ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಭೂಗೋಳ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ

 ಕೆಲವೊಮ್ಮೆ ಕಾಡಿನಲ್ಲಿ ದೊಡ್ಡ ಪ್ರಾಣಿಗಳನ್ನು ನೋಡುವಾಗ ಆಗುವಷ್ಟೇ ಖುಷಿ ಚಿಕ್ಕ ಜೀವಿಗಳನ್ನು ನೋಡುವುದರಲ್ಲೂ ಆಗುತ್ತದೆ. ಅಂತಹ ಒಂದು ಜೀವಿ Indrella ampulla ಎನ್ನುವ ಬಸವನಹುಳು (Snail)! ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿಗಳ ಪಟ್ಟಿಯಲ್ಲಿ ಅದೂ ಒಂದಾಗಿತ್ತು. ಆನೆ, ಹುಲಿ ಅಥವಾ ಹಾರ್ನ್‌ಬಿಲ್‌ನಷ್ಟು ಪ್ರಸಿದ್ಧವಲ್ಲದಿದ್ದರೂ, ಪಶ್ಚಿಮ ಘಟ್ಟಗಳ ಜೀವವೈವಿಧ್ಯದ ಬಗ್ಗೆ ಆಸಕ್ತಿ ಇರುವವರಿಗೆ ಇದು ಒಂದು ವಿಶೇಷ ಜೀವಿ. 2025ರ ಏಪ್ರಿಲ್ ನಲ್ಲಿ ಕೊಡಗಿನಲ್ಲಿ ಸಣ್ಣ ಮಾಂಸಾಹಾರಿ ಪ್ರಾಣಿಗಳ ಬಗ್ಗೆ ಕೆಲಸ ಮಾಡುವಾಗ ಒಂದು ಕಾಫಿ ತೋಟದಲ್ಲಿ ನಾನು ಮೊದಲ ಬಾರಿಗೆ Indrella ampulla ನೋಡಿದ್ದೆ. ಒದ್ದೆಯಾದ ಕಾಡಿನ ನೆಲದ ಮೇಲೆ ನಿಧಾನವಾಗಿ ಚಲಿಸುತ್ತಿದ್ದ ಆ ಕಿತ್ತಳೆ ಬಣ್ಣದ ಬಸವನಹುಳವನ್ನು ನೋಡಿದಾಗ ಹಲವು ವರ್ಷಗಳಿಂದ ನೋಡಬೇಕೆಂದುಕೊಂಡಿದ್ದ ಜೀವಿ ಕೊನೆಗೂ ಕಣ್ಣಮುಂದೆ ಕಾಣಿಸಿಕೊಂಡಿತ್ತು. ಕೊಡಗಿನಲ್ಲಿ ಕಂಡ ಕಿತ್ತಳೆ ಬಣ್ಣದ  Indrella ampulla ಬಸವನ ಹುಳು  ಚಿತ್ರ: © ಶ್ರೀಕಾಂತ ಕೆಲವು ತಿಂಗಳ ನಂತರ, ಸೆಪ್ಟೆಂಬರ್ ನಲ್ಲಿ ಪಾಲಕ್ಕಾಡಿನಲ್ಲಿ ಮತ್ತೊಮ್ಮೆ Indrella ampulla ಕಾಣಿಸಿತು. ಈ ಬಾರಿ ಹಳದಿ ಬಣ್ಣದ ಹುಳು ಕಂಡಿತ್ತು. ನಂತರ ಅದರ ಬಗ್ಗೆ ಓದುತ್ತಾ ಹೋದಂತೆ ಅದು ಇನ್ನಷ್ಟು ಆಸಕ್ತಿದಾಯಕವಾಗಿ ಕಾಣತೊಡಗಿತು. ಪಾಲಕ್ಕಾಡಿನಲ್ಲಿ ಕಂಡ ಹಳದಿ ಬಣ್ಣದ Indrella ampulla ಬಸವನ ಹುಳು ಚಿತ್ರ: © ಶ್ರೀಕಾ...

ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ಬಾಗಿಲು!

ಪಾಲಕ್ಕಾಡಿನಿಂದ ಕಾಣುವ ಪಶ್ಚಿಮಘಟ್ಟ ಪರ್ವತ ಶ್ರೇಣಿ ಚಿತ್ರ: © ಶ್ರೀಕಾಂತ ಪಾಲಕ್ಕಾಡಿನ ಕೆಲಸದ ದಿನಗಳಲ್ಲಿ ಒಂದು ಸಂಜೆ ಕೆಲಸ ಮುಗಿದ ನಂತರ ನಾವು ಪಾಲಕ್ಕಾಡಿನ ಹೊರವಲಯದಲ್ಲಿರುವ ಒಂದು ಸಣ್ಣ ಕಲ್ಲುಗುಡ್ಡವನ್ನು ಹತ್ತಲು ಹೊರಟೆವು. ಅದು ತುಂಬಾ ಎತ್ತರವಾಗಿ ಇರಲಿಲ್ಲ. ಆದರೆ ಸಂಪೂರ್ಣ ಕಲ್ಲಿನಿಂದ ಕೂಡಿದ್ದ ಆ ಗುಡ್ಡವನ್ನು ಹತ್ತುವಾಗ ಒಂದು ವಿಚಿತ್ರ ಭಾವನೆ ಮೂಡುತ್ತಿತ್ತು. ಪಶ್ಚಿಮ ಘಟ್ಟದ ವಿಕಾಸ, ಭೂಗೋಳ, ಬೆಂಗಳೂರಿನ ಹವಾಮಾನ ಇತ್ಯಾದಿ ವಿಷಯಗಳು ಕಣ್ಣಮುಂದೆ ಬಂತು. ಗುಡ್ಡದ ಸುತ್ತಲೂ ಕೃಷಿಭೂಮಿಗಳು ಮತ್ತು ಜನವಸತಿ ಪ್ರದೇಶಗಳಿದ್ದವು. ಆದರೆ ಮೇಲಕ್ಕೆ ಏರುತ್ತಿದ್ದಂತೆ ಆ ಗದ್ದಲಗಳಿಂದ ಕಳಚಿಕೊಂಡು ನಿಧಾನವಾಗಿ ದೂರಾದೆವು. ಸಾಕಷ್ಟು ವೇಗದಲ್ಲಿ ಬೀಸುತ್ತಿದ್ದ ಗಾಳಿಯ ಸದ್ದು ಮಾತ್ರ ಕೇಳತೊಡಗಿತು. ಸುಮಾರು ಐದೂವರೆ ಗಂಟೆಗೆ ನಾವು ಗುಡ್ಡದ ತುದಿ ತಲುಪಿದೆವು. ಅಲ್ಲಿ ಕಂಡ ದೃಶ್ಯ ಮಾತ್ರ ಅದ್ಭುತವಾಗಿತ್ತು. ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ದೊಡ್ಡದೊಂದು ಬಾಗಿಲು ನನ್ನ ಮುಂದೆ ವಿಶಾಲವಾಗಿ ಹರಡಿಕೊಂಡಿತ್ತು. ಪಶ್ಚಿಮ ಘಟ್ಟಗಳ ಬಗ್ಗೆ ಓದಿರುವವರಿಗೆ ಪಾಲಕ್ಕಾಡು ಗ್ಯಾಪ್ ಹೊಸ ವಿಷಯವಲ್ಲ. ಆದರೆ ಅದನ್ನು ಒಂದು ಆ ಗ್ಯಾಪ್ ನ ಒಂದು ಜಾಗದಿಂದಲೇ ನೋಡುವ ಅನುಭವವೇ ಬೇರೆ. ನಕ್ಷೆಯಲ್ಲಿ ನೋಡಿದರೆ, ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಗೋಡೆಯಲ್ಲಿ ದೊಡ್ಡ ಖಾಲಿ ಜಾಗವೊಂದು ಕಾಣುತ್ತದೆ! ಇಡೀ ಪಶ್ಚಿಮ ಘಟ್ಟಗಳಲ್ಲಿ ಇಷ್ಟು ದೊಡ್ಡ ಗ್ಯಾಪ್ ಮತ್ತೊಂದಿಲ್ಲ...