ಹೊಂಗೆ
ಅನೇಕ ಕೀಟಗಳನ್ನು ಆಕರ್ಷಿಸುತ್ತದೆ.
|
ನಮ್ಮ
ದೇಶದಲ್ಲಿ ಅದರಲ್ಲು ದಕ್ಷಿಣ
ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ
ಕಾಣಸಿಗುವ ಮರ ಯಾವುದು ಎಂದರೆ
ಅದು ಹೊಂಗೆ ಎಂದೆ ಹೇಳಬಹುದು.
ಈ
ಮರಗಳು ಏಶಿಯಾದ ಉಷ್ಣ ಮತ್ತು
ಸಮಶೀತೋಷ್ಣ ವಲಯದಲ್ಲಿ ಕಂಡು
ಬರುತ್ತದೆ.
ಭಾರತ,
ಚೈನ,
ಮಲೇಶಿಯಾ,
ಇಂಡೋನೇಶಿಯಾ
ದೇಶಗಳು ಈ ಮರದ ಆವಾಸ ಸ್ಥಾನ.
ಈ
ಮರಕ್ಕೆ ಹಿಂದಿಯಲ್ಲಿ ಕರಂಜ್,
ತಮಿಳಿನಲ್ಲಿ
ಪುಂಗೈ,
ತೆಲುಗಿನಲ್ಲಿ
ಕಾನುಗ ಮತ್ತು ಸಂಸ್ಕೃತದಲ್ಲಿ
ನಕ್ತಮಾಲ ಎಂಬ ಹೆಸರಿವೆ.
ವೈಜ್ಞಾನಿಕವಾಗಿ
ಮಿಲ್ಲೆಟಿಯ
ಪಿನ್ನಾಟ (Milletia
pinnata) ಎಂಬ
ಹೆಸರಿದೆ.
ಕಾಯಿ
ಹಸಿರು ಬಣ್ಣದಾಗಿದ್ದು ಗುಂಡಗೆ
ಚಪ್ಪಟ್ಟೆಯಾಗಿರುತ್ತದೆ
|
ಹೊಂಗೆ ಭೂಮಿಯ ಮೇಲೆ ವಿಸ್ತಾರವಾಗಿ
ಹರಡಿದೆ.
|
ಹೊಂಗೆ
ಲೆಗ್ಯೂಮ್ ಜಾತಿಗೆ ಸೇರುತ್ತದೆ.
ಇದು
ಸುಮಾರು ೫೦ ರಿಂದ ೮೦ ಅಡಿಯವರೆಗು
ಎತ್ತರವಾಗಿ ಬೆಳೆಯುತ್ತವೆ.
ಹೊಂಗೆ
ನಿಧಾನವಾಗಿ ಬೆಳೆಯುವುದರಿಂದ
ಸಂಪೂರ್ಣ ಎತ್ತರವಾಗಲು ಅನೇಕ
ವರ್ಷಗಳು ಬೇಕಾಗುತ್ತದೆ.
ಇವುಗಳ
ಕಾಂಡ ಸುಮಾರು ಎರಡರಿಂದ ಮೂರು
ಅಡಿಗಳಷ್ಟು ದಪ್ಪವಿರುತ್ತದೆ.
ತೊಗಟೆ
ನುಣುಪಾಗಿರುತ್ತದೆ.
ಹೊಂಗೆ
ಎಲೆಯುದುರಿಸುವ ಮರ.
ಚಳಿಗಾಲದ
ಕೊನೆಯಲ್ಲಿ ಹಳೆ ಎಲೆಗಳನ್ನು
ಉದುರಿಸಿ ಹೊಸ ಎಲೆಗಳನ್ನು
ತಳೆಯುತ್ತದೆ.
ಚಿಗುರೆಲೆ
ಆರಂಭದಲ್ಲಿ ಕೆಂಪು ಬಣ್ಣದಾಗಿದ್ದು
ಕ್ರಮೇಣ ಹೊಂಬಣ್ಣವಾಗಿ ನಂತರ
ತಿಳಿ ಹಸಿರು ನಂತರ ಕಡು ಹಸಿರು
ಬಣ್ಣಕ್ಕೆ ತಿರುಗುತ್ತದೆ.
ಎಲೆಗಳು
ಹೊಂಬಣ್ಣದಲ್ಲಿದ್ದಾಗ ಹೊಂಗೆ
ಮರ ನೋಡಲು ರಮಣೀಯವಾಗಿರುತ್ತದೆ.
ಇವುಗಳ
ಎಲೆಗಳು ಸಂಕೀರ್ಣವಾಗಿದ್ದು,
ಇಂಪಾರಿಪಿನ್ನೇಟ್
ರೀತಿಯಲ್ಲಿ ಬೆಳೆದಿರುತ್ತದೆ
ಅಥವಾ ವಿನ್ಯಾಸ ಹೊಂದಿರುತ್ತದೆ.
ಎಲೆಗಳ
ಆಕಾರ ದೀರ್ಘವೃತ್ತಾಕಾರವಾಗಿರುತ್ತದೆ.
ಹೂಗಳು
ಚಿಕ್ಕದಾಗಿದ್ದು ಬಿಳಿ ಅಥವಾ
ತಿಳಿ ನೇರಳೆ ಬಣ್ಣದಿಂದ ಕೂಡಿರುತ್ತದೆ.
|
ಹೊಂಗೆ
ವರ್ಷದ ಎಲ್ಲ ಋತುವಿನಲ್ಲು ಹೂ
ತಳೆಯುತ್ತದೆ.
ಹೂಗಳು
ಚಿಕ್ಕದಾಗಿದ್ದು ಬಿಳಿ ಅಥವಾ
ತಿಳಿ ನೇರಳೆ ಬಣ್ಣದಿಂದ ಕೂಡಿರುತ್ತದೆ.
ಹೂಗಳ
ಗಮಲು ಗಾಢವಾಗಿರುತ್ತದೆ.
ಹೂ
ಅರಳುವ ಕಾಲದಲ್ಲಿ ಮರದ ಬುಡದಲ್ಲಿ
ನೆಲದ ಮೇಲೆ ಅದರ ಹಾಸನ್ನು ನೋಡಬಹುದು.
ಹೂಗಳು
ಅರಳಿದ ಕೆಲವು ದಿನಗಳಲ್ಲಿ ಕಾಯಿ
ಮೂಡುತ್ತದೆ.
ಕಾಯಿ
ಹಸಿರು ಬಣ್ಣದಾಗಿದ್ದು ಗುಂಡಗೆ
ಚಪ್ಪಟ್ಟೆಯಾಗಿರುತ್ತದೆ.
ಕಾಯಿಯ
ಹೊರ ಸಿಪ್ಪೆ ಗಟ್ಟಿಯಾಗಿದ್ದು
ಕಾಯಿ ಒಣಗಿದ ನಂತರವಷ್ಟೇ ಬಿಡಿಸಲು
ಸಾಧ್ಯವಾಗುತ್ತದೆ.
ಇದರ
ಬೀಜದ ಬಣ್ಣ ಕೆಂಗಂದು.
ಹೊಂಗೆ
ಎಂಥ ಪ್ರತಿಕೂಲ ಪರಿಸರದಲ್ಲಿಯು
ಬೆಳೆಯಬಲ್ಲದು ಆದ್ದರಿಂದ ಇದು
ಭೂಮಿಯ ಮೇಲೆ ವಿಸ್ತಾರವಾಗಿ
ಹರಡಿದೆ.
ಹೂ
ಅರಳುವ ಕಾಲದಲ್ಲಿ ಮರದ ಬುಡದಲ್ಲಿ
ನೆಲದ ಮೇಲೆ ಅದರ ಹಾಸನ್ನು ನೋಡಬಹುದು.
|
ಬೀಜದ
ಬಣ್ಣ ಕೆಂಗಂದು
|
ಹೊಂಗೆ
ಅನೇಕ ಕೀಟಗಳನ್ನು ಆಕರ್ಷಿಸುತ್ತದೆ.
ಇದರ
ಹೂಗಳ ಮಕರಂದವನ್ನು ಹೀರಲು ಜೇನು
ಹುಳುಗಳು ಸೇರಿದಂತೆ ವಿವಿಧ ಕೀಟಗಳು
ಬರುತ್ತವೆ.
ಹೂ
ಅರಳಿದಾಗ ಅದರ ಬಳಿ ಹೋದರೆ ನೂರಾರು
ಕೀಟಗಳು ಮರದ ಹತ್ತಿರ ಹಾರುತ್ತಿರುವದನ್ನು
ನೋಡಬಹುದು.
ಅಲ್ಲದೆ
ಇದರ ಎಳೆ ಎಲೆಗಳು ಕಂಬಳಿ ಹುಳುಗಳಿಗೆ
(caterpillar)
ಆಹಾರವಾಗುತ್ತದೆ.
ಈ
ಕಾರಣಗಳಿಂದ ಹೊಂಗೆ ಪ್ರಕೃತಿಗೆ
ತುಂಬ ಉಪಕಾರಿಯಾಗಿದೆ.
ಮನುಷ್ಯನಿಗೂ
ಸಹ ಹೊಂಗೆ ತುಂಬಾ ಉಪಯುಕ್ತವಾಗಿದೆ.
ಇದರ
ದಟ್ಟವಾದ ಎಲೆಗಳಿಂದಾಗಿ ಇದರ
ನೆರಳು ತಂಪಾಗಿರುತ್ತದೆ ಹಾಗಾಗಿ
ಇದನ್ನು ರಸ್ತೆಬದಿಯಲ್ಲಿ
ನೆಡುಲಾಗುತ್ತದೆ.
ಇದರ
ಬೀಜದಿಂದ ತೆಗೆದ ಎಣ್ಣೆಯನ್ನು
ತುಂಬ ಹಿಂದಿನಿಂದಲು ದೀಪಕ್ಕಾಗಿ
ಉಪಯೋಗಿಸುತ್ತಿದ್ದರು.
ಇಂದು
ಈ ಎಣ್ಣೆಯನ್ನು ಬಯೊಡೀಸೆಲ್ಗಾಗಿ
ಬಳಸಬಹುದಾಗಿದೆ.
ಅಷ್ಟೆ
ಅಲ್ಲದೆ ಇದರ ಬೇರು ಪರಿಸರದಲ್ಲಿನ
ಸಾರಜನಕವನ್ನು ಪರಿವರ್ತಿಸುವುದರಿಂದ
ಮಣ್ಣಿನ ಗುಣಮಟ್ಟ ಹೆಚ್ಚುತ್ತದೆ.
ಎಲೆಗಳು
ಸಂಕೀರ್ಣವಾಗಿದ್ದು,
ಇಂಪಾರಿಪಿನ್ನೇಟ್
ರೀತಿಯಲ್ಲಿ ಬೆಳೆದಿರುತ್ತದೆ
|
ತೊಗಟೆ
ನುಣುಪಾಗಿರುತ್ತದೆ.
|
ಆರಂಭದಲ್ಲಿ
ಎಲೆಗಳ ಬಣ್ಣ ಕೆಂಪು
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ