ನೀವು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ತಿರುಗಾಡುವಾಗ, ತಾಳೆ ಜಾತಿಗೆ ಸೇರಿದ, ತ್ರಿಕೋನಾಕಾರದ ವಿಚಿತ್ರವಾದ ಎಲೆಗಳನ್ನು ಹೊಂದಿರುವ ಸಸಿಗಳನ್ನು ಅಥವಾ ಮರಗಳನ್ನು ನೋಡಿರಬಹುದು. ಇದು ಮತ್ಯಾವುದು ಅಲ್ಲದೆ ಬಗನಿ ಅಥವಾ ಬೈನೆ ಮರ. ಇದು ಭಾರತ ಉಪಖಂಡ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡು ಬರುತ್ತದೆ.
ಇದರ ವೈಜ್ಞಾನಿಕ ಹೆಸರು ಕಾರ್ಯೋಟ ಉರೆನ್ಸ್ (Caryota urens). ಇದಕ್ಕೆ ಇಂಗ್ಲೀಷ್‌ನಲ್ಲಿ ಫಿಶ್ ಟೈಲ್ ಪಾಮ್, ಟಾಡಿ ಪಾಮ್, ಜಾಗೇರಿ ಪಾಮ್, ವೈನ್ ಪಾಮ್ ಎನ್ನುವ ಹೆಸರುಗಳು ಇದೆ. ಫಿಶ್ ಟೈಲ್ ಹೆಸರು ಬರಲು ಕಾರಣ ಇದರ ಎಲೆ ಮೀನುಗಳ ಬಾಲವನ್ನು ಹೋಲುವುದರಿಂದ.
ಬಗನಿ ಸುಮಾರು ೧೨ ಮೀ ಎತ್ತರಕ್ಕೆ ಬೆಳೆಯುತ್ತದೆ ಮತ್ತು ಇದರ ಕಾಂಡ ೩೦ ಸೆಂಮೀವರೆಗು ದಪ್ಪ ಇರುತ್ತದೆ. ಕಾಂಡದ ಬಣ್ಣ ಬೂದು ಮತ್ತು ಕಳಚಿದ ಎಲೆಗಳ ಉಂಗುರದ ಚಹರೆ ಇರುತ್ತದೆ. ಎಲೆಗಳು ಬೈಪಿನ್ನೇಟ್ ಮಾದರಿಯಲ್ಲಿ ಕಡು ಹಸಿರು ಬಣ್ಣದಿಂದ ಕೂಡಿರುತ್ತದೆ. ಪ್ರತಿ ಎಲೆಗಳ ಗೆಣ್ಣಿನಲ್ಲಿ ಹೂವು ಬಿಡುತ್ತದೆ. ಬಗನಿಯ ಹೂಗಳು ಗೊಂಚಲಾಗಿ ಉದ್ದಕ್ಕೆ ಇಳಿಬಿಟ್ಟಿರುತ್ತದೆ. ಮೊದಲು ಹಸಿರು ಬಣ್ಣದ ಮೊಗ್ಗು ಅನಂತರ ಕಡು ಕಂದು ಬಣ್ಣಕ್ಕೆ ತಿರುಗಿ ಹೂವಾಗಿ ಅರಳುತ್ತವೆ. ಹೂವಿನ ಬಣ್ಣ ಹಳದಿ. ಬಗನಿ ಮೊನೊಕಾರ್ಪಿಕ್ ಮರ.ಇದರ ಹೂವುಗಳು ಮೇಲಿನ ಗಣ್ಣಿನಿಂದ ಆರಂಭಿಸಿ ಕೆಳಗಿನ ಗೆಣ್ಣಿನವರೆಗು ಬಿಡುತ್ತ ಬರುತ್ತದೆ. ಒಮ್ಮೆ ಎಲ್ಲ ಗೆಣ್ಣು ಮುಗಿದಾಗ ಮರವು ಸಾವನ್ನಪ್ಪುತ್ತದೆ. ಇದರ ಹಣ್ಣು ಮೊದಲಿಗೆ ಹಸಿರು, ಅನಂತರ ಕೆಂಪು ಮತ್ತು ಕೊನೆಯಲ್ಲಿ ಕಪ್ಪು ಬಣ್ಣದಗಿರುತ್ತದೆ. ಬೀಜ ಅರ್ಧಗೋಲಾಕಾರ ಮತ್ತು ಅಡಕೆಯಂತೆ ಗಟ್ಟಿಯಾಗಿ ರುತ್ತದೆ.
ಈ ಮರದಿಂದ ಬೆಲ್ಲವನ್ನು ತಯಾರಿಸಲಾಗುತ್ತದೆ. ಇದರ ಹೂವಿನಿಂದ ಒಸರುವ ರಸದಿಂದ ಹೆಂಡವನ್ನು ತಯಾರಿಸಲಾಗುತ್ತದೆ. ಇದರ ಕಾಂಡವನ್ನು ಕತ್ತರಿಸಿ ಒಣಗಿಸಿ ಪುಡಿ ಮಾಡಿದ ನಂತರ ತಿನ್ನಲು ಉಪಯೋಗಿಸುತ್ತಾರೆ. ಇದನ್ನು ನಗರಗಳಲ್ಲಿ ಅಲಂಕಾರಿಕವಾಗಿ ಬೆಳೆಸಲಾಗುತ್ತದೆ. ಇದರ ಎಲೆಗಳನ್ನು ಹೂವಿನ ಬೊಕೆಗಳಲ್ಲಿ ಬಳಸುತ್ತಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಇದರ ಹೂ ಮತ್ತು ಹಣ್ಣುಗಳು ಅನೇಕ ಕೀಟ ಮತ್ತು ಪ್ರಾಣಿಗಳಿಗೆ ಆಹಾರವಾಗುತ್ತದೆ. ಬಗನಿ ಜೀವಜಾಲದಲ್ಲಿ ಮಹತ್ತರ ಪಾತ್ರವಹಿಸುತ್ತದೆ.
ಎಲೆಗಳು ಬೈಪಿನ್ನೇಟ್ ಮಾದರಿಯಲ್ಲಿ ಕಡು ಹಸಿರು ಬಣ್ಣದಿಂದ ಕೂಡಿರುತ್ತದೆ |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ