ನಮ್ಮ
ಬಳಿ ಇರುವ ಎಲ್ಲಾ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅತಿ ವೇಗದಲಿ ಬದಲಾಗುತ್ತಿವೆ, ದಿನಗಳು ಕಳೆಯುತ್ತಿರುವಂತೆ ಇವುಗಳು ಹಳೆಯದಾಗುತ್ತವೆ. ಮನುಷ್ಯನ ಗುಣವೇ ಹಾಗೆ ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಅವನ ಕೈಗೆ ಅತಿ ಕಮ್ಮಿ ಖರ್ಚಿನಲ್ಲಿ ಸಿಕ್ಕರೆ ಅದು ಅವನ ಮನೆಯಲ್ಲಿ ಇರುತ್ತದೆ ಕಾಲ ಕ್ರಮೇಣ ಅವುಗಳು ಹಳೆಯದಾದಂತೆ ಹೊಸ ವಸ್ತುಗಳಿಗೆ ಸ್ಥಾನ ಸಿಗುತ್ತದೆ.
ಇನ್ನು ಬೇರೆ ಸಂದರ್ಭದಲಿ ಕೆಲುವು ವಸ್ತುಗಳು ಅದರ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಉದಾಹರಣೆಗೆ ಎಂಪಿ3 ಪ್ಲೇಯರ್, ಮೊಬೈಲ್. ಕೆಲುವು ವಸ್ತುಗಳು ಏನಾದರು ನಮ್ಮ ನೆನಪಿನಿಂದ ಮರೆಯಾಗುವುದಿಲ್ಲ ಅಂತ ಕೆಲವು ಇಲ್ಲಿವೆ ನೋಡಿ
ಇನ್ನು ಬೇರೆ ಸಂದರ್ಭದಲಿ ಕೆಲುವು ವಸ್ತುಗಳು ಅದರ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಉದಾಹರಣೆಗೆ ಎಂಪಿ3 ಪ್ಲೇಯರ್, ಮೊಬೈಲ್. ಕೆಲುವು ವಸ್ತುಗಳು ಏನಾದರು ನಮ್ಮ ನೆನಪಿನಿಂದ ಮರೆಯಾಗುವುದಿಲ್ಲ ಅಂತ ಕೆಲವು ಇಲ್ಲಿವೆ ನೋಡಿ
ಕಾಗದದ ನಕ್ಷೆ
ಶತಮಾನಗಳ
ಹಿಂದಿನಿಂದಲೂ ನಮ್ಮ ಪೂರ್ವಜರಿಗೆ "ಕಾಗದದ ನಕ್ಷೆ"
ರಸ್ತೆ ಹಾಗು ಸಮುದ್ರದಲಿ ಮಾರ್ಗದರ್ಶನ ನೀಡಿದೆ. ಮನುಷ್ಯನಿಗೆ ಸುರಕ್ಷಿತ ಪ್ರಯಾಣ ಮತ್ತು ಆರ್ಥಿಕ ಪ್ರಗತಿ ಹೊಂದಲು ಇವು ಕಾರಣವಾಗಿದೆ. ಅಷ್ಟೇ ಅಲ್ಲದೆ ಕ್ರಿಸ್ತೋಫೆರ್ ಕೊಲಂಬಸ್ ಪ್ರಪಂಚ ಪರ್ಯಟನೆ ಮಾಡಲು ಸಹಕರಿಸಿದೆ. 2003 ನಂತರ ಜಿಪಿಎಸ್ ಯೂನಿಟ್ ಮತ್ತು ಸ್ಮಾರ್ಟ್ ಫೋನ್ ಗಳಿಂದ ಕಾಗದದ ನಕ್ಷೆಯ ಮಾರಾಟ ಕುಸಿತ ಹೊಂದಿವೆ, ಅಷ್ಟೇ ಅಲ್ಲದೆ ಇಂದಿನ ಮಕಳಿಗೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ಸ್ ಸೌಲಭ್ಯ ಇರುವ ಕಾರಣ ನಕ್ಷೆಯನು ಬಳಸುವ ಅಗತ್ಯವಿರುವುದಿಲ್ಲ. ಇದರ ಮದ್ಯೆ ಪ್ರತಿ ತಿರುವಿಗೆ ಸೂಚನೆಯನ್ನು ಕೊಡುವ ಜಿಪಿಎಸ್ ಯೂನಿಟ್ ಗಳ ಜೊತೆ ನಕ್ಷೆಯು ಪೈಪೋಟಿಸಲು ಸಾದ್ಯವಿಲ್ಲ. ಸಹಜವಾಗಿ ಮೊಬೈಲ್ ಟವರ್ ಗಳು ಅಥವಾ ಜಿಪಿಎಸ್ ಉಪಗ್ರಹಗಳು ಕೆಟ್ಟು ಹೋದಲ್ಲಿ ಇವುಗಳು ಮತ್ತೆ ಉಪಯೋಗಕ್ಕೆ ಬರಬಹುದು.
ಅಲಾರಾಂ ಗಡಿಯಾರ
ಪ್ರಾಚೀನ
ಕಾಲದಲ್ಲಿ ಮಾನವರು ಸಮಯವನ್ನು ಗುರುತಿಸಲು ಮೋಡಿ ಲೆಖ್ಖ ಮಾಡುತ್ತಿದ್ದರಂತೆ, ಬೆಳಗ್ಗೆ ಸೂರ್ಯ ಉದಯಿಸುವದು ಕೋಳಿ ಕುಗುವುದರಿಂದ, ಸೂರ್ಯನು ನೆತ್ತಿ ಮೇಲೆ ಬಂದಾಗ ಮಧ್ಯಾಹ್ನ ಆಯಿತೆಂದು, ಅದರಂತೆ ಸೂರ್ಯಾಸ್ತವನ್ನು ಕಂಡು ರಾತ್ರಿ ಆಯಿತೆಂದು. ತದನಂತರ ಮನುಷ್ಯನ ಆವಿಷ್ಕಾರಗಳಿಂದ ಸನ್ ಡಯಲ್ಸ್, ಸ್ಯಾಂಡ್ ಹವರ್ ಗ್ಲಾಸ್, ಮತ್ತು
ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ಹೊತ್ತು
ಎಚ್ಚರಿಸಲು ಅಲಾರಂ ಗಡಿಯಾರವನ್ನು ಕಂಡುಹಿಡಿದ. ಇಂದು ಸ್ಮಾರ್ಟ್ ಫೋನ್ ಗಳ ಗುಂಪು ಅಲರಾಂ ಗಡಿಯಾರವನ್ನು ಸಂಪೂರ್ಣವಾಗಿ ಅಳಿಸಿ ಹಾಕಿವೆ. ಹೌದು ಒಂದೇ ಉಪಕರಣದಲ್ಲಿ ಎಲ್ಲ ರೀತಿಯ ಸೌಲಭ್ಯಗಳಿರುವಾಗ ಏಕೆ ಜನರು ಬೇರೆ ಬೇರೆ ವಸ್ತುಗಳನು ಉಪಯೋಗಿಸುತ್ತಾರೆ? ಮಾರುಕಟ್ಟೆಯಲ್ಲಿ ಕೇವಲ 100/200 ರೂ ಗಳಲಿ ದೊರೆತರು ಅಲಾರಂ ಗಡಿಯಾರಗಳಿಗೆ ಇಂದು ಬೇಡಿಕೆ ಇಲ್ಲ.
ದೂರವಾಣಿ
ಆಧುನಿಕ
ವಾಯುಪಡೆಯು ಪುರಾತನ ಕಾಲ್ನಡಿಗೆಯ ಸೈನಿಕರ ಮೇಲೆ ದಂಡು ಎತ್ತಿ ಹೋದರೆ ಏನಾಗುತ್ತದೆ? ವಾಯುಪಡೆ ಸಿಡಿಸುವ ಗುಂಡು ಮದ್ದಿಗೆ ಸೈನಿಕರು ತತ್ತರಿಸಿ
ಹೋಗುತ್ತಾರೆ. ಹೌದು ಇಲ್ಲಿಯೂ ಆದೆ ಆಗಿರುವುದು ಮೊಬೈಲ್ ಫೋನ್ ಗಳ ಆರ್ಭಟಕ್ಕೆ
ಲ್ಯಾಂಡ್ಲೈನ್ ಫೋನ್ ಗಳು ನೆಲಕಚ್ಚಿವೆ. ಎಷ್ಟೋ
ವರ್ಷಗಳಿಂದಲೂ ಮನೆಗಳಲ್ಲಿ ಮನುಷ್ಯನಿಗೆ ಹೆಚ್ಹು ಅಗತ್ಯವಿರುವ ವಸ್ತುಗಳಲ್ಲಿ ಲ್ಯಾಂಡ್ಲೈನ್ ಫೋನ್ ಕೂಡ ಒಂದು. ಮೊಬೈಲ್ ಫೋನ್ ಪರಿಚಯ ಆದಮೇಲು ಸಾಕಷ್ಟು ಜನರು ಮೊಬೈಲ್ ಫೋನ್ ಗಳನ್ನು ಅನುಕೂಲಕ್ಕಾಗಿ ಹಾಗು ಲ್ಯಾಂಡ್ಲೈನ್ ನನ್ನು ತುರ್ತು ಸೇವೆಗಾಗಿ ಬಳಸುತ್ತಿದರು. ಅತಿ ಹೆಚ್ಚಾಗಿ 30 ವರ್ಷದೊಳಗಿನ ಗ್ರಾಹಕರು ಎರಡು ಬಿಲ್
ನನ್ನು ಪಾವತಿಸಲು ಬಯಸುವುದಿಲ್ಲ ಆದರಿಂದ ಶೇ. 70 ರಷ್ಟು ಜನರು ಇಂದು ಲ್ಯಾಂಡ್ಲೈನ್ ಫೋನ್ ಬಳಸುತ್ತಿಲ್ಲ. ತಂತ್ರಜ್ಞಾನ ಎಷ್ಟೇ ಮುಂದುವರೆದರು ನಾವು ಇಂತಹ ಸೇವೆಯನ್ನು ಮರೆಯುವಂತಿಲ್ಲ ಏಕೆಂದರೆ ಎಷ್ಟೋ ವರ್ಷದ ಹಿಂದೆಯೇ ಇಡಿ ಭೂ ಗ್ರಹವನ್ನು ಇದು ಸಂಪರ್ಕದಲ್ಲಿರುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ