ವೈ ಎವಲ್ಯೂಶನ್ ಈಸ್ ಟ್ರು ? (ವಿಕಾಸ ನಿಜವೇಕೆ?) ನಾನು ಮೊದಲ ಬಾರಿ ಈ ಪುಸ್ತಕ ನೋಡಿದ್ದು ಲಂಡನ್ ನ ಒಂದು ಲೈಬ್ರರಿಯಲ್ಲಿ. ಜೀವವಿಕಾಸ ನನ್ನ ನೆಚ್ಚಿನ ವಿಷಯ ಗಳಲ್ಲೊಂದು ಹಾಗಾಗಿ ಕೈಗೆತ್ತಿಕೊಂಡೆ. ಮೊದಲ ಪುಟವೆ ಕುತೂಹಲ ಮೂಡಿಸಿ ಓದಿಸಿಕೊಂಡು ಹೋಯಿತು.
ಈ ಮೊದಲು ನಾನು ಜೀವವಿಕಾಸದ ಕೆಲವು ಪುಸ್ತಕಗಳನ್ನು ಓದಿದ್ದೆ ಆದರು ಇದು ಕುತೂಹಲ ಮೂಡಿಸಿದ್ದು ಅದರ ಮುನ್ನುಡಿಯ ವಿಷಯಕ್ಕಾಗಿ. ಲೇಖಕರಾದ ಜೆರಿ ಎ ಕಾಯ್ನ್ ತಾವು ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಬರೆಯಬೇಕಾಗಿ ಬಂತು ಎಂದು ವಿವರಿಸುತ್ತ ವಿಕಾಸವಾದದ ಬಗ್ಗೆ ಕೆಲವರಿಗಿರುವ ವಿರೋಧಾಭಿಪ್ರಾಯದ ಬಗ್ಗೆ ಬರೆಯುತ್ತಾರೆ.
ಅದು ಹೀಗಿದೆ:
೨೦೦೫ರಲ್ಲಿ ಡೋವರ್ ನ ಪೆನ್ಸಿಲ್ವೇನಿಯಾ ಸ್ಕೂಲ್ ಡಿಸ್ಟ್ರಿಕ್ಟ್ ನ ಆಡಳಿತಗಾರರು ಹೈಸ್ಕೂಲ್ ನ ಜೀವಶಾಸ್ತ್ರ ವಿಷಯಕ್ಕಾಗಿ ಯಾವ ಪಠ್ಯ ವನ್ನು ಆಯ್ಕೆ ಮಾಡಬೇಕು ಎಂದು ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಕೆಲವು ಧಾರ್ಮಿಕ ಸದಸ್ಯರು ಪ್ರಸ್ತುತ ಪಠ್ಯದಲ್ಲಿರುವ ಡಾರ್ವಿನ್ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದರ ಬದಲು ಬೈಬಲಿಕಲ್ ಸೃಷ್ಟಿವಾದದ ಪಠ್ಯವನ್ನು ನಿಯಮಿಸಬೇಕು ಎನ್ನುತ್ತಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿಕೊಡುತ್ತದೆ. ಕೊನೆಗೆ ಸಭೆ ಒಂದು ನಿರ್ಣಯ ಹೊರಡಿಸುತ್ತದೆ ಅದರಂತೆ ಜೀವಶಾಸ್ತ್ರದ ಶಿಕ್ಷಕರು ತರಗತಿಯಲ್ಲಿ ಈ ಹೇಳಿಕೆಯನ್ನು ಓದಬೇಕಾಗುತ್ತದೆ. "ಡಾರ್ವಿನ್ ವಿಕಾಸವಾದ ಕೇವಲ ವಾದವಷ್ಟೆ ಅದು ನಿಜವಲ್ಲ ಅದಿನ್ನೂ ಪರೀಕ್ಷೆಗೆ ಒಳಪಡುತ್ತಿದೆ ಏಕೆಂದರೆ ಇನ್ನು ಹೊಸ ಸಾಕ್ಷಿಗಳು ದೊರಕುತ್ತಿವೆ ಮತ್ತು ಈ ವಾದದಲ್ಲಿ ನ್ಯೂನತೆಗಳು ಇವೆ ಅದಕ್ಕೆ ಇನ್ನು ಸಾಕ್ಷಿಗಳು ಸಿಕ್ಕಿಲ್ಲ. ಬುದ್ಧಿವಂತ ವಿನ್ಯಾಸ ಡಾರ್ವಿನ್ ವಾದಕ್ಕಿಂತ ಭಿನ್ನವಾದುದ್ದು. ಇದರ ಬಗ್ಗೆ ಹೆಚ್ಚಿನ ವಿವರಕ್ಕಾಗಿ ವಿದ್ಯಾರ್ಥಿಗಳು ಆಫ್ ಪಾಂಡಾಸ್ ಅಂಡ್ ಪೀಪಲ್ ಎನ್ನುವ ಕೃತಿಯನ್ನು ಓದಬಹುದು. ಎಲ್ಲ ವಾದಕ್ಕೆ ಅನ್ವಯಿಸುವಂತೆ ವಿದ್ಯಾರ್ಥಿಗಳಿಗೆ ತೆರೆದ ಮನವನ್ನು ಹೊಂದಲು ಪ್ರೋತ್ಸಾಹಿಸಲಾಗುತ್ತದೆ."
ಇದು ಅಮೆರಿಕಾದಲ್ಲಿ ವಿವಾದವನ್ನು ಸೃಷ್ಟಿಸುತ್ತದೆ. ಜೀವಶಾಸ್ತ್ರದ ಶಿಕ್ಷಕರು ಇದನ್ನು ಓದಲು ನಿರಾಕರಿಸುತ್ತಾರೆ. ಬುದ್ಧಿವಂತ ವಿನ್ಯಾಸ ವಿಜ್ಞಾನಕ್ಕಿಂತ ಧಾರ್ಮಿಕ ಎಂದು ಪ್ರತಿಭಟಿಸುತ್ತಾರೆ. ಕೊನೆಗೆ ಇದು ನ್ಯಾಯಾಲಯದ ಮೆಟ್ಟಿಲೇರುತ್ತದೆ. ಕೆಲವು ಆತಂತದ ದಿನಗಳ ಬಳಿಕ ನ್ಯಾಯಾಲಯದ ಆದೇಶ ವಿಕಾಸವಾದದ ಪರವಾಗಿ ಹೊರಬರುತ್ತದೆ.
ಲೇಖಕರು ಇದು ಕೇವಲ ಅಮೆರಿಕದ ಸಮಸ್ಯೆಯಲ್ಲ ಪ್ರಪಂಚದ ಬಹುತೇಕ ದೇಶಗಳಲ್ಲಿ ವಿಕಾಸವಾದದ ಬಗ್ಗೆ ಇಂತಹ ವಿರೋಧಾಭಿಪ್ರಾಯ ಇದೆ ಎಂದು ತಿಳಿಸುತ್ತಾರೆ. ಭಾರತದಲ್ಲು ಇಂತಹ ಅಭಿಪ್ರಾಯ ಇಲ್ಲದಿಲ್ಲ. ೨೦೧೮ ಜನವರಿಯಲ್ಲಿ ಕೇಂದ್ರದ ಮಂತ್ರಿಯೊಬ್ಬರು ವಿಕಾಸವಾದ ಸುಳ್ಳು ಐನ್ ಸ್ಟೈನ್ ಸಹ ಇದನ್ನು ನಂಬುತ್ತಿರಲಿಲ್ಲ ಎಂಬ ಹೇಳಿಕೆ ನೀಡಿ ವಿವಾದವನ್ನು ಹುಟ್ಟುಹಾಕಿದರು. ೨೦೧೮ ಆಗಸ್ಟ್ ನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಆಫ್ ಪಂಜಾಬ್ ಬಟಿಂಡಾ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇಕಡಾ ೬೮.೫ ರಷ್ಟು ಜನ ವಿಕಾಸವಾದವನ್ನು ನಂಬುತ್ತಾರೆ. ಇದು ೨೦೦೬ರಲ್ಲಿ ಅಮೆರಿಕದಲ್ಲಿ ನಡೆಸಿದ ಸಮೀಕ್ಷೆಗಿಂತ ಉತ್ತಮ. ಆ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿ ವಿಕಾಸವಾದವನ್ನು ನಂಬುತ್ತಿದ್ದದ್ದು ಶೇಕಡ ೪೦ರಷ್ಟು ಮಾತ್ರ.
ಪುಸ್ತಕ ಸರಳವಾಗಿ ಓದಿಸಿಕೊಂಡು ಹೋಗುತ್ತದೆ. ಪೇಲಿಯಂಟಾಲಜಿಯಿಂದ ಹಿಡಿದು ಜೆನೆಟಿಕ್ಸ್ ವರೆಗೂ ವಿಕಾಸವಾದ ದ ಬಗ್ಗೆ ಹಲವಾರು ಉದಾಹರಣೆಗಳಿವೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ