ಇದು ಎರಡು ಪಕ್ಷಿಗಳ
ನಡುವಿನ ಜಗಳದ ಕಥೆ. ನಾನುಶಾಲೆಯಲ್ಲಿ ಓದುತ್ತಿರುಬೇಕಾದರೆ corporationನವರು ನಮ್ಮ ಮನೆಯ ಮುಂದೆ Fern Leaf Jacaranda ಅನ್ನೋ ಬ್ರೆಜಿಲ್ ದೇಶ ಮೂಲದ ಒಂದು ಗಿಡ ನೆಟ್ಟಿದ್ರು. ನೀವು ನೋಡಿರಬಹುದು ಆ ಗಿಡನ.
ಚಳಿಗಾಲದಲ್ಲಿ
ನೇರಳೆ ಬಣ್ಣದ ಹೂಗಳನ್ನು ಬಿಟ್ಟು, ನೆಲದ ಮೇಲೆಲ್ಲಾ ಚೆಲ್ಲಿ, ದೂರದಿಂದ ನೋಡಿದರೆ ಹೂವಿನ ಹಾಸಿಗೆ ಹಾಸಿದಂತೆ ತುಂಬಾ ಚೆನ್ನಾಗಿರುತ್ತೆ. ಆಮೇಲೆ ನಾನು ಸುಮಾರು ವರ್ಷಗಳಾದಮೇಲೆ bird watching ಅಂತೆಲ್ಲಾ ಪ್ರಜ್ಞೆ ಬರುವ ಹೊತ್ತಿಗೆ ಆ ಗಿಡ ಮರವಾಗಿ
ಬೆಳೆದಿತ್ತು. ನಾನು ಮೊದಲಿಗೆ bird watching ಶುರು ಮಾಡಿದ್ದು ಅದೇ ಮರದ ಮೇಲಿನ ಪಕ್ಷಿಗಳನ್ನ ನೋಡಿಯೇ! ಆ ಮರ ಸ್ವಲ್ಪ ಮೆದು, ಹಾಗಾಗಿ ಒಂದು White Cheeked Barbet ಆ ಮರದಲ್ಲಿ ಪೊಟರೆ ಕೊರೆಯಲು ಆರಂಭಿಸಿತು. ನಾನಾಗ 10th ಓದುತ್ತಿದ್ದೆ. ಪ್ರತಿದಿನ ಬೆಳಗ್ಗೆ ಬೇಗ ಎದ್ದು ಓದಲಿಕ್ಕೆ
ಕೂರುವಾಗ್ಲೆಲ್ಲಾ ಈ ಪಕ್ಷಿ ಪೊಟರೆ ಕೊರೆಯುತ್ತಿತ್ತು. ಸುಮಾರು ದಿನ ಕೊರೆದ ಮೇಲೆ ಆ ಪಕ್ಷಿ ಒಳಗೆ ಹೋಗಿ
ಬರುವಷ್ಟು ದೊಡ್ಡದಾದ ಪೊಟರೆ ready ಆಯ್ತು. ಆದ್ರೆ ಒಂದು ದಿನ ಒಂದು ಜೋಡಿ Common Myna ಆ Barbet ಕೊರೆದ ಗೂಡು ತನಗೆ ಬೇಕೆಂದು ಜಗಳ ಆರಂಭಿಸಿದೆ! ಎರಡೂ ಮೈನಾಗಳೂ ಒಂದಾದಮೇಲೆ ಒಂದು Barbetನ ಮೇಲೆ ಹಾರಿ ಹಾರಿ ಹೊಡೆಯುತ್ತಿತ್ತು. ಸ್ವಲ್ಪ ಸಮಯದ ನಂತರ ಎಲ್ಲಾ ಪಕ್ಷಿಗಳೂ ಹಾರಿ ಹೋಯ್ತು. ನಾನು ಜಗಳ ಮುಗಿತು ಅಂದ್ಕೊಂಡೆ. ಆದ್ರೆ ಹಾಗಗಿರಲಿಲ್ಲ. ಅವು ಆಹಾರ ಹುಡಿಕಿಕೊಂಡು ಹೊರಗೆ ಹೋಗಿದ್ವು ಅನ್ಸುತ್ತೆ. ಜಗಳ ಸುಮಾರು ದಿನ ಮುಂದುವರೆಯಿತು. ನಾನು ಆವಾಗೆಲ್ಲಾ ಇದನ್ನ ಸರಿಯಾಗಿ ಗಮನಿಸ್ತಾ
ಇರ್ಲಿಲ್ಲ. ಮತ್ತೆ ಸ್ವಲ್ಪ ದಿನಗಳಾದ ಮೇಲೆ ಆ ಗೂಡಿನಲ್ಲಿ ಮೈನಾಗಳು
ತಮ್ಮ ಪುಟ್ಟ ಮರಿಗಳೊಂದಿಗೆ ಆ ಗೂಡಿನಲ್ಲಿತ್ತು!
Barbet ಅಥವಾ ಕುಟುರ ಪಕ್ಷಿ
ಏನಾಯ್ತೋ ಗೊತ್ತಿಲ್ಲ. ಇವೆಲ್ಲಾ ಆಗಿ ಇಷ್ಟು ವರ್ಷ ಆದ್ಮೇಲೆ ಇವಾಗ ಆ ಮರನೂ
ಇಲ್ಲ. ಅವೆಲ್ಲಾ ಎಲ್ಲಿ ಹೋಯ್ತೋ ಗೊತ್ತಿಲ್ಲ.
Fern Leaf Jacaranda ಬ್ರೆಜಿಲ್ ಮೂಲದ ಹೂವಿನ ಗಿಡ |
Very great post. I simply stumbled upon your blog and wanted to say that I have really enjoyed browsing your weblog posts. After all I’ll be subscribing on your feed and I am hoping you write again very soon! I would love to see more from you.
ಪ್ರತ್ಯುತ್ತರಅಳಿಸಿBest regards
stump removal erie pa