ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Bhargav A P ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೋಲು ಜೇನು (ರೆಡ್ ಡ್ವಾರ್ಫ್ ಹನಿ ಬೀ)

ನಮಗೆ ಜೇನ್ದುಂಬಿಗಳು ಎಂದರೆ ಸ್ವಲ್ಪ ಹೆದರಿಕೆ ಇದ್ದೆ ಇರುತ್ತದೆ. ಒಮ್ಮೆಲೆ ಇವು ದಾಳಿ ನಡೆಸಿದರೆ ಒಮ್ಮೊಮ್ಮೆ ಜೀವಕ್ಕೆ ಅಪಾಯ ವಾಗಬಹುದು. ಆದರೆ ಎಲ್ಲ ಜೇನ್ದುಂಬಿಗಳು ಅಷ್ಟು ಅಪಾಯಕಾರಿ ಆಗಿರುವುದಿಲ್ಲ. ಅಂತಹ ಒಂದು ಜೇನ್ದುಂಬಿಯೆ ಕೋಲು ಜೇನು.

ಮುತ್ತುಗ

ಮುತ್ತುಗ ನಮ್ಮ ದೇಶದ ಪವಿತ್ರವಾದ ಮರಗಳಲ್ಲಿ ಒಂದು. ನಮ್ಮ ಬಯಲುಸೀಮೆ ಅಥವಾ ಕಾವಲು ಪ್ರದೇಶಗಳಲ್ಲಿ ಕಂಡುಬರುವ ಒಂದು ಸುಂದರವಾದ ಮರಳಲ್ಲಿ ಒಂದು.

ನ್ಯೂ ಹೊರೈಜನ್: ಸಕ್ರಿಯ ಲೋಕದ ರಹಸ್ಯಗಳು

ಪ್ಲೂಟೊವನ್ನು ದಾಟಿ ಮುಂದೆ ಹೊರಟ ನ್ಯೂ ಹೊರೈಜನ್ ತಾನು ಸಂಗ್ರಹಿಸಿದ ಸಂಪೂರ್ಣ ಮಾಹಿತಿಯನ್ನು ಭೂಮಿಗೆ ರವಾನಿಸಲು ಸುಮಾರು 15 ತಿಂಗಳ ಕಾಲ ಹಿಡಿಯಿತು. ಸುಮಾರು 4.5 ಬೆಳಕಿನ ಗಂಟೆಗಳಷ್ಟು ದೂರವಿದ್ದ ನ್ಯೂ ಹೊರೈಜನ್ ಮಾಹಿತಿಯನ್ನು ಒಂದು ಅಥವಾ ಎರಡು ಕಿಲೋಬಿಟ್ಸ್ ಪರ್ ಸೆಕೆಂಡ್ ವೇಗದಲ್ಲಿ ರವಾನಿಸಲು ಅಷ್ಟು ಸಮಯ ಬೇಕಾಯಿತು. ಪ್ಲೂಟೊದಿಂದ ಬಂದ ಮಾಹಿತಿ ಪ್ಲೂಟೊ ಮತ್ತು ಅದರ ಉಪಗ್ರಹಗಳು ಈ ಮೊದಲು ಅಂದುಕೊಂಡಕ್ಕಿಂತ ಸಾಕಷ್ಟು ಸಂಕೀರ್ಣವಾಗಿರುವುದಾಗಿ ತಿಳಿದುಬಂತು. ಈ ಮೊದಲು ವಿಜ್ಞಾನಿಗಳು ತಿಳಿದಿದ್ದಂತೆ ಅದರ ವಾತಾವರಣದ ಪಲಾಯನ ಅಂದುಕೊಂಡದ್ದಕ್ಕಿಂತ ಕಡಿಮೆ ದರದಲ್ಲಿ ಇರುವುದರಿಂದ, ಪ್ಲೂಟೊ ಬಗೆಗಿನ ಊಹೆಯನ್ನು ಪುನರ್ವಿಮರ್ಶೆ ಮಾಡುವಂತಾಯಿತು.

ಶ್ರೀಗಂಧ ವಿಪರ್ಣಕ

ಮಳೆಗಾಲದಲ್ಲಿ ಸಾಮಾನ್ಯವಾಗಿ ನಮ್ಮ ಮನೆಯ ಗೋಡೆಯ ಮೇಲೆ ಅಥವಾ ಕೈತೋಟದಲ್ಲಿ ಅನೇಕ ಪತಂಗಗಳು ಮತ್ತು ಅದರ ಕಂಬಳಿ ಹುಳುಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲ ಇವಕ್ಕೆ ಸಾಕಷ್ಟು ಆಹಾರ ಒದಗಿಸುವುದರಿಂದ ಇವುಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗೆ ಮಳೆಗಾಲದಲ್ಲಿ ಒಮ್ಮೆ ಗೋಡೆಯ ಮೇಲೆ ಕುಳಿತಿದ್ದ ಒಂದು ಪತಂಗ ಸ್ಯಾಂಡಲ್‌ವುಡ್ ಡೀಫೋಲಿಯೇಟರ್ ಅಂದರೆ ಶ್ರೀಗಂಧ ವಿಪರ್ಣಕ ಎಂದು ತಿಳಿಯಿತು.

ಸೆನ್ಸರ್‌ಗಳ ಲೋಕ

 ನೀವು ಈ ಲೇಖನವನ್ನು  ನಿಮ್ಮ ಮೊಬೈಲ್ ಸ್ಮಾರ್ಟ್ ಫೋನಿನನಲ್ಲಿ ಓದುತ್ತಿದ್ದರೆ, ನಿಮ್ಮ ಸ್ಕ್ರೀನ್‌ನಲ್ಲಿ ಟಚ್ ಸೆನ್ಸರ್ ಇದೆ. ಅದೇ ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಉಪಯೋಗಿಸುತ್ತಿದ್ದರೆ, ಟಚ್‌ಪ್ಯಾಡ್ ನಲ್ಲಿ ಟಚ್ ಸೆನ್ಸರ್ ಅಥವಾ ಮೌಸ್‌ನಲ್ಲಿ ಮೂವ್‌ಮೆಂಟ್ ಸೆನ್ಸರ್ ಇರುತ್ತದೆ. ಇಂದಿನ ಜಗತ್ತಿನಲ್ಲಿ ಬಹುತೇಕ ಎಲ್ಲೆಡೆ ಸೆನ್ಸರ್‌ಗಳು ಕಾಣಿಸುತ್ತವೆ. ಬಹುಶಃ ಸೆನ್ಸರ್ ಇಲ್ಲದ ನಮ್ಮ ಜೀವನ ನೆನೆಸಿಕೊಳ್ಳುವುದು ಕಷ್ಟವಾಗುತ್ತದೆ.

ನೀಲಿ ಪಟ್ಟೆಯ ದುಂಬಿ

ನಮ್ಮ ಮನೆಯಲ್ಲಿದ್ದ ಕೈತೋಟದಲ್ಲಿ ನಾನು ಹಲವು ತರಕಾರಿ ಗಿಡಗಳನ್ನು ಬೆಳೆಸಲು ಪ್ರಯತ್ನಪಟ್ಟಿದ್ದೆ. ಆದರೆ ಅನೇಕ ಗಿಡಗಳು ಮೊಳಕೆಯೊಡೆದು ದೊಡ್ಡದಾಗಿ ಹೂಗಳನ್ನು ತೆಳದು ಅನಂತರ ಕಾಯಿಯಾಗಲು ವಿಫಲವಾಗುತ್ತಿದ್ದವು. ನನ್ನ ಪ್ರಕಾರ ಇದಕ್ಕೆ ಮುಖ್ಯ ಕಾರಣ ಹೂಗಳ ಪರಾಗಸ್ಪರ್ಶವಾಗದೆ ಇರುವುದು ಅಥವಾ ಪರಾಗಸ್ಪರ್ಶ ಮಾಡುವಂತಹ ಕೀಟಗಳ ಅನುಪಸ್ಥಿತಿಯಿಂದ ಈ ರೀತಿ ಆಗುತ್ತಿದ್ದಿರಬಹುದು. ಆದರೆ ಒಂದು ತರಕಾರಿ ಗಿಡ ಮಾತ್ರ ಇದಕ್ಕೆ ಅಪವಾದ ಎನ್ನಬಹುದು ಅದು ಬದನೆಗಿಡ. ನಾನು ದಿನಾ ಬೆಳಿಗ್ಗೆ ಎದ್ದು ನನ್ನ ಕೈತೋಟದಲ್ಲಿ ಒಮ್ಮೆ ಸುತ್ತಿ ಬರುವುದು ಒಂದು ಅಭ್ಯಾಸವಾಗಿತ್ತು. ಅಲ್ಲಿ ಕಾಣಿಸುತ್ತಿದ್ದ ಕೀಟಗಳು ಮತ್ತು ಜೇಡಗಳು ನನ್ನನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತಿತ್ತು. ಹೀಗೆ ನಾನು ಪ್ರತಿದಿನ ಗಮನಿಸುತ್ತಿದ್ದ ಕೀಟಗಳಲ್ಲಿ ಮುಖ್ಯವಾದುದು ಎಂದರೆ ಅದು ನೀಲಿ ಪಟ್ಟೆಯ ದುಂಬಿ. ಈ ಕೀಟ ಒಂದು ದಿನವೂ ತಪ್ಪದೇ ಬದನೆ ಗಿಡಗಳಲ್ಲಿ ಬಿಟ್ಟಿದ್ದ ಹೂಗಳ ಮಕರಂದ ಹೀರುತ್ತಾ ಹಾರಡುತ್ತಿತ್ತು. ಈ ಕೀಟದ ಕಾರಣದಿಂದಾಗಿ ಬದನೆಯ ಪರಾಗಸ್ಪರ್ಶವಾಗಿ ನಮಗೆ ಬದನೆಕಾಯಿ ಸಿಗುತ್ತಿತ್ತು. ನೀಲಿ ಪಟ್ಟೆಯ ದುಂಬಿಗಳು ಸುಂದರವಾದ ದುಂಬಿಗಳು ಎಂದರೆ ತಪ್ಪಾಗಲಾರದು. ಇವುಗಳ ತೋರಾಕ್ಸ್ ಅಂದರೆ ನಡುಭಾಗ ತುಪ್ಪಳದಂತೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿ ಇರುತ್ತದೆ. ಅಬ್ಡೋಮನ್ ಅಂದರೆ ಹಿಂಭಾಗ ನೀಲಿ ಪಟ್ಟೆಯನ್ನು ಹೊಂದಿರುತ್ತದೆ ಈ ಕಾರಣಕ್ಕಾಗಿ ಇದಕ್ಕೆ ನೀಲಿ ಪಟ್ಟೆಯ ದುಂಬಿ ಎಂದು...

ವಸ್ತುಗಳ ಅಂತರ್ಜಾಲ - ವಾಸ್ತುಶಿಲ್ಪ

ನಾವು ವಸ್ತುಗಳ ಅಂತರ್ಜಾಲ?” ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಅದರ ವಾಸ್ತುಶಿಲ್ಪವನ್ನು ಅರಿಯಬೇಕಾಗುತ್ತದೆ. ಆರಂಭದ ದಿನಗಳಲ್ಲಿ ವಸ್ತುಗಳ ಅಂತರ್ಜಾಲದ ವಾಸ್ತುಶಿಲ್ಪವು ಮೂರು ಹಂತಗಳನ್ನು ಒಳಗೊಂಡಿತ್ತು ಆದರೆ ಇದು ಉಗಮವಾದಂತೆ ಹಂತಗಳು ಐದಕ್ಕೆ ಏರಿಕೆಯಾದವು. ವಸ್ತುಗಳ ಅಂತರ್ಜಾಲದ ವಾಸ್ತುಶಿಲ್ಪವನ್ನು ಕೆಳಗಿನ ಐದು ಹಂತಗಳಲ್ಲಿ ವಿಂಗಡಿಸಲಾಗಿದೆ.

ಮಡ್ಡಿ

  ಮಡ್ಡಿ ನಮ್ಮ ದೇಶ ಮತ್ತು ಶ್ರೀಲಂಕಾದ ಒಣ ಕಾಡುಗಳಲ್ಲಿ ಕಾಣಬರುವ ಸಾಮಾನ್ಯ ಮರ. ಆಯುರ್ವೇದದ ಕೆಲವು ಔಷಧ ಗಳಲ್ಲಿ ಬಳಸುವ ನೋನಿ ಇದರ ಹತ್ತಿರದ ಸಂಬಂಧಿ. ಇದನ್ನು ರುಬಿಯೇಸಿಯೆ ಕುಟುಂಬಕ್ಕೆ ಸೇರಿಸಲಾಗಿದೆ. ಕಾಫಿ ಸಹ ರುಬಿಯೇಸಿಯೆ ಕುಟುಂಬಕ್ಕೆ ಸೇರಿದ ಸಸ್ಯ.

ಪೇಪರ್ ಕಣಜ

ಬಹಳ ವರ್ಷಗಳ ಹಿಂದೆ ನಮ್ಮ ಮನೆಯ ಲೆಟರ್​ಬಾಕ್ಸ್​ನಲ್ಲಿ ಒಂದು ಕೀಟ ಗೂಡು ರಚಿಸಿತ್ತು. ಆ ಗೂಡು ನೋಡಲು ಷಟ್ಕೋನಾಕೃತಿಯಲ್ಲಿದ್ದರಿಂದ ಅದನ್ನು ನಾನು ಜೇನು ಹುಳು ಎಂದೆ ತಿಳಿದುಕೊಂಡಿದ್ದೆ. ಆದರೆ ನನ್ನ ತಂದೆ ಹೇಳಿದ ಅನಂತರ ತಿಳಿಯಿತು ಅದು ಜೇನು ಹುಳು ಅಲ್ಲ ಬದಲಿಗೆ ಕಣಜವೆಂದು. ಅಷ್ಚೆ ಅಲ್ಲದೆ ಅದರ ಕಡಿತ ತುಂಬ ನೋವಿನಿಂದ ಕೂಡಿರುತ್ತದೆ ಅದರ ತಂಟೆಗೆ ಹೋಗಬಾರದೆಂದು ಎಚ್ಚರಿಸಿದ್ದರು.

ಸಗಣಿ ಓಡುಹುಳು

ಪ್ರತೃತಿಯಲ್ಲಿ ಸಾವಯವ ವಸ್ತುಗಳು ಪುನಾರವರ್ತನೆಗೆ ಒಳಗಾಗುತ್ತದೆ. ಹೀಗೆ ಆಗದಿದ್ದರೆ ನಮ್ಮ ಪರಿಸರ ನಿಂತನೀರಾಗುತ್ತಿತ್ತು. ನಾವು ತಿಂದು ಉಳಿದ ಆಹಾರವನ್ನೆ ತೆಗೆದುಕೊಳ್ಳಿ ಅದನ್ನು ಕಾಗೆ, ಇರುವೆ ಮುಂತಾದ ಪಕ್ಷಿ ಪ್ರಾಣಿಗಳು ತಿಂದು ಇನ್ನಷ್ಟು ಮುರಿಯುವಂತೆ ಮಾಡುತ್ತವೆ, ನಂತರ ಸೂಕ್ಷ್ಮ ಜೀವಿಗಳು ಇನ್ನಷ್ಟು ಮುರಿದು ಕೊನೆಯದಾಗಿ ಮೂಲಧಾತುವಾಗಿ ಪರಿಸರಕ್ಕೆ ಸೋರಿ ಮತ್ತೆ ಪುನರಾವರ್ತನೆಗೊಳ್ಳುತ್ತವೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಬೈನೆ ಅಥವಾ ಬಗನಿ

ನೀವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ತಿರುಗಾಡುವಾಗ, ತಾಳೆ ಜಾತಿಗೆ ಸೇರಿದ, ತ್ರಿಕೋನಾಕಾರದ ವಿಚಿತ್ರವಾದ ಎಲೆಗಳನ್ನು ಹೊಂದಿರುವ ಸಸಿಗಳನ್ನು ಅಥವಾ ಮರಗಳನ್ನು ನೋಡಿರಬಹುದು. ಇದು ಮತ್ಯಾವುದು ಅಲ್ಲದೆ ಬಗನಿ ಅಥವಾ ಬೈನೆ ಮರ. ಇದು ಭಾರತ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತದೆ.

ಅಶೋಕ

ಬಹುಶಃ ನಾವೆಲ್ಲ ಅಶೋಕ ಮರದ ಹೆಸರನ್ನು ಕೇಳಿರುತ್ತೇವೆ. ಸುಂದರ ಹೂವನ್ನು ತಳೆಯುವ ಈ ಮರ ಭಾರತದಲ್ಲಿ ಸಾಂಸ್ಕೃತಿಕವಾಗಿ ಮುಖ್ಯವಾದ ಮರ. ಇದು ಮೂಲತಃ ಭಾರತ, ಮ್ಯಾನ್ಮಾರ್ ಮತ್ತು ಮಲಯ ದೇಶಗಳಲ್ಲಿ ಕಂಡುಬರುತ್ತದೆ.

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮುಡಿಗೆ ಮಿಡತೆ

ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಥವಾ ಬೇಟೆಯನ್ನು ಹಿಡಿಯಲು ಕಂಡುಕೊಂಡಿರುವ ಒಂದು ಮಾರ್ಗವೆಂದರೆ ಅದು ಮರೆಮಾಚಿಕೊಳ್ಳುವುದು. ಮರೆಮಾಚಿಕೊಳ್ಳುವುದು ಎಂದರೆ ಇತರರ ಕಣ್ಣಿಗೆ ಸರಿಯಾಗಿ ಕಾಣದ ಹಾಗೆ ತನ್ನ ಸುತ್ತಲಿನ ಪರಿಸರದಲ್ಲಿ ಲೀನವಾಗುವುದು. ತನ್ನ ದೇಹದ ಬಣ್ಣ ತನ್ನ ಸುತ್ತಲಿನ ಪರಿಸರದ ಬಣ್ಣವೆ ಆಗಿದ್ದರೆ ನಮ್ಮ ಕಣ್ಣಿಗೆ ಅದು ಕಾಣುವುದಿಲ್ಲ. ಆದರೆ ಇದು ಇಷ್ಟಕ್ಕೆ ನಿಲ್ಲದೆ ದೇಹದ ಆಕಾರವು ತನ್ನ ಸುತ್ತಲಿನ ಪರಿಸರದಂತೆ ಬದಲಾದರೆ ಅಂತಹ ಪ್ರಾಣಿಯನ್ನು ಹುಡುಕುವುದು ಇನ್ನು ಕಷ್ಟವಾಗುತ್ತದೆ. ಅಂತಹ ಒಂದು ಕೀಟವೆ ಮುಡಿಗೆ ಮಿಡತೆ.

ಏಪ್‌ಫ್ಲೈ ಅಥವಾ ಮಂಗನ ಮುಖದ ಚಿಟ್ಟೆ (Spalgis epius)

ನಾನು ಚಿಪ್ಪು ಕೀಟಗಳು ಬರೆದು ಕೆಲವು ತಿಂಗಳಾಗಿತ್ತು ಅಷ್ಟೇ ನನಗೆ ಇದರೊಂದಿಗೆ ಮತ್ತೊಮ್ಮೆ ಎದುರಾಗುವ ಸಂದರ್ಭ ಬಂತು. ನಾನು ಲಾಲ್ ಬಾಗ್ ನಿಂದ ಒಂದು ದಾಸವಾಳದ ಗಿಡ ತಂದು ಕುಂಡದಲ್ಲಿ ನೆಟ್ಟು ಬೆಳೆಸತೊಡಗಿದೆ. ಚೆನ್ನಾಗಿ ಹೂ ಬಿಡುತ್ತ ಬೆಳೆಯುತ್ತಿದ್ದ ಗಿಡ ಕೆಲವೆ ವಾರಗಳಲ್ಲಿ ಚಿಪ್ಪು ಕೀಟದ ಆಕ್ರಮಣಕ್ಕೆ ಒಳಗಾಯಿತು. ಈ ಬಾರಿ ಕಾಣಿಸಿಕೊಂಡ ಕೀಟ ಹಿಂದೆ ನೋಡಿದ್ದ ಚಿಪ್ಪು ಕೀಟಗಳಂತೆ ಇರದೆ ಭಿನ್ನವಾಗಿತ್ತು. ಇದಕ್ಕೆ ಇಂಗ್ಶೀಷಿನಲ್ಲಿ ಮೀಲಿ ಬಗ್ ಎನ್ನುತ್ತಾರೆ. ನೋಡಲು ಬಿಳಿ ಬಣ್ಣದ ಕೀಟಗಾಳಾಗಿದ್ದ ಇವು ಯಾವುದೋ ಪುಡಿಯನ್ನು ಮೈ ಮೇಲೆ ಬಳಿದು ಕೊಂಡಂತೆ ಕಾಣುತ್ತಿದ್ದವು. ನೋಡುತ್ತಿದ್ದಂತೆ ಇವು ಸಂಖ್ಯೆ ಹೆಚ್ಚಾಗತೊಡಗಿತು ಹೀಗೆ ಬಿಟ್ಟರೆ ದಾಸವಾಳದ ಗಿಡವನ್ನು ಮುಗಿಸಿಬಿಡುತ್ತದೆ ಎಂದು ಅವುಗಳ ನಿರ್ಮೂಲನೆಗೆ ಕೆಲವು ಕ್ರಮಗಳನ್ನು ಕೈಗೊಂಡೆ. ಆದರೆ ಇವು ಅಷ್ಟು ಸುಲಭವಾಗಿ ಜಗ್ಗಲಿಲ್ಲ.

ಸಿಲ್ವರ್‌ಫಿಶ್(Lepisma saccharina)

ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಅದರಲ್ಲು ಹಳೆಯ ಪುಸ್ತಕಗಳನ್ನು ಓದವವರಿಗೆ ಒಂದು ಜೀವಿಯ ಪರಿಚಯ ಇದ್ದೆ ಇರುತ್ತದೆ. ಪುಟಗಳನ್ನು ತಿರುವಿದಾಗ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಇವು ಬುಳ ಬುಳನೆ ಓಡಾಡಿ ಗಾಬರಿಯನ್ನು ಉಂಟುಮಾಡಬಹುದು. ಹೀಗೆ ಮಾಡಿ ಆತಂಕಗೊಂಡ ಓದುಗರ ಕೋಪಕ್ಕೆ ಬಲಿಯಾಗಲುಬಹುದು. ಈ ರೀತಿ ಪುಸ್ತಕಗಳಲ್ಲಿ ನಮಗೆ ಎದುರಾಗುವ ಜೀವಿ ಸಿಲ್ವರ್ ಫಿಶ್.

ಕಾಮನ್ ಮಾರ್ಮನ್ (Papilio polytes)

ನಮ್ಮ ತೋಟದಲ್ಲಿ ಕರಿಬೇವಿನ ಸಸಿಯನ್ನು ನೆಡಲಾಗಿತ್ತು. ಇದು ಸ್ವಲ್ಪ ನಿಧಾನವಾಗಿ ಬೆಳೆಯುವ ಮರ. ಹಾಗಾಗಿ ಒಂದೆರಡು ವರ್ಷವಾಗಿದ್ದರು ಅಂತಹ ಎತ್ತರ ಬೆಳೆದಿರಲಿಲ್ಲ. ನಾನು ಅನೇಕ ವೇಳೆ ಈ ಗಿಡದ ಎಲೆಗಳ ಮೇಲೆ ಹಕ್ಕಿಯ ಹಿಕ್ಕೆ ಬಿದ್ದಿರುವುದು ಗಮನಿಸುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಪಾರಿವಾಳಗಳ ಸಂಖ್ಯಾಸ್ಫೋಟದಿಂದಾಗಿ ಎಲ್ಲೆಂದರಲ್ಲಿ ಅವುಗಳ ಹಿಕ್ಕೆ ಬಿದ್ದಿರುತ್ತಿತ್ತು. ಹೀಗಾಗಿ ಕರಿಬೇವಿನ ಎಲೆಗಳ ಮೇಲಿರುವ ಹಕ್ಕಿಯ ಹಿಕ್ಕೆ ವಿಶೇಷವಾಗಿ ನನ್ನ ಗಮನ ಸೆಳೆದಿರಲಿಲ್ಲ. 

ತೆಳು ಗಾಳಿಗೆ - ಪಕ್ಷಿಗಳ ಉಗಮ

"ವೈ ಎವಲ್ಯೂಶನ್ ಈಸ್ ಟ್ರು ?” ಪುಸ್ತಕದ ಆಯ್ದ ಭಾಗ ಕನ್ನಡದಲ್ಲಿ ಅರ್ಧ ರೆಕ್ಕೆಯ ಪ್ರಯೋಜನವೇನು? ಇದು ಪ್ರಾಕೃತಿಕ ಆಯ್ಕೆ ಅಥವಾ ವಿಕಾಸವಾದದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಡಾರ್ವಿನ್ ಕಾಲದಿಂದಲು ಪ್ರಚಲಿತವಿರುವ ಪ್ರಶ್ನೆ. ಜೀವ ವಿಜ್ಞಾನಿಗಳ ಪ್ರಕಾರ ಪಕ್ಷಿಗಳು ಆರಂಭಿಕ ಉರಗಗಳಿಂದ ವಿಕಾಸ ಹೊಂದಿವೆ. ಆದರೆ ಒಂದು ನೆಲವಾಸಿ ಪ್ರಾಣಿಯು ಹೇಗೆ ಹಾರುವ ಸಾಮರ್ಥ್ಯವನ್ನು ಪಡೆಯುತ್ತದೆ? ಪ್ರಾಕೃತಿಕ ಆಯ್ಕೆಯು ಈ ಪರಿವರ್ತನೆಯನ್ನು ವಿವರಿಸಲಾಗುವುದಿಲ್ಲ. ಏಕೆಂದರೆ ಇದಕ್ಕಾಗಿ ಜೀವಿಗಳು ಒಂದು ಮಧ್ಯಂತರ ಕಾಲಘಟ್ಟದಲ್ಲಿ ಕೇವಲ ಅಪೂರ್ಣಾವಸ್ಥೆಯಲ್ಲಿರುವ ರೆಕ್ಕೆಯನ್ನು ಹೊಂದಿರಬೇಕು. ಇದು ಆ ಜೀವಿಗೆ ಆಯ್ಕೆಯ ಪ್ರಯೋಜನಕ್ಕಿಂತ ಹೊರೆಯನ್ನೆ ಉಂಟುಮಾಡುತ್ತದೆ ಎಂದು ಸೃಷ್ಟಿ ವಾದಿಗಳು ವಾದಿಸುತ್ತಾರೆ.

ವೈ ಎವಲ್ಯೂಶನ್ ಈಸ್ ಟ್ರು ?

ವೈ ಎವಲ್ಯೂಶನ್ ಈಸ್ ಟ್ರು ? (ವಿಕಾಸ ನಿಜವೇಕೆ?) ನಾನು ಮೊದಲ ಬಾರಿ ಈ ಪುಸ್ತಕ ನೋಡಿದ್ದು ಲಂಡನ್ ನ ಒಂದು ಲೈಬ್ರರಿಯಲ್ಲಿ. ಜೀವವಿಕಾಸ ನನ್ನ ನೆಚ್ಚಿನ ವಿಷಯ ಗಳಲ್ಲೊಂದು ಹಾಗಾಗಿ ಕೈಗೆತ್ತಿಕೊಂಡೆ. ಮೊದಲ ಪುಟವೆ ಕುತೂಹಲ ಮೂಡಿಸಿ ಓದಿಸಿಕೊಂಡು ಹೋಯಿತು. ಈ ಮೊದಲು ನಾನು ಜೀವವಿಕಾಸದ ಕೆಲವು ಪುಸ್ತಕಗಳನ್ನು ಓದಿದ್ದೆ ಆದರು ಇದು ಕುತೂಹಲ ಮೂಡಿಸಿದ್ದು ಅದರ ಮುನ್ನುಡಿಯ ವಿಷಯಕ್ಕಾಗಿ. ಲೇಖಕರಾದ ಜೆರಿ ಎ ಕಾಯ್ನ್ ತಾವು ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಬರೆಯಬೇಕಾಗಿ ಬಂತು ಎಂದು ವಿವರಿಸುತ್ತ ವಿಕಾಸವಾದದ ಬಗ್ಗೆ ಕೆಲವರಿಗಿರುವ ವಿರೋಧಾಭಿಪ್ರಾಯದ ಬಗ್ಗೆ ಬರೆಯುತ್ತಾರೆ. ಅದು ಹೀಗಿದೆ: ೨೦೦೫ರಲ್ಲಿ ಡೋವರ್ ನ ಪೆನ್ಸಿಲ್ವೇನಿಯಾ ಸ್ಕೂಲ್ ಡಿಸ್ಟ್ರಿಕ್ಟ್ ನ ಆಡಳಿತಗಾರರು ಹೈಸ್ಕೂಲ್ ನ ಜೀವಶಾಸ್ತ್ರ ವಿಷಯಕ್ಕಾಗಿ ಯಾವ ಪಠ್ಯ ವನ್ನು ಆಯ್ಕೆ ಮಾಡಬೇಕು ಎಂದು ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಕೆಲವು ಧಾರ್ಮಿಕ ಸದಸ್ಯರು ಪ್ರಸ್ತುತ ಪಠ್ಯದಲ್ಲಿರುವ ಡಾರ್ವಿನ್ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದರ ಬದಲು ಬೈಬಲಿಕಲ್ ಸೃಷ್ಟಿವಾದದ ಪಠ್ಯವನ್ನು ನಿಯಮಿಸಬೇಕು ಎನ್ನುತ್ತಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿಕೊಡುತ್ತದೆ. ಕೊನೆಗೆ ಸಭೆ ಒಂದು ನಿರ್ಣಯ ಹೊರಡಿಸುತ್ತದೆ ಅದರಂತೆ ಜೀವಶಾಸ್ತ್ರದ ಶಿಕ್ಷಕರು ತರಗತಿಯಲ್ಲಿ ಈ ಹೇಳಿಕೆಯನ್ನು ಓದಬೇಕಾಗುತ್ತದೆ. "ಡಾರ್ವಿನ್ ವಿಕಾಸವಾದ ಕೇವಲ ವಾದವಷ್ಟೆ ಅದು ನಿಜವಲ್ಲ ಅದಿನ್ನೂ ಪರೀಕ್ಷೆಗೆ ಒ...