ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪರಿಸರ ಸಂರಕ್ಷಣೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹುಲಿ ಸಂರಕ್ಷಣೆ: ಏಕೆ ಇಷ್ಟೊಂದು ಪ್ರಾಮುಖ್ಯತೆ?

 ಅದು ಮೇ 2016. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿರುವ ಗಣಗೂರಿನಲ್ಲಿ ನಾವು ತಂಗಿದ್ದೆವು. ಹುಲಿಯ ಬಲಿ ಪ್ರಾಣಿಗಳ ಸಾಂದ್ರತೆಯನ್ನು ಅಂದಾಜಿಸುವ ಸೀಳುದಾರಿ ಗಣತಿ ಸಮೀಕ್ಷೆ (Line Transect Survey)  ನಡೆಯುತ್ತಿತ್ತು. ನನ್ನೊಂದಿಗೆ ಕೆಲವು ಫೀಲ್ಡ್ ಅಸಿಸ್ಟೆಂಟ್‌ಗಳು ಮತ್ತು ಸ್ವಯಂಸೇವಕರು ಇದ್ದರು. ಅದು ಮುಂಗಾರು ಪೂರ್ವದ ಮಳೆಯ ಸಮಯ. ಒಂದೊಂದು ದಿನ ಸಂಜೆ ಬೀಳುತ್ತಿದ್ದ ಹದವಾದ ಮಳೆಯಿಂದ ಕಾಡು ಹಸಿರಿನಿಂದ ಕಂಗೊಳಿಸುತ್ತಿತ್ತು. ಒದ್ದೆಯಾದ ಮಣ್ಣಿನ ವಾಸನೆ ಗಾಳಿಯಲ್ಲಿ ಹರಡಿಕೊಂಡಿತ್ತು. ಒಂದು ಮಧ್ಯಾಹ್ನ ಸುಮಾರು ಎರಡೂವರೆ ಗಂಟೆ. ಊಟ ಮುಗಿಸಿ, ಸಮೀಕ್ಷೆಗೆ ಹೊರಡಲು ಇನ್ನೂ ಸಮಯವಿದ್ದ ಕಾರಣ ಎಲ್ಲರೂ ಹರಟೆಯಲ್ಲಿ ತೊಡಗಿದ್ದೆವು. ನಾವು ಉಳಿದಿದ್ದ ಅರಣ್ಯ ಇಲಾಖೆಯ ಹಳೆಯ ಕಟ್ಟಡದ ಸ್ವಲ್ಪ ದೂರದಲ್ಲೇ ಒಂದು ಕೆರೆಯಿತ್ತು. ಕಟ್ಟಡದಿಂದ ಹೊರಬಂದರೆ ಕೆಲವು ಮೆಟ್ಟಿಲುಗಳು. ಅಲ್ಲಿಂದ ಒಂದು ಕಚ್ಚಾ ರಸ್ತೆ ಬಲಗಡೆಯಿಂದ ಬಂದು ಕಟ್ಟಡದ ಮುಂದೆ ಹಾದು, ಎಡಗಡೆಗೆ ಸಾಗಿ ಸ್ವಲ್ಪ ದೂರದಲ್ಲಿ ಸ್ವಲ್ಪ ಬಲಕ್ಕೆ ತಿರುಗಿ ಕೆರೆಯನ್ನು ಸೇರುತ್ತಿತ್ತು. ಆ ತಿರುವಿನ ಕಾರಣದಿಂದ ಕಟ್ಟಡದ ಮುಂದೆ ನಿಂತರೆ ಕೆರೆ ಕಾಣುತ್ತಿರಲಿಲ್ಲ. ಒಂದು ಕ್ಷಣ ನಮ್ಮ ಮಾತೆಲ್ಲವು ಸ್ತಬ್ದವಾಯಿತು. ಇದ್ದಕ್ಕಿದ್ದಂತೆ ಹುಲಿಯ ಕೂಗೊಂದು ಕೇಳಿಸಿದ್ದರಿಂದ ನಾವು ಮಾತನಾಡುವುದನ್ನು ನಿಲ್ಲಿಸಿದೆವು. ಅದು ಹುಲಿಯ ಘರ್ಜನೆಯಲ್ಲ. ಬೆದೆಗೆ ಬಂದ ಹೆಣ್ಣು ಹುಲಿ ಕಾಡ...

ಪೆಪ್ಪರ್ಡ್ ಪತಂಗ: ನೈಸರ್ಗಿಕ ಆಯ್ಕೆಯ ಜೀವಂತ ಸಾಕ್ಷಿ

 ಒಂದು ಪುಟ್ಟ ಪತಂಗ! ಅದು ಹುಲಿಯಷ್ಟು ಬಲಿಷ್ಠವಲ್ಲ. ಚೀತಾದಷ್ಟು ವೇಗವೂ ಇಲ್ಲ. ವಿಷದಹಾವಿನಂತೆ ತನ್ನನ್ನು ರಕ್ಷಿಸಿಕೊಳ್ಳುವುದೂ ಗೊತ್ತಿಲ್ಲ. ಅದರ ಬಳಿ ಇದ್ದದ್ದು ಕೇವಲ ಎರಡು ರೆಕ್ಕೆಗಳು ಮತ್ತು ಮರದ ತೊಗಟೆ ಮೇಲೆ ಕುಳಿತಾಗ ಹಿನ್ನಲೆಯಲ್ಲಿನ ಬಣ್ಣದೊಡನೆ ಕರಗಿಹೋಗುವ ಅವುಗಳ ಬಣ್ಣ. ಆದರೆ ಇದೇ ಪುಟ್ಟ ಪತಂಗ ಜೀವವಿಕಾಸದ (Evolution) ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಜೀವಿಗಳಲ್ಲಿ ಒಂದಾಯಿತು. ಚಾರ್ಲ್ಸ್ ಡಾರ್ವಿನ್ 1859ರಲ್ಲಿ On the Origin of Species ಪ್ರಕಟಿಸಿದಾಗ, ಜೀವಿಗಳು ಪರಿಸರಕ್ಕೆ ಹೊಂದಿಕೊಂಡು ಕಾಲಕ್ರಮೇಣ ಬದಲಾಗುತ್ತವೆ ಎಂದು ಪ್ರತಿಪಾದಿಸಿದರು. ಆದರೆ ಆ ಕಾಲದಲ್ಲಿ ಈ ಕಲ್ಪನೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುವ ಉದಾಹರಣೆಗಳು ವಿರಳವಾಗಿದ್ದವು. ಡಾರ್ವಿನ್ ನಿಧನರಾದ ಕೆಲವು ದಶಕಗಳ ನಂತರ, ಇಂಗ್ಲೆಂಡಿನ ಕಾಡೊಂದರಲ್ಲಿ ಬದುಕುತ್ತಿದ್ದ ಈ ಸಣ್ಣ ಪತಂಗ ಅವರ ಸಿದ್ಧಾಂತವನ್ನು ಜೀವಂತವಾಗಿ ತೋರಿಸಿಕೊಟ್ಟಿತು. ಈ ಪತಂಗ ಇದ್ದದ್ದು ಇಂಗ್ಲೆಂಡಿನ ಓಕ್, ಬರ್ಚ್ ಮತ್ತು ಇತರ ಮರಗಳಿಂದ ತುಂಬಿದ್ದ ಹಳೆಯ ಕಾಡುಗಳಲ್ಲಿ. ಆ ಮರಗಳ ಕಾಂಡಗಳ ಮೇಲೆ ಬಿಳಿ ಮತ್ತು ಬೂದು ಬಣ್ಣದ ಕಲ್ಲುಹೂಗಳು (Lichens) ಹರಡಿಕೊಂಡಿದ್ದವು. ದೂರದಿಂದ ನೋಡಿದರೆ ಮರದ ತೊಗಟೆಯೇ ಒಂದು ವಿಚಿತ್ರ ಚಿತ್ರಕಲೆಯಂತೆ ಕಾಣುತ್ತಿತ್ತು. ಹಗಲಿನಲ್ಲಿ ಈ ಪತಂಗ ಬಂದು ಆ ತೊಗಟೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಆ ಪತಂಗಗಳ ರೆಕ್ಕೆಗಳ ಮೇಲೂ ತೊಗಟೆಯಂತೆ ಬಿಳಿ ಬಣ್...

ದಾಟಬೇಕು, ದಾಟಿ ಬದುಕಬೇಕು..........

ಒಂದು ದಿನ ನಾನು ಆಫೀಸಿನಿಂದ ಕೆಲಸ ಮುಗಿಸಿಕೊಂಡು ಮನೆಗೆ ಸೈಕಲಿನಲ್ಲಿ ಬರುತ್ತಿದ್ದೆ. ನಮ್ಮ ಮನೆಯ ಸಮೀಪವಿರುವ ಗೌಡನ ಕೆರೆಯ ಬಳಿ ಬರುವಾಗ ನನಗೆ ಸಣ್ಣ ಹಾವೊಂದು ರಸ್ತೆ ದಾಟುತ್ತಿದ್ದದ್ದು ಕಂಡುಬಂತು. ಕೆಲವೇ ಕ್ಷಣಗಳಷ್ಟೆ,