ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನ್ಯೂ ಹೊರೈಜನ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನ್ಯೂ ಹೊರೈಜನ್: ಸಕ್ರಿಯ ಲೋಕದ ರಹಸ್ಯಗಳು

ಪ್ಲೂಟೊವನ್ನು ದಾಟಿ ಮುಂದೆ ಹೊರಟ ನ್ಯೂ ಹೊರೈಜನ್ ತಾನು ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಭೂಮಿಗೆ ರವಾನಿಸಲು ಸುಮಾರು 15 ತಿಂಗಳ ಕಾಲ ಹಿಡಿಯಿತು. ಸುಮಾರು 4.5 ಬೆಳಕಿನ ಗಂಟೆಗಳಷ್ಟು ದೂರವಿದ್ದ ನ್ಯೂ ಹೊರೈಜನ್ ಮಾಹಿತಿಯನ್ನು ಒಂದು ಅಥವಾ ಎರಡು ಕಿಲೋಬಿಟ್ಸ್ ಪರ್ ಸೆಕೆಂಡ್ ವೇಗದಲ್ಲಿ ರವಾನಿಸಲು ಅಷ್ಟು ಸಮಯ ಬೇಕಾಯಿತು. ಪ್ಲೂಟೊದಿಂದ ಬಂದ ಮಾಹಿತಿ ಪ್ಲೂಟೊ ಮತ್ತು ಅದರ ಉಪಗ್ರಹಗಳು ಈ ಮೊದಲು ಅಂದುಕೊಂಡಕ್ಕಿಂತ ಸಾಕಷ್ಟು ಸಂಕೀರ್ಣವಾಗಿರುವುದಾಗಿ ತಿಳಿದುಬಂತು. ಈ ಮೊದಲು ವಿಜ್ಞಾನಿಗಳು ತಿಳಿದಿದ್ದಂತೆ ಅದರ ವಾತಾವರಣದ ಪಲಾಯನ ಅಂದುಕೊಂಡದ್ದಕ್ಕಿಂತ ಕಡಿಮೆ ದರದಲ್ಲಿ ಇರುವುದರಿಂದ, ಪ್ಲೂಟೊ ಬಗೆಗಿನ ಊಹೆಯನ್ನು ಪುನರ್ವಿಮರ್ಶೆ ಮಾಡುವಂತಾಯಿತು.

ನ್ಯೂ ಹೊರೈಜನ್: ಕತ್ತಲ ಲೋಕದ ಅನಾವರಣ

ನ್ಯೂ ಹೊರೈಜನ್‍ ಗಗನ ನೌಕೆ.  Image Credit: NASA ಅಕ್ಟೋಬರ್ 1991, ಯು ಎಸ್ ಪಿ ಎಸ್ (United States Postal Service) ನಾಸಾದ ಸೌರ ಮಂಡಲದ ಅನ್ವೇಷಣೆ ಕುರಿತು ಅಂಚೆಚೀಟಿಯ ಸರಣಿಯನ್ನು ಹೊರತಂದಿತು . ಅದರಲ್ಲಿ ಒಂದು ಚೀಟಿ ಬಹುತೇಕ ಜನರ ಗಮನ ಸೆಳೆಯಿತು ಏಕೆಂದರೆ ಆ ಚೀಟಿ ಪ್ಲೂಟೊ ಕುರಿತಾಗಿತ್ತು ಮತ್ತು ಅದರಲ್ಲಿ “ ಪ್ಲೂಟೊ - ಇನ್ನು ಅನ್ವೇಷಿಸಲಾಗಿಲ್ಲ ” ಎಂಬ ಬರಹವಿತ್ತು . ಇದಕ್ಕೆ ಕಾರಣ ಅಂದಿನವರೆಗು ನಾಸಾ ಹೊರಗಿನ ಸೌರಮಂಡಲವನ್ನು ಅನ್ವೇಷಿಸಲು   ಕಳುಹಿಸಿದ್ದ ಯಾವುದೆ ಆಕಾಶಕಾಯ ಕೂಡ ಪ್ಲೂಟೊ ಸಮೀಪ ಸಾಗಿರಲಿಲ್ಲ !!!