ವಾಲ್ಪರೈನಲ್ಲಿ ಕಂಡ, Gymnopiona ಜೀನಸ್ ಗೆ ಸೇರಿದ ಒಂದು ಪ್ರಭೇದದ ಸಿಸಿಲಿಯನ್. ಚಿತ್ರದಲ್ಲಿ ಸಿಸಿಲಿಯನ್‌ನ ಚಿಕ್ಕ ಕಣ್ಣುಗಳನ್ನೂ ಕಾಣಬಹುದು. ಕೆಲವು ಜೀವಿಗಳು ಅಪರೂಪವಾಗಿರುವುದರಿಂದ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಆದರೆ ಮತ್ತೂ ಕೆಲವು ಜೀವಿಗಳು ಅವು ಎಲ್ಲಿ ಬದುಕುತ್ತವೆ, ಹೇಗೆ ಬದುಕುತ್ತವೆ ಎಂದು ನಮಗೆ ಗೊತ್ತಿರದ ಕಾರಣ ಕಾಣಿಸುವುದಿಲ್ಲ. ನನಗೆ ಸುಮಾರು ವರ್ಷ ಸಿಸಿಲಿಯನ್‌ಗಳ ಪರಿಚಯ ಇರದೇ ಇದ್ದುದಕ್ಕೆ ಕಾರಣ ಅವುಗಳ ನಿಗೂಢ ಬದುಕು! 2016ರ ಆಗಸ್ಟ್ ತಿಂಗಳು. ಹರ್ಷ ಮತ್ತು ನಾನು ಆಗುಂಬೆಗೆ ಹೋಗುತ್ತಿದ್ದೆವು. ಬೆಂಗಳೂರಿನಿಂದ ರಾತ್ರಿ ಹೊರಟಿದ್ದೆವು. ಬೆಳಗಿನ ಜಾವ ಸುಮಾರು ಮೂರು ಗಂಟೆ ಹೊತ್ತಿಗೆ ಬಾಳೆಹೊನ್ನೂರಿನ ಹತ್ತಿರ ತಲುಪಿದ್ದೆವು. ಜೋರಾಗಿ ಸುರಿಯುತ್ತಿದ್ದ ಮಳೆ ಆಗ ತಾನೆ ನಿಂತಿತ್ತು. ವಾಹನದ ಹೆಡ್‌ಲೈಟ್ ಬೆಳಕಿನಲ್ಲಿ ಡಾಂಬರು ರಸ್ತೆ ಹೊಳೆಯುತ್ತಿತ್ತು. ಆಗ ರಸ್ತೆಯ ಮೇಲೆ ವಿಚಿತ್ರ ದೃಶ್ಯವೊಂದು ಕಾಣಿಸಿತು. ರಸ್ತೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಲವಾರು ಜೀವಿಗಳು ದಾಟುತ್ತಿದ್ದವು. ಹಾವುಗಳಂತೆ ಕಾಣುತ್ತಿದ್ದ ಅವು ಸುಮಾರು ಒಂದು ಅಡಿಯಷ್ಟು ಉದ್ದವಿದ್ದವು. ಕತ್ತಲಿನಲ್ಲಿ ರಸ್ತೆಯ ಮೇಲೆ ನಿಧಾನವಾಗಿ ತೆವಳುತ್ತಿದ್ದವು. ಅವು ಯಾವ ಜೀವಿಗಳು ಎಂಬುದೇ ಗೊತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಆತಂಕವೂ ಆಯಿತು. ಆದರೆ ಕೆಲ ಕ್ಷಣಗಳಲ್ಲೇ ಕುತೂಹಲ ಭಯವನ್ನು ಮೀರಿಸಿತು. ವಾಹನದಿಂದ ಇಳಿದು ಕೆಲವು ಚಿತ್ರಗಳನ್ನು ...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ