ಪೂರ್ಣ ಚಂದ್ರ ತೇಜಸ್ವಿಯವರ 'ಕರ್ವಾಲೋ' ಕಾದಂಬರಿಯಲ್ಲಿ ಬರುವ ಹಾರುವ ಓತಿ Reptelia ವರ್ಗಕ್ಕೆ ಸೇರಿದ Draco ಎಂಬ Genusನ ಒಂದು ಪ್ರಭೇಧ. ಜಗತ್ತಿನಲ್ಲಿ ಇದುವರೆವಿಗೂ ಸುಮಾರು ನಲವತ್ತಮೂರು ಪ್ರಭೇಧಗಳ ಹಾರು ಓತಿಯನ್ನು ಗುರುತಿಸಲಾಗಿದೆ. ಈ ಎಲ್ಲಾ ಪ್ರಭೇಧಗಳೂ ಭಾರತದ ಪಶ್ಚಿಮ ಘಟ್ಟದಿಂದ ಹಿಡಿದು ಈಶಾನ್ಯ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ವಿಯೆಟ್ನಾಮ್, ಕಾಂಬೋಡಿಯಾ, ಚೀನಾದ ದಕ್ಷಿಣ ಭಾಗ, ಮಲೇಶಿಯಾ, ಸಿಂಗಪೂರ್, ಇಂಡೋನೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಹರಡಿಕೊಂಡಿದೆ. ಪಶ್ಚಿಮ ಘಟ್ಟದ ಹೆಚ್ಚಿನ ಎಲ್ಲಾ ಭಾಗ ಮತ್ತು ಪೂರ್ವ ಘಟ್ಟಗಳ ಕೆಲವು ಭಾಗಗಳಲ್ಲಿ ಮಾತ್ರ ಕಾಣುವ ಏಕೈಕ ಪ್ರಭೇಧ Draco dussumieri. ಕರ್ನಾಟಕದಲ್ಲಿ ಸ್ಥಳೀಯವಾಗಿ 'ಹಾರುವ ಓತಿ' (ನಿಜವಾಗಿಯೂ ಅವು ಹಾರುವುದಿಲ್ಲ, ತಮ್ಮ ಪೊರೆಯಂತಹ ತೊಗಲಿನ ಸಹಾಯದಿಂದ ಗಾಳಿಯಲ್ಲಿ ತೇಲುತ್ತವೆ) ಎಂದೇ ಕರೆಸಿಕೊಳ್ಳುವ ಇದು IUCN Red Listನಂತೆ (ಜಾಗತಿಕವಾಗಿ ಜೀವಿ ಪ್ರಭೇಧವೊಂದರ ಸಂರಕ್ಷಣಾ ಸ್ಥಿತಿಯನ್ನು ತಿಳಿಸುವ ಪಟ್ಟಿ) Least Concern ಆಗಿದೆ. ಗಂಡು ಹಾರು ಓತಿ ತನ್ನ ವಾಸಕ್ಷೇತ್ರ ಕಾಯ್ದುಕೊಳ್ಳುವ ಬಗ್ಗೆ ಆಕ್ರಮಣಕಾರಿಯಾಗಿರುತ್ತದೆ. ಹಲವು ಹೆಣ್ಣುಗಳ ವಾಸಕ್ಷೇತ್ರಗಳನ್ನು ಒಳಗೊಂಡ ಗಂಡು ಓತಿಯ ವಾಸಕ್ಷೇತ್ರ ಹಲವಾರು ಮರಗಳನ್ನು ಒಳಗೊಂಡಿರುತ್ತದೆ. ಗಂಡು ಓತಿಯು ತನ್ನ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಬ...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ