ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವಿಜ್ಞಾನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹುಲಿ ಸಂರಕ್ಷಣೆ: ಏಕೆ ಇಷ್ಟೊಂದು ಪ್ರಾಮುಖ್ಯತೆ?

 ಅದು ಮೇ 2016. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಗಣಗೂರಿನಲ್ಲಿ ನಾವು ತಂಗಿದ್ದೆವು. ಹುಲಿಯ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸೀಳುದಾರಿ ಗಣತಿ ಸಮೀಕ್ಷೆ (Line Transect Survey)  ನಡೆಯುತ್ತಿತ್ತು. ನನ್ನೊಂದಿಗೆ ಕೆಲವು ಫೀಲ್ಡ್ ಅಸಿಸ್ಟೆಂಟ್‌ಗಳು ಮತ್ತು ಸ್ವಯಂಸೇವಕರು ಇದ್ದರು. ಅದು ಮುಂಗಾರು ಪೂರ್ವದ ಮಳೆಯ ಸಮಯ. ಒಂದೊಂದು ದಿನ ಸಂಜೆ ಬೀಳುತ್ತಿದ್ದ ಹದವಾದ ಮಳೆಯಿಂದ ಕಾಡು ಹಸಿರಿನಿಂದ ಕಂಗೊಳಿಸುತ್ತಿತ್ತು. ಒದ್ದೆಯಾದ ಮಣ್ಣಿನ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಒಂದು ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ. ಊಟ ಮುಗಿಸಿ, ಸಮೀಕ್ಷೆಗೆ ಹೊರಡಲು ಇನ್ನೂ ಸಮಯವಿದ್ದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದ್ದೆವು. ನಾವು ಉಳಿದಿದ್ದ ಅರಣ್ಯ ಇಲಾಖೆಯ ಹಳೆಯ ಕಟ್ಟಡದ ಸ್ವಲ್ಪ ದೂರದಲ್ಲೇ ಒಂದು ಕೆರೆಯಿತ್ತು. ಕಟ್ಟಡದಿಂದ ಹೊರಬಂದರೆ ಕೆಲವು ಮೆಟ್ಟಿಲುಗಳು. ಅಲ್ಲಿಂದ ಒಂದು ಕಚ್ಚಾ ರಸ್ತೆ ಬಲಗಡೆಯಿಂದ ಬಂದು ಕಟ್ಟಡದ ಮುಂದೆ ಹಾದು, ಎಡಗಡೆಗೆ ಸಾಗಿ ಸ್ವಲ್ಪ ದೂರದಲ್ಲಿ ಸ್ವಲ್ಪ ಬಲಕ್ಕೆ ತಿರುಗಿ ಕೆರೆಯನ್ನು ಸೇರುತ್ತಿತ್ತು. ಆ ತಿರುವಿನ ಕಾರಣದಿಂದ ಕಟ್ಟಡದ ಮುಂದೆ ನಿಂತರೆ ಕೆರೆ ಕಾಣುತ್ತಿರಲಿಲ್ಲ. ಒಂದು ಕ್ಷಣ ನಮ್ಮ ಮಾತೆಲ್ಲವು ಸ್ತಬ್ದವಾಯಿತು. ಇದ್ದಕ್ಕಿದ್ದಂತೆ ಹುಲಿಯ ಕೂಗೊಂದು ಕೇಳಿಸಿದ್ದರಿಂದ ನಾವು ಮಾತನಾಡುವುದನ್ನು ನಿಲ್ಲಿಸಿದೆವು. ಅದು ಹುಲಿಯ ಘರ್ಜನೆಯಲ್ಲ. ಬೆದೆಗೆ ಬಂದ ಹೆಣ್ಣು ಹುಲಿ ಕಾಡ...

ಸಹವಿಕಾಸದ ಅದ್ಭುತ: ಜೋಶುವಾ ಮರ ಮತ್ತು ಯುಕ್ಕಾ ಪತಂಗ

 ಪ್ರಕೃತಿಯಲ್ಲಿ ಕೆಲವು ಕಥೆಗಳು ನಮ್ಮ ಕಣ್ಣೆದುರೇ ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ನೋಡುವ ದೃಷ್ಟಿ ಮಾತ್ರ ಎಲ್ಲರಿಗೂ ಇರುವುದಿಲ್ಲ. ನಾವು ಒಂದು ಮರದ ನೆರಳಲ್ಲಿ ಸಾವಿರಾರು ಬಾರಿ ನಿಂತಿರಬಹುದು. ಅದರ ಹೂಗಳನ್ನು ನೋಡಿರಬಹುದು. ಅದರ ಎಲೆಗಳನ್ನು ಮುಟ್ಟಿರಬಹುದು. ಆದರೆ ಅದರ ಯಶಸ್ವಿ ಬದುಕಿಗೆ ಏನು ಕಾರಣ ಎಂಬುದನ್ನು ನಾವು ಯೋಚಿಸಿರುವುದೇ ಇಲ್ಲ. ಹೀಗೆಯೇ ಕೆಲವೊಮ್ಮೆ ಒಂದು ಕಾಡಿನ ಭವಿಷ್ಯವು ಒಂದು ಮರದ ಮೇಲೆ ನಿಂತಿರುತ್ತದೆ. ಇನ್ನೂ ಕೆಲವೊಮ್ಮೆ ಒಂದು ಮರದ ಭವಿಷ್ಯವು ಯಾರ ಕಣ್ಣಿಗೂ ಬೀಳದಷ್ಟು ಪುಟ್ಟ ಜೀವಿಯ ಮೇಲೆ ನಿಂತಿರುತ್ತದೆ. ಇದು ಅಂತಹ ಒಂದು ಕಥೆ. ಅಮೆರಿಕದ ಪಶ್ಚಿಮ ಭಾಗದಲ್ಲಿ  ಮೊಜಾವೆ ಮರುಭೂಮಿಯಿದೆ.  ಮೈಲುಗಟ್ಟಲೆ ಹರಡಿರುವ ಮರಳು, ಕಲ್ಲುಗಳು, ಉರಿಯುವ ಬಿಸಿಲು, ಮಳೆಯ ಹನಿ ಬೀಳುವುದೇ ಅಪರೂಪ. ಆದರೂ ಆ ನಿರ್ಜನ ನೆಲದ ಮಧ್ಯೆ ಕೈಗಳನ್ನು ಆಕಾಶದತ್ತ ಚಾಚಿಕೊಂಡಿರುವಂತೆ ನಿಂತಿರುವ ಒಂದು ವಿಚಿತ್ರ ಮರ ಎಲ್ಲರ ಗಮನ ಸೆಳೆಯುತ್ತದೆ. ಅದರ ಹೆಸರು ಜೋಶುವಾ ಮರ . ಮೊಜಾವೆ ಮರುಭೂಮಿಯಲ್ಲಿನ  ಜೋಶುವಾ ಮರ ಚಿತ್ರ: Wikipedia CC BY-SA 3.0 ಮೊದಲ ಬಾರಿ ಅದನ್ನು ನೋಡಿದವರು ಒಂದೇ ಪ್ರಶ್ನೆ ಕೇಳುತ್ತಾರೆ.  "ಇದು ನಿಜವಾಗಿಯೂ ಭೂಮಿಯ ಮೇಲಿನ ಮರವೇ?"  ಯಾಕೆಂದರೆ ಅದರ ರೂಪವೇ ಹಾಗಿರುತ್ತದೆ. ತಿರುಚಿದ ಕಾಂಡ, ಎಲ್ಲ ದಿಕ್ಕಿಗೂ ಚಾಚಿದ ಕೊಂಬೆಗಳು, ಮುಳ್ಳಿನಂತಿರುವ ಎಲೆಗಳು, ಮತ್ತು ಅವುಗಳ ತ...

ಪೆಪ್ಪರ್ಡ್ ಪತಂಗ: ನೈಸರ್ಗಿಕ ಆಯ್ಕೆಯ ಜೀವಂತ ಸಾಕ್ಷಿ

 ಒಂದು ಪುಟ್ಟ ಪತಂಗ! ಅದು ಹುಲಿಯಷ್ಟು ಬಲಿಷ್ಠವಲ್ಲ. ಚೀತಾದಷ್ಟು ವೇಗವೂ ಇಲ್ಲ. ವಿಷದಹಾವಿನಂತೆ ತನ್ನನ್ನು ರಕ್ಷಿಸಿಕೊಳ್ಳುವುದೂ ಗೊತ್ತಿಲ್ಲ. ಅದರ ಬಳಿ ಇದ್ದದ್ದು ಕೇವಲ ಎರಡು ರೆಕ್ಕೆಗಳು ಮತ್ತು ಮರದ ತೊಗಟೆ ಮೇಲೆ ಕುಳಿತಾಗ ಹಿನ್ನಲೆಯಲ್ಲಿನ ಬಣ್ಣದೊಡನೆ ಕರಗಿಹೋಗುವ ಅವುಗಳ ಬಣ್ಣ. ಆದರೆ ಇದೇ ಪುಟ್ಟ ಪತಂಗ ಜೀವವಿಕಾಸದ (Evolution) ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಜೀವಿಗಳಲ್ಲಿ ಒಂದಾಯಿತು. ಚಾರ್ಲ್ಸ್ ಡಾರ್ವಿನ್ 1859ರಲ್ಲಿ On the Origin of Species ಪ್ರಕಟಿಸಿದಾಗ, ಜೀವಿಗಳು ಪರಿಸರಕ್ಕೆ ಹೊಂದಿಕೊಂಡು ಕಾಲಕ್ರಮೇಣ ಬದಲಾಗುತ್ತವೆ ಎಂದು ಪ್ರತಿಪಾದಿಸಿದರು. ಆದರೆ ಆ ಕಾಲದಲ್ಲಿ ಈ ಕಲ್ಪನೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುವ ಉದಾಹರಣೆಗಳು ವಿರಳವಾಗಿದ್ದವು. ಡಾರ್ವಿನ್ ನಿಧನರಾದ ಕೆಲವು ದಶಕಗಳ ನಂತರ, ಇಂಗ್ಲೆಂಡಿನ ಕಾಡೊಂದರಲ್ಲಿ ಬದುಕುತ್ತಿದ್ದ ಈ ಸಣ್ಣ ಪತಂಗ ಅವರ ಸಿದ್ಧಾಂತವನ್ನು ಜೀವಂತವಾಗಿ ತೋರಿಸಿಕೊಟ್ಟಿತು. ಈ ಪತಂಗ ಇದ್ದದ್ದು ಇಂಗ್ಲೆಂಡಿನ ಓಕ್, ಬರ್ಚ್ ಮತ್ತು ಇತರ ಮರಗಳಿಂದ ತುಂಬಿದ್ದ ಹಳೆಯ ಕಾಡುಗಳಲ್ಲಿ. ಆ ಮರಗಳ ಕಾಂಡಗಳ ಮೇಲೆ ಬಿಳಿ ಮತ್ತು ಬೂದು ಬಣ್ಣದ ಕಲ್ಲುಹೂಗಳು (Lichens) ಹರಡಿಕೊಂಡಿದ್ದವು. ದೂರದಿಂದ ನೋಡಿದರೆ ಮರದ ತೊಗಟೆಯೇ ಒಂದು ವಿಚಿತ್ರ ಚಿತ್ರಕಲೆಯಂತೆ ಕಾಣುತ್ತಿತ್ತು. ಹಗಲಿನಲ್ಲಿ ಈ ಪತಂಗ ಬಂದು ಆ ತೊಗಟೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಆ ಪತಂಗಗಳ ರೆಕ್ಕೆಗಳ ಮೇಲೂ ತೊಗಟೆಯಂತೆ ಬಿಳಿ ಬಣ್...

ಡಾರ್ವಿನ್ ಊಹಿಸಿದ್ದ ಪತಂಗ

 ಜೀವ ವಿಕಾಸ ಸಿದ್ಧಾಂತದ ಒಂದು ವೈಶಿಷ್ಟ್ಯವೆಂದರೆ ಈಗಾಗಲೇ ಇರುವ ವಿವರಗಳನ್ನು ವಿಶ್ಲೇಷಿಸಿ ಮುಂದಿನದ್ದನ್ನು ಊಹಿಸುವ ಸಾಮರ್ಥ್ಯ! ವಿಜ್ಞಾನವೆಂದರೆ ಈಗಾಗಲೇ ಗೊತ್ತಿರುವ ಸಂಗತಿಗಳನ್ನು ದಾಖಲಿಸುವುದು ಮಾತ್ರವಲ್ಲ, ಇನ್ನೂ ಕಂಡುಹಿಡಿಯದಿರುವ ಸಂಗತಿಗಳ ಬಗ್ಗೆ ಊಹೆಗಳನ್ನು ಮಾಡುವುದು, ನಂತರ ಅವು ಸತ್ಯವೋ ಸುಳ್ಳೋ ಎಂದು ಪರೀಕ್ಷಿಸುವುದೂ ಅದರ ಮೂಲಭೂತ ಸ್ವಭಾವ. ಆದ್ದರಿಂದ ಪರೀಕ್ಷಿಸಬಹುದಾದ ಊಹೆಗಳನ್ನು ರೂಪಿಸುವುದು ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಯ ಹೃದಯವಾಗಿದೆ. ಕೆಲವು ಊಹೆಗಳನ್ನು ಪರಿಶೀಲಿಸುವುದು ಸುಲಭ. ಆದರೆ ಕೆಲವು ಊಹೆಗಳು ಪ್ರಕೃತಿಯಲ್ಲೇ ಅಪರೂಪವಾಗಿ ನಡೆಯುವ ಒಂದು ಘಟನೆಯನ್ನು ನೇರವಾಗಿ ನೋಡುವವರೆಗೆ ಉತ್ತರ ಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹಲವು ದಶಕಗಳಲ್ಲ, ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಡಾರ್ವಿನ್ ಊಹಿಸಿದ್ದ ಪತಂಗದ ಕಥೆಯೂ ಅಂಥದ್ದೇ. ಪರಿಸರ ವಿಜ್ಞಾನ ಮತ್ತು ವಿಕಾಸವಾದದ ಅತ್ಯಂತ ಪ್ರಸಿದ್ಧ ಊಹೆಗಳಲ್ಲಿ ಒಂದಾದ ಈ ಊಹೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಧ್ಯಯನಗಳು ಮತ್ತು ಬಹಳ ದೀರ್ಘಕಾಲದ ಸಂಶೋಧನೆ ಬೇಕಾಯಿತು. ಹೂಬಿಡುವ ಸಸ್ಯಗಳ ಜೀವನದಲ್ಲಿ ಪರಾಗಸ್ಪರ್ಶ ಅತ್ಯಂತ ಮಹತ್ವದ ಹಂತ. ಒಂದು ಹೂವಿನ ಪರಾಗ ಮತ್ತೊಂದು ಹೂವಿನ ಅಂಡಾಶಯವನ್ನು ತಲುಪಿದಾಗ ಮಾತ್ರ ಹೊಸ ಬೀಜಗಳು ರೂಪುಗೊಳ್ಳುತ್ತವೆ. ಆದರೆ ಸಸ್ಯಗಳಿಗೆ ತಮ್ಮಷ್ಟಕ್ಕೆ ತಾವೇ ಚಲಿಸಲು ಸಾಧ್ಯವಿಲ್ಲ. ಹಾಗಿದ್ದಾಗ ಈ ಕೆ...

ನೂರು ವರ್ಷದ ಹೊಸ ಸಿದ್ಧಾಂತ

ಮಾನವ ತನ್ನ ಇತಿಹಾಸದುದ್ದುಕ್ಕು ಹೊಸದನ್ನು ಹುಡುಕುಲು ಯತ್ನಿಸುತ್ತಲೆ ಬಂದಿದ್ದಾನೆ. ಮೊದಲಲ್ಲಿ ಅವನಿಗೆ ಹೊಸ ಅನ್ವೇಷಣೆಗಳು ತನ್ನ ಜೀವನ ಹೋರಾಟಕ್ಕಾಗಿ ಅವಶ್ಯವಾಗಿತ್ತು, ಮುಂದೆ ಮನುಷ್ಯ ಯಶಸ್ವಿಯಾಗಿ ಬದುಕಲು ಕಲಿತ ಮೇಲೂ ತನ್ನ ಕುತೂಹಲಕ್ಕಾಗಿ ಪ್ರಕೃತಿ ಒಡ್ಡುವ ವಿಸ್ಮಯಗಳಿಗೆ ಉತ್ತರಗಳನ್ನು ಹುಡುಕುತ್ತಲೆ ಬಂದ. ದಾಖಲಾದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನಮಗೆ ಜಗತ್ತೇ ಬೆರಗಾಗುವಂತೆ ಮಾಡಿದ ಅನೇಕ ಹೆಸರುಗಳು ಸಿಗುತ್ತವೆ.

ನ್ಯೂ ಹೊರೈಜನ್: ಕತ್ತಲ ಲೋಕದ ಅನಾವರಣ

ನ್ಯೂ ಹೊರೈಜನ್‍ ಗಗನ ನೌಕೆ.  Image Credit: NASA ಅಕ್ಟೋಬರ್ 1991, ಯು ಎಸ್ ಪಿ ಎಸ್ (United States Postal Service) ನಾಸಾದ ಸೌರ ಮಂಡಲದ ಅನ್ವೇಷಣೆ ಕುರಿತು ಅಂಚೆಚೀಟಿಯ ಸರಣಿಯನ್ನು ಹೊರತಂದಿತು . ಅದರಲ್ಲಿ ಒಂದು ಚೀಟಿ ಬಹುತೇಕ ಜನರ ಗಮನ ಸೆಳೆಯಿತು ಏಕೆಂದರೆ ಆ ಚೀಟಿ ಪ್ಲೂಟೊ ಕುರಿತಾಗಿತ್ತು ಮತ್ತು ಅದರಲ್ಲಿ “ ಪ್ಲೂಟೊ - ಇನ್ನು ಅನ್ವೇಷಿಸಲಾಗಿಲ್ಲ ” ಎಂಬ ಬರಹವಿತ್ತು . ಇದಕ್ಕೆ ಕಾರಣ ಅಂದಿನವರೆಗು ನಾಸಾ ಹೊರಗಿನ ಸೌರಮಂಡಲವನ್ನು ಅನ್ವೇಷಿಸಲು   ಕಳುಹಿಸಿದ್ದ ಯಾವುದೆ ಆಕಾಶಕಾಯ ಕೂಡ ಪ್ಲೂಟೊ ಸಮೀಪ ಸಾಗಿರಲಿಲ್ಲ !!!

ಚಂದ್ರನ ಚಲನೆಗಳು

ನಮಗೆ ತಿಳಿದಿರುವಂತೆ ನಮ್ಮ ಗೆಲಾಕ್ಸಿಯಲ್ಲಿ ಎಲ್ಲಾ ನಕ್ಷತ್ರಗಳು ಗೆಲಾಕ್ಸಿಯ ಕೇಂದ್ರದ ಸುತ್ತ, ಗ್ರಹಗಳು ನಕ್ಷತ್ರಗಳ ಸುತ್ತ, ಆ ಗ್ರಹಗಳನ್ನು ಕೆಲವು ಉಪಗ್ರಹಗಳು ಸುತ್ತುತ್ತಾ ಎಲ್ಲವೂ ಸತತ ಚಲನೆಯಲ್ಲಿವೆ. ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಸೂರ್ಯನ ಸುತ್ತ ಪ್ರಮುಖವಾಗಿ ಎಂಟು ಗ್ರಹಗಳು, ಕುಬ್ಜಗ್ರಹಗಳು (Dwarf Planets – Pluto ಈಗ ಒಂದು ಕುಬ್ಜಗ್ರಹ ಪಟ್ಟಿಯಲ್ಲಿರುವ ಗ್ರಹ), ಧೂಮಕೇತುಗಳು, ಅನೇಕ ಕ್ಷುದ್ರಗ್ರಹಗಳು (ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಪಟ್ಟಿ), ಸುತ್ತುತ್ತಿವೆ.

ಬ್ಲ್ಯಾಕ್ ಕರೆಂಟ್

ಸುಮಾರು ಒಂದೂವರೆ ಶತಮಾನದ ಹಿಂದೆ ಇನ್ನು ವಿಶ್ವದ ಬಹುತೇಕ ಜನರು ಮೇಣದ ಬತ್ತಿಯ ಅಥವಾ ಎಣ್ಣೆ ದೀಪದ ಮೇಲೆ ಅವಲಂಬಿತಾರಗಿದ್ದ ಸಮಯದಲ್ಲಿ ಆಲ್ಟರ್ನೇಟಿಂಗ್ ಕರೆಂಟ್ (ಪರ್ಯಾಯ ವಿದ್ಯುತ್ ಪ್ರವಾಹ)ಅನ್ನು ಕಂಡುಹಿಡಿಯಲಾಯಿತು.

ಅನಂತ

’ ಅನಂತ ’ ದ ಬಗ್ಗೆ ಯೋಚನೆಗಳನ್ನು ಬರಹವಾಗಿಸುವುದು ತುಂಬಾ ಕಷ್ಟದ ವಿಷಯ. ಆದರೂ ಇದು ಒಂದು ಸಣ್ಣ ಪ್ರಯತ್ನ. ಈ ಲೇಖನ ಜಿ.ಟಿ.ನಾರಾಯಣರಾವ್ ಅವರ ಒಂದು ಲೇಖನದಲ್ಲಿನ ಯೋಚನೆಯ ವಿಸ್ತರಣೆ. ಆ ಲೇಖನ ಇಷ್ಟೆಲ್ಲಾ ಯೋಚನೆಗಳನ್ನು ಹುಟ್ಟುಹಾಕಿದೆ.