ಬಿಳಿಗಿರಿರಂಗನ
ಬೆಟ್ಟದಲ್ಲಿ ಬೇಡಗುಳಿ ಅಂತ ಒಂದು coffee estate ಇದೆ. ಅದು tiger reserve ಮಧ್ಯೆ ಇರೋದ್ರಿಂದ ಅಲ್ಲಿಗೆ ಎಲ್ಲಾ ಜನ ಬೇಕಾದಂತೆ
ಹೋಗ್ಲಿಕ್ಕೆ ಆಗೋದಿಲ್ಲ. Coffee estateನಲ್ಲಿ ಕೆಲಸ ಮಾಡೋ ಜನ, estate managementನ ಕೆಲವು ಜನ ಮಾತ್ರ ಅಲ್ಲಿಗೆ ಹೋಗ್ತಾರೆ.
ಚಾಮರಾಜನಗರದಿಂದ
ಕೊಯಮತ್ತೂರಿಗೆ ಹೋಗೋ ದಾರಿಯಲ್ಲಿ ಪುಣಜನೂರಿನಿಂದ ಒಳಗೆ ಹೋದ್ರೆ ಬೇಡಗುಳಿಗೆ ಹೋಗಲು ಸುಮಾರು ಹನ್ನೆರಡು ಕಿಲೋಮೀಟರ್ ಆಗುತ್ತೆ. ಪೂರ್ತಿ ಕಾಡು ದಾರಿ ಅದು. ಬೇಡಗುಳಿಗೆ ಹೋಗೊ ದಾರಿಯಲ್ಲಿ ನಮ್ಮ ಎರಡು camera trap location ಇದೆ. ರೋಡೆಲ್ಲಾ ಗುಂಡಿ ಬಿದ್ದು ಹಾಳಾಗಿದೆ, ಯಾವ ಕಾಲದಲ್ಲೋ ಹಾಕಿದ ಟಾರು ರಸ್ತೆ ಅದು. ಮಳೆಗಾಲದಲ್ಲಿ ಗುಂಡಿಗಳೆಲ್ಲಾ ಕೆಂಪು ನೀರು
ತುಂಬಿಕೊಂಡಿರುತ್ವೆ. ನಾನು ಒಂದು ದಿನ ಜೀಪಿನಲ್ಲಿ ಬರೋವಾಗ ಅಂತಹ ಒಂದು
ಗುಂಡಿಯಲ್ಲಿ ಒಂದು ಪಕ್ಷಿ ಸ್ನಾನ ಮಾಡ್ತಿತ್ತು. ತುಂಬಾ ಹತ್ರ ಹೋದ್ರೆ ಅದು ಹಾರಿಹೋಗಬಹುದು ಅಂತ ಸ್ವಲ್ಪ
ದೂರದಲ್ಲಿಯೇ ಜೀಪ್ ನಿಲ್ಲಿಸ್ದೆ, ಹಾಗಾಗಿ ಅದು ಯಾವ ಪಕ್ಷಿ ಅಂತ ಸರಿಯಾಗಿ
ಗೊತ್ತಾಗ್ಲಿಲ್ಲ. ಒಂದೆರಡು photo ಕೂಡ ತೆಗೆದೆ. ಅಷ್ಟು ಚೆನ್ನಾಗಿ ಬಂದಿಲ್ಲ. ಇಟ್ಟಿಗೆ ಬಣ್ಣದ ಅದು ಯಾವ್ದೋ water bird ಇರಬಹುದು ಅನ್ನಿಸ್ತು.
ನಾನು ತೆಗೆದ photoನ ನೋಡಿದಾಗ ಏನೇನೂ ಗೊತ್ತಾಗ್ಲಿಲ್ಲ. ಆದ್ರೂ ಅದೇ ಬಣ್ಣದ ಪಕ್ಷಿಗಳನ್ನು ಹುಡುಕುತ್ತಾ ಬಂದೆ. ಅದು Ruddy breasted crake ಇರಬಹುದು ಅನ್ನಿಸಿ ಅದರ ಬಗ್ಗೆ ಓದುತ್ತಾ ಹೋದೆ. ಆ ವಿವರಣೆಗಳನ್ನು ಓದುತ್ತಾ ಹೋದಂತೆ ಅದೇ ಪಕ್ಷಿ ಅಂತ confirm ಆಯ್ತು.
Ruddy breasted crakeನ distribution ತುಂಬಾ ಚಿಕ್ಕದಿದೆ. ಕರ್ನಾಟಕದಲ್ಲಿ ಬಿಳಿಗಿರಿರಂಗನ ಬೆಟ್ಟಗಳನ್ನು ಬಿಟ್ರೆ
ಕರಾವಳಿ ಭಾಗದಲ್ಲಿ ಸ್ವಲ್ಪ ಇರಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ