ನಮಗೆ ತಿಳಿದಿರುವಂತೆ ನಮ್ಮ ಗೆಲಾಕ್ಸಿಯಲ್ಲಿ ಎಲ್ಲಾ ನಕ್ಷತ್ರಗಳು ಗೆಲಾಕ್ಸಿಯ ಕೇಂದ್ರದ ಸುತ್ತ, ಗ್ರಹಗಳು ನಕ್ಷತ್ರಗಳ ಸುತ್ತ, ಆ ಗ್ರಹಗಳನ್ನು ಕೆಲವು ಉಪಗ್ರಹಗಳು ಸುತ್ತುತ್ತಾ ಎಲ್ಲವೂ ಸತತ ಚಲನೆಯಲ್ಲಿವೆ. ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಸೂರ್ಯನ ಸುತ್ತ ಪ್ರಮುಖವಾಗಿ ಎಂಟು ಗ್ರಹಗಳು, ಕುಬ್ಜಗ್ರಹಗಳು (Dwarf Planets – Pluto ಈಗ ಒಂದು ಕುಬ್ಜಗ್ರಹ ಪಟ್ಟಿಯಲ್ಲಿರುವ ಗ್ರಹ), ಧೂಮಕೇತುಗಳು, ಅನೇಕ ಕ್ಷುದ್ರಗ್ರಹಗಳು (ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಪಟ್ಟಿ), ಸುತ್ತುತ್ತಿವೆ.
ಆದರೆ ಇವುಗಳ ಕಕ್ಷೆಗಳೆಲ್ಲಾ ವೃತ್ತಾಕಾರವಾಗಿಲ್ಲ. ಹೆಚ್ಚಿನವು ದೀರ್ಘವೃತ್ತಾಕಾರದ ಕಕ್ಷೆ. ನಮ್ಮ ಭೂಮಿಯ ಸೂರ್ಯನ ಸುತ್ತ ಕಕ್ಷೆಯೂ ಸಹಾ ದೀರ್ಘವೃತ್ತಾಕಾರ. ಅದೇ ರೀತಿ ಚಂದ್ರನ ಕಕ್ಷೆಯೂ ಸಹಾ. ಭೂಮಿಯಿಂದ ನೋಡುವಂತೆ ಚಂದ್ರನ ಚಲನೆಯಲ್ಲಿ ತುಂಬಾ ಕ್ಷೋಭೆಯಿರುತ್ತದೆ. ಇದಕ್ಕೆ ಕಾರಣಗಳು ಚಂದ್ರನ ಕಕ್ಷೆ ಭೂಮಿಯ ಕಕ್ಷಾತಲ ಅಥವಾ ಕಾಂತಿವೃತ್ತಕ್ಕೆ (Ecliptic) ಸುಮಾರು 5 ಡಿಗ್ರಿಯಷ್ಟು ಓರೆಯಾಗಿರುವುದು ಮತ್ತು ಚಂದ್ರನ ಕಕ್ಷೆ ದೀರ್ಘವೃತ್ತಾಕಾರವಾಗಿರುವುದು. ಇದರಿಂದ ಭೂಮಿಯಿಂದ ಕಾಣುವಂತೆ ನಿಯಮಿತವಾಗಿ ಕೆಲವು ಘಟನೆಗಳು ಸಂಭವಿಸುತ್ತಿರುತ್ತವೆ.
1. ಸೂರ್ಯನ ದಿಕ್ಕಿನಿಂದ ಹೊರಟು ಮತ್ತೆ ಸೂರ್ಯ ಇರುವ ದಿಕ್ಕಿನಲ್ಲಿಯೇ ಚಂದ್ರ ಬರಲು ಸುಮಾರು 29.53 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ಯುತಿಮಾಸ (Synodic Month) ಎನ್ನಲಾಗುತ್ತದೆ. ಇದು ಹುಣ್ಣಿಮೆಯಿಂದ ಹುಣ್ಣಿಮೆಗೆ ಅಥವಾ ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಇರುವ ಅವಧಿ.
2. ಯಾವುದೇ ಒಂದು ನಕ್ಷತ್ರದ ದಿಕ್ಕಿನಿಂದ ಹೊರಟು ಮತ್ತೆ ಅದೇ ನಕ್ಷತ್ರದ ದಿಕ್ಕಿಗೆ ಚಂದ್ರ ಬರುವ ಅವಧಿ ಸುಮಾರು 27.32 ದಿನಗಳು. ಇದನ್ನು ನಾಕ್ಷತ್ರಿಕ ಮಾಸ (Sidereal Month) ಎನ್ನಲಾಗುತ್ತದೆ. ಹಾಗೆಯೆ ಚಂದ್ರನ ಪರಿಭ್ರಮಣೆಯ ಅವಧಿಯೂ 27.32ದಿನಗಳಾಗಿದೆ. ಆದ್ದರಿಂದ ಇದನ್ನು Orbital Period ಅಥವಾ Tropical Month ಎಂದೂ ಕರೆಯಲಾಗುತ್ತದೆ. ಚಂದ್ರನ ಭ್ರಮಣೆಯ ಅವಧಿ (ತನ್ನ ಅಕ್ಷದ ಮೇಲೆ ಸುತ್ತುವುದು, ಉದಾಹರಣೆಗೆ ಭೂಮಿಯ ಭ್ರಮಣೆಯ ಅವಧಿ 24ಗಂಟೆ) ಮತ್ತು ಭೂಮಿಯ ಸುತ್ತ ಪರಿಭ್ರಮಣೆಯ ಅವಧಿ (ಒಂದು ಸುತ್ತು ಭೂಮಿಯನ್ನು ಸುತ್ತುವುದು - ಭೂಮಿ ಸೂರ್ಯನ ಸುತ್ತ ಒಂದು ಬಾರಿ ಪರಿಭ್ರಮಿಸಲು 365ದಿನ ತೆಗೆದುಕೊಳ್ಳುತ್ತದೆ) ಎರಡೂ ಒಂದೇ ಆಗಿರುವುದರಿಂದ ಯಾವಾಗಲೂ ನಾವು ಚಂದ್ರನ ಒಂದೇ ಮುಖವನ್ನು ಕಾಣುತ್ತೇವೆ.
3. ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರ ಯಾವಾಗಲೂ ಭೂಮಿಯಿಂದ ಒಂದೇ ದೂರದಲ್ಲಿರುವುದಿಲ್ಲ. ಚಂದ್ರ ಭೂಮಿಗೆ ಅತಿ ಹತ್ತಿರವಾಗಿ ಹಾಯುವ ಬಿಂದುವನ್ನು ಪುರಭೂ ಎಂದು ಗುರುತಿಸಲಾಗುತ್ತದೆ. ಒಂದು ಪೂರಭೂ ಬಿಂದುವಿನಿಂದ ಹೊರಟು ಮತ್ತೆ ಅದೇ ಬಿಂದುವಿಗೆ ಚಂದ್ರ ಬರಬೇಕಾದ ಅವಧಿಗೆ ಅಸಂಗತ ಮಾಸ (Anomalistic Month) ಎನ್ನಲಾಗುತ್ತದೆ. ಇದು ಸುಮಾರು 27.55 ದಿನಗಳ ಅವಧಿ. ಚಂದ್ರ ಕನಿಷ್ಟ ದೂರ ಇರುವ ದಿನದಂದು ನಡೆಯುವ ವಿದ್ಯಮಾನಕ್ಕೆ 'ಸೂಪರ್ ಮೂನ್' ಎನ್ನಲಾಗುತ್ತದೆ. ಮಾರ್ಚ್ 19, 2011 ರಂದು ಸೂಪರ್ ಮೂನ್ ವಿದ್ಯಮಾನ ಮತ್ತು ಹುಣ್ಣಿಮೆ ಒಂದೇ ದಿನವಾಗಿತ್ತು.
4. ಚಂದ್ರನ ಕಕ್ಷಾತಲ ಭೂ ಕಕ್ಷಾತಲಕ್ಕೆ 5.14° ಓರೆಯಾಗಿದೆ. ಭೂ ಕಕ್ಷಾತಲವನ್ನು ಚಂದ್ರನ ಕಕ್ಷೆ ಎರಡು ಬಾರಿ ಸಂಧಿಸುತ್ತದೆ. ಈ ಬಿಂದುಗಳಿಗೆ ಪರ್ವಗಳೆಂದು ಹೆಸರು. ಒಂದು ಪರ್ವಬಿಂದುವಿನಿಂದ ಹೊರಟು ಮತ್ತೆ ಅದೇ ಪರ್ವಬಿಂದುವಿಗೆ ಚಂದ್ರ ಬರಲು ತೆಗೆದುಕೊಳ್ಳುವ ಅವಧಿ 27.21 ದಿನಗಳು. ಇದಕ್ಕೆ ಡ್ರಾಕೋನಿಕ್ ಮಾಸ (Draconic Month) ಎನ್ನಲಾಗುತ್ತದೆ. ಈ ಕಾಲ್ಪನಿಕ ಬಿಂದುಗಳನ್ನೇ ನಾವು ರಾಹು-ಕೇತು ಎನ್ನುತ್ತೇವೆ. ಅಮಾವಾಸ್ಯೆಯ ದಿನ ಸೂರ್ಯ-ಕಾಲ್ಪನಿಕ ಬಿಂದು(ರಾಹು)-ಭೂಮಿ ಸರಳ ರೇಖೆಯಲ್ಲಿದ್ದರೆ ಅಂದೇ ಸೂರ್ಯ ಗ್ರಹಣ. ಹುಣ್ಣಿಮೆಯ ದಿನ ಸೂರ್ಯ-ಭೂಮಿ-ಕಾಲ್ಪನಿಕ ಬಿಂದು(ಕೇತು) ಸರಳ ರೇಖೆಯಲ್ಲಿದ್ದರೆ ಅಂದೇ ಚಂದ್ರ ಗ್ರಹಣ.

ಅದ್ಭುತ ಮಾಹಿತಿ
ಪ್ರತ್ಯುತ್ತರಅಳಿಸಿ