ವಿಷಯಕ್ಕೆ ಹೋಗಿ

ನೆಲದ ಮೇಲಿನ ಪಕ್ಷಿಗಳು

ಬಂಡಿಪುರದ ಮೋಯಾರ್ ಕುರುಚಲು ಕಾಡು, ಹುಲ್ಲುಗಾವಲಿನಲ್ಲಿ ಸುತ್ತಾಡುವಾಗ ಎಷ್ಟೊಂದು ಪಕ್ಷಿಗಳು ಹಾರಿ ಮರೆಯಾಗುತ್ತಿದ್ದವು. ಎಲ್ಲೋ ಮರದ ಮೇಲೆ ಕುಳಿತರೆ ಹುಡುಕಬಹುದೇನೋ, ಆದರೆ ಹುಲ್ಲುಗಳ ನಡುವೆ, ಪೊದೆಗಳ ಮಧ್ಯೆ ಅಡಗಿ ಕುಳಿತ ಅವುಗಳನ್ನು ಹುಡುಕಲು ಅಸಾಧ್ಯವಾದುದಕ್ಕೆ ಆ ಪಕ್ಷಿಗಳ ಬಣ್ಣವೂ ಕಾರಣ.
ಅಲ್ಲಿನ ಹುಲ್ಲು, ಪೊದೆ, ನೆಲದ ಮಣ್ಣಿನ ಬಣ್ಣ ಇವುಗಳಲ್ಲಿ ಕರಗಿ ಹೋಗುತ್ತದೆ. ಆದರೆ ಆ ಪಕ್ಷಿಗಳು ತುಂಬಾ ದೂರದವರೆಗೂ ಹಾರುವುದಿಲ್ಲ. ಸ್ವಲ್ಪದೂರ ಹಾರಿ, ಸ್ವಲ್ಪ ದೂರ ಓಡಿ ಪೊದೆಗಳಲ್ಲಿ ಮರೆಯಾಗುತ್ತದೆ. ಕೆಲವೊಮ್ಮೆ ಹತ್ತಿರ ಹೋಗುವವರೆವಿಗೂ ಸುಮ್ಮನಿದ್ದು, ತುಂಬಾ ಹತ್ತಿರವಾದಾಗ ಸದ್ದು ಮಾಡಿ ಹಾರುತ್ತದೆ. ನಾನು ಗೊತ್ತಿಲ್ಲದೆ ಈ ರೀತಿ ಪಕ್ಷಿಗಳ ತುಂಬಾ ಹತ್ತಿರ ಹೋಗಿ, ಅವುಗಳು ಹಾರಿ ಹೋದಾಗ ಬೆಚ್ಚಿ ಬಿದ್ದಿದ್ದೇನೆ.

ಮೋಯಾರ್ ಕಾಡಿನಲ್ಲಿ ಒಂದು ಬೆಳಗ್ಗೆ ಬರುತ್ತಿದ್ದಾಗ Indian Thick-knee ನೋಡಿದ್ದೆ. ಅದು ನಮ್ಮನ್ನು ನೋಡಿ ರಸ್ತೆಯಲ್ಲೇ ಸ್ವಲ್ಪ ದೂರ ಓಡಿ, ನಾಮಕಾವಸ್ಥೆಗೆ ಸ್ವಲ್ಪ ದೂರ ಹಾರಿ, ರಸ್ತೆಯಿಂದ ಸ್ವಲ್ಪ ಒಳಗೆ ಕುಳಿತುಕೊಂಡಿತು.


ಕಾವೇರಿ ತೀರದ ಕುರುಚಲು ಕಾಡುಗಳಲ್ಲಿ Painted Sandgrouse ನಾವು ಹೋಗುತ್ತಿದ್ದಂತೆ, ನಮ್ಮಿಂದ ಸ್ವಲ್ಪ ದೂರ ಓಡಿ, ನಮಗೆ ಬೆನ್ನು ಹಾಕಿ, ಇನ್ನೇನು ಹಾರುವ ಭಂಗಿಯಲ್ಲಿ ಕುಳಿತಿತ್ತು.


ಟಿಟ್ಟಿಭ - Red-wattled Lapwing ತುಂಬಾ ಗಲಾಟೆಗಾರ ಪಕ್ಷಿ, ಆದರೆ ಹಳದಿ ಬಣ್ಣದ Yellow-wattled Lapwing ಯಾವುದೇ ಸದ್ದು ಮಾಡದೆ ಓಡುತ್ತಾ ಪೊದೆಯಲ್ಲಿ ಮರೆಯಾಗುತ್ತದೆ.


ಇದೇ ತರಹದ Francolin, Partridge, Quail, Spurfowlಗಳಂತಹ ಹೆಚ್ಚಾಗಿ ನೆಲದಮೇಲೆ ನಡೆದಾಡುವ ಪಕ್ಷಿಗಳು ಸುಲಭವಾಗಿ ಹಕ್ಕಿ-ಪಿಕ್ಕಿಯವರಿಗೆ, ಉರುಳು ಹಾಕಿ ಹಿಡಿಯುವವರಿಗೆ ಬಲಿಯಾಗುತ್ತಿವೆ. Partridge ಪಕ್ಷಿಗೆ ಕನ್ನಡದಲ್ಲಿ ಗೌಜಲಕ್ಕಿ ಎನ್ನುವ ಕನ್ನಡ ಹೆಸರಿದೆ. ಆದರೆ ಇಂದಿನ ಈ ಪಕ್ಷಿಗಳ ಬೇಟೆಗಾರರು ಎಲ್ಲವನ್ನೂ ಸೇರಿಸಿ ಗೌಜಲಕ್ಕಿ ಎಂಬ ಒಂದೇ ಹೆಸರಿನಿಂದ ಕರೆಯುತ್ತಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...