ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹುಲ್ಲುಗಾವಲು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನಾನು ಕಂಡ ಕೆಲವು ಆರ್ಕಿಡ್‌ಗಳು

ಹೆಚ್ಚಿನ ವಿವರಗಳು ದೊರೆಯದ, ಪಶ್ಚಿಮ ಘಟ್ಟಗಳ ಒಂದು ಅನಾಮಧೇಯ  ಆರ್ಕಿಡ್ ಪ್ರಭೇದ  ಚಿತ್ರ: © ಶ್ರೀಕಾಂತ ಆರ್ಕಿಡ್‌ಗಳ ಬಗ್ಗೆ ನನಗೆ ಯಾವಾಗಲೂ ಆಶ್ಚರ್ಯವಾಗುವ ವಿಷಯವೆಂದರೆ, ಅವುಗಳ ಜೀವನಶೈಲಿಯ ವೈವಿಧ್ಯ. ಆರ್ಕಿಡ್ ಎಂದರೆ ಮರದ ಮೇಲೆ ಬೆಳೆಯುವ ಗಿಡಗಳೆಂದು ನಾನು ಮೊದಲಿಗೆ ಭಾವಿಸಿದ್ದೆ. ನಿಜಕ್ಕೂ ಪಶ್ಚಿಮ ಘಟ್ಟಗಳ ಅನೇಕ ಆರ್ಕಿಡ್‌ಗಳು ಮರಗಳ ಮೇಲೆಯೇ ಬೆಳೆಯುತ್ತವೆ. ಆದರೆ ಅವು ಪರಾವಲಂಬಿಗಳಲ್ಲ. ಮರವನ್ನು ಕೇವಲ ಆಸರೆಯಾಗಿ ಬಳಸುತ್ತವೆ ಅಷ್ಟೇ. ಇಷ್ಟು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಓಡಾಡುತ್ತಿದ್ದರೂ, ನಾನು ನೋಡಿರುವ ಆರ್ಕಿಡ್‌ಗಳ ಸಂಖ್ಯೆ ತುಂಬಾ ಕಡಿಮೆ. ಅವು ಇಲ್ಲವೆಂದಲ್ಲ. ಆದರೆ ಅವು ತಮ್ಮನ್ನು ತಾವು ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ. ಮರದ ತೊಗಟೆಗಳ ಮೇಲೆ ಹಚ್ಚಹಸಿರಾದ ಪಾಚಿ ಮತ್ತು ಲೈಕೆನ್‌ಗಳ ನಡುವೆ ಎಲ್ಲೋ ಅಡಗಿಕೊಂಡಿರುತ್ತವೆ. ಹೂ ಬಿಡದ ಸಮಯದಲ್ಲಿ ಅವುಗಳನ್ನು ಗಮನಿಸುವುದೇ ಕಷ್ಟ. ಸಾಮಾನ್ಯವಾಗಿ ನೋಡಿದರೆ ಮರದ ಮೇಲಿನ ಇನ್ನೊಂದು ಸಣ್ಣ ಗಿಡದಂತೆ ಕಾಣುತ್ತವೆ. ಹೀಗಾಗಿ ಎಷ್ಟೋ ಸಲ ಅವುಗಳ ಇರುವಿಕೆಯ ಅರಿವೇ ಇಲ್ಲದೆ ನಾನು ಅವುಗಳ ಪಕ್ಕದಿಂದಲೇ ನಡೆದು ಹೋಗಿರಬಹುದು. ನನಗೆ ಸ್ಪಷ್ಟವಾಗಿ ನೆನಪಿರುವ ಕೆಲವು ಆರ್ಕಿಡ್‌ಗಳಿವೆ. BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಮ್ಮೆ ಮರದ ತೊಗಟೆಯ ಮೇಲೆ ಬೆಳೆಯುತ್ತಿದ್ದ ಒಂದು ಸಣ್ಣ ಆರ್ಕಿಡ್ ಕಂಡಿತ್ತು. ಆಗ ಅದರ ಹೆಸರು ಗೊತ್ತಿರಲಿಲ್ಲ. ನಂತರ ಚಿತ್ರಗಳನ್ನು ಪರಿಶೀಲ...

ಪಶ್ಚಿಮ ಘಟ್ಟಗಳ ಮಾಯಾಜಾಲ

ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದ ಶೋಲಾ ಹುಲ್ಲುಗಾವಲು ಚಿತ್ರ: © ಶ್ರೀಕಾಂತ   ಕೆಲವೊಂದು ಪರಿಸರ ವ್ಯವಸ್ಥೆಗಳು ಗಮನವಿಟ್ಟು ನೋಡದೇ ಹೋದರೆ ನಮಗೆ ಅರಿವಾಗುವುದೇ ಇಲ್ಲ. ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿ ನಡೆಯುತ್ತಿದ್ದಾಗ ಈ ಪರಿಸರ ವ್ಯವಸ್ಥೆಗಳು ಎಲ್ಲವನ್ನೂ ಒಳಗೊಳ್ಳುವ ಮಾಯಾಜಾಲ ಎಂದು ಅರಿವಾಯಿತು. ಹಾಗೆ ನಾನು ಗಮನಿಸಿದ ಎರಡು ಜಾಲಗಳಲ್ಲಿ ಒಂದು ಜಾಲ ಬಯಲಿನಲ್ಲಿದ್ದರೆ ಮತ್ತೊಂದು ಇನ್ನೊಂದು ದಟ್ಟ ಕಾಡಿನೊಳಗಿತ್ತು. ಮೊದಲನೆಯ ಜಾಲ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ! ಇದು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ, ಎತ್ತರದ ಬೆಟ್ಟಗಳ ಮೇಲೆ ಹರಡಿಕೊಂಡಿರುವ ಹುಲ್ಲುಗಾವಲುಗಳು ಮತ್ತು ಅವುಗಳ ನಡುವೆ ಚದುರಿಕೊಂಡಿರುವ ಶೋಲಾ ಕಾಡುಗಳು! ದೂರದಿಂದ ನೋಡಿದರೆ ಅವು ಬೆಟ್ಟಗಳ ಮೇಲಿನ ಹಸಿರು ಹೊದಿಕೆಯಂತೆ ಕಾಣುತ್ತವೆ. ಆದರೆ ಅವು ಕೇವಲ ಸುಂದರ ಭೂದೃಶ್ಯವಷ್ಟೇ ಅಲ್ಲ. ದಕ್ಷಿಣ ಭಾರತದ ಅನೇಕ ನದಿಗಳು ಹುಟ್ಟುವ ಸ್ಥಳ ಇದೇ. ಮಳೆ ಸುರಿದಾಗ ಈ ಹುಲ್ಲುಗಾವಲುಗಳು ನೀರನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ನಿಧಾನವಾಗಿ ಮಣ್ಣಿನ ಮೂಲಕ ಹರಿಯಬಿಡುತ್ತವೆ. ಹೀಗೆ ವರ್ಷವಿಡೀ ಹೊಳೆಗಳು ಮತ್ತು ನದಿಗಳಿಗೆ ನೀರು ಒದಗಿಸುತ್ತವೆ. ಬೆಟ್ಟದ ಮೇಲಿನ ಈ ಹುಲ್ಲುಗಾವಲುಗಳು ಮತ್ತು ಶೋಲಾ ಕಾಡುಗಳು ಇಲ್ಲದಿದ್ದರೆ, ಕೆಳಗಿರುವ ಲಕ್ಷಾಂತರ ಜನರ ಬದುಕು ಬೇರೆ ರೀತಿಯದ್ದಾಗಿರುತ್ತಿತ್ತು. ಈ ಪರಿಸರ ವ್ಯವಸ್ಥೆಯಲ್ಲಿ ಅನೇಕ ವಿಶಿಷ್ಟ ಜೀವಿಗಳು ವಾಸಿ...