ಇದು ಎರಡು ಪಕ್ಷಿಗಳ ನಡುವಿನ ಜಗಳದ ಕಥೆ . ನಾನುಶಾಲೆಯಲ್ಲಿ ಓದುತ್ತಿರುಬೇಕಾದರೆ corporation ನವರು ನಮ್ಮ ಮನೆಯ ಮುಂದೆ Fern Leaf Jacaranda ಅನ್ನೋ ಬ್ರೆಜಿಲ್ ದೇಶ ಮೂಲದ ಒಂದು ಗಿಡ ನೆಟ್ಟಿದ್ರು . ನೀವು ನೋಡಿರಬಹುದು ಆ ಗಿಡನ . ಚಳಿಗಾಲದಲ್ಲಿ ನೇರಳೆ ಬಣ್ಣದ ಹೂಗಳನ್ನು ಬಿಟ್ಟು , ನೆಲದ ಮೇಲೆಲ್ಲಾ ಚೆಲ್ಲಿ , ದೂರದಿಂದ ನೋಡಿದರೆ ಹೂವಿನ ಹಾಸಿಗೆ ಹಾಸಿದಂತೆ ತುಂಬಾ ಚೆನ್ನಾಗಿರುತ್ತೆ . ಆಮೇಲೆ ನಾನು ಸುಮಾರು ವರ್ಷಗಳಾದಮೇಲೆ bird watching ಅಂತೆಲ್ಲಾ ಪ್ರಜ್ಞೆ ಬರುವ ಹೊತ್ತಿಗೆ ಆ ಗಿಡ ಮರವಾಗಿ ಬೆಳೆದಿತ್ತು . ನಾನು ಮೊದಲಿಗೆ bird watching ಶುರು ಮಾಡಿದ್ದು ಅದೇ ಮರದ ಮೇಲಿನ ಪಕ್ಷಿಗಳನ್ನ ನೋಡಿಯೇ ! ಆ ಮರ ಸ್ವಲ್ಪ ಮೆದು , ಹಾಗಾಗಿ ಒಂದು White Cheeked Barbet ಆ ಮರದಲ್ಲಿ ಪೊಟರೆ ಕೊರೆಯಲು ಆರಂಭಿಸಿತು . ನಾನಾಗ 10 th ಓದುತ್ತಿದ್ದೆ . ಪ್ರತಿದಿನ ಬೆಳಗ್ಗೆ ಬೇಗ ಎದ್ದು ಓದಲಿಕ್ಕೆ ಕೂರುವಾಗ್ಲೆಲ್ಲಾ ಈ ಪಕ್ಷಿ ಪೊಟರೆ ಕೊರೆಯುತ್ತಿತ್ತು . ಸುಮಾರು ದಿನ ಕೊರೆದ ಮೇಲೆ ಆ ಪಕ್ಷಿ ಒಳಗೆ ಹೋಗಿ ಬರುವಷ್ಟು ದೊಡ್ಡದಾದ ಪೊಟರೆ ready ಆಯ್ತು . ಆದ್ರೆ ಒಂದು ದಿನ ಒಂದು ಜೋಡಿ Common Myna ಆ Barb...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ