ಸುಮಾರು ಒಂದೂವರೆ ಶತಮಾನದ ಹಿಂದೆ ಇನ್ನು ವಿಶ್ವದ
ಬಹುತೇಕ ಜನರು ಮೇಣದ ಬತ್ತಿಯ ಅಥವಾ ಎಣ್ಣೆ ದೀಪದ ಮೇಲೆ ಅವಲಂಬಿತಾರಗಿದ್ದ ಸಮಯದಲ್ಲಿ ಆಲ್ಟರ್ನೇಟಿಂಗ್
ಕರೆಂಟ್ (ಪರ್ಯಾಯ ವಿದ್ಯುತ್ ಪ್ರವಾಹ)ಅನ್ನು ಕಂಡುಹಿಡಿಯಲಾಯಿತು.
ಇದರಿಂದಾಗಿ ಮಾನವನ ಇತಿಹಾಸದಲ್ಲಿಯೆ ದೊಡ್ಡ ಕ್ರಾಂತಿಯಾಯಿತು ಎನ್ನಬಹುದು. ಈಗಲು ಭೂಮಿಯ ಎಲ್ಲ ಮನೆಗಳಿಗೆ, ಕಛೇರಿಗಳಿಗೆ ಮತ್ತು ಕೈಗಾರಿಕೆಗಳಿಗೆ ಸರಬರಾಜಾಗುವ ವಿದ್ಯುತ್ ಎಂದರೆ ಆಲ್ಟರ್ನೇಟಿಂಗ್ ಕರೆಂಟ್ ಅಥವಾ ಎ ಸಿ.
ಇದರಿಂದಾಗಿ ಮಾನವನ ಇತಿಹಾಸದಲ್ಲಿಯೆ ದೊಡ್ಡ ಕ್ರಾಂತಿಯಾಯಿತು ಎನ್ನಬಹುದು. ಈಗಲು ಭೂಮಿಯ ಎಲ್ಲ ಮನೆಗಳಿಗೆ, ಕಛೇರಿಗಳಿಗೆ ಮತ್ತು ಕೈಗಾರಿಕೆಗಳಿಗೆ ಸರಬರಾಜಾಗುವ ವಿದ್ಯುತ್ ಎಂದರೆ ಆಲ್ಟರ್ನೇಟಿಂಗ್ ಕರೆಂಟ್ ಅಥವಾ ಎ ಸಿ.

ಟೆಸ್ಲಾ ಮೊದಲಿಗೆ ಎಡಿಸನ್ ಬಳಿ ಕೆಲಸ ಮಾಡುತ್ತಿದ್ದ, ಎಡಿಸನ್ ಡಿ ಸಿ ಮೋಟಾರ್
ಮತ್ತು ಜನರೇಟರ್ ಸಮಸ್ಯೆಯನ್ನು ಟೆಸ್ಲಾ ಸರಿಪಡಿಸಿದ, ಕೆಲಸ ಮಾಡಿದಕ್ಕಾಗಿ ದುಡ್ಡು
ಕೇಳಿದಾಗ ಎಡಿಸನ್ “ಟೆಸ್ಲಾ ನಿನಗೆ ಅಮೆರಿಕನ್ ಜೋಕೆ ಅರ್ಥ ಆಗುವುದಿಲ್ಲ” ಎಂದು ಹೇಳಿದ. ಇದರಿಂದ ಟೆಸ್ಲಾ ಆ ಕೆಲಸದಿಂದ
ಹೊರಗೆ ಬಿದ್ದ. ಯಾರ ಬಳಿ ಅತ್ತಿ ಹೆಚ್ಹು
ದುಡ್ಡು ಇದೆಯೋ ಅವನೆ ಸಾಧಕನೆಂದು ಎಡಿಸನ್ ನಂಬಿದ್ದ, ಅವನು ಎಂದಿಗೂ ವಿಜ್ಞಾನಿ ಅಥವಾ ಗಣಿತಜ್ಞನಂತೆ ಇರಲಿಲ್ಲ
ಬೇರೆ ಬುದ್ದಿ ಜೀವಿಗಳು ಕೊಡುತ್ತಿದ ವಿಚಾರವನ್ನು ಸಂಗ್ರಹಿಸಿ ಅದರ ಪೇಟೆಂಟ್-ಗಳನ್ನು ಅವನ
ಹೆಸರಿಗೆ ತೆಗೆದುಕೊಳ್ಳುತ್ತಿದ್ದನಷ್ಟೆ.

ಸುಮಾರು ನೂರು ವರ್ಷಗಳ ಹಿಂದೆಯೇ ಟೆಸ್ಲಾ ವಿಜ್ಞಾನ
ಕ್ಷೇತ್ರದಲ್ಲಿ ಕಲ್ಪನೆಯನ್ನು ಮೀರಿದ ಸಾಧನೆಗಳನ್ನು ಮಾಡಿದಾನೆ. ಪ್ರತಿ ಕ್ಷೇತ್ರದಲ್ಲೂ ಇಂತಹ
ಕೆಲವರು ಎಲೆಮರೆ ಕಾಯಿಗಳು ಇರುತ್ತವೆ. ಇನ್ನು ಎಷ್ಟೋ ವಿಜ್ಞಾನದ ಪರಿಕಲ್ಪನೆಗಳು ಅಮೇರಿಕಾ
ಸರ್ಕಾರದ ಹತ್ತಿರ ಉಳಿದಿವೆ. ತನ್ನ ಇಡಿ ಜೀವಮಾನವನ್ನು ಬರಿ ವಿಜ್ಞಾನಕ್ಕಾಗಿ ಮೀಸಲಿಟ್ಟಿದ್ದ ಟೆಸ್ಲಾ ನ್ಯೂಯಾರ್ಕ್ ಹೋಟೆಲ್
ನಲ್ಲಿ ಏಕಾಂಗಿಯಾಗಿ ಜನವರಿ 7 1943 ರಂದು ಮರಣ
ಹೊಂದುತ್ತಾನೆ.
ಟೆಸ್ಲಾ ಮಾಡಿರುವ ಬೇರೆ ವಿವಿಧ ಸಾಧನೆಗಳು:
1.
ಎಂದಾದರೂ ಮಾರ್ಕೋನಿ ಹೆಸರು ಕೇಳಿದ್ದೀರಾ ? ಹೌದು ರೇಡಿಯೋ ತಂತ್ರಜ್ಞಾನವನ್ನು ಕಂಡು ಹಿಡಿದ
ವ್ಯಕ್ತಿ ಇದು ಆತನಿಗೆ ನೊಬೆಲ್ ಪ್ರಶಸ್ತಿ ಕೂಡ ತಂದು ಕೊಟ್ಟಿತು, ಆದರೆ ಇದಕ್ಕು ಮುನ್ನ ಟೆಸ್ಲಾ ಮೊದಲ ಬಾರಿ ಅದನ್ನು
ಪ್ರಯೋಗಿಸಿದ್ದು.
2.
1935 ರಲ್ಲಿ ಮೊದಲಿಗೆ ರೇಡಾರ್-ನನ್ನು ರಾಬರ್ಟ್ ವ್ಯಾಟ್ಸನ್, (ವ್ಯಾಟ್ ಎಂದೇ ಪ್ರಖ್ಯಾತಿ) ಕಂಡುಹಿಡಿದ, ಆದರೆ 1917ರಲ್ಲಿ ಟೆಸ್ಲಾ ಈ ವಿಷಯವನ್ನು ಕಂಡು ಹಿಡಿದಿದ್ದ.
3.
ಮೊದಲು ನಯಾಗರ ಫಾಲ್ಸ್ ನಲ್ಲಿ ಹೈಡ್ರೋ ಎಲೆಕ್ಟ್ರಿಕ್
ಪ್ಲಾಂಟ್ ಮಾಡಿದ್ದು ಟೆಸ್ಲಾ, ಇಡಿ ವಿಶ್ವಕ್ಕೆ ಈ
ತರದ ಒಂದು ಶಕ್ತಿ ಉತ್ಪಾದಿಸಬಹುದು ಎಂದು ತೋರಿಸಿಕೊಟ್ಟ
4.
ಇಂದಿನ ವಯರ್ಲೆಸ್
ಕಮ್ಯುನಿಕೇಷನ್ ಮೊದಲು ಆರಂಭಿಸಿದು ಟೆಸ್ಲಾ
5.
ಟೆಸ್ಲಾ ಒಟ್ಟು ಎಂಟು ಭಾಷೆಗಳನ್ನು ಮಾತನಾಡುತ್ತಿದ್ದ
ಸರ್ಬಿಯನ್, ಇಂಗ್ಲಿಷ್, ಝೆಕ್, ಜರ್ಮನ್, ಫ್ರೆಂಚ್, ಹಂಗೇರಿಯನ್, ಇಟಾಲಿಯನ್ ಮತ್ತು ಲ್ಯಾಟಿನ್
6.
ಇಂದಿನ ಆಧುನಿಕ
ಎಲೆಕ್ಟ್ರಿಕ್ ಮೋಟಾರ್ ಕೂಡ ಟೆಸ್ಲಾ ಕೊಡುಗೆ ನೀಡಿದ್ದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ