಿಗಳು ತೆಳು ಹಸಿರು ಬಣ್ಣದಾಗಿದ್ದು ಮೇಲೆ ಕಣ್ಣಿನಂತ ಆಕಾರವನ್ನು ಹೊಂದಿರುತ್ತದೆ |
ಎಲೆ ಸರಳ ರೀತಿಯಲ್ಲಿ ಎದುರು ಬದರು ಮತ್ತು ವಿರಳವಾಗಿರುತ್ತವೆ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ