ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನಮ್ಮ ಮರಗಳು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೇರಳೆ ಮರದ ಕತೆ

  ಬೆಂಗಳೂರಿನ ಆಕಾಶದ ತುಂಬಾ ಮುಂಗಾರು ಪೂರ್ವ ಮೋಡಗಳು ಆವರಿಸಿತ್ತು. ತಾಪಮಾನವೂ ಇಳಿದು ಸ್ವಲ್ಪ ನಿರಾಳವೆನಿಸಿತ್ತು. ಈ ಮಳೆ ಮೋಡದ ದಿನಗಳು ಚೇತೋಹಾರಿ! ನಮ್ಮ ಮನೆಯ ಮುಂದೆ ಇರುವ ನೇರಳೆ ಮರ ( Syzygium cumini) ಈಗ ಹೊಸದಾಗಿ ಚಿಗುರಿದ ಎಲೆಗಳಿಂದ ಉಜ್ವಲವಾಗಿ ಹೊಳೆಯುತ್ತಿತ್ತು . ಈ ನಿತ್ಯಹರಿದ್ವರ್ಣ ಪ್ರಭೇದ ಸದಾ ಕಾಲ ಎಲೆಗಳಿಂದ ತುಂಬಿದ್ದರೂ ಮಳೆಯಿಂದ ತೊಳೆದ ಎಲೆಗಳು ಹಸುರಿನಿಂದ ಕಂಗೊಳಿಸುತ್ತಿದ್ದವು. ನೇರಳೆ ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ? ಆದರೆ ನಮ್ಮ ಮನೆಯ ಮುಂದಿನ ಈ ಮರ ಇನ್ನೂ ಹಣ್ಣು ಬಿಡಲು ಪ್ರಾರಂಭಿಸಿಲ್ಲ ! ಈ ಚಿಕ್ಕ ಮರಕ್ಕೂ ತನ್ನದೇ ಆದ ಒಂದು ಕಥೆಯಿದೆ. ಇದು ಸಣ್ಣ ಗಿಡವಾಗಿದ್ದಾಗ ಜಿ.ಕೆ.ವಿ.ಕೆ ಸಮೀಪದ ನಮ್ಮ Office ನ ಮುಂದೆ ನೆಡಲು ಇದನ್ನು ತಂದಿದ್ದೆವು. ಆದರೆ ಆ ಕಟ್ಟಡದ ಯಜಮಾನ ಅದನ್ನು ಅಲ್ಲಿ ನೆಡಲು ಒಪ್ಪಲಿಲ್ಲ! ಕಾರಣ ಸರಳ - ಮುಂದೊಂದು  ದಿನ ಅದು ಹಣ್ಣು ಬಿಟ್ಟು , ಮಕ್ಕಳು ನೇರಳೆ ಹಣ್ಣಿಗಾಗಿ ಕಲ್ಲು ಎಸೆದರೆ? ನಮ್ಮ Office ನ ಕಟ್ಟಡದಲ್ಲಿ ಬಹುತೇಕ ಗಾಜು ಇರುವುದರಿಂದ ನೇರಳೆ ಗಿಡವನ್ನು ಅಲ್ಲಿ ನೆಡುವುದು ಒಳ್ಳೆಯದಲ್ಲ ಎಂದು ಭಾವಿಸಿದ . ಎಂಥಾ ದೂ(ದು)ರಾಲೋಚನೆ! ಹೀಗೆ ಪಕ್ಕಕ್ಕಿಟ್ಟ ಗಿಡವನ್ನು ಒಂದು ದಿನ ಸದ್ದಿಲ್ಲದೆ ಮನೆಗೆ ತಂದೆ. Office ನಲ್ಲಿ ಅದು ಯಾರ ಗಮನಕ್ಕೂ ಬರಲಿಲ್ಲ. ಮನೆಗೆ ತಂದಾಗ ಎಲ್ಲರೂ ಅದನ್ನು ಮಾವಿನ ಗಿಡವೆಂದೇ ಭಾವಿಸಿದರು. ನಮ್ಮ ಮನೆಯಲ್ಲಿ ಗಿಡ ನೆಡುವಂತಹ ...

ಮುತ್ತುಗ

ಮುತ್ತುಗ ನಮ್ಮ ದೇಶದ ಪವಿತ್ರವಾದ ಮರಗಳಲ್ಲಿ ಒಂದು. ನಮ್ಮ ಬಯಲುಸೀಮೆ ಅಥವಾ ಕಾವಲು ಪ್ರದೇಶಗಳಲ್ಲಿ ಕಂಡುಬರುವ ಒಂದು ಸುಂದರವಾದ ಮರಳಲ್ಲಿ ಒಂದು.

ಮಡ್ಡಿ

  ಮಡ್ಡಿ ನಮ್ಮ ದೇಶ ಮತ್ತು ಶ್ರೀಲಂಕಾದ ಒಣ ಕಾಡುಗಳಲ್ಲಿ ಕಾಣಬರುವ ಸಾಮಾನ್ಯ ಮರ. ಆಯುರ್ವೇದದ ಕೆಲವು ಔಷಧ ಗಳಲ್ಲಿ ಬಳಸುವ ನೋನಿ ಇದರ ಹತ್ತಿರದ ಸಂಬಂಧಿ. ಇದನ್ನು ರುಬಿಯೇಸಿಯೆ ಕುಟುಂಬಕ್ಕೆ ಸೇರಿಸಲಾಗಿದೆ. ಕಾಫಿ ಸಹ ರುಬಿಯೇಸಿಯೆ ಕುಟುಂಬಕ್ಕೆ ಸೇರಿದ ಸಸ್ಯ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಬೈನೆ ಅಥವಾ ಬಗನಿ

ನೀವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ತಿರುಗಾಡುವಾಗ, ತಾಳೆ ಜಾತಿಗೆ ಸೇರಿದ, ತ್ರಿಕೋನಾಕಾರದ ವಿಚಿತ್ರವಾದ ಎಲೆಗಳನ್ನು ಹೊಂದಿರುವ ಸಸಿಗಳನ್ನು ಅಥವಾ ಮರಗಳನ್ನು ನೋಡಿರಬಹುದು. ಇದು ಮತ್ಯಾವುದು ಅಲ್ಲದೆ ಬಗನಿ ಅಥವಾ ಬೈನೆ ಮರ. ಇದು ಭಾರತ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತದೆ.

ಅಶೋಕ

ಬಹುಶಃ ನಾವೆಲ್ಲ ಅಶೋಕ ಮರದ ಹೆಸರನ್ನು ಕೇಳಿರುತ್ತೇವೆ. ಸುಂದರ ಹೂವನ್ನು ತಳೆಯುವ ಈ ಮರ ಭಾರತದಲ್ಲಿ ಸಾಂಸ್ಕೃತಿಕವಾಗಿ ಮುಖ್ಯವಾದ ಮರ. ಇದು ಮೂಲತಃ ಭಾರತ, ಮ್ಯಾನ್ಮಾರ್ ಮತ್ತು ಮಲಯ ದೇಶಗಳಲ್ಲಿ ಕಂಡುಬರುತ್ತದೆ.

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಹೊಳೆ ದಾಸವಾಳ

ಹೂವುಗಳು ಗೊಂಚಲಾಗಿ , ಗುಲಾಬಿ ಅಥವ ನೇರಳೆ ಬಣ್ಣದಲ್ಲಿ ಇರುತ್ತದೆ . ಹೊಳೆ ದಾಸವಾಳ ಸುಂದರವಾದ ಹೂವುಗಳನ್ನು ತಳೆಯುವ ಮರ. ಇದು ಭಾರತ, ಬಾಂಗ್ಲಾದೇಶ, ಚೈನ, ಥಾಯ್ಲೆಂಡ್, ಶ್ರೀಲಂಕಾ, ಮಲೇಶಿಯಾ ಇನ್ನು ಮುಂತಾದ ಆಗ್ನೇಯ ಏಶಿಯದ ದೇಶಗಳಲ್ಲಿ ಕಂಡುಬರುತ್ತದೆ. ಇದರ ಕನ್ನಡದ ಮತ್ತೊಂದು ಹೆಸರು ಹೊಳೆ ಮತ್ತಿ. ಇದಕ್ಕೆ ಇಂಗ್ಲೀಷ್‌ನಲ್ಲಿ ಕ್ವೀನ್ಸ್ ಪ್ಲವರ್, ಕ್ವೀನ್ ಆಫ್ ಪ್ಲವರ್, ಕ್ವೀನ್ ಕ್ರೇಪ್ ಮೈರ್ಟಲ್ ಮತ್ತು ಪ್ರೈಡ್ ಆಫ್ ಇಂಡಿಯಾ ಎಂಬ ಹೆಸರಿವೆ. ಹಿಂದಿಯಲ್ಲಿ ಇದರ ಹೆಸರು "ಜರುಲ್". ಇದರ ವೈಜ್ಞಾನಿಕ ಹೆಸರು "ಲ್ಯಾಗರ್ಸ್ಟ್ರೋಮಿಯ ಸ್ಪೀಸಿಯೋಸ". ಇದು ಮಹಾರಾಷ್ಟ್ರದ ರಾಜ್ಯ ಪುಷ್ಪ. ತೊಗಟೆಯಲ್ಲಿ ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಹೊಳೆ ದಾಸವಾಳ ಮಧ್ಯಮ ಗಾತ್ರದ ಅಂದರೆ ಸುಮಾರು ೪೦ ಮೀ. ಎತ್ತರಕ್ಕೆ ಬೆಳೆಯುವ ಮರ. ಸಾಮಾನ್ಯವಾಗಿ ಈ ಮರ ಬೆಳೆಯುವುದು ತುಂಬಾ ನಿಧಾನ. ನೀರಿನ ಹರಿವಿರುವ ಕಡೆ ಇದು ವೇಗ ಮತ್ತು ಎತ್ತರವಾಗಿ ಬೆಳೆಯುತ್ತದೆ. ಆದರೆ ಒಣ ಪ್ರದೇಶದಲ್ಲಿ ಬೆಳವಣಿಗೆ ಕುಂಠಿತಗೊಂಡು ಕುಬ್ಜವಾಗಿರುತ್ತದೆ. ಹೊಳೆ ದಾಸವಾಳ ಎಲೆಯುದುರಿಸುವ ಮರ. ಇದರ ತೊಗಟೆ ಬೂದು ಬಣ್ಣದಾಗಿದ್ದು ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಎಲೆಗಳು ಸರಳವಾಗಿದ್ದು ಉದ್ದಕೆ ದೀರ್ಘವೃತ್ತಾಕಾರವಾಗಿರುತ್ತದೆ. ಇದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ನಲ್ಲಿ ಹೂ ತಳೆಯುತ್ತದೆ. ಇದರ ಹೂವುಗಳು ಗೊಂಚಲಾ...

ಹೊಂಗೆ

ಹೊಂಗೆ ಅನೇಕ ಕೀಟಗಳನ್ನು ಆಕರ್ಷಿಸುತ್ತದೆ .  ನಮ್ಮ ದೇಶದಲ್ಲಿ ಅದರಲ್ಲು ದಕ್ಷಿಣ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವ ಮರ ಯಾವುದು ಎಂದರೆ ಅದು ಹೊಂಗೆ ಎಂದೆ ಹೇಳಬಹುದು . ಈ ಮರಗಳು ಏಶಿಯಾದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಕಂಡು ಬರುತ್ತದೆ . ಭಾರತ , ಚೈನ , ಮಲೇಶಿಯಾ , ಇಂಡೋನೇಶಿಯಾ ದೇಶಗಳು ಈ ಮರದ ಆವಾಸ ಸ್ಥಾನ . ಈ ಮರಕ್ಕೆ ಹಿಂದಿಯಲ್ಲಿ ಕರಂಜ್ , ತಮಿಳಿನಲ್ಲಿ ಪುಂಗೈ , ತೆಲುಗಿನಲ್ಲಿ ಕಾನುಗ ಮತ್ತು ಸಂಸ್ಕೃತದಲ್ಲಿ ನಕ್ತಮಾಲ ಎಂಬ ಹೆಸರಿವೆ . ವೈಜ್ಞಾನಿಕವಾಗಿ ಮಿಲ್ಲೆಟಿಯ ಪಿನ್ನಾಟ (Milletia pinnata) ಎಂಬ ಹೆಸರಿದೆ .

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ