ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೀವವಿಕಾಸ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸಹವಿಕಾಸದ ಅದ್ಭುತ: ಜೋಶುವಾ ಮರ ಮತ್ತು ಯುಕ್ಕಾ ಪತಂಗ

 ಪ್ರಕೃತಿಯಲ್ಲಿ ಕೆಲವು ಕಥೆಗಳು ನಮ್ಮ ಕಣ್ಣೆದುರೇ ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ನೋಡುವ ದೃಷ್ಟಿ ಮಾತ್ರ ಎಲ್ಲರಿಗೂ ಇರುವುದಿಲ್ಲ. ನಾವು ಒಂದು ಮರದ ನೆರಳಲ್ಲಿ ಸಾವಿರಾರು ಬಾರಿ ನಿಂತಿರಬಹುದು. ಅದರ ಹೂಗಳನ್ನು ನೋಡಿರಬಹುದು. ಅದರ ಎಲೆಗಳನ್ನು ಮುಟ್ಟಿರಬಹುದು. ಆದರೆ ಅದರ ಯಶಸ್ವಿ ಬದುಕಿಗೆ ಏನು ಕಾರಣ ಎಂಬುದನ್ನು ನಾವು ಯೋಚಿಸಿರುವುದೇ ಇಲ್ಲ. ಹೀಗೆಯೇ ಕೆಲವೊಮ್ಮೆ ಒಂದು ಕಾಡಿನ ಭವಿಷ್ಯವು ಒಂದು ಮರದ ಮೇಲೆ ನಿಂತಿರುತ್ತದೆ. ಇನ್ನೂ ಕೆಲವೊಮ್ಮೆ ಒಂದು ಮರದ ಭವಿಷ್ಯವು ಯಾರ ಕಣ್ಣಿಗೂ ಬೀಳದಷ್ಟು ಪುಟ್ಟ ಜೀವಿಯ ಮೇಲೆ ನಿಂತಿರುತ್ತದೆ. ಇದು ಅಂತಹ ಒಂದು ಕಥೆ. ಅಮೆರಿಕದ ಪಶ್ಚಿಮ ಭಾಗದಲ್ಲಿ  ಮೊಜಾವೆ ಮರುಭೂಮಿಯಿದೆ.  ಮೈಲುಗಟ್ಟಲೆ ಹರಡಿರುವ ಮರಳು, ಕಲ್ಲುಗಳು, ಉರಿಯುವ ಬಿಸಿಲು, ಮಳೆಯ ಹನಿ ಬೀಳುವುದೇ ಅಪರೂಪ. ಆದರೂ ಆ ನಿರ್ಜನ ನೆಲದ ಮಧ್ಯೆ ಕೈಗಳನ್ನು ಆಕಾಶದತ್ತ ಚಾಚಿಕೊಂಡಿರುವಂತೆ ನಿಂತಿರುವ ಒಂದು ವಿಚಿತ್ರ ಮರ ಎಲ್ಲರ ಗಮನ ಸೆಳೆಯುತ್ತದೆ. ಅದರ ಹೆಸರು ಜೋಶುವಾ ಮರ . ಮೊಜಾವೆ ಮರುಭೂಮಿಯಲ್ಲಿನ  ಜೋಶುವಾ ಮರ ಚಿತ್ರ: Wikipedia CC BY-SA 3.0 ಮೊದಲ ಬಾರಿ ಅದನ್ನು ನೋಡಿದವರು ಒಂದೇ ಪ್ರಶ್ನೆ ಕೇಳುತ್ತಾರೆ.  "ಇದು ನಿಜವಾಗಿಯೂ ಭೂಮಿಯ ಮೇಲಿನ ಮರವೇ?"  ಯಾಕೆಂದರೆ ಅದರ ರೂಪವೇ ಹಾಗಿರುತ್ತದೆ. ತಿರುಚಿದ ಕಾಂಡ, ಎಲ್ಲ ದಿಕ್ಕಿಗೂ ಚಾಚಿದ ಕೊಂಬೆಗಳು, ಮುಳ್ಳಿನಂತಿರುವ ಎಲೆಗಳು, ಮತ್ತು ಅವುಗಳ ತ...

ಪೆಪ್ಪರ್ಡ್ ಪತಂಗ: ನೈಸರ್ಗಿಕ ಆಯ್ಕೆಯ ಜೀವಂತ ಸಾಕ್ಷಿ

 ಒಂದು ಪುಟ್ಟ ಪತಂಗ! ಅದು ಹುಲಿಯಷ್ಟು ಬಲಿಷ್ಠವಲ್ಲ. ಚೀತಾದಷ್ಟು ವೇಗವೂ ಇಲ್ಲ. ವಿಷದಹಾವಿನಂತೆ ತನ್ನನ್ನು ರಕ್ಷಿಸಿಕೊಳ್ಳುವುದೂ ಗೊತ್ತಿಲ್ಲ. ಅದರ ಬಳಿ ಇದ್ದದ್ದು ಕೇವಲ ಎರಡು ರೆಕ್ಕೆಗಳು ಮತ್ತು ಮರದ ತೊಗಟೆ ಮೇಲೆ ಕುಳಿತಾಗ ಹಿನ್ನಲೆಯಲ್ಲಿನ ಬಣ್ಣದೊಡನೆ ಕರಗಿಹೋಗುವ ಅವುಗಳ ಬಣ್ಣ. ಆದರೆ ಇದೇ ಪುಟ್ಟ ಪತಂಗ ಜೀವವಿಕಾಸದ (Evolution) ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಜೀವಿಗಳಲ್ಲಿ ಒಂದಾಯಿತು. ಚಾರ್ಲ್ಸ್ ಡಾರ್ವಿನ್ 1859ರಲ್ಲಿ On the Origin of Species ಪ್ರಕಟಿಸಿದಾಗ, ಜೀವಿಗಳು ಪರಿಸರಕ್ಕೆ ಹೊಂದಿಕೊಂಡು ಕಾಲಕ್ರಮೇಣ ಬದಲಾಗುತ್ತವೆ ಎಂದು ಪ್ರತಿಪಾದಿಸಿದರು. ಆದರೆ ಆ ಕಾಲದಲ್ಲಿ ಈ ಕಲ್ಪನೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುವ ಉದಾಹರಣೆಗಳು ವಿರಳವಾಗಿದ್ದವು. ಡಾರ್ವಿನ್ ನಿಧನರಾದ ಕೆಲವು ದಶಕಗಳ ನಂತರ, ಇಂಗ್ಲೆಂಡಿನ ಕಾಡೊಂದರಲ್ಲಿ ಬದುಕುತ್ತಿದ್ದ ಈ ಸಣ್ಣ ಪತಂಗ ಅವರ ಸಿದ್ಧಾಂತವನ್ನು ಜೀವಂತವಾಗಿ ತೋರಿಸಿಕೊಟ್ಟಿತು. ಈ ಪತಂಗ ಇದ್ದದ್ದು ಇಂಗ್ಲೆಂಡಿನ ಓಕ್, ಬರ್ಚ್ ಮತ್ತು ಇತರ ಮರಗಳಿಂದ ತುಂಬಿದ್ದ ಹಳೆಯ ಕಾಡುಗಳಲ್ಲಿ. ಆ ಮರಗಳ ಕಾಂಡಗಳ ಮೇಲೆ ಬಿಳಿ ಮತ್ತು ಬೂದು ಬಣ್ಣದ ಕಲ್ಲುಹೂಗಳು (Lichens) ಹರಡಿಕೊಂಡಿದ್ದವು. ದೂರದಿಂದ ನೋಡಿದರೆ ಮರದ ತೊಗಟೆಯೇ ಒಂದು ವಿಚಿತ್ರ ಚಿತ್ರಕಲೆಯಂತೆ ಕಾಣುತ್ತಿತ್ತು. ಹಗಲಿನಲ್ಲಿ ಈ ಪತಂಗ ಬಂದು ಆ ತೊಗಟೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಆ ಪತಂಗಗಳ ರೆಕ್ಕೆಗಳ ಮೇಲೂ ತೊಗಟೆಯಂತೆ ಬಿಳಿ ಬಣ್...

ಡಾರ್ವಿನ್ ಊಹಿಸಿದ್ದ ಪತಂಗ

 ಜೀವ ವಿಕಾಸ ಸಿದ್ಧಾಂತದ ಒಂದು ವೈಶಿಷ್ಟ್ಯವೆಂದರೆ ಈಗಾಗಲೇ ಇರುವ ವಿವರಗಳನ್ನು ವಿಶ್ಲೇಷಿಸಿ ಮುಂದಿನದ್ದನ್ನು ಊಹಿಸುವ ಸಾಮರ್ಥ್ಯ! ವಿಜ್ಞಾನವೆಂದರೆ ಈಗಾಗಲೇ ಗೊತ್ತಿರುವ ಸಂಗತಿಗಳನ್ನು ದಾಖಲಿಸುವುದು ಮಾತ್ರವಲ್ಲ, ಇನ್ನೂ ಕಂಡುಹಿಡಿಯದಿರುವ ಸಂಗತಿಗಳ ಬಗ್ಗೆ ಊಹೆಗಳನ್ನು ಮಾಡುವುದು, ನಂತರ ಅವು ಸತ್ಯವೋ ಸುಳ್ಳೋ ಎಂದು ಪರೀಕ್ಷಿಸುವುದೂ ಅದರ ಮೂಲಭೂತ ಸ್ವಭಾವ. ಆದ್ದರಿಂದ ಪರೀಕ್ಷಿಸಬಹುದಾದ ಊಹೆಗಳನ್ನು ರೂಪಿಸುವುದು ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಯ ಹೃದಯವಾಗಿದೆ. ಕೆಲವು ಊಹೆಗಳನ್ನು ಪರಿಶೀಲಿಸುವುದು ಸುಲಭ. ಆದರೆ ಕೆಲವು ಊಹೆಗಳು ಪ್ರಕೃತಿಯಲ್ಲೇ ಅಪರೂಪವಾಗಿ ನಡೆಯುವ ಒಂದು ಘಟನೆಯನ್ನು ನೇರವಾಗಿ ನೋಡುವವರೆಗೆ ಉತ್ತರ ಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹಲವು ದಶಕಗಳಲ್ಲ, ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಡಾರ್ವಿನ್ ಊಹಿಸಿದ್ದ ಪತಂಗದ ಕಥೆಯೂ ಅಂಥದ್ದೇ. ಪರಿಸರ ವಿಜ್ಞಾನ ಮತ್ತು ವಿಕಾಸವಾದದ ಅತ್ಯಂತ ಪ್ರಸಿದ್ಧ ಊಹೆಗಳಲ್ಲಿ ಒಂದಾದ ಈ ಊಹೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಧ್ಯಯನಗಳು ಮತ್ತು ಬಹಳ ದೀರ್ಘಕಾಲದ ಸಂಶೋಧನೆ ಬೇಕಾಯಿತು. ಹೂಬಿಡುವ ಸಸ್ಯಗಳ ಜೀವನದಲ್ಲಿ ಪರಾಗಸ್ಪರ್ಶ ಅತ್ಯಂತ ಮಹತ್ವದ ಹಂತ. ಒಂದು ಹೂವಿನ ಪರಾಗ ಮತ್ತೊಂದು ಹೂವಿನ ಅಂಡಾಶಯವನ್ನು ತಲುಪಿದಾಗ ಮಾತ್ರ ಹೊಸ ಬೀಜಗಳು ರೂಪುಗೊಳ್ಳುತ್ತವೆ. ಆದರೆ ಸಸ್ಯಗಳಿಗೆ ತಮ್ಮಷ್ಟಕ್ಕೆ ತಾವೇ ಚಲಿಸಲು ಸಾಧ್ಯವಿಲ್ಲ. ಹಾಗಿದ್ದಾಗ ಈ ಕೆ...

ಚಿಟ್ಟೆ ಉದ್ಯಾನದಲ್ಲಿ ಸಿಕ್ಕ ಹಮ್ಮಿಂಗ್‌ಬರ್ಡ್

ಕುಳಿತಿರುವ ಹಮ್ಮಿಂಗ್‌ಬರ್ಡ್ ಪತಂಗ - ಹಾರಾಡುವಾಗ ಮೊಬೈಲ್ ಮೂಲಕ ಈ ಪತಂಗದ ಫೋಟೋ ತೆಗೆಯುವುದು ಕಷ್ಟ ಚಿತ್ರ: © ಶ್ರೀಕಾಂತ   ಮಳೆಗಾಲದ ಒಂದು ದಿನ ಬೆಳುವಾಯಿಯಲ್ಲಿರುವ ಸಮ್ಮಿಲನ್ ಶೆಟ್ಟಿಯವರ ಚಿಟ್ಟೆ ಉದ್ಯಾನಕ್ಕೆ ಬರಬಹುದೇ ಎಂದು ಅವರಿಗೆ ಕರೆ ಮಾಡಿ ಕೇಳಿದೆ. ಅವರು ಅಷ್ಟೇನೂ ಉತ್ಸಾಹದಿಂದ ತೋರಲಿಲ್ಲ. ಅವರ ಉದ್ಯಾನದ ಸಮಯ ಆಗಲೇ ಮುಗಿದಿತ್ತು. ಹೇಗೋ ಕೊನೆಗೆ ಒಪ್ಪಿದರು. ನಾನು, ನವ್ಯ ಮತ್ತು ಅಭಿ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಉದ್ಯಾನವನ್ನು ತಲುಪಿದೆವು. ಚಿಟ್ಟೆಗಳನ್ನು ನೋಡುವುದಕ್ಕೆ ಅದು ಸ್ವಲ್ಪ ತಡವಾದ ಸಮಯ. ಏಕೆಂದರೆ ಅವು ಬೆಳಗಿನ ಹೊತ್ತಿನಲ್ಲಿ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಆ ದಿನವೂ ಮಳೆ ತನ್ನಿಷ್ಟದಂತೆ ಬರುತ್ತಾ ಹೋಗುತ್ತಿತ್ತು. ಮೋಡಗಳ ನಡುವೆ ಆಗಾಗ ಸೂರ್ಯನ ಕಿರಣಗಳು ಇಣುಕಿ ನೋಡುತ್ತಿದ್ದವು. ಒಳಗೆ ಹೋಗುವ ಮೊದಲು ಚಿಟ್ಟೆ ಜೀವನದ ವಿವಿಧ ಹಂತಗಳನ್ನು ಪರಿಚಯಿಸುವ ಒಂದು ಕಿರುಚಿತ್ರವನ್ನು ತೋರಿಸಿದರು. ನಂತರ ಸಮ್ಮಿಲನ್ ಶೆಟ್ಟಿಯವರು ಉದ್ಯಾನದ ಉದ್ದೇಶದ ಬಗ್ಗೆ ವಿವರವಾಗಿ ಮಾತನಾಡಿದರು. ನಮ್ಮ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ನಮ್ಮನ್ನು ಒಳಗೆ ಕರೆದುಕೊಂಡು ಹೋದರು. ನಮ್ಮ ದೇಶದಲ್ಲಿ ಕಾಣುವ ಅನೇಕ ಚಿಟ್ಟೆ ಉದ್ಯಾನಗಳಂತೆ ಇದು ಕೇವಲ ಚಿಟ್ಟೆಗಳನ್ನು ಪ್ರದರ್ಶಿಸುವ ಸ್ಥಳವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯಲ್ಲಿರುವ ಈ ಉದ್ಯಾನವನ್ನು ಚಿಟ್ಟೆಗಳು ಸ್ವಾಭಾವಿಕವಾಗಿ ಸಂತಾನೋತ್ಪತ್ತಿ ಮಾಡುವಂತೆ ರೂಪಿಸಲ...

ಚಂದ್ರ ಪತಂಗ – ಕತ್ತಲು, ಮಳೆಯಲ್ಲಿ ಬೆಳಗಿದ ಚಂದಿರ

ಕತ್ತಲು ಮಳೆಯಲ್ಲಿ ಕಂಡ ಚಂದಿರ - ಚಂದ್ರ ಪತಂಗ ಚಿತ್ರ: © ಶ್ರೀಕಾಂತ   ಅದು ವಾಲ್ಪರೈನಲ್ಲಿ ಉಭಯವಾಸಿ ಸಮೀಕ್ಷೆಯ ಒಂದು ರಾತ್ರಿ. ಸಮೀಕ್ಷೆಗಾಗಿ ನಾವು ತಾಲನಾರ್ ಎಂಬ ಜಾಗಕ್ಕೆ ತೆರಳಿದ್ದೆವು. ನಮ್ಮೊಂದಿಗೆ Nature Conservation Foundationನ ಹಿರಿಯ ವಿಜ್ಞಾನಿ ಡಾ. ದಿವ್ಯಾ ಮುದ್ದಪ್ಪ ಅವರೂ ಇದ್ದರು. ಆರ್ಕಿಡ್‌ಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದ ದಾರಿಯುದ್ದಕ್ಕೂ ಕಾಣುವ ಪ್ರತಿಯೊಂದು ಆರ್ಕಿಡ್‌ನ ಕಥೆಯನ್ನು ಹೇಳುತ್ತಾ ಸಾಗುತ್ತಿದ್ದರು. ಆದರೆ ತಾಲನಾರ್‌ನ ಕಾಫಿ ತೋಟದ ರಸ್ತೆಗಳು ನನ್ನ ಸಂಪೂರ್ಣ ಗಮನವನ್ನು ವಾಹನ ಚಾಲನೆಯ ಮೇಲೆಯೇ ಕೇಂದ್ರೀಕರಿಸುವಂತೆ ಮಾಡಿದ್ದವು. ಹೀಗಾಗಿ ಆರ್ಕಿಡ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅಪರೂಪದ ಅವಕಾಶವನ್ನು ಕೈಚೆಲ್ಲಬೇಕಾಯಿತು. ಅನಮಲೈ ಬೆಟ್ಟಗಳ ಈ ಭಾಗದಲ್ಲಷ್ಟೇ ಕಂಡುಬರುವ ಒಂದು ಕಪ್ಪೆಯನ್ನು ಹುಡುಕುತ್ತಿದ್ದೆವು. ಸಾಕಷ್ಟು ಹುಡುಕಿದರೂ ಆ ಕಪ್ಪೆ ಮಾತ್ರ ನಮ್ಮ ಕಣ್ಣಿಗೆ ಬೀಳಲಿಲ್ಲ. (ಆ ಕಪ್ಪೆಯ ಹೆಸರು ನೆನಪಾಗುತ್ತಿಲ್ಲ) ಆ ಕಪ್ಪೆಯನ್ನು ಹುಡುಕುವುದನ್ನು ಬಿಟ್ಟು ಎಂದಿನಂತೆ ನಾವು ಸಮೀಕ್ಷೆ ಶುರುಮಾಡಿದೆವು. ಸಮೀಕ್ಷೆಯುದ್ದಕ್ಕೂ ಮಳೆ ಸುರಿಯುತ್ತಲೇ ಇತ್ತು.  ಸಮೀಕ್ಷೆ ಮುಗಿಸಿ ಹಿಂತಿರುಗುವ ಪ್ರಯಾಣ ಇನ್ನಷ್ಟು ಕಠಿಣವಾಗಿತ್ತು. ಕೆಸರುಮಯವಾದ ದಾರಿ ಸವಾಲಾಗಿತ್ತು. ಎರಡು ಬಾರಿ ವಾಹನ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಅನಮಲೈ ಬೆಟ್ಟಗಳ ದಟ್ಟ ಕತ್ತಲಲ್ಲಿ ಹೇಗೋ ಅದನ್ನ...

ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ

 ಕೆಲವೊಮ್ಮೆ ಕಾಡಿನಲ್ಲಿ ದೊಡ್ಡ ಪ್ರಾಣಿಗಳನ್ನು ನೋಡುವಾಗ ಆಗುವಷ್ಟೇ ಖುಷಿ ಚಿಕ್ಕ ಜೀವಿಗಳನ್ನು ನೋಡುವುದರಲ್ಲೂ ಆಗುತ್ತದೆ. ಅಂತಹ ಒಂದು ಜೀವಿ Indrella ampulla ಎನ್ನುವ ಬಸವನಹುಳು (Snail)! ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿಗಳ ಪಟ್ಟಿಯಲ್ಲಿ ಅದೂ ಒಂದಾಗಿತ್ತು. ಆನೆ, ಹುಲಿ ಅಥವಾ ಹಾರ್ನ್‌ಬಿಲ್‌ನಷ್ಟು ಪ್ರಸಿದ್ಧವಲ್ಲದಿದ್ದರೂ, ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಬಗ್ಗೆ ಆಸಕ್ತಿ ಇರುವವರಿಗೆ ಇದು ಒಂದು ವಿಶೇಷ ಜೀವಿ. 2025ರ ಏಪ್ರಿಲ್ ನಲ್ಲಿ ಕೊಡಗಿನಲ್ಲಿ ಸಣ್ಣ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಕೆಲಸ ಮಾಡುವಾಗ ಒಂದು ಕಾಫಿ ತೋಟದಲ್ಲಿ ನಾನು ಮೊದಲ ಬಾರಿಗೆ Indrella ampulla ನೋಡಿದ್ದೆ. ಒದ್ದೆಯಾದ ಕಾಡಿನ ನೆಲದ ಮೇಲೆ ನಿಧಾನವಾಗಿ ಚಲಿಸುತ್ತಿದ್ದ ಆ ಕಿತ್ತಳೆ ಬಣ್ಣದ ಬಸವನಹುಳವನ್ನು ನೋಡಿದಾಗ ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿ ಕೊನೆಗೂ ಕಣ್ಣಮುಂದೆ ಕಾಣಿಸಿಕೊಂಡಿತ್ತು. ಕೊಡಗಿನಲ್ಲಿ ಕಂಡ ಕಿತ್ತಳೆ ಬಣ್ಣದ  Indrella ampulla ಬಸವನ ಹುಳು  ಚಿತ್ರ: © ಶ್ರೀಕಾಂತ ಕೆಲವು ತಿಂಗಳ ನಂತರ, ಸೆಪ್ಟೆಂಬರ್ ನಲ್ಲಿ ಪಾಲಕ್ಕಾಡಿನಲ್ಲಿ ಮತ್ತೊಮ್ಮೆ Indrella ampulla ಕಾಣಿಸಿತು. ಈ ಬಾರಿ ಹಳದಿ ಬಣ್ಣದ ಹುಳು ಕಂಡಿತ್ತು. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅದು ಇನ್ನಷ್ಟು ಆಸಕ್ತಿದಾಯಕವಾಗಿ ಕಾಣತೊಡಗಿತು. ಪಾಲಕ್ಕಾಡಿನಲ್ಲಿ ಕಂಡ ಹಳದಿ ಬಣ್ಣದ Indrella ampulla ಬಸವನ ಹುಳು ಚಿತ್ರ: © ಶ್ರೀಕಾ...

ತೆಳು ಗಾಳಿಗೆ - ಪಕ್ಷಿಗಳ ಉಗಮ

"ವೈ ಎವಲ್ಯೂಶನ್ ಈಸ್ ಟ್ರು ?” ಪುಸ್ತಕದ ಆಯ್ದ ಭಾಗ ಕನ್ನಡದಲ್ಲಿ ಅರ್ಧ ರೆಕ್ಕೆಯ ಪ್ರಯೋಜನವೇನು? ಇದು ಪ್ರಾಕೃತಿಕ ಆಯ್ಕೆ ಅಥವಾ ವಿಕಾಸವಾದದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಡಾರ್ವಿನ್ ಕಾಲದಿಂದಲು ಪ್ರಚಲಿತವಿರುವ ಪ್ರಶ್ನೆ. ಜೀವ ವಿಜ್ಞಾನಿಗಳ ಪ್ರಕಾರ ಪಕ್ಷಿಗಳು ಆರಂಭಿಕ ಉರಗಗಳಿಂದ ವಿಕಾಸ ಹೊಂದಿವೆ. ಆದರೆ ಒಂದು ನೆಲವಾಸಿ ಪ್ರಾಣಿಯು ಹೇಗೆ ಹಾರುವ ಸಾಮರ್ಥ್ಯವನ್ನು ಪಡೆಯುತ್ತದೆ? ಪ್ರಾಕೃತಿಕ ಆಯ್ಕೆಯು ಈ ಪರಿವರ್ತನೆಯನ್ನು ವಿವರಿಸಲಾಗುವುದಿಲ್ಲ. ಏಕೆಂದರೆ ಇದಕ್ಕಾಗಿ ಜೀವಿಗಳು ಒಂದು ಮಧ್ಯಂತರ ಕಾಲಘಟ್ಟದಲ್ಲಿ ಕೇವಲ ಅಪೂರ್ಣಾವಸ್ಥೆಯಲ್ಲಿರುವ ರೆಕ್ಕೆಯನ್ನು ಹೊಂದಿರಬೇಕು. ಇದು ಆ ಜೀವಿಗೆ ಆಯ್ಕೆಯ ಪ್ರಯೋಜನಕ್ಕಿಂತ ಹೊರೆಯನ್ನೆ ಉಂಟುಮಾಡುತ್ತದೆ ಎಂದು ಸೃಷ್ಟಿ ವಾದಿಗಳು ವಾದಿಸುತ್ತಾರೆ.