ವಿಷಯಕ್ಕೆ ಹೋಗಿ

ನೇರಳೆ


ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ. ಮುಂದೆ ಆ ಮೊಸಳೆ ಕೋತಿಯನ್ನು ಸಂಚು ಹೂಡಿ ತನ್ನ ಮನೆಗೆ ಕರೆದುಕೊಂಡು ಹೋಗಿ ತಿನ್ನಬೇಕೆಂದುಕೊಂಡಾಗ ಕೋತಿ ಅದರಿಂದ ಉಪಾಯವಾಗಿ ತಪ್ಪಿಸಿಕೊಳ್ಳುತ್ತದೆ. ನೇರಳೆ ತುಂಬಾ ಹಿಂದಿನಿಂದಲು ನಮ್ಮ ದೇಶದಲ್ಲಿ ಜನಪ್ರಿಯವಾದ ಹಣ್ಣು.
ನೇರಳೆ ಹೂವು

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ. ಮುಂದೆ ಆ ಮೊಸಳೆ ಕೋತಿಯನ್ನು ಸಂಚು ಹೂಡಿ ತನ್ನ ಮನೆಗೆ ಕರೆದುಕೊಂಡು ಹೋಗಿ ತಿನ್ನಬೇಕೆಂದುಕೊಂಡಾಗ ಕೋತಿ ಅದರಿಂದ ಉಪಾಯವಾಗಿ ತಪ್ಪಿಸಿಕೊಳ್ಳುತ್ತದೆ. ನೇರಳೆ ತುಂಬಾ ಹಿಂದಿನಿಂದಲು ನಮ್ಮ ದೇಶದಲ್ಲಿ ಜನಪ್ರಿಯವಾದ ಹಣ್ಣು.

ನೇರಳೆ ಮೂಲತಃ ಭಾರತ ಮತ್ತು ಆಗ್ನೇಷ್ಯದಲ್ಲಿ ಬೆಳೆಯುವ ಮರ. ಇದಕ್ಕೆ ಸಂಸ್ಕೃತದಲ್ಲಿ ಜಂಬು ಫಲ, ಹಿಂದಿಯಲ್ಲಿ ಜಾಮುನ್, ತಮಿಳಿನಲ್ಲಿ ನಾವಳ್ ಪಳಮ್, ಮಲಯಾಳದಲ್ಲಿ ನ್ಜಾವಳ್ ಪಳಮ್ ಮತ್ತು ತೆಲುಗಿನಲ್ಲಿ ನೇರೆಡು ಪಂಡು ಎಂಬ ಹೆಸರಿದೆ. ಇಂಗ್ಲಿಷಿನಲ್ಲಿ ಜಾಮುನ್ ಎಂದು ಮತ್ತು ಕೆಲವೊಮ್ಮೆ ಜಾವ ಪ್ಲಮ್, ಬ್ಲ್ಯಾಕ್ ಪ್ಲಮ್ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ಸಿಝಿಜಿಯಮ್ ಕ್ಯುಮಿನಿ (syzygium cumini).

ನೇರಳೆ ನಿಧಾನವಾಗಿ ಬೆಳೆಯುವ ಮರ. ಇದು ಸುಮಾರು ೧೦೦ ಅಡಿಯವರೆಗು (೩೦ ಮೀಟರ್) ಎತ್ತರವಾಗಿ ಬೆಳೆಯುತ್ತದೆ. ಇದು ಮಧ್ಯಮ ಗಾತ್ರದ ಮರವೆಂದು ಹೇಳಬಹುದು. ಇದರ ಕಾಂಡ ಕಡು ಬೂದು ಬಣ್ಣಕ್ಕಿದ್ದು ತೊಗಟೆ ಒರಟಾಗಿರುತ್ತದೆ. ಇದರ ಎಲೆಗಳು ಆರಂಭದಲ್ಲಿ ಗುಲಾಬಿ ಬಣ್ಣದಲ್ಲಿದ್ದು ಬೆಳೆದಂತೆ ಹಸಿರು ಬಣ್ಣಕ್ಕೆ ತಿರುಗುತ್ತದೆ. ಉದ್ದವಾಗಿರುವ ಎಲೆಗಳ ಮಧ್ಯ್ಯನಾಳ ಹಳದಿ ಬಣ್ಣಕ್ಕಿರುತ್ತದೆ.

ಕಾಂಡ

ನೇರಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಹೂ ಬಿಡುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ಹಣ್ಣುಗಳು ಸಿಗುತ್ತವೆ. ಹೂವುಗಳು ಚಿಕ್ಕದಾಗಿದ್ದು ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಪರಿಮಳಯುಕ್ತವಾಗಿರುತ್ತದೆ. ನೇರಳೆ ಕಾಯಿಯಾಗಿರುವಾಗ ಹಸಿರು ಬಣ್ಣಕ್ಕೆ ಇದ್ದು ಹಣ್ಣಾಗುತ್ತ ಕೆಂಪಗಾಗಿ ಪೂರ ಹಣ್ಣಾದ ನಂತರ ಕಡು ಕನ್ನೀಲಿ ಬಣ್ಣಕ್ಕೆ ತಿರುಗುತ್ತದೆ. ಈ ಮೊದಲೇ ತಿಳಿಸಿದಂತೆ ನೇರಳೆ ನಮ್ಮ ದೇಶದಲ್ಲಿ ಜನಪ್ರಿಯ ಹಣ್ಣು. ಇದಕ್ಕೆ ಕಾರಣ ಇದರ ರುಚಿ ಇರಬಹುದು. ಇದರ ರುಚಿ ಸಿಹಿ, ಹುಳಿ ಮತ್ತು ಒಗರಿನಿಂದ ಮಿಶ್ರಿತವಾಗಿರುತ್ತದೆ. ಬೀಜ ಉದ್ದಕ್ಕಿದ್ದು ಮೃದುವಾಗಿರುತ್ತದೆ.
ಹಣ್ಣು
ನೇರಳೆ ಹಣ್ಣು ಹಲವು ಹಕ್ಕಿ ಮತ್ತು ಸಸ್ತನಿಗಳಿಗೆ ಮುಖ್ಯವಾದ ಆಹಾರ. ಜೇನು ಮುಂತಾದ ಕೀಟಗಳಿಗೆ ಇದರ ಹೂವಿನ ಮಕರಂದ ಮುಖ್ಯವಾದ ಆಹಾರ. ಈ ಮರದಿಂದ ಮನುಷ್ಯನಿಗೆ ಹಲವಾರು ಪ್ರಯೋಜನಗಳುಂಟು. ಇದರ ಎಲೆಗಳನ್ನು ಮೇವಿಗಾಗಿ ಬಳಸಬಹುದು. ಇದನ್ನು ಅಲಂಕಾರಿಕವಾಗಿ ಮತ್ತು ನೆರಳಿಗಾಗಿ ಬೆಳೆಸುತ್ತಾರೆ. ಇದರ ಮರ ಜಲ ನಿರೋಧಕವಾಗಿರುವುದರಿಂದ ರೈಲ್ವೇ ಸ್ಲೀಪರುಗಳಲ್ಲಿ ಬಳಸುತ್ತಾರೆ. ಇದರ ಹಣ್ಣು ಮತ್ತು ಬೀಜ ಸಕ್ಕರೆ ಕಾಯಿಲೆಗೆ ಒಳ್ಳೆಯದು ಎಂಬ ನಂಬಿಕೆಯಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...