ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2026 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಡಿನಲ್ಲಿ ಕಣ್ಣಾಮುಚ್ಚಾಲೆ

 ಪೂರ್ವಘಟ್ಟ ಭಾಗದ ಕಾಡುಗಳಲ್ಲಿ ನಾನು 2017ರಿಂದ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಕಾಡಿನ ನಡುವೆ ಇದ್ದ ಚೆಂಚು ಬುಡಕಟ್ಟುಗಳು ವಾಸಿಸುತ್ತಿದ್ದ ಹಳ್ಳಿ ಒಂದರಲ್ಲಿ ಕರಡಿಯೊಂದು ಒಬ್ಬ ವ್ಯಕ್ತಿಯನ್ನು ಕೊಂದಿತ್ತು. ಈ ಮುಂಚೆಯೂ ನಡೆದಿದ್ದ ಇಂತಹಾ ಅನೇಕ ಪ್ರಕರಣಗಳ ಬಗ್ಗೆ ಅಲ್ಲಿನ ಜನ ಮಾತನಾಡುತ್ತಿದ್ದರು. ಈ ಮುಂಚೆ ನಾವು ಅನೇಕ ವರ್ಷಗಳನ್ನು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಕಂಡ ಕರಡಿಗಳ ವರ್ತನೆಗೆ ವ್ಯತಿರಿಕ್ತವಾಗಿ ಇಲ್ಲಿನ ಕರಡಿಗಳು ಅತ್ಯಂತ ಆಕ್ರಮಣಕಾರಿ ಎನ್ನುವುದು ಅಲ್ಲಿನ ಜನಗಳ ಮಾತುಗಳಿಂದ ತಿಳಿಯುತ್ತಿತ್ತು. ನಾವು ಸಮೀಕ್ಷೆಯ ಸಲುವಾಗಿ‌ ಕಾಡಿನಲ್ಲಿ ನಡೆಯುವುದಕ್ಕೂ, ಜನ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಕಾಡಿನಲ್ಲಿ ತಿರುಗಾಡುವುದಕ್ಕೂ ವ್ಯತ್ಯಾಸವಿದೆ. ಪ್ರಾಣಿಗಳ ಆವಾಸದಲ್ಲಿ ಅವು ನಮ್ಮನ್ನು ಗುರುತಿಸುವ ಮೊದಲೇ, ನಾವು ಪ್ರಾಣಿಗಳನ್ನು ಗುರುತಿಸಲು, ನಾವು ಪ್ರತಿಯೊಂದಯ ಹೆಜ್ಜೆಯನ್ನು ಎಚ್ಚರಿಕೆಯಿಂದ, ಆದಷ್ಟು ಸದ್ದು ಕಡಿಮೆಯಾಗುವಂತೆ ಇಡುತ್ತಿದ್ದೆವು. ಆದರೂ ಪ್ರತಿಬಾರಿಯೂ ಪ್ರಾಣಿಗಳು ನಮ್ಮನ್ನು ಗುರುತಿಸುವ ಮೊದಲೇ ನಾವು ಅವುಗಳನ್ನು ಗುರುತಿಸುತ್ತಿದ್ದೇವೆಂದು ಹೇಳಲಾರೆ. ಕಣ್ಣಾಮುಚ್ಚಾಲೆ ಆಟಕ್ಕೆ ರೆಡಿನಾ? (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ ಅಮರಾಬಾದ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 2019ರ ದಿನಗಳು. ಹುಲಿ ಸಂಖ್ಯೆ ಅಂದಾಜಿಸುವ ಸಲುವಾಗಿ ಮತ್ತು ಅವುಗಳ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದ...

ಮಳೆಗಾಲದ ಅತಿಥಿಗಳು

 ಮಳೆಗಾಲದಲ್ಲಿ ಹನಿಗಳ ಸ್ಪರ್ಶಕ್ಕೆ ಎಚ್ಚೆತ್ತುಕೊಂಡ ನೆಲ, ಇದ್ದಕ್ಕಿದ್ದಂತೆ ನೂರಾರು ಬಣ್ಣಗಳ ಮತ್ತು ರೂಪಗಳ ಅಣಬೆಗಳಿಂದ ಅಲಂಕರಿಸಿಕೊಳ್ಳುತ್ತದೆ. ಅಂದದ ವೇಷ ತೊಟ್ಟು ನಿಂತ ಬೆಡಗಿ. ಚಿತ್ರ: © ಶ್ರೀಕಾಂತ ಕೆಲವು ಪುಟ್ಟ ಕೊಡೆಗಳಂತೆ, ಕೆಲವು ಹೂಗಳಂತೆ, ಮತ್ತೆ ಕೆಲವು ಇನ್ನೊಂದು ಗ್ರಹದಿಂದ ಬಂದ ಜೀವಿಗಳಂತೆ ಕಾಣುತ್ತವೆ. ಅವು ಕೇವಲ ನೋಡಲು ಸುಂದರವಾಗಿರುವುದಷ್ಟೇ ಅಲ್ಲ, ಪ್ರಕೃತಿಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನೂ ವಹಿಸುತ್ತವೆ. ಅವು ಕಾಡಿನ ಮೌನ ಶಿಲ್ಪಿಗಳು. ಸತ್ತ ಎಲೆಗಳು, ಮರಗಳು ಮತ್ತು ಪ್ರಾಣಿಗಳ ಅವಶೇಷಗಳನ್ನು ಮತ್ತೆ ಮಣ್ಣಿನೊಂದಿಗೆ ಬೆರೆಸಿ, ಪ್ರಕೃತಿಯಲ್ಲಿನ ಆಹಾರ ಚಕ್ರವನ್ನು ನಿರಂತರವಾಗಿ ಮುಂದುವರಿಸುವಲ್ಲಿ ಅವುಗಳ ಪಾತ್ರ ಅಪಾರ. ಕೆಲವೇ ಕಾಲ ಕಂಡು ಮರೆಯಾಗುವ ಈ ಅಣಬೆಗಳು, ಕಾಡಿನ ಆಳದಲ್ಲಿ ಅಡಗಿರುವ ಅದ್ಭುತ ಜೀವಜಗತ್ತಿನ ಒಂದು ಸಣ್ಣ ಕಿಟಕಿ ಅಷ್ಟೇ. ವಾಸ್ತವವಾಗಿ, ನಮ್ಮ ಕಣ್ಣಿಗೆ ಕಾಣುವ ಈ ಸುಂದರ ಕಲಾಕೃತಿಗಳು ಮಣ್ಣಿನೊಳಗೆ ವ್ಯಾಪಿಸಿರುವ ಬೃಹತ್ ಶಿಲೀಂಧ್ರ ಜಾಲದ ಕೇವಲ ಒಂದು ಸಣ್ಣ ಭಾಗ. ಶಿಲೀಂಧ್ರದ ಸಂತಾನೋತ್ಪತ್ತಿಗಾಗಿ ಕ್ಷಣಿಕವಾಗಿ ಹೊರಹೊಮ್ಮುವ ರಚನೆಗಳೇ ಈ ಅಣಬೆಗಳು. ನೆಲದಲ್ಲಿ ಅರಳಿದ ಹೂವು. ಚಿತ್ರ: © ಶ್ರೀಕಾಂತ 'ಮಳೆಗಾಲದ ಅತಿಥಿಗಳು' ಎಂದರೆ ಅಣಬೆಗಳು ಮಳೆಗಾಲದಲ್ಲಿ ಮಾತ್ರ ಕಂಡುಬರುತ್ತವೆ ಎಂದರ್ಥವಲ್ಲ. ಅಣಬೆಗಳ ಬೆಳವಣಿಗೆಗೆ ತೇವಾಂಶ ಅತ್ಯಗತ್ಯ. ಆದ್ದರಿಂದ ಮಳೆಗಾಲದಲ್ಲಿ ಅವುಗಳ ವೈವಿಧ್ಯ ಮತ್ತು...