ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು ಸೊಗಸು.
ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ.
ಇಂಗ್ಲೀಷ್‌ನಲ್ಲಿ ಇದಕ್ಕೆ Golden Shower ಎಂದೂ ಕರೆಯುತ್ತಾರೆ. ಚಿನ್ನದ ಮಳೆಯೇ ಸುರಿಯುತ್ತಿದೆಯೇನೋ ಎನ್ನುವಂತೆ ಭಾಸವಾಗುವ ಹೂಗಳಿಗೆ ಈ ಹೆಸರು ಅನ್ವರ್ಥಕ. ಬೆಳಗಿನ ಎಳೆಬಿಸಿಲು, ಅದರಲ್ಲಿ ಹೊಳೆಯುವ ಸಾಗಡೆ, ತಾರಿ ಮರಗಳ ಬಣ್ಣ ಬಣ್ಣದ ಚಿಗುರು, ಬೂರುಗ, ಮುತ್ತುಗ ಮುಂತಾದ ಹೂಗಳಿಗೆ ಮುತ್ತಿದ ವಿವಿಧ ಪಕ್ಷಿ, ಕೀಟ ಸಂಕುಲ ಇವುಗಳನ್ನು ಕಂಡು ಪ್ರಕೃತಿಯೇ ಸುರಿಸಿದ ಚಿನ್ನದ ಮಳೆ. ಕಕ್ಕೆ ಮರದ ಹೂಗಳು ಪ್ರಕೃತಿ ತನ್ನ ಸೊಬಗನ್ನು ಕಂಡು ತಾನೇ ಸಂಭ್ರಮಿಸುವ ಪರಿ.
ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ.
Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬಿಡುವ ಸಸ್ಯ. ಇದರ ಕೊಳವೆಯಾಕಾರದ ಕಾಯಿಯು 30-60 ಸೆಂಟಿಮೀಟರ್ ಉದ್ದವಾಗಿದ್ದು ಒಳಗೆ ಹಲವಾರು ಬೀಜಗಳಿರುತ್ತದೆ. ಕಕ್ಕೆ ಮರ ನಾಟವಾಗಿಯೂ ಬಳಕೆಯಾಗುತ್ತದೆ ಮತ್ತು ಅಲಂಕಾರಿಕ ಸಸ್ಯವೂ ಹೌದು. ಮಾರ್ಚ್ ತಿಂಗಳ ಕೊನೆಯಿಂದ ಮೇ ತಿಂಗಳವರೆಗೆ ಅರಳುವ ಹೂಗಳು ಕೆಲವೊಮ್ಮೆ ಎಲೆಗಳನ್ನು ಮರೆಯಾಗಿಸುವಷ್ಟು ಒತ್ತಾಗಿರುತ್ತದೆ. ಬರವನ್ನು ಎದುರಿಸಿ ಬದುಕಬಲ್ಲ ಮರ. ಕೋತಿ ಮತ್ತು ಕರಡಿ ಮರದ ಬೀಜಗಳ ಪ್ರಮುಖ ಪ್ರಸಾರಕ. ಈ ಮರದ ಕಾಯಿ, ಎಲೆ, ಹೂವು, ಬೇರು ಆಯರ್ವೇದದಲ್ಲಿ ಔಷಧಿಯಾಗಿ ಬಳಕೆಯಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ