ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಲಿ ಸಂರಕ್ಷಣೆ: ಏಕೆ ಇಷ್ಟೊಂದು ಪ್ರಾಮುಖ್ಯತೆ?

 ಅದು ಮೇ 2016. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಗಣಗೂರಿನಲ್ಲಿ ನಾವು ತಂಗಿದ್ದೆವು. ಹುಲಿಯ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸೀಳುದಾರಿ ಗಣತಿ ಸಮೀಕ್ಷೆ (Line Transect Survey)  ನಡೆಯುತ್ತಿತ್ತು. ನನ್ನೊಂದಿಗೆ ಕೆಲವು ಫೀಲ್ಡ್ ಅಸಿಸ್ಟೆಂಟ್‌ಗಳು ಮತ್ತು ಸ್ವಯಂಸೇವಕರು ಇದ್ದರು. ಅದು ಮುಂಗಾರು ಪೂರ್ವದ ಮಳೆಯ ಸಮಯ. ಒಂದೊಂದು ದಿನ ಸಂಜೆ ಬೀಳುತ್ತಿದ್ದ ಹದವಾದ ಮಳೆಯಿಂದ ಕಾಡು ಹಸಿರಿನಿಂದ ಕಂಗೊಳಿಸುತ್ತಿತ್ತು. ಒದ್ದೆಯಾದ ಮಣ್ಣಿನ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಒಂದು ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ. ಊಟ ಮುಗಿಸಿ, ಸಮೀಕ್ಷೆಗೆ ಹೊರಡಲು ಇನ್ನೂ ಸಮಯವಿದ್ದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದ್ದೆವು. ನಾವು ಉಳಿದಿದ್ದ ಅರಣ್ಯ ಇಲಾಖೆಯ ಹಳೆಯ ಕಟ್ಟಡದ ಸ್ವಲ್ಪ ದೂರದಲ್ಲೇ ಒಂದು ಕೆರೆಯಿತ್ತು. ಕಟ್ಟಡದಿಂದ ಹೊರಬಂದರೆ ಕೆಲವು ಮೆಟ್ಟಿಲುಗಳು. ಅಲ್ಲಿಂದ ಒಂದು ಕಚ್ಚಾ ರಸ್ತೆ ಬಲಗಡೆಯಿಂದ ಬಂದು ಕಟ್ಟಡದ ಮುಂದೆ ಹಾದು, ಎಡಗಡೆಗೆ ಸಾಗಿ ಸ್ವಲ್ಪ ದೂರದಲ್ಲಿ ಸ್ವಲ್ಪ ಬಲಕ್ಕೆ ತಿರುಗಿ ಕೆರೆಯನ್ನು ಸೇರುತ್ತಿತ್ತು. ಆ ತಿರುವಿನ ಕಾರಣದಿಂದ ಕಟ್ಟಡದ ಮುಂದೆ ನಿಂತರೆ ಕೆರೆ ಕಾಣುತ್ತಿರಲಿಲ್ಲ. ಒಂದು ಕ್ಷಣ ನಮ್ಮ ಮಾತೆಲ್ಲವು ಸ್ತಬ್ದವಾಯಿತು. ಇದ್ದಕ್ಕಿದ್ದಂತೆ ಹುಲಿಯ ಕೂಗೊಂದು ಕೇಳಿಸಿದ್ದರಿಂದ ನಾವು ಮಾತನಾಡುವುದನ್ನು ನಿಲ್ಲಿಸಿದೆವು. ಅದು ಹುಲಿಯ ಘರ್ಜನೆಯಲ್ಲ. ಬೆದೆಗೆ ಬಂದ ಹೆಣ್ಣು ಹುಲಿ ಕಾಡ...

ಪತಂಗ ಚಿತ್ರ ಸಂಚಯ

  ಚಿಟ್ಟೆಗಳು ತಮ್ಮ ಬಣ್ಣಗಳಿಂದ ಎಲ್ಲರ ಗಮನ ಸೆಳೆದರೆ, ಪತಂಗಗಳು ರಾತ್ರಿಯ ಕತ್ತಲಿನಲ್ಲಿಯೇ ತಮ್ಮದೇ ಆದ ಅಧ್ಬುತ ಲೋಕವನ್ನು ಕಟ್ಟಿಕೊಂಡಿವೆ. ಆದರೆ ವೈವಿಧ್ಯತೆಯ ವಿಷಯಕ್ಕೆ ಬಂದರೆ, ಅವು ಚಿಟ್ಟೆಗಳಿಗಿಂತಲೂ ಬಹಳ ಮುಂದಿವೆ. ಜಗತ್ತಿನಲ್ಲಿ ಸುಮಾರು 1,60,000ಕ್ಕೂ ಹೆಚ್ಚು ಪತಂಗಗಳ ಪ್ರಭೇದಗಳು ದಾಖಲಾಗಿದ್ದರೆ, ಭಾರತದಲ್ಲೇ 12,000ಕ್ಕೂ ಹೆಚ್ಚು ಪ್ರಭೇದಗಳು ಕಂಡುಬಂದಿವೆ. ಲೆಪಿಡೋಪ್ಟೆರಾಗಳ (ಚಿಟ್ಟೆ ಮತ್ತು ಪತಂಗಗಳು) ಒಟ್ಟು ಪ್ರಭೇದಗಳಲ್ಲಿ ಸುಮಾರು 90% ಪತಂಗಗಳೇ. ಸೂಜಿಯ ತುದಿಯಷ್ಟೇ ಚಿಕ್ಕದಾದ ಸೂಕ್ಷ್ಮ ಪತಂಗಗಳಿಂದ ಹಿಡಿದು, ಸುಮಾರು 25–30 ಸೆಂ.ಮೀ. ರೆಕ್ಕೆವಿಸ್ತಾರ ಹೊಂದಿರುವ ಅಟ್ಲಾಸ್ ಪತಂಗದವರೆಗೆ ಅವುಗಳ ಗಾತ್ರದಲ್ಲಿ ಅಪಾರ ವೈವಿಧ್ಯತೆ ಇದೆ. ಕೆಲವು ಹೂಗಳ ಮಕರಂದವನ್ನು ಹೀರುತ್ತವೆ; ಕೆಲವು ಮಾಗಿದ ಹಣ್ಣುಗಳ ರಸವನ್ನು ಕುಡಿಯುತ್ತವೆ; ಕೆಲವು ಮರಗಳಿಂದ ಸೋರುವ ರಸವನ್ನು ಸೇವಿಸುತ್ತವೆ. ಮತ್ತೂ ಕೆಲವು ವಯಸ್ಕ ಹಂತದಲ್ಲಿ ಆಹಾರವನ್ನೇ ಸೇವಿಸುವುದಿಲ್ಲ. ಕೆಲವು ಪತಂಗಗಳು ಜೇನುನೊಣಗಳಂತೆ ಪರಾಗಸ್ಪರ್ಶದಲ್ಲೂ ಪ್ರಮುಖ ಪಾತ್ರವಹಿಸಿದರೆ, ಇನ್ನು ಕೆಲವು ಕಪ್ಪೆಗಳು, ಬಾವಲಿಗಳು, ಹಕ್ಕಿಗಳು ಮತ್ತು ಇತರ ಜೀವಿಗಳಿಗೆ ಆಹಾರವಾಗುವ ಮೂಲಕ ಆಹಾರ ಸರಪಳಿಯ ಪ್ರಮುಖ ಕೊಂಡಿಗಳಾಗಿವೆ. ಪತಂಗಗಳ ಬಣ್ಣ ಮತ್ತು ವಿನ್ಯಾಸವೂ ಅಷ್ಟೇ ಕುತೂಹಲಕರ. ಕೆಲವು ಮರದ ತೊಗಟೆಯಂತೆ ಕಾಣುತ್ತವೆ; ಕೆಲವು ಒಣ ಎಲೆಗಳಂತೆ ಮರೆಮಾಚಿಕೊಳ್ಳುತ್ತವೆ; ಕೆಲವು ಹಕ್ಕಿಯ ...