ಸುಮಾರು ದಿನಗಳ ನಂತರ ನನ್ನ ಎಕ್ಸ್ಟರ್ನಲ್ ಹಾರ್ಡ್-ಡಿಸ್ಕ್-ನಲ್ಲಿ ಆ ಸಿನಿಮಾ ಸಿಕ್ಕಿತು. ಅದರ ಹಿನ್ನೆಲೆ ಏನು ತಿಳಿಯದೆ ಸಿನಿಮಾವನ್ನು ಪೂರ್ತಿಯಾಗಿ ನೋಡಿದೆ, ಮಾರನೆ ದಿನ ಅದರ ಬಗ್ಗೆ ಮಾಹಿತಿ ಕಲೆ ಹಾಕಲೆಂದು ಗೂಗಲ್ ಮಾಡಿದಾಗ ನಿಜವಾಗಿಯು ಆಶ್ಚರ್ಯವಾಯಿತು ಏಕೆಂದರೆ ಆದೊಂದು ನೈಜ್ಯ ಘಟನೆಯನ್ನು ಆದರಿಸಿದ ಸಿನಿಮಾ,
ಆ ಸಿನಿಮಾದ ಹೆಸರು ಅಮೆರಿಕನ್ ಗ್ಯಾಂಗ್ಸ್ಟರ್ ಎಂದು. ೧೯೬೮ರಲ್ಲಿ
ಅಮೇರಿಕಾ ದೇಶದ ನ್ಯೂಯಾರ್ಕ್ ನೆರೆ ನಗರವಾದ ಹಾರ್ಲೆಮ್ ನ ಕುಖ್ಯಾತ ದರೋಡೆಕೋರ ಹೃದಯಾಘಾತದಿಂದ ಸಾವನ್ನಪ್ಪಿದಾಗ, ಅವನ ಬಲಗೈ ಬಂಟ ಹಾಗು ಲಿಮೋ ಚಾಲಕನು ಆದ ಫ್ರಾಂಕ್ ಲೂಕಸ್ ಭೂಗತ ಲೋಕವನ್ನು ಪ್ರವೇಶಿಸುತ್ತಾನೆ. ಇದರ ನಡುವೆ ಪ್ರಾಮಾಣಿಕ ಪತ್ತೇದಾರಿ ರಾಬರ್ಟ್ಸ್-ನ ಸ್ನೇಹಿತ ಅತಿ ಕಮ್ಮಿ ಬೆಲೆಯ ಬ್ಲೂ ಮ್ಯಾಜಿಕ್ ಎನುವ
ಹೆರಾಯಿನ್-ನನ್ನು ಸೇವಿಸಿ ಮರಣ ಹೊಂದುತ್ತಾನೆ. ರಾಬರ್ಟ್ಸ್ ನನ್ನು
ಈ ಜಾಲದ ಹಿಂದಿರುವ
ನಾಯಕನನ್ನು ಪತ್ತೆಹಚಲು ಮುಖ್ಯ ಅಧಿಕಾರಿಯನ್ನಾಗಿ ನೇಮಿಸಲಾಗುತ್ತದೆ. ವಿಯೆಟ್ನಾಂ ಯುದ್ಧದಿಂದ ಹಿಂದಿರುಗುವ ಸೇನಾ ಆಧಿಕಾರಿಗಳು ಬ್ಲೂ
ಮ್ಯಾಜಿಕ್ ಮಾದಕವನ್ನು
ನೇರವಾಗಿ ಥೈಲ್ಯಾಂಡ್ ಇಂದ ಅಮೇರಿಕಾಗೆ ಸಾಗಿಸುತ್ತಿರುತ್ತಾರೆ. ಇದರಿಂದ ಲುಕಾಸ್ ಬೇರೆಯವರಿಗಿಂತ ಆತಿ ಹೆಚ್ಹು ಗುಣಮಟ್ಟವಿರುವ ಡ್ರಗ್ಸ್ ಅನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿರುತ್ತಾನೆ. ನಿಧಾನವಾಗಿ ಬ್ಲೂ ಮ್ಯಾಜಿಕ್ ಡ್ರಗ್ಸ್ ಮಾರುಕಟ್ಟೆಯನ್ನೆ ತನ್ನದಾಗಿಸಿಕೊಳ್ಳುತ್ತಾನೆ. ಕ್ಯಾಸಿನೊ ಮತ್ತು ವ್ಯಭಿಚಾರಗಳನ್ನು ನಿಯಂತ್ರಿಸಲು ಹಲವು ನೈಟ್ ಕ್ಲಬ್-ಗಳು ಅವನದಾಗುತ್ತವೆ, ತನ್ನ ತಾಯಿಯ ಆಸೆಯಂತೆ ಒಂದು ದೊಡ್ದ ಬಂಗಲೆಯನ್ನು ಖರೀದಿಸುತ್ತಾನೆ. ಪೊಲೀಸರಿಂದ ದೂರವಿರಲು ಅವನ ಉಡುಗೆ, ತೊಡುಗೆಯನ್ನು ಕಾರ್ಪೊರೇಟ್ ರೀತಿಯಲ್ಲಿ ಬದಲಿಸಿಕೊಳ್ಳುತ್ತಾನೆ. ಅವನ ಎಲ್ಲ ವಹಿವಾಟುಗಳನ್ನು ಅವನ ತಮ್ಮಂದಿರಿಗೆ ನೀಡುತ್ತಾನೆ. ಪೋರ್ಟೊರಿಕೊದ ಚೆಲುವೆ ಇವಾಳನ್ನು
ಪ್ರೀತಿಸುತ್ತಾನೆ, ಅವಳೊಂದಿಗೆ ಬಾಕ್ಸಿಂಗ್ ಪಂದ್ಯವನ್ನು ವೀಕ್ಷಿಸಲು ದುಬಾರಿ ಕೋಟ್ ಧರಿಸಿ ಬರುತ್ತಾನೆ ಇದನ್ನು ನೋಡಿದ ರಾಬರ್ಟ್ಸ್ ಅನುಮಾನಗೊಂಡು ಅವನ ಬಗ್ಗೆ ತನಿಖೆ ಮಾಡಲು ತೀರ್ಮಾನಿಸುತ್ತಾನೆ.
ಇದರ ನಡುವೆ ಡೊಮಿನಿಕ್ ಕ್ಯಟ್ಟನೊ ಮಾಫಿಯಾ ಬಾಸ್,
ಪ್ರತಿ ತಿಂಗಳು ಹಫ್ತ ಕೊಡದಿದ್ದಲ್ಲಿ ಲುಕಾಸ್ ಕುಟುಂಬವನ್ನು
ನಿರ್ನಾಮ ಮಾಡುವುದಾಗಿ ಬೆದರಿಸುತ್ತಾನೆ, ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಭ್ರಷ್ಟ ಅಧಿಕಾರಿ ನಿಕ್ ಟ್ರುಪೊಗೆ
ರಾಬರ್ಟ್ಸ್, ಲುಕಾಸ್-ನ
ಬೆನ್ನು ಬಿದಿರುವ ವಿಷಯ ತಿಳಿದು, ಬೆದರಿಸಿ ಹಣ ಕೇಳುತ್ತಾನೆ, ಲುಕಾಸ್
ಸ್ಥಳೀಯ ಅಪರಾಧಿಗಳ ಜೊತೆಯೂ ಪೈಪೋಟಿಸುವ ಸಂದರ್ಭ ಬರುತ್ತದೆ ಅವನ ಬ್ಲೂ ಮ್ಯಾಜಿಕ್
ಹೆರಾಯಿನ್-ನನ್ನು ಮತ್ತಷ್ಟು ಸಾರಗುಂದಿಸಿ ಮಾರಾಟ ಮಾಡುತ್ತಿರುತ್ತಾರೆ. ಲುಕಾಸ್-ಗೆ ಇನ್ನಷ್ಟು
ಕೆಟ್ಟ ಸುದ್ದಿಗಳು ಬರುತ್ತವೆ, ಸೈಗಾನ್ ಯುದ್ಧದಲ್ಲಿ ಸೋಲುವುದರೊಂದಿಗೆ ಹೆರಾಯಿನ್-ನನ್ನು ಇನ್ನು
ಮುಂದೆ ಪೂರೈಕೆ ಮಾಡಲಾಗಲೆಂದು ವ್ಯಾಪಾರಿಗಳು ಹೇಳುತ್ತಾರೆ.
ಲುಕಾಸಿನ ಸೋದರಸಂಬಂಧಿ ಒಬ್ಬ ಮಹಿಳೆಯ ಮೇಲೆ ಗುಂಡು ಹಾರಿಸುವುದನ್ನು
ರಾಬರ್ಟ್ಸ್ ತಂಡ ನೋಡಿ ಅವನನ್ನು ವಶಕ್ಕೆ ಪಡೆದು ವಿಚಾರಿಸಿ ಅವನಿಗೆ ಒಂದು ಮೈಕ್ರೋ ಫೋನ್ ಫಿಕ್ಸ್
ಮಾಡಿ ಕಳುಹಿಸುತ್ತಾರೆ, ಇದರಿಂದ ರಾಬರ್ಟ್ಸ್ ಹಾಗು ಅವನ ತಂಡದವರಿಗೆ ಕೊನೆಯ ಸರಕು ಯುದ್ಧ ವಿಮಾನದಲ್ಲಿ ಬರುತ್ತಿರುವುದರ
ಖಚಿತ ಮಾಹಿತಿ ಸಿಗುತ್ತದೆ. ವಿಮಾನವನ್ನು ಪರೀಕ್ಷಿಸಲು ರಾಬರ್ಟ್ಸ್ ಮುಂದಾದಾಗ ಶವಪೆಟ್ಟಿಗೆಗಳಲ್ಲಿ
ಹೆರಾಯಿನ್-ನನ್ನು ಪತ್ತೆ ಮಾಡುತ್ತಾನೆ. ಈ ಎಲ್ಲಾ
ಮಾಹಿತಿಗಳ ಆಧಾರದ ಮೇಲೆ ಲುಕಾಸ್-ನನ್ನು ಬಂಧಿಸುತ್ತಾನೆ
ಆರಂಭದಲ್ಲಿ ರಾಬರ್ಟ್ಸ್ ಆತನಿಗೆ ಸಹಾಯ ಮಾಡಿದಲ್ಲಿ ಅವನ ಶಿಕ್ಷೆಯನ್ನು ಕಮ್ಮಿ ಮಾಡುವುದಾಗಿ ಹೇಳುತ್ತಾನೆ ಆದರೆ ಲುಕಾಸ್ ಲಂಚದ ಆಸೆಯನು ರಾಬರ್ಟ್ಸ್ ನ ಮುಂದಿಡುತ್ತಾನೆ. ಅಂತಿಮವಾಗಿ ನ್ಯೂಯಾರ್ಕ್
ನಗರದ ಯಾವ ಯಾವ ಪೊಲೀಸರು
ಈ ದಂಧೆಯಲ್ಲಿ ಒಳಗೊಂಡಿದ್ಜಾರೆ
ಎಂದು ರಾಬರ್ಟ್ಸ್ ಗೆ ಲುಕಾಸ್ ತಿಳಿಸುತ್ತಾನೆ, ಇಂತಹ ನೂರಾರು ಜಾಲಗಳನ್ನು ಕಂಡು ಹಿಡಿಯಲು ಲುಕಾಸ್, ರಾಬೆರ್ಟ್ಸ್ ಗೆ ಸಹಾಯ ಮಾಡುತ್ತಾನೆ. ೭೦ ವರ್ಷಗಳ ಜೈಲು ಶಿಕ್ಷೆಯನ್ನು ಕೋರ್ಟ್ ತೀರ್ಮಾನಿಸುತ್ತದೆ, ಆದರೆ ೧೫ ವರ್ಷಗಳ ಬಳಿಕ ಬಿಡುಗಡೆಯಗುತ್ತಾನೆ.
ಇಂತಹ
ನಿಜವಾದ ಸಾಹಸಗಳು ನಮ್ಮ ದೇಶದಲ್ಲೂ ಆಗಬೇಕು. ನಮ್ಮನ್ನು ರಕ್ಷಿಸುವ ಯೋಧರು, ಪೊಲೀಸರು, ರಾಜಕಾರಣಿಗಳು ಇಂತಹ ಕೃತ್ಯಗಳಿಗೆ ಸಹಾಯ ಮಾಡಿದರೆ ಸಾಮಾನ್ಯ ಪ್ರಜೆಗಳು ಬದುಕಲು ಕಷ್ಟವಾಗುತ್ತದೆ. ಯಾವುದೇ ದೇಶದ ಕಾನೂನಿಗೆ ಅಪರಾಧ ಮಾಡಿದವನಿಗೆ
ಶಿಕ್ಷೆ ವಿಧಿಸಬಹುದೇ ವಿನಃ ಜೀವ ಮತ್ತು ಜೀವನ ಕಳೆದುಕೊಂಡವರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ.
ಅಮೆರಿಕನ್ ಗ್ಯಾಂಗ್ಸ್ಟರ್ ಸಿನಿಮಾ ಸಂಕ್ಷಿಪ್ತ ವಿವರಗಳು
ನಿರ್ದೇಶನ
|
ರಿಡ್ಲೆ ಸ್ಕಾಟ್
|
ಪುಸ್ತಕ
|
"ದಿ ರಿಟರ್ನ್ ಆಫ್ ಸೂಪರ್ ಫ್ಲೈ" ಮಾರ್ಕ್ ಜೆಕಾಬ್ಸನ್
|
ತಾರಾಗಣ
|
ರಸೆಲ್ ಕ್ರೌ, ಡೆನ್ಶೆಲ್ ವಾಷಿಂಗ್ಟನ್
|
ಭಾಷೆ
|
ಇಂಗ್ಲಿಷ್
|
ಬಿಡುಗಡೆ ದಿನಾಂಕ
|
ಅಕ್ಟೋಬರ್ ೨೦೦೭
|
ಖರ್ಚು
|
೧೦೦ ಮಿಲಿಯನ್ $
|
ಗಳಿಕೆ
|
$೨೬೬,೪೬೫,೦೩೭
|
Nicely written. Real stories will be always liked by people
ಪ್ರತ್ಯುತ್ತರಅಳಿಸಿThank you ...
ಅಳಿಸಿ