ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆನೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕಾಡಿನಲ್ಲಿ ಕಣ್ಣಾಮುಚ್ಚಾಲೆ

 ಪೂರ್ವಘಟ್ಟ ಭಾಗದ ಕಾಡುಗಳಲ್ಲಿ ನಾನು 2017ರಿಂದ ಕೆಲಸ ಮಾಡುತ್ತಿದ್ದೆ. ಮೊದಲ ಬಾರಿಗೆ ಇಲ್ಲಿಗೆ ಬಂದಾಗ ಕಾಡಿನ ನಡುವೆ ಇದ್ದ ಚೆಂಚು ಬುಡಕಟ್ಟುಗಳು ವಾಸಿಸುತ್ತಿದ್ದ ಹಳ್ಳಿ ಒಂದರಲ್ಲಿ ಕರಡಿಯೊಂದು ಒಬ್ಬ ವ್ಯಕ್ತಿಯನ್ನು ಕೊಂದಿತ್ತು. ಈ ಮುಂಚೆಯೂ ನಡೆದಿದ್ದ ಇಂತಹಾ ಅನೇಕ ಪ್ರಕರಣಗಳ ಬಗ್ಗೆ ಅಲ್ಲಿನ ಜನ ಮಾತನಾಡುತ್ತಿದ್ದರು. ಈ ಮುಂಚೆ ನಾವು ಅನೇಕ ವರ್ಷಗಳನ್ನು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಕಂಡ ಕರಡಿಗಳ ವರ್ತನೆಗೆ ವ್ಯತಿರಿಕ್ತವಾಗಿ ಇಲ್ಲಿನ ಕರಡಿಗಳು ಅತ್ಯಂತ ಆಕ್ರಮಣಕಾರಿ ಎನ್ನುವುದು ಅಲ್ಲಿನ ಜನಗಳ ಮಾತುಗಳಿಂದ ತಿಳಿಯುತ್ತಿತ್ತು. ನಾವು ಸಮೀಕ್ಷೆಯ ಸಲುವಾಗಿ‌ ಕಾಡಿನಲ್ಲಿ ನಡೆಯುವುದಕ್ಕೂ, ಜನ ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಕಾಡಿನಲ್ಲಿ ತಿರುಗಾಡುವುದಕ್ಕೂ ವ್ಯತ್ಯಾಸವಿದೆ. ಪ್ರಾಣಿಗಳ ಆವಾಸದಲ್ಲಿ ಅವು ನಮ್ಮನ್ನು ಗುರುತಿಸುವ ಮೊದಲೇ, ನಾವು ಪ್ರಾಣಿಗಳನ್ನು ಗುರುತಿಸಲು, ನಾವು ಪ್ರತಿಯೊಂದಯ ಹೆಜ್ಜೆಯನ್ನು ಎಚ್ಚರಿಕೆಯಿಂದ, ಆದಷ್ಟು ಸದ್ದು ಕಡಿಮೆಯಾಗುವಂತೆ ಇಡುತ್ತಿದ್ದೆವು. ಆದರೂ ಪ್ರತಿಬಾರಿಯೂ ಪ್ರಾಣಿಗಳು ನಮ್ಮನ್ನು ಗುರುತಿಸುವ ಮೊದಲೇ ನಾವು ಅವುಗಳನ್ನು ಗುರುತಿಸುತ್ತಿದ್ದೇವೆಂದು ಹೇಳಲಾರೆ. ಕಣ್ಣಾಮುಚ್ಚಾಲೆ ಆಟಕ್ಕೆ ರೆಡಿನಾ? (ಸಾಂದರ್ಭಿಕ ಚಿತ್ರ) ಚಿತ್ರ: © ಶ್ರೀಕಾಂತ ಅಮರಾಬಾದ್ ಹುಲಿ ಸಂರಕ್ಷಣಾ ಪ್ರದೇಶದಲ್ಲಿ 2019ರ ದಿನಗಳು. ಹುಲಿ ಸಂಖ್ಯೆ ಅಂದಾಜಿಸುವ ಸಲುವಾಗಿ ಮತ್ತು ಅವುಗಳ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದ...

ಪರದೆ ಸರಿಸಿದ ಕಾಡು

ಆನೆಯ ಹೆಜ್ಜೆ ಗುರುತಿನ ಮೇಲೆಯೇ ಕಂಡ ಹುಲಿಯ ಹೆಜ್ಜೆ ಗುರುತು! ಚಿತ್ರ: © ಶ್ರೀಕಾಂತ  ಒಂದು ದಿನ ಪಾಲಕ್ಕಾಡಿನ ಕಾಡುಗಳಲ್ಲಿರುವ ಒಂದು ಹಳೆಯ ಕೂಪ್ ರಸ್ತೆಯ ಮೂಲಕ ನಡೆದು, ಎರಡು ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸುವುದು ನಮ್ಮ ಕೆಲಸವಾಗಿತ್ತು. ದಾರಿಯುದ್ದಕ್ಕೂ ಕಾಡು ತನ್ನ ಅನೇಕ ಕಥೆಗಳನ್ನು ನಮ್ಮ ಮುಂದೆ ತೆರೆದಿಟ್ಟಿತು. ಕಾಡಿನ ನೆಲ ಹಲವಾರು ವನ್ಯಜೀವಿಗಳ ಹೆಜ್ಜೆಗುರುತುಗಳಿಂದ ತುಂಬಿತ್ತು. ಕಡವೆ, ಕಾಡೆಮ್ಮೆ ಮತ್ತು ಕಾಡುಹಂದಿಗಳ ಹೆಜ್ಜೆ ಗುರುತು ಆಗಾಗ ಕಾಣಿಸುತ್ತಿದ್ದವು. ಆದರೆ ಎಲ್ಲಕ್ಕಿಂತ ಗಮನ ಸೆಳೆದದ್ದು ಆನೆಯ ಹೆಜ್ಜೆ ಗುರುತಿನ ಮೇಲೆಯೇ ಕಂಡ ಹುಲಿಯ ಹೆಜ್ಜೆ ಗುರುತು! ಆನೆಯ ಹೆಜ್ಜೆ ಗುರುತು ಸುಮಾರು ಒಂದು ದಿನ ಹಳೆಯದಾಗಿ ಕಾಣಿಸುತ್ತಿತ್ತು. ಅದರ ನಂತರ ಅದೇ ಹಾದಿಯಲ್ಲಿ ಹುಲಿ ನಡೆದುಹೋಗಿತ್ತು. ಕಾಡಿನ ಈ ಎರಡು ಪ್ರಮುಖ ಜೀವಿಗಳ ಹಾದಿಗಳು ಒಂದಕ್ಕೊಂದು ಬೆರೆತಿರುವುದು ಅರಣ್ಯದ ಸೂಕ್ಷ್ಮ ಸಮತೋಲನವನ್ನು ನೆನಪಿಸಿತು. ಕಾಡು ಪುನರುಜ್ಜೀವನಗೊಳ್ಳಲು ಅಗತ್ಯವಾದ ಬೀಜಗಳನ್ನು ಆನೆಗಳು ಹರಡುತ್ತವೆ; ಬಲಿಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ಹುಲಿಗಳು ಪರಿಸರದ ಸಮತೋಲನವನ್ನು ಕಾಪಾಡುತ್ತವೆ. ಮಧ್ಯಾಹ್ನ ಸುಮಾರು ಮೂರುವರೆ ಗಂಟೆಯ ವೇಳೆಗೆ ಕೊನೆಯ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿ ಹಿಂದಿರುಗಲು ಸಿದ್ಧವಾಗುತ್ತಿದ್ದಾಗ, ಏಕಾಏಕಿ ಆನೆಯ ಗಂಭೀರ ಕರೆಯೊಂದು ಕಾಡಿನ ನಿಶ್ಶಬ್ದತೆಯನ್ನು ಭೇದಿಸಿತು. ಅದು ಬಹಳ ...

ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ

  ಮೋಡಗಳಲ್ಲಿ ಮರೆಯಾದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ಒಂದು ಬೆಟ್ಟ ಚಿತ್ರ: © ಶ್ರೀಕಾಂತ ನಾನು ಪಾಲಕ್ಕಾಡಿನಲ್ಲಿ ಕೆಲಸ ಮಾಡುತ್ತಿದ್ದಾಗ, ಪಾಲಕ್ಕಾಡು ಫಾರೆಸ್ಟ್ ಡಿವಿಷನ್ ಅಲ್ಲದೆ ಪಕ್ಕದ ಮನ್ನಾರುಕಾಡು ಫಾರೆಸ್ಟ್ ಡಿವಿಷನ್‌ನಲ್ಲಿಯೂ ಕೆಲಸಮಾಡಲು ನಮಗೆ ಅನುಮತಿ ಇತ್ತು. ಮನ್ನಾರುಕಾಡಿನಿಂದ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನ ಹತ್ತಿರವಾಗಿತ್ತು. ಹೀಗೊಮ್ಮೆ ಸೈಲೆಂಟ್ ವ್ಯಾಲಿಯ ಹತ್ತಿರ ಹೋಗುತ್ತಿದ್ದಾ ನನಗೆ 2017ರಲ್ಲಿ ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದಲ್ಲಿ ಕೆಲಸಮಾಡುತ್ತಿದ್ದ ದಿನಗಳು ನೆನಪಾಯಿತು. ಆ ವರ್ಷ ನಾನು ವಾನರಗಳ ಸಮೀಕ್ಷೆಯ ಭಾಗವಾಗಿ ಹಲವು ದಿನಗಳನ್ನು ಸೈಲೆಂಟ್ ವ್ಯಾಲಿಯೊಳಗೆ ಕಳೆದಿದ್ದೆ. ಸೈಲೆಂಟ್ ವ್ಯಾಲಿಯಲ್ಲಿ ನಾಲ್ಕು ಜಾತಿಯ ವಾನರಗಳು ಪ್ರಬೇಧಗಳು ಕಂಡುಬರುತ್ತವೆ. ಸಿಂಗಳೀಕ, ಮುಸಿಯ, ನೀಲಗಿರಿ ಮುಸಿಯ ಮತ್ತು ಎಲ್ಲೆಡೆ ಕಾಣುವ ಕೋತಿ. ಇನ್ನೊಂದು ಪ್ರಭೇದವೂ ಇರಬಹುದು. ಅದುವೇ ಕಾಡುಪಾಪ. ಆದರೆ ಅದು ರಾತ್ರಿಯಲ್ಲಿ ಚಟುವಟಿಕೆಯಿಂದಿರುವ ಪ್ರಾಣಿ. ನಮ್ಮ ಹಗಲಿನ ಸಮೀಕ್ಷೆಯ ವ್ಯಾಪ್ತಿಗೆ ಅದು ಬರುತ್ತಿರಲಿಲ್ಲ. ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನದ ಮಳೆಕಾಡು ಚಿತ್ರ: © ಶ್ರೀಕಾಂತ ಆ ದಿನಗಳಲ್ಲಿ ನಮ್ಮ ಸಮೀಕ್ಷೆಗಳಿಗೆ ನಿಗದಿತ ದಾರಿಗಳಿರಲಿಲ್ಲ. ಮಳೆಕಾಡಿನೊಳಗೆ ನೇರವಾಗಿ ನಡೆದು ವಾನರಗಳ ಕೂಗು ಕೇಳಿಸುತ್ತದೆಯೇ? ಮರಗಳ ನಡುವೆ ನಾಲ್ಕು ವಾನರಗಳಲ್ಲಿ ಯಾವುದಾದರೂ ಕಾಣಿಸುತ್ತದೆಯೇ? ಎಂದು...

ಫಾರೆಸ್ಟ್ ಗಾಂಪ್ಸ್

ದೂರದ ಬೆಟ್ಟದ ಮೇಲೆ ನಿಂತಿದ್ದ ಆನೆಗಳು ಚುಕ್ಕಿಗಳಾಗಿ ಕಾಣುತ್ತಿದ್ದವು! (ಬೇರೊಂದು ಸ್ಥಳದಲ್ಲಿ ಸೆರೆಹಿಡಿದ ಈ ಚಿತ್ರದಲ್ಲಿ ದೂರದ ಗುಡ್ಡದ ಮೇಲೆ ನಿಂತಿರುವ ಆನೆಯನ್ನು ಗುರುತಿಸಬಲ್ಲಿರಾ?) - ಸಾಂಧರ್ಭಿಕ ಚಿತ್ರ. ಚಿತ್ರ: © ಶ್ರೀಕಾಂತ ಪಾಲಕ್ಕಾಡಿನಲ್ಲಿ ಕೆಲಸ ಮಾಡುವಾಗ ಒಂದು ದಿನ ನನ್ನ ಸಹೋದ್ಯೋಗಿ ರಜೆ ಮೇಲೆ ಇದ್ದ ಕಾರಣ ನಾನು ಫೀಲ್ಡ್ ಸ್ಟೇಷನ್‌ನಲ್ಲೇ ಉಳಿಯಲು ನಿರ್ಧರಿಸಿದ್ದೆ. ಅದು ವಿಶ್ರಾಂತಿಯ ದಿನವಾಗಬೇಕಿತ್ತು. ನನ್ನ ವೈಯಕ್ತಿಕ ಕೆಲಸಗಳನ್ನು ಮುಗಿಸಿದ ಮೇಲೆಯೂ ಕನಿಷ್ಠ ಅರ್ಧ ದಿನವಾದರೂ ಬೇರಾವುದೇ ಕೆಲಸದ ಒತ್ತಡವಿಲ್ಲದೆ ಕಳೆಯಬಹುದು ಎಂದುಕೊಂಡಿದ್ದೆ. ಆದರೆ ಮಧ್ಯಾಹ್ನ ಊಟ ಮುಗಿದ ಸ್ವಲ್ಪ ಹೊತ್ತಿನಲ್ಲೇ ನನ್ನ ಸಹೋದ್ಯೋಗಿಯ ಕರೆ ಬಂತು. ಹತ್ತಿರದ ಜಾಗದಲ್ಲಿರುವ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಪರಿಶೀಲಿಸಿ ಬರಬಹುದು ಎಂದ. ನಿಜ ಹೇಳಬೇಕೆಂದರೆ ಆ ಕರೆ ನನಗೆ ಸ್ವಲ್ಪ ಕಿರಿಕಿರಿ ಉಂಟುಮಾಡಿತು. ಫೀಲ್ಡ್ ಕೆಲಸಕ್ಕೂ ಒಂದು ಲಯ ಇರಬೇಕು ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಯಾವಾಗ ಬೇಕಾದರೂ, ಯಾರಿಗೆ ಯಾವಾಗ ಅನುಕೂಲವೋ ಆಗ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ಹೀಗಲ್ಲದಿದ್ದರೆ ಬೇರೆ ಕೆಲಸಗಳಿಗೆ ಸಮಯವೇ ಸಿಗುವುದಿಲ್ಲ. ಆದರೆ ಆ ದಿನ Rapid Response ತಂಡದ ಒಬ್ಬ ಉಪ ವಲಯ ಅರಣ್ಯಾಧಿಕಾರಿಯೂ ಬರುತ್ತಾರೆ ಎಂದಾಗ ನನಗೆ ಬೇರೆ ದಾರಿಯಿರಲಿಲ್ಲ. ಹೋಗಲು ಒಪ್ಪಿಕೊಂಡೆ. ಆ ಅಧಿಕಾರಿಯನ್ನು ನಾನು ಆಗಲೇ ಹಲವಾರು ಬಾರಿ ಭ...

ಆನೆ, ವಾಚರ್ ಮತ್ತು ಪಟಾಕಿ

ಕಾಡಿನ ಪ್ರಬುದ್ದ ದೈತ್ಯ, ಸಾಂದರ್ಭಿಕ ಚಿತ್ರ ಚಿತ್ರ: © ಶ್ರೀಕಾಂತ ಅದೊಂದು ಸುಂದರವಾದ ದಿನ. ಪಾಲಕ್ಕಾಡಿನ ಕಾಡುಗಳಲ್ಲಿ ಆನೆಗಳನ್ನು ಸೆರೆಹಿಡಿಯಲು ಅಳವಡಿಸಿದ್ದ ಕ್ಯಾಮರಾ ಟ್ರ್ಯಾಪ್‌ಗಳಲ್ಲಿ, ಒಂದು ಸ್ಥಳದಲ್ಲಿದ್ದ ಕ್ಯಾಮರಾಗಳು ಸರಿಯಾಗಿ ಕೆಲಸ ಮಾಡುತ್ತಲಿವೆಯೋ ಇಲ್ಲವೋ ಮತ್ತು ಅದುವರೆಗೆ ಸೆರೆಯಾದ ಚಿತ್ರಗಳನ್ನು ಸಂಗ್ರಹಿಸಲು ಹೋಗುತ್ತಿದ್ದೆವು. ನಾನು ಮತ್ತು ಕೇರಳ ಅರಣ್ಯ ಇಲಾಖೆಯ ಒಬ್ಬ ವೀಕ್ಷಕ (Forest Watcher) ಕಾಡಿನ ದಾರಿಯಲ್ಲಿ ಮಹೀಂದ್ರಾ ಥಾರ್‌ನಲ್ಲಿ ಹೋಗುತ್ತಿದ್ದೆವು. ಅಲ್ಲೊಂದು ಕಡೆ ರಸ್ತೆಯ ಮೇಲೆ ಒಂದು ಮರ ಅಡ್ಡವಾಗಿ ಬಿದ್ದಿರುವುದು ಕಂಡಿತು. ಅದರ ಸುತ್ತಲೂ ಆನೆಗಳ ಕುರುಹುಗಳು! ಅವನ್ನೆಲ್ಲಾ ನೋಡಿದರೆ, ರಾತ್ರಿ ಆನೆಗಳು ಅಲ್ಲಿ ಚೆನ್ನಾಗಿ ಓಡಾಡಿರುವುದು ಸ್ಪಷ್ಟವಾಗಿತ್ತು. ಸುಮಾರು ಅರ್ಧ ಗಂಟೆ ಕಷ್ಟಪಟ್ಟು ಮರವನ್ನು ಸರಿಸಿ ದಾರಿ ತೆರವುಗೊಳಿಸಿದೆವು. ಸ್ವಲ್ಪ ದೂರದ ನಂತರ ರಸ್ತೆ ಜೀಪ್ ನಿಲ್ಲಿಸುವ ಜಾಗ ಬಂದಿತು. ಅಲ್ಲಿಂದ ಕ್ಯಾಮರಾ ಅಳವಡಿಸಿರುವ ಜಾಗ ಸುಮಾರು ಮೂರು ಕಿಲೋಮೀಟರ್‌ಗಳು. ವಾಹನವನ್ನು ಅಲ್ಲೇ ನಿಲ್ಲಿಸಿ ನಡೆದು ಹೊರಟೆವು. ಸ್ವಲ್ಪ ಮುಂದೆ ಹೋದಂತೆ ರಸ್ತೆ ಕಿರಿದಾಗಿ ದಾರಿಯಾಯಿತು. ಪ್ರಾಣಿಗಳ ಕುರುಹುಗಳೂ ಹೆಚ್ಚಾಗತೊಡಗಿದವು. ಆನೆಯ ಲದ್ದಿ, ಕಾಡುನಾಯಿಯ ಮಲ — ಎಲ್ಲವೂ ಹಿಂದಿನ ರಾತ್ರಿ ನಡೆದ ಕತೆ ಹೇಳುತ್ತಿದ್ದವು. ನನ್ನ ಜೊತೆಯಲ್ಲಿದ್ದ ವಾಚರ್‌ಗೆ ಮಾತ್ರ ಸ್ವಲ್ಪ ಆತಂಕ ಶುರುವಾಗಿತ್ತು. ಆನೆಯ ಕುರುಹ...

ಹುಲಿಯ ಬದುಕಿನಿಂದ ಚುರುಳಿ ಕೊಂಬನ್‌ವರೆಗೆ

ಕಾಡಿನ ನಿಗೂಢಗಳನ್ನು ತರೆದಿಡುವ ' ಹುಲಿಯ ಬದುಕು ' ಚಿತ್ರ: © ಶ್ರೀಕಾಂತ ಕಾಡಿನ ಕೆಲವು ಕಥೆಗಳು ಕಾಡಿನಲ್ಲೇ ಆರಂಭವಾಗುವುದಿಲ್ಲ. ಅವು ದಶಕಗಳ ಹಿಂದೆ, ಪುಸ್ತಕಗಳ ಪುಟಗಳಲ್ಲಿ, ಒಂದು ಯುವ ಮನಸ್ಸಿನ ಕಲ್ಪನೆಗಳಲ್ಲಿ, ಬದುಕಿನ ದಿಕ್ಕನ್ನೇ ಬದಲಿಸುವ ಮೌನ ಕನಸುಗಳಲ್ಲಿ ಆರಂಭವಾಗುತ್ತವೆ. ನನಗೆ ಆ ಕಥೆ 'ಹುಲಿಯ ಬದುಕು' ಮತ್ತು 'ಹುಲಿರಾಯನ ಆಕಾಶವಾಣಿ' ಪುಸ್ತಕಗಳಿಂದ ಆರಂಭವಾಯಿತು. 1980ರ ದಶಕದ ಕೊನೆಯ ಭಾಗ ಮತ್ತು 1990ರ ದಶಕದಲ್ಲಿ ಡಾ. ಉಲ್ಲಾಸ್ ಕಾರಂತ್ ಅವರು ಕರ್ನಾಟಕದ ಕಾಡುಗಳಲ್ಲಿ ರೇಡಿಯೊ ಕಾಲರ್ ಅಳವಡಿಸಿದ್ದ ಹುಲಿಗಳನ್ನು ಹಿಂಬಾಲಿಸಿ ನಡೆಸಿದ ಅಧ್ಯಯನಗಳನ್ನು ಆಧರಿಸಿದ ಈ ಪುಸ್ತಕಗಳು 2000ರ ದಶಕದ ಮಧ್ಯಭಾಗದಲ್ಲಿ ಪ್ರಕಟವಾಗಿತ್ತು. ಕೈಯಲ್ಲಿ ಆಂಟೆನಾ ಹಿಡಿದು ನಾಗರಹೊಳೆ ಕಾಡಿನಲ್ಲಿ ನಡೆಯುತ್ತಾ, ಹುಲಿಯ ಕುತ್ತಿಗೆಯಲ್ಲಿದ್ದ ಕಾಲರ್‌ನಿಂದ ಬರುವ ರೇಡಿಯೊ ಸಂಕೇತವನ್ನು ಆಲಿಸುತ್ತಿದ್ದ ಅವರ ವರ್ಣನೆಗಳು ನನಗೆ ಹೊಸ ಜಗತ್ತೊಂದನ್ನು ತೆರೆದವು. ಒಂದು ಅರ್ಥದಲ್ಲಿ, ಆ ಪುಸ್ತಕಗಳೇ ನನ್ನನ್ನು ವನ್ಯಜೀವಿ ಕ್ಷೇತ್ರದತ್ತ ಸೆಳೆಯಿತು. 2011ರಲ್ಲಿ ನಾನು ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ (CWS) ಸಂಸ್ಥೆಗೆ ಸೇರಿದಾಗ, ಡಾ. ಕಾರಂತ್ ಅವರು ಆರಂಭಿಸಿದ್ದ ಕ್ಯಾಮೆರಾ ಟ್ರ್ಯಾಪ್ ಸಮೀಕ್ಷೆಗಳು ಇನ್ನೂ ಮುಂದುವರಿಯುತ್ತಲೇ ಇದ್ದವು. ಭಾರತದ ಹುಲಿಗಳ ಸಂಖ್ಯೆಯನ್ನು ಅವರೇ ಪರಿಚಯಿಸಿದ್ದ ವಿಧಾನಗಳ ಮೂಲಕ ಅಂದಾಜಿಸಲಾಗುತ್ತ...