ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪಶ್ಚಿಮ ಘಟ್ಟ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹುಲಿ ಸಂರಕ್ಷಣೆ: ಏಕೆ ಇಷ್ಟೊಂದು ಪ್ರಾಮುಖ್ಯತೆ?

 ಅದು ಮೇ 2016. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಗಣಗೂರಿನಲ್ಲಿ ನಾವು ತಂಗಿದ್ದೆವು. ಹುಲಿಯ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸೀಳುದಾರಿ ಗಣತಿ ಸಮೀಕ್ಷೆ (Line Transect Survey)  ನಡೆಯುತ್ತಿತ್ತು. ನನ್ನೊಂದಿಗೆ ಕೆಲವು ಫೀಲ್ಡ್ ಅಸಿಸ್ಟೆಂಟ್‌ಗಳು ಮತ್ತು ಸ್ವಯಂಸೇವಕರು ಇದ್ದರು. ಅದು ಮುಂಗಾರು ಪೂರ್ವದ ಮಳೆಯ ಸಮಯ. ಒಂದೊಂದು ದಿನ ಸಂಜೆ ಬೀಳುತ್ತಿದ್ದ ಹದವಾದ ಮಳೆಯಿಂದ ಕಾಡು ಹಸಿರಿನಿಂದ ಕಂಗೊಳಿಸುತ್ತಿತ್ತು. ಒದ್ದೆಯಾದ ಮಣ್ಣಿನ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಒಂದು ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ. ಊಟ ಮುಗಿಸಿ, ಸಮೀಕ್ಷೆಗೆ ಹೊರಡಲು ಇನ್ನೂ ಸಮಯವಿದ್ದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದ್ದೆವು. ನಾವು ಉಳಿದಿದ್ದ ಅರಣ್ಯ ಇಲಾಖೆಯ ಹಳೆಯ ಕಟ್ಟಡದ ಸ್ವಲ್ಪ ದೂರದಲ್ಲೇ ಒಂದು ಕೆರೆಯಿತ್ತು. ಕಟ್ಟಡದಿಂದ ಹೊರಬಂದರೆ ಕೆಲವು ಮೆಟ್ಟಿಲುಗಳು. ಅಲ್ಲಿಂದ ಒಂದು ಕಚ್ಚಾ ರಸ್ತೆ ಬಲಗಡೆಯಿಂದ ಬಂದು ಕಟ್ಟಡದ ಮುಂದೆ ಹಾದು, ಎಡಗಡೆಗೆ ಸಾಗಿ ಸ್ವಲ್ಪ ದೂರದಲ್ಲಿ ಸ್ವಲ್ಪ ಬಲಕ್ಕೆ ತಿರುಗಿ ಕೆರೆಯನ್ನು ಸೇರುತ್ತಿತ್ತು. ಆ ತಿರುವಿನ ಕಾರಣದಿಂದ ಕಟ್ಟಡದ ಮುಂದೆ ನಿಂತರೆ ಕೆರೆ ಕಾಣುತ್ತಿರಲಿಲ್ಲ. ಒಂದು ಕ್ಷಣ ನಮ್ಮ ಮಾತೆಲ್ಲವು ಸ್ತಬ್ದವಾಯಿತು. ಇದ್ದಕ್ಕಿದ್ದಂತೆ ಹುಲಿಯ ಕೂಗೊಂದು ಕೇಳಿಸಿದ್ದರಿಂದ ನಾವು ಮಾತನಾಡುವುದನ್ನು ನಿಲ್ಲಿಸಿದೆವು. ಅದು ಹುಲಿಯ ಘರ್ಜನೆಯಲ್ಲ. ಬೆದೆಗೆ ಬಂದ ಹೆಣ್ಣು ಹುಲಿ ಕಾಡ...

ಪಶ್ಚಿಮ ಘಟ್ಟಗಳ ಹಾರುಗಪ್ಪೆಗಳು

 ಮಳೆಗಾಲ ಆರಂಭವಾಗುವ ಹೊತ್ತಿಗೆ ಪಶ್ಚಿಮ ಘಟ್ಟಗಳ ಶಬ್ದ ಪ್ರಪಂಚ ಬದಲಾಗಿಬಿಡುತ್ತವೆ. ಮಳೆಯ ನಿರೀಕ್ಷೆಯಲ್ಲಿದ್ದ ಕಾಡು ಮೊದಲ ಮಳೆಯ ಹನಿಗಳನ್ನು ಸ್ವಾಗತಿಸುತ್ತದೆ. ಸೊರಗಿದ್ದ ಹಳ್ಳಗಳು ಮತ್ತೆ ನೀರಿನಿಂದ ತುಂಬುತ್ತವೆ. ಮರಗಳ ಎಲೆಗಳು ತೊಳೆದು ಹೊಳೆಯುತ್ತವೆ. ರಾತ್ರಿ ಹೊತ್ತಿಗೆ ಸಾವಿರಾರು ಕೀಟಗಳ ಸದ್ದು ಮತ್ತು ಕಪ್ಪೆಗಳ ಗಾಯನದಿಂದ ಜೀವಂತವಾಗುತ್ತದೆ. ಅಂತಹ ಮಳೆಗಾಲದ ರಾತ್ರಿಗಳಲ್ಲೇ ನನಗೆ ಅತ್ಯಂತ ಇಷ್ಟವಾದ ಜೀವಿಗಳಲ್ಲಿ ಒಂದಾದ ಹಾರುಗಪ್ಪೆಗಳನ್ನು ನೋಡುವ ಅವಕಾಶ ಸಿಕ್ಕಿತು. ಹಾರುಗಪ್ಪೆಗಳು ನಿಜವಾದ ಅರ್ಥದಲ್ಲಿ ಹಾರುವುದಿಲ್ಲ. ಪಕ್ಷಿಗಳು ಮತ್ತು ಬಾವಲಿಗಳಂತೆ ನಿರಂತರವಾಗಿ ರೆಕ್ಕೆ ಬಡಿಯುತ್ತಾ ಗಾಳಿಯಲ್ಲಿ ಹಾರುವ ಸಾಮರ್ಥ್ಯ ಇವುಗಳಿಗೆ ಇಲ್ಲ. ಬದಲಾಗಿ, ಎತ್ತರದ ಮರದಿಂದ ಮತ್ತೊಂದು ಮರದ ಕಡೆಗೆ ಗಾಳಿಯಲ್ಲಿ ಗ್ಲೈಡ್ (Glide) ಮಾಡುತ್ತವೆ. ಈ ಕಾರಣಕ್ಕಾಗಿಯೇ ಇವುಗಳನ್ನು ಹಾರುಗಪ್ಪೆಗಳು ಅಥವಾ ಗ್ಲೈಡಿಂಗ್ ಕಪ್ಪೆಗಳು ಎಂದು ಕರೆಯಲಾಗುತ್ತದೆ. ಇವುಗಳ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಕೈ ಮತ್ತು ಕಾಲುಗಳ ಬೆರಳುಗಳ ನಡುವಿನ ವಿಶಾಲವಾದ ಚರ್ಮದ ತೊಗಲು (webbing). ಸಾಮಾನ್ಯ ಕಪ್ಪೆಗಳಿಗಿಂತ ಈ ತೊಗಲು ಬಹಳ ದೊಡ್ಡದಾಗಿದ್ದು, ಗಾಳಿಯಲ್ಲಿ ಜಾರುವಾಗ ಅವು ಒಂದು ರೀತಿಯ "ಪ್ಯಾರಾಚೂಟ್"ನಂತೆ ಕಾರ್ಯನಿರ್ವಹಿಸುತ್ತವೆ. ಜಿಗಿಯುವ ಕ್ಷಣದಲ್ಲಿ ಕಪ್ಪೆಯು ತನ್ನ ನಾಲ್ಕೂ ಕಾಲುಗಳನ್ನು ಚಾಚಿಕೊಳ್ಳುತ್ತದೆ. ಆಗ ಬೆರಳುಗಳ ನಡುವಿನ ಪೊರೆಗಳು ವ...

ಅಜ್ಞಾತ ಉಭಯವಾಸಿ: ಸಿಸಿಲಿಯನ್

ವಾಲ್ಪರೈನಲ್ಲಿ ಕಂಡ, Gymnopiona ಜೀನಸ್ ಗೆ ಸೇರಿದ ಒಂದು ಪ್ರಭೇದದ ಸಿಸಿಲಿಯನ್. ಚಿತ್ರದಲ್ಲಿ ಸಿಸಿಲಿಯನ್‌ನ ಚಿಕ್ಕ ಕಣ್ಣುಗಳನ್ನೂ ಕಾಣಬಹುದು. ಚಿತ್ರ: © ಶ್ರೀಕಾಂತ  ಕೆಲವು ಜೀವಿಗಳು ಅಪರೂಪವಾಗಿರುವುದರಿಂದ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಆದರೆ ಮತ್ತೂ ಕೆಲವು ಜೀವಿಗಳು ಅವು ಎಲ್ಲಿ ಬದುಕುತ್ತವೆ, ಹೇಗೆ ಬದುಕುತ್ತವೆ ಎಂದು ನಮಗೆ ಗೊತ್ತಿರದ ಕಾರಣ ಕಾಣಿಸುವುದಿಲ್ಲ. ನನಗೆ ಸುಮಾರು‌ ವರ್ಷ ಸಿಸಿಲಿಯನ್‌ಗಳ ಪರಿಚಯ ಇರದೇ ಇದ್ದುದಕ್ಕೆ ಕಾರಣ ಅವುಗಳ ನಿಗೂಢ ಬದುಕು! 2016ರ ಆಗಸ್ಟ್ ತಿಂಗಳು. ಹರ್ಷ ಮತ್ತು ನಾನು ಆಗುಂಬೆಗೆ ಹೋಗುತ್ತಿದ್ದೆವು. ಬೆಂಗಳೂರಿನಿಂದ ರಾತ್ರಿ ಹೊರಟಿದ್ದೆವು. ಬೆಳಗಿನ ಜಾವ ಸುಮಾರು ಮೂರು ಗಂಟೆ ಹೊತ್ತಿಗೆ ಬಾಳೆಹೊನ್ನೂರಿನ ಹತ್ತಿರ ತಲುಪಿದ್ದೆವು. ಜೋರಾಗಿ ಸುರಿಯುತ್ತಿದ್ದ  ಮಳೆ ಆಗ ತಾನೆ ನಿಂತಿತ್ತು. ವಾಹನದ ಹೆಡ್‌ಲೈಟ್ ಬೆಳಕಿನಲ್ಲಿ ಡಾಂಬರು ರಸ್ತೆ ಹೊಳೆಯುತ್ತಿತ್ತು. ಆಗ ರಸ್ತೆಯ ಮೇಲೆ ವಿಚಿತ್ರ ದೃಶ್ಯವೊಂದು ಕಾಣಿಸಿತು. ರಸ್ತೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಲವಾರು ಜೀವಿಗಳು ದಾಟುತ್ತಿದ್ದವು. ಹಾವುಗಳಂತೆ ಕಾಣುತ್ತಿದ್ದ ಅವು ಸುಮಾರು ಒಂದು ಅಡಿಯಷ್ಟು ಉದ್ದವಿದ್ದವು. ಕತ್ತಲಿನಲ್ಲಿ ರಸ್ತೆಯ ಮೇಲೆ ನಿಧಾನವಾಗಿ ತೆವಳುತ್ತಿದ್ದವು. ಅವು ಯಾವ ಜೀವಿಗಳು ಎಂಬುದೇ ಗೊತ್ತಿರಲಿಲ್ಲ. ಹೀಗಾಗಿ ಸ್ವಲ್ಪ ಆತಂಕವೂ ಆಯಿತು. ಆದರೆ ಕೆಲ ಕ್ಷಣಗಳಲ್ಲೇ ಕುತೂಹಲ ಭಯವನ್ನು ಮೀರಿಸಿತು. ವಾಹನದಿಂದ ಇಳಿದು ...

ನಾನು ಕಂಡ ಕೆಲವು ಆರ್ಕಿಡ್‌ಗಳು

ಹೆಚ್ಚಿನ ವಿವರಗಳು ದೊರೆಯದ, ಪಶ್ಚಿಮ ಘಟ್ಟಗಳ ಒಂದು ಅನಾಮಧೇಯ  ಆರ್ಕಿಡ್ ಪ್ರಭೇದ  ಚಿತ್ರ: © ಶ್ರೀಕಾಂತ ಆರ್ಕಿಡ್‌ಗಳ ಬಗ್ಗೆ ನನಗೆ ಯಾವಾಗಲೂ ಆಶ್ಚರ್ಯವಾಗುವ ವಿಷಯವೆಂದರೆ, ಅವುಗಳ ಜೀವನಶೈಲಿಯ ವೈವಿಧ್ಯ. ಆರ್ಕಿಡ್ ಎಂದರೆ ಮರದ ಮೇಲೆ ಬೆಳೆಯುವ ಗಿಡಗಳೆಂದು ನಾನು ಮೊದಲಿಗೆ ಭಾವಿಸಿದ್ದೆ. ನಿಜಕ್ಕೂ ಪಶ್ಚಿಮ ಘಟ್ಟಗಳ ಅನೇಕ ಆರ್ಕಿಡ್‌ಗಳು ಮರಗಳ ಮೇಲೆಯೇ ಬೆಳೆಯುತ್ತವೆ. ಆದರೆ ಅವು ಪರಾವಲಂಬಿಗಳಲ್ಲ. ಮರವನ್ನು ಕೇವಲ ಆಸರೆಯಾಗಿ ಬಳಸುತ್ತವೆ ಅಷ್ಟೇ. ಇಷ್ಟು ವರ್ಷಗಳಿಂದ ಪಶ್ಚಿಮ ಘಟ್ಟದ ಕಾಡುಗಳಲ್ಲಿ ಓಡಾಡುತ್ತಿದ್ದರೂ, ನಾನು ನೋಡಿರುವ ಆರ್ಕಿಡ್‌ಗಳ ಸಂಖ್ಯೆ ತುಂಬಾ ಕಡಿಮೆ. ಅವು ಇಲ್ಲವೆಂದಲ್ಲ. ಆದರೆ ಅವು ತಮ್ಮನ್ನು ತಾವು ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ. ಮರದ ತೊಗಟೆಗಳ ಮೇಲೆ ಹಚ್ಚಹಸಿರಾದ ಪಾಚಿ ಮತ್ತು ಲೈಕೆನ್‌ಗಳ ನಡುವೆ ಎಲ್ಲೋ ಅಡಗಿಕೊಂಡಿರುತ್ತವೆ. ಹೂ ಬಿಡದ ಸಮಯದಲ್ಲಿ ಅವುಗಳನ್ನು ಗಮನಿಸುವುದೇ ಕಷ್ಟ. ಸಾಮಾನ್ಯವಾಗಿ ನೋಡಿದರೆ ಮರದ ಮೇಲಿನ ಇನ್ನೊಂದು ಸಣ್ಣ ಗಿಡದಂತೆ ಕಾಣುತ್ತವೆ. ಹೀಗಾಗಿ ಎಷ್ಟೋ ಸಲ ಅವುಗಳ ಇರುವಿಕೆಯ ಅರಿವೇ ಇಲ್ಲದೆ ನಾನು ಅವುಗಳ ಪಕ್ಕದಿಂದಲೇ ನಡೆದು ಹೋಗಿರಬಹುದು. ನನಗೆ ಸ್ಪಷ್ಟವಾಗಿ ನೆನಪಿರುವ ಕೆಲವು ಆರ್ಕಿಡ್‌ಗಳಿವೆ. BRT ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಮ್ಮೆ ಮರದ ತೊಗಟೆಯ ಮೇಲೆ ಬೆಳೆಯುತ್ತಿದ್ದ ಒಂದು ಸಣ್ಣ ಆರ್ಕಿಡ್ ಕಂಡಿತ್ತು. ಆಗ ಅದರ ಹೆಸರು ಗೊತ್ತಿರಲಿಲ್ಲ. ನಂತರ ಚಿತ್ರಗಳನ್ನು ಪರಿಶೀಲ...

ಕಲ್ಲರಳಿ, ಹೂವಾಗಿ..

 ಪಾಲಕ್ಕಾಡಿನ ಕಾಡುಗಳಲ್ಲಿ ನಡೆದಾಡುವಾಗ ಬಂಡೆಯೊಂದರ ಮೇಲೆ ಕಂಡ ಈ ಚಿತ್ತಾರವನ್ನು ಗಮನಿಸಿ. ಇವು ಕಲ್ಲುಹೂವು ಅಥವಾ ಲೈಕೆನ್‌ಗಳು! (Lichens) ಪಾಲಕ್ಕಾಡಿನಲ್ಲಿ ಬಂಡೆಯೊಂದರ ಮೇಲಿನ ಚಿತ್ತಾರ. ಈ ಒಂದು ಬಂಡೆಯ ಮೇಲೆ ಕಲ್ಲುಹೂವಿನ ಅನೇಕ ಪ್ರಭೇದಗಳಿವೆ ಚಿತ್ರ: © ಶ್ರೀಕಾಂತ ಮೊದಲ ನೋಟಕ್ಕೆ ಅವು ಬಂಡೆಯ ಮೇಲಿನ ಬಣ್ಣದ ಕಲೆಗಳಂತೆ ಕಾಣಬಹುದು.. ಆದರೆ ಹತ್ತಿರದಿಂದ ನೋಡಿದರೆ ಅವುಗಳ ಪ್ರಪಂಚವೇ ಬೇರೆ. ಬೂದು, ಹಸಿರು, ಹಳದಿ, ಕಿತ್ತಳೆ ಬಣ್ಣಗಳ ವಿಚಿತ್ರ ಆಕೃತಿಗಳು. ಬಂಡೆಯ ಮೇಲೆ ಯಾರೋ ನಕ್ಷೆಯನ್ನು ಬಿಡಿಸಿದಂತೆ, ಅಥವಾ ಅಪರಿಚಿತ ಭಾಷೆಯ ಅಕ್ಷರಗಳನ್ನು ಬರೆದಂತೆ ಕಾಣುತ್ತವೆ. ಬೆಂಗಳೂರಿನ ಬಳಿಯ ತುರಹಳ್ಳಿಯಲ್ಲಿ ಕಲ್ಲಿನ ಮೇಲೆ ಸಿಕ್ಕ ಕಲ್ಲುಹೂವು ಚಿತ್ರ: © ಶ್ರೀಕಾಂತ ನಾನು ಮೊದಲಿಗೆ ಕಲ್ಲುಹೂವುಗಳನ್ನು ಒಂದು ಸಸ್ಯದ ಪ್ರಭೇದವೆಂದು ಭಾವಿಸಿದ್ದೆ. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅವುಗಳ ಕಥೆ ಇನ್ನೂ ಕುತೂಹಲಿಯಾಗಿ ಕಾಣತೊಡಗಿತು. ಕಲ್ಲುಹೂವು ಎನ್ನುವುದು ಒಂದೇ ಜೀವಿಯಲ್ಲ! ವಾಸ್ತವವಾಗಿ ಅದು ಎರಡು ಜೀವಿಗಳ ಸಹಜೀವನ. ಒಂದು ಶಿಲೀಂಧ್ರ ಮತ್ತು ಒಂದು ಪಾಚಿ (ಅಥವಾ ಸಯನೋಬ್ಯಾಕ್ಟೀರಿಯಾ) ಒಟ್ಟಿಗೆ ಬದುಕಿದಾಗ ಕಲ್ಲುಹೂವುಗಳು ರೂಪುಗೊಳ್ಳುತ್ತದೆ. ಪಾಚಿ ಸೂರ್ಯನ ಬೆಳಕಿನಿಂದ ಆಹಾರ ತಯಾರಿಸಿದರೆ, ಶಿಲೀಂಧ್ರ ನೀರನ್ನು ಹಿಡಿದಿಟ್ಟುಕೊಂಡು ರಕ್ಷಣೆ ನೀಡುತ್ತದೆ. ಲಕ್ಷಾಂತರ ವರ್ಷಗಳಿಂದ ಈ ಎರಡು ವಿಭಿನ್ನ ಜೀವಿಗಳು ಒಂದೇ ಜೀವಿಯಂತೆ ಬದುಕುತ...

ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ

 ಕೆಲವೊಮ್ಮೆ ಕಾಡಿನಲ್ಲಿ ದೊಡ್ಡ ಪ್ರಾಣಿಗಳನ್ನು ನೋಡುವಾಗ ಆಗುವಷ್ಟೇ ಖುಷಿ ಚಿಕ್ಕ ಜೀವಿಗಳನ್ನು ನೋಡುವುದರಲ್ಲೂ ಆಗುತ್ತದೆ. ಅಂತಹ ಒಂದು ಜೀವಿ Indrella ampulla ಎನ್ನುವ ಬಸವನಹುಳು (Snail)! ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿಗಳ ಪಟ್ಟಿಯಲ್ಲಿ ಅದೂ ಒಂದಾಗಿತ್ತು. ಆನೆ, ಹುಲಿ ಅಥವಾ ಹಾರ್ನ್‌ಬಿಲ್‌ನಷ್ಟು ಪ್ರಸಿದ್ಧವಲ್ಲದಿದ್ದರೂ, ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಬಗ್ಗೆ ಆಸಕ್ತಿ ಇರುವವರಿಗೆ ಇದು ಒಂದು ವಿಶೇಷ ಜೀವಿ. 2025ರ ಏಪ್ರಿಲ್ ನಲ್ಲಿ ಕೊಡಗಿನಲ್ಲಿ ಸಣ್ಣ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಕೆಲಸ ಮಾಡುವಾಗ ಒಂದು ಕಾಫಿ ತೋಟದಲ್ಲಿ ನಾನು ಮೊದಲ ಬಾರಿಗೆ Indrella ampulla ನೋಡಿದ್ದೆ. ಒದ್ದೆಯಾದ ಕಾಡಿನ ನೆಲದ ಮೇಲೆ ನಿಧಾನವಾಗಿ ಚಲಿಸುತ್ತಿದ್ದ ಆ ಕಿತ್ತಳೆ ಬಣ್ಣದ ಬಸವನಹುಳವನ್ನು ನೋಡಿದಾಗ ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿ ಕೊನೆಗೂ ಕಣ್ಣಮುಂದೆ ಕಾಣಿಸಿಕೊಂಡಿತ್ತು. ಕೊಡಗಿನಲ್ಲಿ ಕಂಡ ಕಿತ್ತಳೆ ಬಣ್ಣದ  Indrella ampulla ಬಸವನ ಹುಳು  ಚಿತ್ರ: © ಶ್ರೀಕಾಂತ ಕೆಲವು ತಿಂಗಳ ನಂತರ, ಸೆಪ್ಟೆಂಬರ್ ನಲ್ಲಿ ಪಾಲಕ್ಕಾಡಿನಲ್ಲಿ ಮತ್ತೊಮ್ಮೆ Indrella ampulla ಕಾಣಿಸಿತು. ಈ ಬಾರಿ ಹಳದಿ ಬಣ್ಣದ ಹುಳು ಕಂಡಿತ್ತು. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅದು ಇನ್ನಷ್ಟು ಆಸಕ್ತಿದಾಯಕವಾಗಿ ಕಾಣತೊಡಗಿತು. ಪಾಲಕ್ಕಾಡಿನಲ್ಲಿ ಕಂಡ ಹಳದಿ ಬಣ್ಣದ Indrella ampulla ಬಸವನ ಹುಳು ಚಿತ್ರ: © ಶ್ರೀಕಾ...

ಪಶ್ಚಿಮ ಘಟ್ಟಗಳ ಮಾಯಾಜಾಲ

ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದ ಶೋಲಾ ಹುಲ್ಲುಗಾವಲು ಚಿತ್ರ: © ಶ್ರೀಕಾಂತ   ಕೆಲವೊಂದು ಪರಿಸರ ವ್ಯವಸ್ಥೆಗಳು ಗಮನವಿಟ್ಟು ನೋಡದೇ ಹೋದರೆ ನಮಗೆ ಅರಿವಾಗುವುದೇ ಇಲ್ಲ. ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿ ನಡೆಯುತ್ತಿದ್ದಾಗ ಈ ಪರಿಸರ ವ್ಯವಸ್ಥೆಗಳು ಎಲ್ಲವನ್ನೂ ಒಳಗೊಳ್ಳುವ ಮಾಯಾಜಾಲ ಎಂದು ಅರಿವಾಯಿತು. ಹಾಗೆ ನಾನು ಗಮನಿಸಿದ ಎರಡು ಜಾಲಗಳಲ್ಲಿ ಒಂದು ಜಾಲ ಬಯಲಿನಲ್ಲಿದ್ದರೆ ಮತ್ತೊಂದು ಇನ್ನೊಂದು ದಟ್ಟ ಕಾಡಿನೊಳಗಿತ್ತು. ಮೊದಲನೆಯ ಜಾಲ ಶೋಲಾ-ಹುಲ್ಲುಗಾವಲು ಪರಿಸರ ವ್ಯವಸ್ಥೆ! ಇದು ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ, ಎತ್ತರದ ಬೆಟ್ಟಗಳ ಮೇಲೆ ಹರಡಿಕೊಂಡಿರುವ ಹುಲ್ಲುಗಾವಲುಗಳು ಮತ್ತು ಅವುಗಳ ನಡುವೆ ಚದುರಿಕೊಂಡಿರುವ ಶೋಲಾ ಕಾಡುಗಳು! ದೂರದಿಂದ ನೋಡಿದರೆ ಅವು ಬೆಟ್ಟಗಳ ಮೇಲಿನ ಹಸಿರು ಹೊದಿಕೆಯಂತೆ ಕಾಣುತ್ತವೆ. ಆದರೆ ಅವು ಕೇವಲ ಸುಂದರ ಭೂದೃಶ್ಯವಷ್ಟೇ ಅಲ್ಲ. ದಕ್ಷಿಣ ಭಾರತದ ಅನೇಕ ನದಿಗಳು ಹುಟ್ಟುವ ಸ್ಥಳ ಇದೇ. ಮಳೆ ಸುರಿದಾಗ ಈ ಹುಲ್ಲುಗಾವಲುಗಳು ನೀರನ್ನು ಹೀರಿಕೊಳ್ಳುತ್ತವೆ. ನಂತರ ಅದನ್ನು ನಿಧಾನವಾಗಿ ಮಣ್ಣಿನ ಮೂಲಕ ಹರಿಯಬಿಡುತ್ತವೆ. ಹೀಗೆ ವರ್ಷವಿಡೀ ಹೊಳೆಗಳು ಮತ್ತು ನದಿಗಳಿಗೆ ನೀರು ಒದಗಿಸುತ್ತವೆ. ಬೆಟ್ಟದ ಮೇಲಿನ ಈ ಹುಲ್ಲುಗಾವಲುಗಳು ಮತ್ತು ಶೋಲಾ ಕಾಡುಗಳು ಇಲ್ಲದಿದ್ದರೆ, ಕೆಳಗಿರುವ ಲಕ್ಷಾಂತರ ಜನರ ಬದುಕು ಬೇರೆ ರೀತಿಯದ್ದಾಗಿರುತ್ತಿತ್ತು. ಈ ಪರಿಸರ ವ್ಯವಸ್ಥೆಯಲ್ಲಿ ಅನೇಕ ವಿಶಿಷ್ಟ ಜೀವಿಗಳು ವಾಸಿ...