ನ್ಯೂ ಹೊರೈಜನ್ ಗಗನ ನೌಕೆ.
Image Credit:
NASA
|
ಯುಎಸ್‍ಪಿಎಸ್‍ನ
ಅಂಚೆಚೀಟಿ
|
ಪ್ಲೂಟೊವನ್ನು 1930ರಲ್ಲಿ ಕ್ಲೈಡ್ ಟಾಮ್ ಬಾಗ್ ಎಂಬ ವಿಜ್ಞಾನಿ
ಗುರುತಿಸಿದ. ಇದಾದ ನಂತರ ಹಲವರಿಗೆ
ಈ ಗ್ರಹವನ್ನು
ಸಂಶೋಧಿಸಲು ಆಸಕ್ತಿಯಿತ್ತು. 1980 ದಶಕದಲ್ಲಿ
ವೋಯೇಜರ್1 ಶನಿಗ್ರಹ
ದ ಬಳಿ ತಲುಪಿದಾಗ, ಅಲ್ಲಿಂದ
ಕವಣೆ ಹೊಡೆತದ (sling
shot) ಮೂಲಕ ವೋಯೇಜರ್1ನ್ನು ಪ್ಲೂಟೊದೆಡೆಗೆ ಕಳುಹಿಸಬೇಕೆಂಬ
ಆಸೆ ಕೆಲವು ವಿಜ್ಞಾನಿಗಳಲ್ಲಿ ಇತ್ತು. ಆದರೆ ಅಂದು ಪ್ಲೂಟೊಗಿಂತ
ಶನಿಗ್ರಹದ ಉಪಗ್ರಹವಾದ ಟೈಟಾನ್‍ನನ್ನು
ಅನ್ವೇಷಿಸುವುದು ಮುಖ್ಯವಾಗಿತ್ತು. ಹಾಗಾಗಿ ವಿಜ್ಞಾನಿಗಳು ಈ ಆಸೆಯನ್ನು ಕೈ ಬಿಟ್ಟರು. ಮುಂದೆ ವೋಯೇಜರ್2 ಸಹ ಪ್ಲೂಟೊ ಬಳಿ ಹಾದು ಹೋಗಲಿಲ್ಲ!!!
1990ರಲ್ಲಿ ನಾಸಾದ ಇಂಜಿನಿಯರ್‍ಗಳು ಕೆಲವು ವಿಜ್ಞಾನಿಗಳ
ಒತ್ತಾಯದ ಮೇಲೆ ಪ್ಲೂಟೊಗೆ
ಕಳುಹಿಸುವ ನೌಕೆಯ ಬಗ್ಗೆ ಚಿಂತಿಸತೊಡಗಿದರು. ಪ್ಲೂಟೊದ
ವಾತಾವರಣ ಚಳಿಗಾಲದಲ್ಲಿ ಹಿಮಗಟ್ಟಿ
ನೆಲಮಟ್ಚವಾಗುವುದರಿಂದ ಇದಕ್ಕೆ ಮುನ್ನವಾಗಿ
ನೌಕೆಯನ್ನು ಕಳುಹಿಸುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ನೌಕೆಯ ತೂಕ ಕೇವಲ 40 ಕೆಜಿಯಷ್ಟು ಇರಬೇಕಾಗಿತ್ತು. ಆದರೆ ಅಷ್ಟು ಚಿಕ್ಕ ಉಪಕರಣಗಳನ್ನು
ಸಿದ್ಧ ಪಡಿಸಲು ಆಗಿನ್ನು ಸಾಧ್ಯವಿರಲಿಲ್ಲ
ಅದಕ್ಕಾಗಿ ಈ ಯೋಜನೆಯನ್ನು
ಕೈಬಿಡಲಾಯಿತು. ಮುಂದೆ ಅನೇಕ ವಿಜ್ಞಾನಿಗಳು
ಪ್ಲೂಟೊಗೆ ಕಳುಹಿಸಬಹುದಾದ ನೌಕೆಯ ಬಗ್ಗೆ ವಿವಿಧ ಯೋಜನೆಗಳನ್ನು ನಾಸಾದ ಮುಂದಿಟ್ಟರು. ಆದರೆ ನಾಸಾದ ಚಿಂತಕರು
ಆ ಯೋಜನೆಗಳಲ್ಲಿ
ಲೋಪಗಳಿದ್ದಿದ್ದರಿಂದ ಅವನ್ನೆಲ್ಲ ನಿರಾಕರಿಸಿದರು. 2001ರಲ್ಲಿ ನಾಸಾ ತನ್ನ ನ್ಯೂ ಫ್ರಾಂಟಿಯರ್ಸ್ ಮಿಶನ್‍ನ
ಮೊದಲ ಯೋಜನೆಯಾಗಿ 'ನ್ಯೂ ಹೊರೈಜನ್'ನನ್ನು ಆಯ್ಕೆ ಮಾಡಿಕೊಂಡಿತು.
ನ್ಯೂ ಹೊರೈಜನ್‍ನ ಗುರಿಗಳು
ಕೆಳಕಂಡಂತೆ ಇತ್ತು
Ø
ಪ್ಲೂಟೊ ಮತ್ತು ಅದರ ಉಪಗ್ರಹಗಳಾದ ಚೇರಾನ್, ನಿಕ್ಸ್ ಮತ್ತು ಹೈಡ್ರಾ ವಾತಾವರಣದ
ಅಧ್ಯಯನ.
Ø
ಪ್ಲೂಟೊ ಮತ್ತು ಚೇರಾನ್‍ನ
ಹೊರಮೈ ಚಿತ್ರಣ
Ø
ಚೇರಾನ್‍ನಲ್ಲಿ
ವಾತಾವರಣದ ಹುಡುಕಾಟ.
Ø
ಪ್ಲೂಟೊ ಮತ್ತು ಚೇರಾನ್‍ನ
ಹೊರಮೈ ತಾಪಮಾನದ
ಚಿತ್ರಣ.
Ø
ಉಂಗುರ ಮತ್ತು ಇತರ ಉಪಗ್ರಹಗಳಿಗಾಗಿ ಹುಡುಕಾಟ.
Ø
ಕ್ಯೂಪರ್
ಪಟ್ಟಿಯ ವಸ್ತುಗಳ
ಅನ್ವೇಷಣೆ.
Ø
ಮತ್ತು ಮುಂತಾದ ಗುರಿಗಳು
ಜನವರಿ 19,
2006ರಂದು ನ್ಯೂ ಹೊರೈಜನ್ ನೌಕೆಯನ್ನು
ಹಾರಿಬಿಡಲಾಯಿತು. ಇದುವರೆಗು
ಹಾರಿಬಿಟ್ಟ ನೌಕೆಗಳೆಲ್ಲ ಅತ್ಯಂತ ವೇಗವಾಗಿ ಹಾರಿಬಿಟ್ಟ
ನೌಕೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ನೇರವಾಗಿ
ಸೋಲಾರ್ ಎಸ್ಕೇಪ್
ಟ್ರಾಜೆಕ್ಟರಿಗೆ ಹಾರಿ ಬಿಡಲಾಯಿತು. ಇದಕ್ಕಾಗಿ ನೌಕೆಯೊಂದು
16.5km/sನಷ್ಟು ವೇಗವಾಗಿ ಚಲಿಸಬೇಕಾಗುತ್ತದೆ.
ಗುರುಮಂಡಲ.
Image Credit: NASA
|
ನ್ಯೂ ಹೊರೈಜನ್ ತನ್ನ ಪಥದಲ್ಲಿ ಚಲಿಸುವಾಗ
ಎದುರಾಗಬಹುದಾದ ಆಕಾಶಕಾಯಗಳ ಚಿತ್ರಗಳನ್ನು
ಸೆರೆಹಿಡಿಯ ಬೇಕೆಂದು ಚಿಂತಿಸಲಾಗಿತ್ತು. ಅದರಂತೆ ಸೆಪ್ಟೆಂಬರ್ 2006ರಲ್ಲಿ ಗುರುಗ್ರಹದ
ಚಿತ್ರವನ್ನು ಸುಮಾರು 291 ದಶಲಕ್ಷ
ಕಿಮೀನಷ್ಟು ದೂರದಿಂದ ಸೆರೆಹಿಡಿಯಿತು. ಮುಂದೆ 2007ರ
ಜನವರಿಯಲ್ಲಿ ಗುರುಗ್ರಹದ ಉಪಗ್ರಹವಾದ
ಕೆಲಿಸ್ಟೊದ ಕೆಳಗೆಂಪು (infrared)
ಚಿತ್ರವನ್ನು ಸರೆಹಿಡಿಯಲಾಯಿತು. ಇದಲ್ಲದೆ
ಗುರುಗ್ರಹಕ್ಕೆ 2.3 ದಶಲಕ್ಷ
ಕಿಮೀನಷ್ಟು ದೂರವಿದ್ದಾಗ ಗುರುಗ್ರಹದ
ಸಹಾಯದಿಂದ ತನ್ನ ವೇಗವನ್ನು 23km/s ಗೆ ಹೆಚ್ಚಸಿಕೊಂಡಿತು.
ಚೇರಾನ್
ಪ್ಲೂಟೊ ಸುತ್ತ ಸಂಪೂರ್ಣವಾಗಿ ಪ್ರದಕ್ಷಿಣೆ
ಹಾಕಿದ್ದು ಗೋಚರಿಸಿತು.
Image Credit:
NASA
|
ಗುರುಮಂಡಲವನ್ನು
ಹಾದ ಬಳಿಕ ನ್ಯೂ ಹೊರೈಜನ್
ಪ್ಲೂಟೊದೆಡೆಗೆ ಬಹುತೇಕ ನಿದ್ರಾವಸ್ಥೆ
ಹೋಗಲಾರಂಭಿಸಿತು. ಮುಂದೆ 2013ರ ಜುಲೈ 1 ರಿಂದ 3 ರವರೆಗು
ತೆಗದ ಚಿತ್ರಗಳಲ್ಲಿ
ಪ್ಲೂಟೊ ಮತ್ತು ಚೇರಾನ್ ಪ್ರತ್ಯೇಕವಾಗಿ
ಕಾಣಿಸಿಕೊಂಡವು. ಜುಲೈ 2014 19ರಿಂದ 24ರವರೆಗು ತೆಗೆದ ಚಿತ್ರಗಳಲ್ಲಿ
ಚೇರಾನ್ ಪ್ಲೂಟೊ ಸುತ್ತ ಸಂಪೂರ್ಣವಾಗಿ ಪ್ರದಕ್ಷಿಣೆ
ಹಾಕಿದ್ದು ಗೋಚರಿಸಿತು. ಇದು 429ರಿಂದ 422 ಮಿಲಿಯನ್
ಕಿ.ಮೀ. ದೂರದಿಂದ ತೆಗೆದ ಚಿತ್ರವಾಗಿತ್ತು. ಡಿಸೆಂಬರ್ 6, 2014ರಲ್ಲಿ ನ್ಯೂ ಹೊರೈಜನ್‍ಗೆ
ಎಚ್ಚರವಾಗುವಂತೆ ನಾಸಾದ ವಿಜ್ಞಾನಿಗಳು
ಸಂದೇಶ ಕಳುಹಿಸಿದರು. ಅದೇ ದಿನ ನ್ಯೂ ಹೊರೈಜನ್ ತಾನು ಎಚ್ಚರವಾಗಿರುವುದಾಗಿ ಬದಲಿ ಸಂದೇಶವನ್ನು
ಭೂಮಿಗೆ ರವಾನಿಸಿತು.
ಪ್ಲೂಟೊದ ಬಣ್ಣದ ಚಿತ್ರ.
Image Credit: NASA
|
ಜುಲೈ 15ರಂದು ಪ್ಲೂಟೊವನ್ನು
ದಾಟಿದ ನ್ಯೂ ಹೊರೈಜನ್ ಈಗ
ಸೂರ್ಯನಿಂದ ಸುಮಾರು 33.32 AUರಷ್ಟು
ದೂರದಲ್ಲಿದೆ ಮತ್ತು ಸ್ಯಾಗಿಟೇರಿಯಸ್
ರಾಶಿಯೆಡೆಗೆ ಚಲಿಸುತ್ತಿದೆ. ನ್ಯೂ ಹೊರೈಜನ್ ಯೋಜನೆಯ
ಆರಂಭದಲ್ಲಿ ಪ್ಲೂಟೊ ನಂತರ ಕ್ಯೂಪರ್ ಪಟ್ಟಿಯ ಕಾಯಗಳನ್ನು ಅನ್ವೇಷಿಸಬೇಕೆಂಬ
ಇರಾದೆಯಿತ್ತು. ಆದರೆ ಈಗ ಅದರ ಪಥದಲ್ಲಿ ಅಂಥ ಯಾವುದೆ ದೊಡ್ಡ ಕಾಯಗಳಲಿಲ್ಲ ಹಾಗಾಗಿ ಇದ್ದ ಕಾಯಗಳಲ್ಲೆ
ಸ್ವಲ್ಪ ದೊಡ್ಡದಾದ
ಒಂದನ್ನು ಆಯ್ಕೆ ಮಾಡಿಕೊಳ್ಳಲಗಿದೆ. ಇದಕ್ಕೆ 2014 MU69 ಎಂಬ ಹೆಸರನ್ನು
ಕೊಡಲಾಗಿದೆ.ಇದರ ವ್ಯಾಸ ಸುಮಾರು 30-45 km
ನಷ್ಟಿದೆ. ಇದನ್ನು ನ್ಯೂ ಹೊರೈಜನ್ ಜನವರಿ 2019ರಲ್ಲಿ
ಎದುರುಗೊಳ್ಳಲಿದೆ.
ನ್ಯೂ ಹೊರೈಜನ್‍ನ
ಒಂದು ಹೆಗ್ಗಳಿಕೆಯೆಂದರೆ
ಇದು ಉಳಿದ ಯಾವುದೆ ಕಾಯಕ್ಕಿಂತ
ವೇಗದಲ್ಲಿ ಹಾರಿಬಿಟ್ಟ ಕಾಯವೆಂದು. ಆದರೆ ಇದು ಎಂದಿಗು ವೋಯೇಜರ್1ನ್ನು ಹಿಂದಿಕ್ಕಲಾಗುವುದಿಲ್ಲ. ಏಕೆಂದರೆ ವೋಯೇಜರ್1 ಶನಿಗ್ರಹದ ಸಹಾಯದಿಂದ
ತನ್ನ ವೇಗವನ್ನು
ಹೆಚ್ಚಿಸಿಕೊಂಡಿತು. ನ್ಯೂ ಹೊರೈಜನ್ ಸಹ ವೋಯೇಜರ್‍ಗಳಂತೆ ಅಂತರಿಕ್ಷದಲ್ಲಿ ನಿರಂತರವಾಗಿ ಸಾಗುತ್ತಲೆ
ಇರುತ್ತದೆ.
ಗುರು ಮತ್ತು ಅಯೋ.
Image Credit: NASA
|
ಪ್ಲೂಟೊದ ವಾತಾವರಣ.
Image Credit: NASA
|
ಚೇರಾನ್ ಮತ್ತು ಇತರ ಉಪಗ್ರಹಗಳು.
Image Credit: NASA
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ