ವಿಷಯಕ್ಕೆ ಹೋಗಿ

ಪತಂಗ ಚಿತ್ರ ಸಂಚಯ

 ಚಿಟ್ಟೆಗಳು ತಮ್ಮ ಬಣ್ಣಗಳಿಂದ ಎಲ್ಲರ ಗಮನ ಸೆಳೆದರೆ, ಪತಂಗಗಳು ರಾತ್ರಿಯ ಕತ್ತಲಿನಲ್ಲಿಯೇ ತಮ್ಮದೇ ಆದ ಅಧ್ಬುತ ಲೋಕವನ್ನು ಕಟ್ಟಿಕೊಂಡಿವೆ. ಆದರೆ ವೈವಿಧ್ಯತೆಯ ವಿಷಯಕ್ಕೆ ಬಂದರೆ, ಅವು ಚಿಟ್ಟೆಗಳಿಗಿಂತಲೂ ಬಹಳ ಮುಂದಿವೆ. ಜಗತ್ತಿನಲ್ಲಿ ಸುಮಾರು 1,60,000ಕ್ಕೂ ಹೆಚ್ಚು ಪತಂಗಗಳ ಪ್ರಭೇದಗಳು ದಾಖಲಾಗಿದ್ದರೆ, ಭಾರತದಲ್ಲೇ 12,000ಕ್ಕೂ ಹೆಚ್ಚು ಪ್ರಭೇದಗಳು ಕಂಡುಬಂದಿವೆ. ಲೆಪಿಡೋಪ್ಟೆರಾಗಳ (ಚಿಟ್ಟೆ ಮತ್ತು ಪತಂಗಗಳು) ಒಟ್ಟು ಪ್ರಭೇದಗಳಲ್ಲಿ ಸುಮಾರು 90% ಪತಂಗಗಳೇ.

ಸೂಜಿಯ ತುದಿಯಷ್ಟೇ ಚಿಕ್ಕದಾದ ಸೂಕ್ಷ್ಮ ಪತಂಗಗಳಿಂದ ಹಿಡಿದು, ಸುಮಾರು 25–30 ಸೆಂ.ಮೀ. ರೆಕ್ಕೆವಿಸ್ತಾರ ಹೊಂದಿರುವ ಅಟ್ಲಾಸ್ ಪತಂಗದವರೆಗೆ ಅವುಗಳ ಗಾತ್ರದಲ್ಲಿ ಅಪಾರ ವೈವಿಧ್ಯತೆ ಇದೆ. ಕೆಲವು ಹೂಗಳ ಮಕರಂದವನ್ನು ಹೀರುತ್ತವೆ; ಕೆಲವು ಮಾಗಿದ ಹಣ್ಣುಗಳ ರಸವನ್ನು ಕುಡಿಯುತ್ತವೆ; ಕೆಲವು ಮರಗಳಿಂದ ಸೋರುವ ರಸವನ್ನು ಸೇವಿಸುತ್ತವೆ. ಮತ್ತೂ ಕೆಲವು ವಯಸ್ಕ ಹಂತದಲ್ಲಿ ಆಹಾರವನ್ನೇ ಸೇವಿಸುವುದಿಲ್ಲ. ಕೆಲವು ಪತಂಗಗಳು ಜೇನುನೊಣಗಳಂತೆ ಪರಾಗಸ್ಪರ್ಶದಲ್ಲೂ ಪ್ರಮುಖ ಪಾತ್ರವಹಿಸಿದರೆ, ಇನ್ನು ಕೆಲವು ಕಪ್ಪೆಗಳು, ಬಾವಲಿಗಳು, ಹಕ್ಕಿಗಳು ಮತ್ತು ಇತರ ಜೀವಿಗಳಿಗೆ ಆಹಾರವಾಗುವ ಮೂಲಕ ಆಹಾರ ಸರಪಳಿಯ ಪ್ರಮುಖ ಕೊಂಡಿಗಳಾಗಿವೆ.

ಪತಂಗಗಳ ಬಣ್ಣ ಮತ್ತು ವಿನ್ಯಾಸವೂ ಅಷ್ಟೇ ಕುತೂಹಲಕರ. ಕೆಲವು ಮರದ ತೊಗಟೆಯಂತೆ ಕಾಣುತ್ತವೆ; ಕೆಲವು ಒಣ ಎಲೆಗಳಂತೆ ಮರೆಮಾಚಿಕೊಳ್ಳುತ್ತವೆ; ಕೆಲವು ಹಕ್ಕಿಯ ಹಿಕ್ಕೆಯನ್ನೇ ಹೋಲುತ್ತವೆ. ಇನ್ನೂ ಕೆಲವು ತಮ್ಮ ರೆಕ್ಕೆಗಳ ಮೇಲಿರುವ ದೊಡ್ಡ ಕಣ್ಣಿನಂತಹ ಗುರುತುಗಳಿಂದ ಬೇಟೆಗಾರರನ್ನು ಬೆದರಿಸುತ್ತವೆ. ಇವೆಲ್ಲವೂ ಲಕ್ಷಾಂತರ ವರ್ಷಗಳ ವಿಕಾಸದ ವಿಕಾಸದ ಪರಿಣಾಮವಾಗಿ ರೂಪುಗೊಂಡ ಅಧ್ಬುತ ಹೊಂದಾಣಿಕೆಗಳು.

ರಾಷ್ಟ್ರೀಯ ಪತಂಗ ವಾರ (National Moth Week) ವಿಶ್ವದಾದ್ಯಂತ ಪ್ರತಿವರ್ಷ ಜುಲೈ ತಿಂಗಳ ಕೊನೆಯ ವಾರದಲ್ಲಿ ಆಚರಿಸಲಾಗುತ್ತದೆ. ಪತಂಗಗಳ ವೈವಿಧ್ಯತೆ, ಅವುಗಳ ಪರಿಸರದ ಮಹತ್ವ ಮತ್ತು ಅವುಗಳ ಕುರಿತು ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ 2012ರಲ್ಲಿ ಈ ಅಭಿಯಾನ ಆರಂಭವಾಯಿತು. ಇಂದು ಇದು 90ಕ್ಕೂ ಹೆಚ್ಚು ದೇಶಗಳಲ್ಲಿ ನಡೆಯುವ ಜಾಗತಿಕ ಸಮುದಾಯ ವಿಜ್ಞಾನ (Citizen Science) ಕಾರ್ಯಕ್ರಮವಾಗಿ ಬೆಳೆದಿದ್ದು, ಸಾವಿರಾರು ಪ್ರಕೃತಿ ಪ್ರೇಮಿಗಳು ತಮ್ಮ ಪ್ರದೇಶದಲ್ಲಿ ಕಂಡುಬರುವ ಪತಂಗಗಳನ್ನು ದಾಖಲಿಸಿ ವಿಜ್ಞಾನಿಗಳಿಗೆ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತಿದ್ದಾರೆ.

ಪತಂಗಗಳು ಎಲ್ಲೆಲ್ಲೂ ಇವೆ. ರಾತ್ರಿ ದೀಪದ ಬೆಳಕಿಗೆ ನಿಮ್ಮ ಮನೆಗಳಿಗೂ ಬರುತ್ತಿರಬಹುದು. ಸ್ವಲ್ಪ ಗಮನ ಹರಿಸಿ ನೋಡಿದರೆ, ರಂಗುರಂಗಿನ ಚಿತ್ತಾರಗಳಿಂದ ಕೂಡಿದ ಪತಂಗಗಳನ್ನು ನೀವಿದ್ದಲ್ಲಿಯೇ ಕಾಣಬಹುದು. ಈಗಂತೂ ಬಹುತೇಕ ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ಒಂದು ಚಿತ್ರ ಕ್ಲಿಕ್ಕಿಸಿ, ಅದನ್ನು ಹಿಗ್ಗಿಸಿ ನೋಡಿ. ಆಗ ನಿಮ್ಮ ಕಣ್ಣೆದುರು ಬಣ್ಣಗಳ ಮತ್ತು ವಿನ್ಯಾಸಗಳ ಅದ್ಭುತ ಲೋಕವೇ ತೆರೆದುಕೊಳ್ಳುತ್ತದೆ. 

ಸಾಧ್ಯವಾದರೆ, ಸಮುದಾಯ ವಿಜ್ಞಾನ ಯೋಜನೆಯ ಭಾಗವಾಗಿ 'ನ್ಯಾಷನಲ್ ಜಿಯೋಗ್ರಫಿಕ್' ಮತ್ತು 'ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸಸ್' ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ iNaturalist ವೇದಿಕೆಯಲ್ಲಿ ನೀವು ತೆಗೆದ ಛಾಯಾಚಿತ್ರಗಳನ್ನು ದಾಖಲಿಸಿ. ಈ ವೇದಿಕೆ ಪತಂಗಗಳೂ ಸೇರಿದಂತೆ ನಾವು ಕಂಡ ಪ್ರಾಣಿ, ಪಕ್ಷಿ, ಕೀಟ, ಸರಿಸೃಪ, ಉಭಯವಾಸಿ, ಸಸ್ಯ ಸೇರಿದಂತೆ ಯಾವುದೇ ಜೀವಿಯನ್ನು ಗುರುತಿಸಲು ನೆರವಾಗುತ್ತದೆ.

ನೀವು ಮಾಡಬೇಕಾದದ್ದು ತುಂಬಾ ಸರಳ. ನೀವು ಕಂಡ ಜೀವಿಯ ಒಂದು ಸ್ಪಷ್ಟವಾದ ಛಾಯಾಚಿತ್ರವನ್ನು ತೆಗೆದು iNaturalistನಲ್ಲಿ ಅಪ್‌ಲೋಡ್ ಮಾಡಿದರೆ ಸಾಕು. ಜಗತ್ತಿನ ವಿವಿಧ ಭಾಗಗಳಲ್ಲಿರುವ ಅನುಭವಿ ಪ್ರಕೃತಿ ವೀಕ್ಷಕರು ಮತ್ತು ತಜ್ಞರು ಅದನ್ನು ಪರಿಶೀಲಿಸಿ, ಆ ಜೀವಿಯ ಗುರುತನ್ನು ತಿಳಿಸಲು ಸಹಾಯ ಮಾಡುತ್ತಾರೆ. ಈ ವೇದಿಕೆಯ ಮೊಬೈಲ್ ಫೋನ್ ಅಪ್ಲಿಕೇಶನ್ ಸಹಾ ಲಭ್ಯವಿದ್ದು ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಕೆಲಸ ಮಾಡುತ್ತದೆ.

ಪತಂಗಗಳು ಸೊಳ್ಳೆ, ಜಿರಳೆಗಳಂತೆ ಉಪದ್ರವ ಕೊಡುವ ಜೀವಿಗಳಲ್ಲ. ಅವು ಕಚ್ಚುವುದಿಲ್ಲ, ವಿಷಕಾರಿಯೂ ಅಲ್ಲ. ನಿಮ್ಮ ಮನೆಯ ಯಾವುದೇ ವಸ್ತುವನ್ನು ಹಾಳು ಮಾಡುವುದಿಲ್ಲ. ರಾತ್ರಿ ನೀವು ಉರಿಸುವ ದೀಪದ ಬೆಳಕಿಗೆ ದಾರಿ ತಪ್ಪಿ ನಿಮ್ಮ ಮನೆಗೆ ಬಂದಿರಬಹುದು. ಆ ಒಂದು ರಾತ್ರಿ ನಿಮ್ಮ ಮನೆಯ ಗೋಡೆಯ ಮೇಲೆಯೇ ವಿಶ್ರಾಂತಿ ಪಡೆದು, ಮರುದಿನ ಮತ್ತೆ ತನ್ನ ಪಯಣವನ್ನು ಮುಂದುವರಿಸಬಹುದು. ಅವುಗಳಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ. ಆದ್ದರಿಂದ, ಅವುಗಳಿಗೆ ಸ್ವಲ್ಪ ಜಾಗ, ಸ್ವಲ್ಪ ಸಮಯ ನೀಡಿ.

2026ರ ರಾಷ್ಟ್ರೀಯ ಪತಂಗ ವಾರವನ್ನು ಜುಲೈ 18ರಿಂದ 26ರವರೆಗೆ ಆಚರಿಸಲಾಗುತ್ತಿದೆ. ಕಳೆದ ಜುಲೈ 18ರಿಂದ ಎಂಟು ದಿನಗಳಲ್ಲಿ ನಾನು ಕಂಡ ಕೆಲವು ಪತಂಗಗಳ ಮತ್ತು ಜಗತ್ತಿನ ಕೆಲವು ಕುತೂಹಲಕರ ಪತಂಗಗಳ ಕಥೆಗಳನ್ನು ಹಂಚಿಕೊಂಡೆ. ಈ ಕೊನೆಯ ಕಂತಿನಲ್ಲಿ, ನಾನು ಸೆರೆಹಿಡಿದಿರುವ ಕೆಲವು ಪತಂಗಗಳ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಪ್ರತಿಯೊಂದು ಚಿತ್ರದಲ್ಲಿನ ಪತಂಗವೂ ಒಂದು ಜೀವಿಯಷ್ಟೇ ಅಲ್ಲ, ಪ್ರಕೃತಿಯ ಲಕ್ಷಾಂತರ ವರ್ಷಗಳ ವಿಕಾಸದ ಕಥೆಯನ್ನು ಹೇಳುವ ಒಂದು ಪುಟ್ಟ ಕಿಟಕಿಯಾಗಿದೆ.

ಈ ಚಿತ್ರಗಳಲ್ಲಿರುವ ಪ್ರತಿಯೊಂದು ಪತಂಗದ ವೈಜ್ಞಾನಿಕ ಹೆಸರು ಮತ್ತಿತರ ವಿವರಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಬಣ್ಣ, ವಿನ್ಯಾಸ ಮತ್ತು ಸೌಂದರ್ಯ ಇವುಗಳನ್ನು ಮಿಳಿತವಾಗಿಸಿ ಪ್ರಕೃತಿ ಸೃಷ್ಟಿಸಿದ ಈ ಸುಂದರ ಕಾಲಾಕೃತಿಗಳನ್ನು ನೋಡಿ ಆಸ್ವಾದಿಸಿ.

Hawk Moth (Sphingidae) ಕುಟುಂಬಕ್ಕೆ ಸೇರಿದ Lucas's Hawkmoth - Theretra lucasii ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ

Hawk Moth (Sphingidae) ಕುಟುಂಬಕ್ಕೆ ಸೇರಿದ ನಿಂಫಾ ಹಾಕ್ ಪತಂಗ Marumba nympha ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ

Hawk Moth (Sphingidae) ಕುಟುಂಬಕ್ಕೆ ಸೇರಿದ Green Pergesa Hawkmoth - Pergesa acteus ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Hawk Moth (Sphingidae) ಕುಟುಂಬಕ್ಕೆ ಸೇರಿದ Cinnamon Gliding Hawkmoth - Ambulyx moorei ಭೇದದ ಪತಂಗ. ಚಿತ್ರ: © ಶ್ರೀಕಾಂತ


Hawk Moth (Sphingidae) ಕುಟುಂಬಕ್ಕೆ ಸೇರಿದ Rhagastis aurifera ಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Nevrina procopia ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Aetholix ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Eoophyla conjunctalis ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Cotton Leaf Roller - Haritalodes derogata ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Pygospila costiflexalis ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Hawaiian Beet Webworm Moth - Spoladea recurvalis ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Crambidae ಕುಟುಂಬಕ್ಕೆ ಸೇರಿದ Asian Tear Sucker - Botyodes asialis ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ White-barred Owl Moth - Erebus hieroglyphica ಪ್ರಭೇದದ ಪತಂಗ. ಇದರ ಮೇಲಿನ ಕಣ್ಣುಗಳು ಗೂಬೆಯ ಕಣ್ಣುಗಳನ್ನು ಹೋಲುವುದರಿಂದ ಇದನ್ನು Owl Moth ಎಂದೂ ಕರೆಯಲಾಗುತ್ತದೆ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Erebus ಜೀನಸ್ ನ Spirama retorta ಪ್ರಭೇದದ ಪತಂಗ. ಮತ್ತೊಂದು Owl Moth. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Lymantria fuliginosa ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Dot-underwing Moth - Eudocima materna ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Eudocima homaena ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Hulodes caranea ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Hulodes ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Castor Semi-Looper - Achaea janata ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Arctornis ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Tropical Tiger Moth - Asota caricae ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Footman Moth - Nepita conferta  ಪ್ರಭೇದದ ಒಂದು ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Hamodes ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Olepa ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Artena ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Sandalwood Defoliator - Amata passalis ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Lichen Moth - Oeonistis entella ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Lysimelia alstoni ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Creatonotos ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Spilarctia ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Cyana bhatejai ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ

Erebidae ಕುಟುಂಬಕ್ಕೆ ಸೇರಿದ Footman Moth - Nepita conferta ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Lysimelia alstoni ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Brown-striped Semilooper- Mocis undata ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ

Erebidae ಕುಟುಂಬಕ್ಕೆ ಸೇರಿದ Entomogramma ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Ammatho ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Seven-spotted Handmaiden Moth - Amata cyssea ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Dysgonia ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Siccia guttulosana ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Triangles -Trigonodes hyppasia ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Erebidae ಕುಟುಂಬಕ್ಕೆ ಸೇರಿದ Macrobrochis gigas ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Nolidae ಕುಟುಂಬಕ್ಕೆ ಸೇರಿದ Risoba ಜೀನಸ್‌ನ ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Nolidae ಕುಟುಂಬಕ್ಕೆ ಸೇರಿದ Transverse Moth - Xanthodes transversa ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


 Geometridae ಕುಟುಂಬಕ್ಕೆ ಸೇರಿದ Eumelea ಜೀನಸ್‌ನ ಪ್ರಭೇದದ ಪತಂಗ. ಇದಕ್ಕೆ ಜಿಯೋಮೀಟರ್ ಪತಂಗ ಎಂದು ಹೆಸರು. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Eumelea ಜೀನಸ್‌ನ ಮತ್ತೊಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Yashmakia conflagrata ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Trimandra ಜೀನಸ್‌ನ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Chiasmia ಜೀನಸ್‌ನ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Pingasa ಜೀನಸ್‌ನ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Naxa textilis ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ Aporandria specularia ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Geometridae ಕುಟುಂಬಕ್ಕೆ ಸೇರಿದ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Drepanidae ಕುಟುಂಬಕ್ಕೆ ಸೇರಿದ Cyclidia dictyaria ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Uraniidae ಕುಟುಂಬಕ್ಕೆ ಸೇರಿದ Strophidia caudata ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Uraniidae ಕುಟುಂಬಕ್ಕೆ ಸೇರಿದ Acropteris ಜೀನಸ್‌ನ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Uraniidae ಕುಟುಂಬಕ್ಕೆ ಸೇರಿದ Grey Swallowtail Moth - Micronia aculeata ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Sesiidae ಕುಟುಂಬಕ್ಕೆ ಸೇರಿದ Melittia ಜೀನಸ್‌ನ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Eupterotidae ಕುಟುಂಬಕ್ಕೆ ಸೇರಿದ Eupterote ಜೀನಸ್‌ನ ಒಂದು ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ


Saturniidae  ಕುಟುಂಬಕ್ಕೆ ಸೇರಿದ Tasar Silk Moth - Antheraea paphia  ಪ್ರಭೇದದ ಪತಂಗ. ಚಿತ್ರ: © ಶ್ರೀಕಾಂತ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...