ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೇಲಿಯೆ ಎದ್ದು ಹೊಲ ಮೇಯ್ದಾಗ!!!

ಇತ್ತೀಚಿಗೆ ನನ್ನ ಸ್ನೇಹಿತರೊಂದಿಗೆ ಸಿನಿಮಾಗಳ ಬಗೆ ಚರ್ಚಿಸುತ್ತಿದ್ದಾಗ ಅವರವರಿಗೆ ಉತ್ತಮವೆನಿಸಿದ ಸಿನಿಮಾಗಳನ್ನು ಹೇಳಲು ಆರಂಭಿಸಿದರು ನಾನು ನನ್ನ ಸೆಲ್ ಫೋನಿನಲ್ಲಿ ಅವುಗಳನ್ನು ಬರೆದುಕೊಂಡೆ . ಆ ಸಮಯದಲ್ಲಿ ಒಬ್ಬ ಮಾದಕ ವಸ್ತುಗಳನ್ನು ಆದರಿಸಿದ ಒಂದು ಸಿನಿಮಾದ ಹೆಸರನ್ನು ಹೇಳಿದ .

ಟಿಟ್ಟಿಭನ ಕಥೆ

     ಬಂಡೀಪುರದಲ್ಲಿ ಒಂದು ದಿನ ಜೀಪ್ ರಸ್ತೆಯ ಬದಿಯಲ್ಲಿ ಟಿಟ್ಟಿಭ ( Red-wattled Lapwing ) ಗೂಡು ಕಂಡಿತು. "ಗೂಡು" ಎಂದರೆ ಮರದ ಮೇಲೆ ಕಟ್ಟಿದ ಗೂಡಲ್ಲ. ನಾವು ಪ್ರತಿದಿನ ಓಡಾಡುವ ಮಣ್ಣಿನ ರಸ್ತೆಯ ಅಂಚಿನಲ್ಲಿ, ಸ್ವಲ್ಪ ಹಳ್ಳವಾಗಿದ್ದ ಜಾಗದಲ್ಲಿ ನೆಲದ ಮೇಲೆಯೇ ನಾಲ್ಕು ಮೊಟ್ಟೆಗಳನ್ನು ಇಟ್ಟಿತ್ತು. ಸುತ್ತಲೂ ಇದ್ದ ಒಣಮಣ್ಣು ಮತ್ತು ಸಣ್ಣ ಕಲ್ಲುಗಳ ಬಣ್ಣವೇ ಮೊಟ್ಟೆಗಳು ಇದ್ದ ಕಾರಣ ಅಷ್ಟೇನೂ ಸುಲಭವಾಗಿ ಕಣ್ಣಿಗೆ ಬೀಳುವಂತಿರಲಿಲ್ಲ. ನಾನು ಜೀಪ್ ನಿಲ್ಲಿಸಿ ಗೂಡಿನ ಕಡೆ ನಡೆದುಕೊಂಡು ಹೋದೆ. ತಾಯಿ ಟಿಟ್ಟಿಭ ಯಾವುದೇ ಸದ್ದು ಮಾಡದೆ ಸುಮ್ಮನೆ ಎದ್ದು ಪಕ್ಕದಲ್ಲಿದ್ದ ಪೊದೆಯೊಳಗೆ ಓಡಿ ಮರೆಯಾಯಿತು. ನಾನು ಮೊಟ್ಟೆಗಳ ಕೆಲವು ಚಿತ್ರಗಳನ್ನು ತೆಗೆದು ಅಲ್ಲಿಂದ ಹೊರಟೆ. ಸುಮಾರು ಒಂದು ವಾರ ಆ ಕಡೆ ಹೋಗುವ ಅವಕಾಶವೇ ಬರಲಿಲ್ಲ. ಮತ್ತೆ ಅದೇ ರಸ್ತೆಯಲ್ಲಿ ಹೋಗಬೇಕಾದಾಗ ಕುತೂಹಲದಿಂದ ಜೀಪ್ ನಿಲ್ಲಿಸಿ ಗೂಡಿನತ್ತ ನೋಡಿದೆ. ನಾಲ್ಕು ಮೊಟ್ಟೆಗಳಲ್ಲಿ ಮೂರು ಮರಿಗಳಾಗಿದ್ದವು. ಆದರೆ ಈ ಬಾರಿ ತಾಯಿ ಹಕ್ಕಿಯ ವರ್ತನೆ ಸಂಪೂರ್ಣ ಬದಲಾಗಿತ್ತು. ಹಿಂದಿನಂತೆ ಸುಮ್ಮನೆ ಓಡಿ ಹೋಗಲಿಲ್ಲ. ಸ್ವಲ್ಪ ದೂರ ನಿಂತು ಜೋರಾಗಿ ಕೂಗತೊಡಗಿತು. ಅದರ ಎಚ್ಚರಿಕೆಯ ಕೂಗು ಕೇಳುತ್ತಿದ್ದಂತೆಯೇ ಗೂಡಿನಲ್ಲಿ ಮೌನವಾಗಿ ಕುಳಿತಿದ್ದ ಮರಿಗಳು ಎದ್ದು ಬೇರೆ ಬೇರೆ ದಿಕ್ಕುಗಳಿಗೆ ಓಡಿ ಚೆಲ್ಲಾಪಿಲ್ಲಿಯಾದವು. ಕ್ಷಣಾರ್ಧದಲ್ಲಿ ಅವು ನೆಲದ ಬಣ್ಣದಲ್ಲೇ ಬೆರೆತುಹೋದವು. ಮ...