ವಿಷಯಕ್ಕೆ ಹೋಗಿ

ಹಾರುವ ಓತಿ

ಪೂರ್ಣ ಚಂದ್ರ ತೇಜಸ್ವಿಯವರ 'ಕರ್ವಾಲೋ' ಕಾದಂಬರಿಯಲ್ಲಿ ಬರುವ ಹಾರುವ ಓತಿ Reptelia ವರ್ಗಕ್ಕೆ ಸೇರಿದ Draco ಎಂಬ Genusನ ಒಂದು ಪ್ರಭೇಧ. ಜಗತ್ತಿನಲ್ಲಿ ಇದುವರೆವಿಗೂ ಸುಮಾರು ನಲವತ್ತಮೂರು ಪ್ರಭೇಧಗಳ ಹಾರು ಓತಿಯನ್ನು ಗುರುತಿಸಲಾಗಿದೆ. ಈ ಎಲ್ಲಾ ಪ್ರಭೇಧಗಳೂ ಭಾರತದ ಪಶ್ಚಿಮ ಘಟ್ಟದಿಂದ ಹಿಡಿದು ಈಶಾನ್ಯ ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ವಿಯೆಟ್ನಾಮ್, ಕಾಂಬೋಡಿಯಾ, ಚೀನಾದ ದಕ್ಷಿಣ ಭಾಗ, ಮಲೇಶಿಯಾ, ಸಿಂಗಪೂರ್, ಇಂಡೋನೇಷಿಯಾ, ಫಿಲಿಫೈನ್ಸ್ ದೇಶಗಳಲ್ಲಿ ಹರಡಿಕೊಂಡಿದೆ.


ಪಶ್ಚಿಮ ಘಟ್ಟದ ಹೆಚ್ಚಿನ ಎಲ್ಲಾ ಭಾಗ ಮತ್ತು ಪೂರ್ವ ಘಟ್ಟಗಳ ಕೆಲವು ಭಾಗಗಳಲ್ಲಿ ಮಾತ್ರ ಕಾಣುವ ಏಕೈಕ ಪ್ರಭೇಧ Draco dussumieri. ಕರ್ನಾಟಕದಲ್ಲಿ ಸ್ಥಳೀಯವಾಗಿ 'ಹಾರುವ ಓತಿ' (ನಿಜವಾಗಿಯೂ ಅವು ಹಾರುವುದಿಲ್ಲ, ತಮ್ಮ ಪೊರೆಯಂತಹ ತೊಗಲಿನ ಸಹಾಯದಿಂದ ಗಾಳಿಯಲ್ಲಿ ತೇಲುತ್ತವೆ) ಎಂದೇ ಕರೆಸಿಕೊಳ್ಳುವ ಇದು IUCN Red Listನಂತೆ (ಜಾಗತಿಕವಾಗಿ ಜೀವಿ ಪ್ರಭೇಧವೊಂದರ ಸಂರಕ್ಷಣಾ ಸ್ಥಿತಿಯನ್ನು ತಿಳಿಸುವ ಪಟ್ಟಿ) Least Concern ಆಗಿದೆ.

ಗಂಡು ಹಾರು ಓತಿ ತನ್ನ ವಾಸಕ್ಷೇತ್ರ ಕಾಯ್ದುಕೊಳ್ಳುವ ಬಗ್ಗೆ ಆಕ್ರಮಣಕಾರಿಯಾಗಿರುತ್ತದೆ. ಹಲವು ಹೆಣ್ಣುಗಳ ವಾಸಕ್ಷೇತ್ರಗಳನ್ನು ಒಳಗೊಂಡ ಗಂಡು ಓತಿಯ ವಾಸಕ್ಷೇತ್ರ ಹಲವಾರು ಮರಗಳನ್ನು ಒಳಗೊಂಡಿರುತ್ತದೆ. ಗಂಡು ಓತಿಯು ತನ್ನ ಜೀವಿತಾವಧಿಯಲ್ಲಿ ಯಾವುದೇ ಕಾರಣಕ್ಕೂ ನೆಲದ ಮೇಲೆ ಬರುವುದಿಲ್ಲ. ಆದರೆ ಹೆಣ್ಣು ಓತಿ ಮೊಟ್ಟೆಗಳನ್ನಿಡಲು ನೆಲದ ಮೇಲೆ ಬರುತ್ತವೆ. ಹೆಣ್ಣು ಓತಿಗೆ ಇದು ಒಂದು ಅಪಾಯಕಾರಿ ಸನ್ನಿವೇಷ.


ನನಗೊಮ್ಮೆ ಹಾರುವ ಓತಿಯನ್ನು ಸಮೀಪದಿಂದ ಗಮನಿಸುವ ಅವಕಾಶ ದೊರಕಿತ್ತು. ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುತ್ತಾಡುವಾಗ ಒಂದು ಮರದ ಹತ್ತಿರ ಊಟ ಮಾಡಲು ಕುಳಿತಿದ್ದೆ. ಆ ಮರದಲ್ಲೊಂದು ಹಾರು ಓತಿ ಕೀಟಗಳನ್ನು ಹಿಡಿಯುತ್ತಾ ಮೇಲೆ ಹತ್ತುತ್ತಿತ್ತು. ಹೀಗೆಯೆ ತುಂಬಾ ಮೇಲೇರಿದ ನಂತರ ಮತ್ತೊಂದು ಮರದ ಬುಡಕ್ಕೆ ತನ್ನ ರೆಕ್ಕೆಗಳ ಸಹಾಯದಿಂದ ತೇಲುತ್ತಾ ಇಳಿಯಿತು.


ಪಶ್ಚಿಮ ಘಟ್ಟಗಳು ಇಂದು ಛಿದ್ರವಾಗುತ್ತಿವೆ. ಎಂದೂ ನೆಲದ ಮೇಲೆ ಬಾರದ ಓತಿಗಳ ಆವಾಸ ಸ್ಥಾನ ದ್ವೀಪಗಳಂತಾಗುತ್ತಿವೆ. ಅದು ಶಾಶ್ವತವಾಗಿ ಮರೆಯಾಗದಂತೆ ಎಚ್ಚರ ವಹಿಸಬೇಕಾಗಿದೆ.
















ತಾನು ಕುಳಿತ ಮರದಲ್ಲಿ ಸಾಮಾನ್ಯವಾಗಿ ಶತ್ರುಗಳ ಕಣ್ಣಿಗೆ ಬೀಳದಂತೆ ಮರದ ಬಣ್ಣದೊಡನೆ ಲೀನವಾಗುತ್ತಾದರೂ, ಅವುಗಳ ರೆಕ್ಕೆಗಳ ಬಣ್ಣ ರಂಗು ರಂಗಾಗಿರುತ್ತವೆ.













ಗಲ್ಲದ ಕೆಳಗೆ ಹಳದಿ ಚರ್ಮವಿದ್ದು, ಅದನ್ನು ಮೇಲೆ ಕೆಳಗೆ ಮಾಡುವುದರ ಮೂಲಕ ತನ್ನ ಇರುವಿಕೆಯನ್ನು ತಿಳಿಸುತ್ತವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...