ಹೆಚ್ಚಿನ ಪಕ್ಷಿಗಳು ಮನುಷ್ಯರನ್ನು ಆದಷ್ಟು ದೂರವೇ ಇಡಲು ಪ್ರಯತ್ನಿಸುತ್ತವೆ. ಬಹುಶಃ ಅದಕ್ಕೇ ಕೆಲವೊಮ್ಮೆ ಅವು ಏನೋ ಕಳ್ಳ ಕೆಲಸ ಮಾಡುತ್ತಿರುವಂತೆ ಅನ್ನಿಸಿಬಿಡುತ್ತದೆ. ನಾವು ಗಮನಿಸುತ್ತಿಲ್ಲ ಎನ್ನುವವರೆಗೂ ತಮ್ಮ ಕೆಲಸದಲ್ಲಿ ತಲ್ಲೀನವಾಗಿರುತ್ತವೆ. ನಾವು ಅವುಗಳ ಕಡೆ ನೋಡಿದ ತಕ್ಷಣ ಎಲ್ಲವನ್ನೂ ನಿಲ್ಲಿಸಿಬಿಡುತ್ತವೆ. ಒಮ್ಮೆ ಫಣಸೋಲಿ ಕ್ಯಾಂಪ್‌ನ ಹಿಂಭಾಗದಲ್ಲಿ ನಿಂತು ಶೇವಿಂಗ್ ಮಾಡಿಕೊಳ್ಳುತ್ತಿದ್ದೆ. ನನ್ನ ಹಿಂದೆ ತೇಗದ ಮರಗಳ ತೋಟವಿತ್ತು. ಯಾವುದೋ ಒಂದು ಮರದಿಂದ "ಟಕ್... ಟಕ್... ಟಕ್..." ಎಂದು ಸದ್ದು ಬರುತ್ತಿತ್ತು. ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಂತುಹೋಗುತ್ತಿತ್ತು. ಮತ್ತೆ ಶೇವಿಂಗ್ ಮಾಡಿಕೊಳ್ಳಲು ಶುರು ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ಅದೇ ಸದ್ದು ಕೇಳಿಸುತ್ತಿತ್ತು. "ಯಾವುದೋ ಪಕ್ಷಿ ಅಥವಾ ಪ್ರಾಣಿ ನನ್ನ ಕಡೆ ಒಂದು ಕಣ್ಣಿಟ್ಟುಕೊಂಡೇ ತನ್ನ ಕೆಲಸ ಮಾಡುತ್ತಿದೆ," ಅನ್ನಿಸಿತು. ಇಲ್ಲದಿದ್ದರೆ ನಾನು ತಿರುಗಿ ನೋಡಿದ ತಕ್ಷಣ ಅದು ಯಾಕೆ ಕೆಲಸ ನಿಲ್ಲಿಸಬೇಕು? ಸದ್ದು ಎಲ್ಲಿಂದ ಬರುತ್ತಿದೆ ಎಂದು ಕಂಡುಹಿಡಿಯಲು ಸಾಕಷ್ಟು ಹೊತ್ತು ಪ್ರಯತ್ನಿಸಿದೆ. ಕೊನೆಗೆ ಅದು ಒಂದು ತೇಗದ ಮರದಿಂದ ಬರುತ್ತಿದೆ ಎಂದು ಗೊತ್ತಾಯಿತು. ಯಾವುದೋ ಮರಕುಟಿಗ ಹಕ್ಕಿ ಇರಬಹುದು ಎಂದು ಊಹಿಸಿದೆ. ಆದರೆ ಯಾವ ಜಾತಿಯದ್ದು ಎಂದು ಮಾತ್ರ ತಿಳಿಯಲಿಲ್ಲ. ಬೈನಾಕ್ಯುಲರ್ ತಂದು ನೋಡಿದರೂ ಪ್ರಯೋಜನವಾಗಲಿಲ್ಲ. ನಾನು ತಿರು...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ