![]() |
| ಪಾಲಕ್ಕಾಡಿನಿಂದ ಕಾಣುವ ಪಶ್ಚಿಮಘಟ್ಟ ಪರ್ವತ ಶ್ರೇಣಿ |
ಗುಡ್ಡದ ಸುತ್ತಲೂ ಕೃಷಿಭೂಮಿಗಳು ಮತ್ತು ಜನವಸತಿ ಪ್ರದೇಶಗಳಿದ್ದವು. ಆದರೆ ಮೇಲಕ್ಕೆ ಏರುತ್ತಿದ್ದಂತೆ ಆ ಗದ್ದಲಗಳಿಂದ ಕಳಚಿಕೊಂಡು ನಿಧಾನವಾಗಿ ದೂರಾದೆವು. ಸಾಕಷ್ಟು ವೇಗದಲ್ಲಿ ಬೀಸುತ್ತಿದ್ದ ಗಾಳಿಯ ಸದ್ದು ಮಾತ್ರ ಕೇಳತೊಡಗಿತು.
ಸುಮಾರು ಐದೂವರೆ ಗಂಟೆಗೆ ನಾವು ಗುಡ್ಡದ ತುದಿ ತಲುಪಿದೆವು. ಅಲ್ಲಿ ಕಂಡ ದೃಶ್ಯ ಮಾತ್ರ ಅದ್ಭುತವಾಗಿತ್ತು. ಪಶ್ಚಿಮ ಘಟ್ಟ ಶ್ರೇಣಿಯಲ್ಲೊಂದು ದೊಡ್ಡದೊಂದು ಬಾಗಿಲು ನನ್ನ ಮುಂದೆ ವಿಶಾಲವಾಗಿ ಹರಡಿಕೊಂಡಿತ್ತು. ಪಶ್ಚಿಮ ಘಟ್ಟಗಳ ಬಗ್ಗೆ ಓದಿರುವವರಿಗೆ ಪಾಲಕ್ಕಾಡು ಗ್ಯಾಪ್ ಹೊಸ ವಿಷಯವಲ್ಲ. ಆದರೆ ಅದನ್ನು ಒಂದು ಆ ಗ್ಯಾಪ್ ನ ಒಂದು ಜಾಗದಿಂದಲೇ ನೋಡುವ ಅನುಭವವೇ ಬೇರೆ.
ನಕ್ಷೆಯಲ್ಲಿ ನೋಡಿದರೆ, ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಗೋಡೆಯಲ್ಲಿ ದೊಡ್ಡ ಖಾಲಿ ಜಾಗವೊಂದು ಕಾಣುತ್ತದೆ! ಇಡೀ ಪಶ್ಚಿಮ ಘಟ್ಟಗಳಲ್ಲಿ ಇಷ್ಟು ದೊಡ್ಡ ಗ್ಯಾಪ್ ಮತ್ತೊಂದಿಲ್ಲ. ಯಾವುದೇ ಬೆಟ್ಟ-ಗುಡ್ಡಗಳಿಲ್ಲದ ಈ ಸಮತಟ್ಟು ಪ್ರದೇಶ ಶತಮಾನಗಳಿಂದ ದಕ್ಷಿಣ ಭಾರತದ ಪಶ್ಚಿಮ ತೀರ ಮತ್ತು ಪೂರ್ವ ಭಾಗಕ್ಕೆ ಜೀವಿಸಂಕುಲ-ವಿಕಾಸಗಳಿಗೆ, ಹವಾಮಾನ-ಪರಿಸರಕ್ಕೆ, ಜನ-ಭಾಷೆ-ಸಂಸ್ಕೃತಿಗಳಿಗೆ ಕೊಂಡಿಯಾಗಿದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ