ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸಹವಿಕಾಸದ ಅದ್ಭುತ: ಜೋಶುವಾ ಮರ ಮತ್ತು ಯುಕ್ಕಾ ಪತಂಗ

 ಪ್ರಕೃತಿಯಲ್ಲಿ ಕೆಲವು ಕಥೆಗಳು ನಮ್ಮ ಕಣ್ಣೆದುರೇ ನಡೆಯುತ್ತಿರುತ್ತವೆ. ಆದರೆ ಅವುಗಳನ್ನು ನೋಡುವ ದೃಷ್ಟಿ ಮಾತ್ರ ಎಲ್ಲರಿಗೂ ಇರುವುದಿಲ್ಲ. ನಾವು ಒಂದು ಮರದ ನೆರಳಲ್ಲಿ ಸಾವಿರಾರು ಬಾರಿ ನಿಂತಿರಬಹುದು. ಅದರ ಹೂಗಳನ್ನು ನೋಡಿರಬಹುದು. ಅದರ ಎಲೆಗಳನ್ನು ಮುಟ್ಟಿರಬಹುದು. ಆದರೆ ಅದರ ಯಶಸ್ವಿ ಬದುಕಿಗೆ ಏನು ಕಾರಣ ಎಂಬುದನ್ನು ನಾವು ಯೋಚಿಸಿರುವುದೇ ಇಲ್ಲ. ಹೀಗೆಯೇ ಕೆಲವೊಮ್ಮೆ ಒಂದು ಕಾಡಿನ ಭವಿಷ್ಯವು ಒಂದು ಮರದ ಮೇಲೆ ನಿಂತಿರುತ್ತದೆ. ಇನ್ನೂ ಕೆಲವೊಮ್ಮೆ ಒಂದು ಮರದ ಭವಿಷ್ಯವು ಯಾರ ಕಣ್ಣಿಗೂ ಬೀಳದಷ್ಟು ಪುಟ್ಟ ಜೀವಿಯ ಮೇಲೆ ನಿಂತಿರುತ್ತದೆ. ಇದು ಅಂತಹ ಒಂದು ಕಥೆ. ಅಮೆರಿಕದ ಪಶ್ಚಿಮ ಭಾಗದಲ್ಲಿ  ಮೊಜಾವೆ ಮರುಭೂಮಿಯಿದೆ.  ಮೈಲುಗಟ್ಟಲೆ ಹರಡಿರುವ ಮರಳು, ಕಲ್ಲುಗಳು, ಉರಿಯುವ ಬಿಸಿಲು, ಮಳೆಯ ಹನಿ ಬೀಳುವುದೇ ಅಪರೂಪ. ಆದರೂ ಆ ನಿರ್ಜನ ನೆಲದ ಮಧ್ಯೆ ಕೈಗಳನ್ನು ಆಕಾಶದತ್ತ ಚಾಚಿಕೊಂಡಿರುವಂತೆ ನಿಂತಿರುವ ಒಂದು ವಿಚಿತ್ರ ಮರ ಎಲ್ಲರ ಗಮನ ಸೆಳೆಯುತ್ತದೆ. ಅದರ ಹೆಸರು ಜೋಶುವಾ ಮರ . ಮೊಜಾವೆ ಮರುಭೂಮಿಯಲ್ಲಿನ  ಜೋಶುವಾ ಮರ ಚಿತ್ರ: Wikipedia CC BY-SA 3.0 ಮೊದಲ ಬಾರಿ ಅದನ್ನು ನೋಡಿದವರು ಒಂದೇ ಪ್ರಶ್ನೆ ಕೇಳುತ್ತಾರೆ.  "ಇದು ನಿಜವಾಗಿಯೂ ಭೂಮಿಯ ಮೇಲಿನ ಮರವೇ?"  ಯಾಕೆಂದರೆ ಅದರ ರೂಪವೇ ಹಾಗಿರುತ್ತದೆ. ತಿರುಚಿದ ಕಾಂಡ, ಎಲ್ಲ ದಿಕ್ಕಿಗೂ ಚಾಚಿದ ಕೊಂಬೆಗಳು, ಮುಳ್ಳಿನಂತಿರುವ ಎಲೆಗಳು, ಮತ್ತು ಅವುಗಳ ತ...

ಪೆಪ್ಪರ್ಡ್ ಪತಂಗ: ನೈಸರ್ಗಿಕ ಆಯ್ಕೆಯ ಜೀವಂತ ಸಾಕ್ಷಿ

 ಒಂದು ಪುಟ್ಟ ಪತಂಗ! ಅದು ಹುಲಿಯಷ್ಟು ಬಲಿಷ್ಠವಲ್ಲ. ಚೀತಾದಷ್ಟು ವೇಗವೂ ಇಲ್ಲ. ವಿಷದಹಾವಿನಂತೆ ತನ್ನನ್ನು ರಕ್ಷಿಸಿಕೊಳ್ಳುವುದೂ ಗೊತ್ತಿಲ್ಲ. ಅದರ ಬಳಿ ಇದ್ದದ್ದು ಕೇವಲ ಎರಡು ರೆಕ್ಕೆಗಳು ಮತ್ತು ಮರದ ತೊಗಟೆ ಮೇಲೆ ಕುಳಿತಾಗ ಹಿನ್ನಲೆಯಲ್ಲಿನ ಬಣ್ಣದೊಡನೆ ಕರಗಿಹೋಗುವ ಅವುಗಳ ಬಣ್ಣ. ಆದರೆ ಇದೇ ಪುಟ್ಟ ಪತಂಗ ಜೀವವಿಕಾಸದ (Evolution) ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಜೀವಿಗಳಲ್ಲಿ ಒಂದಾಯಿತು. ಚಾರ್ಲ್ಸ್ ಡಾರ್ವಿನ್ 1859ರಲ್ಲಿ On the Origin of Species ಪ್ರಕಟಿಸಿದಾಗ, ಜೀವಿಗಳು ಪರಿಸರಕ್ಕೆ ಹೊಂದಿಕೊಂಡು ಕಾಲಕ್ರಮೇಣ ಬದಲಾಗುತ್ತವೆ ಎಂದು ಪ್ರತಿಪಾದಿಸಿದರು. ಆದರೆ ಆ ಕಾಲದಲ್ಲಿ ಈ ಕಲ್ಪನೆಯನ್ನು ಕಣ್ಣಾರೆ ನೋಡಲು ಸಾಧ್ಯವಾಗುವ ಉದಾಹರಣೆಗಳು ವಿರಳವಾಗಿದ್ದವು. ಡಾರ್ವಿನ್ ನಿಧನರಾದ ಕೆಲವು ದಶಕಗಳ ನಂತರ, ಇಂಗ್ಲೆಂಡಿನ ಕಾಡೊಂದರಲ್ಲಿ ಬದುಕುತ್ತಿದ್ದ ಈ ಸಣ್ಣ ಪತಂಗ ಅವರ ಸಿದ್ಧಾಂತವನ್ನು ಜೀವಂತವಾಗಿ ತೋರಿಸಿಕೊಟ್ಟಿತು. ಈ ಪತಂಗ ಇದ್ದದ್ದು ಇಂಗ್ಲೆಂಡಿನ ಓಕ್, ಬರ್ಚ್ ಮತ್ತು ಇತರ ಮರಗಳಿಂದ ತುಂಬಿದ್ದ ಹಳೆಯ ಕಾಡುಗಳಲ್ಲಿ. ಆ ಮರಗಳ ಕಾಂಡಗಳ ಮೇಲೆ ಬಿಳಿ ಮತ್ತು ಬೂದು ಬಣ್ಣದ ಕಲ್ಲುಹೂಗಳು (Lichens) ಹರಡಿಕೊಂಡಿದ್ದವು. ದೂರದಿಂದ ನೋಡಿದರೆ ಮರದ ತೊಗಟೆಯೇ ಒಂದು ವಿಚಿತ್ರ ಚಿತ್ರಕಲೆಯಂತೆ ಕಾಣುತ್ತಿತ್ತು. ಹಗಲಿನಲ್ಲಿ ಈ ಪತಂಗ ಬಂದು ಆ ತೊಗಟೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಆ ಪತಂಗಗಳ ರೆಕ್ಕೆಗಳ ಮೇಲೂ ತೊಗಟೆಯಂತೆ ಬಿಳಿ ಬಣ್...

ಡಾರ್ವಿನ್ ಊಹಿಸಿದ್ದ ಪತಂಗ

 ಜೀವ ವಿಕಾಸ ಸಿದ್ಧಾಂತದ ಒಂದು ವೈಶಿಷ್ಟ್ಯವೆಂದರೆ ಈಗಾಗಲೇ ಇರುವ ವಿವರಗಳನ್ನು ವಿಶ್ಲೇಷಿಸಿ ಮುಂದಿನದ್ದನ್ನು ಊಹಿಸುವ ಸಾಮರ್ಥ್ಯ! ವಿಜ್ಞಾನವೆಂದರೆ ಈಗಾಗಲೇ ಗೊತ್ತಿರುವ ಸಂಗತಿಗಳನ್ನು ದಾಖಲಿಸುವುದು ಮಾತ್ರವಲ್ಲ, ಇನ್ನೂ ಕಂಡುಹಿಡಿಯದಿರುವ ಸಂಗತಿಗಳ ಬಗ್ಗೆ ಊಹೆಗಳನ್ನು ಮಾಡುವುದು, ನಂತರ ಅವು ಸತ್ಯವೋ ಸುಳ್ಳೋ ಎಂದು ಪರೀಕ್ಷಿಸುವುದೂ ಅದರ ಮೂಲಭೂತ ಸ್ವಭಾವ. ಆದ್ದರಿಂದ ಪರೀಕ್ಷಿಸಬಹುದಾದ ಊಹೆಗಳನ್ನು ರೂಪಿಸುವುದು ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಯ ಹೃದಯವಾಗಿದೆ. ಕೆಲವು ಊಹೆಗಳನ್ನು ಪರಿಶೀಲಿಸುವುದು ಸುಲಭ. ಆದರೆ ಕೆಲವು ಊಹೆಗಳು ಪ್ರಕೃತಿಯಲ್ಲೇ ಅಪರೂಪವಾಗಿ ನಡೆಯುವ ಒಂದು ಘಟನೆಯನ್ನು ನೇರವಾಗಿ ನೋಡುವವರೆಗೆ ಉತ್ತರ ಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹಲವು ದಶಕಗಳಲ್ಲ, ಒಂದು ಶತಮಾನಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಡಾರ್ವಿನ್ ಊಹಿಸಿದ್ದ ಪತಂಗದ ಕಥೆಯೂ ಅಂಥದ್ದೇ. ಪರಿಸರ ವಿಜ್ಞಾನ ಮತ್ತು ವಿಕಾಸವಾದದ ಅತ್ಯಂತ ಪ್ರಸಿದ್ಧ ಊಹೆಗಳಲ್ಲಿ ಒಂದಾದ ಈ ಊಹೆಯನ್ನು ಖಚಿತಪಡಿಸಿಕೊಳ್ಳಲು ಅನೇಕ ಅಧ್ಯಯನಗಳು ಮತ್ತು ಬಹಳ ದೀರ್ಘಕಾಲದ ಸಂಶೋಧನೆ ಬೇಕಾಯಿತು. ಹೂಬಿಡುವ ಸಸ್ಯಗಳ ಜೀವನದಲ್ಲಿ ಪರಾಗಸ್ಪರ್ಶ ಅತ್ಯಂತ ಮಹತ್ವದ ಹಂತ. ಒಂದು ಹೂವಿನ ಪರಾಗ ಮತ್ತೊಂದು ಹೂವಿನ ಅಂಡಾಶಯವನ್ನು ತಲುಪಿದಾಗ ಮಾತ್ರ ಹೊಸ ಬೀಜಗಳು ರೂಪುಗೊಳ್ಳುತ್ತವೆ. ಆದರೆ ಸಸ್ಯಗಳಿಗೆ ತಮ್ಮಷ್ಟಕ್ಕೆ ತಾವೇ ಚಲಿಸಲು ಸಾಧ್ಯವಿಲ್ಲ. ಹಾಗಿದ್ದಾಗ ಈ ಕೆ...

ಸಾವಿನ ಮುಖದ ಸುತ್ತ ಹೆಣೆದ ಕಥೆಗಳು!

ಬೆರಳಿನ ತುದಿಯಲ್ಲಿ "ಸಾವಿನ ಮುಖ" ಚಿತ್ರ: © ಶ್ರೀಕಾಂತ ವಾಲ್ಪರೈನಲ್ಲಿ ಕೆಲಸ ಮಾಡುತ್ತಿದ್ದ ದಿನಗಳು. ಒಂದು ದಿನ ನಾವು ಬಳಸುತ್ತಿದ್ದ ಮಹೀಂದ್ರ ಥಾರ್‌ನ ಟೈರ್‌ಗಳನ್ನು ಬದಲಾಯಿಸಲು ಪಾಲಕ್ಕಾಡಿಗೆ ಹೋಗಬೇಕಾಯಿತು. ನಾನು ಮತ್ತು ನನ್ನ ಸಹೋದ್ಯೋಗಿ ಪ್ರೀತಿ ಬೆಳಗ್ಗೆಯೇ ಹೊರಟೆವು. ಪಾಲಕ್ಕಾಡು ತಲುಪಿ ವಾಹನವನ್ನು ಟೈರ್ ಅಂಗಡಿಯ ಮುಂದೆ ನಿಲ್ಲಿಸಿದ್ದೆವು. ಕೆಲಸ ಮುಗಿಯಲು ಇನ್ನೂ ಸಮಯವಿದ್ದುದರಿಂದ ಸುತ್ತಮುತ್ತಲು ನೋಡುತ್ತಾ ವಾಹನದ ಸುತ್ತ ನಡೆದಾಡುತ್ತಿದ್ದೆ. ವಾಹನದ ಹಿಂಭಾಗಕ್ಕೆ ಬಂದಾಗ, ಹಿಂದಿನ ಸ್ಟೆಪ್ನಿ ಟೈರ್ ನ ಮೇಲೆ ಒಂದು 'ವಿಕಾರ' ಮುಖ ಕಂಡಿತು. ಒಂದು ಕ್ಷಣ ನಿಂತು ಮತ್ತೊಮ್ಮೆ ನೋಡಿದೆ. ಅದು ಒಂದು ಪತಂಗ! ಆದರೆ ಸಾಮಾನ್ಯ ಪತಂಗವಲ್ಲ. ಅದರ ಮೇಲಿದ್ದ ವಿಚಿತ್ರ ವಿನ್ಯಾಸವು ಮನುಷ್ಯನ ತಲೆಬುರುಡೆಯನ್ನೇ ನೆನಪಿಸುತ್ತಿತ್ತು. ಒಂದು ಕ್ಷಣ ನನಗೂ ಅಚ್ಚರಿಯಾಯಿತು. ಅಂತಹ ಪತಂಗವನ್ನು ನಾನು ಮೊದಲ ಬಾರಿಗೆ ನೋಡುತ್ತಿದ್ದೆ. ನಿಧಾನವಾಗಿ ಅದನ್ನು ನನ್ನ ಬೆರಳಿನ ತುದಿಗೆ ಹತ್ತಿಸಿಕೊಂಡು ಪ್ರೀತಿಯ ಬಳಿ ಹೋದೆ. "ನೋಡು..." ಎಂದು ಕೈ ಮುಂದಿಟ್ಟೆ. ರಾತ್ರಿಯಿಡೀ ಕಾಡಿನಲ್ಲಿ ಉಭಯವಾಸಿಗಳ ಸಮೀಕ್ಷೆ ಮಾಡುವ ಪ್ರೀತಿ, ಆ ಪತಂಗವನ್ನು ನೋಡಿದ ತಕ್ಷಣ ಹಿಂದಕ್ಕೆ ಸರಿದಳು. ಹತ್ತಿರ ಬರಲೂ ಹಿಂಜರಿದಳು. ಅಷ್ಟು ವಿಚಿತ್ರವಾಗಿತ್ತು ಅದರ ರೂಪ. ಈ ಮೇಲಿನ ಚಿತ್ರವನ್ನು ನೋಡಿದರೆ, ಅವಳ ಪ್ರತಿಕ್ರಿಯೆ ನಿಮಗೂ ಅರ್ಥವಾಗಬಹ...

ಹಾರಾಟಕ್ಕಷ್ಟೇ ಉಳಿದ ಬದುಕು!

ಸಹೋದ್ಯೋಗಿಯ ಕಾಲಿನ ಮೇಲೆ ಕುಳಿತ ಅಟ್ಲಾಸ್ ಪತಂಗ ಚಿತ್ರ: © ಶ್ರೀಕಾಂತ   ಅದು 2012. ದಾಂಡೇಲಿಯ ಕಾಡುಗಳಲ್ಲಿ ಒಂದು ರಾತ್ರಿ. ಕಾಳಿ ನದಿಯ ಉಪನದಿಯಾದ ಕಾನೇರಿ ನದಿಯ ದಡದಲ್ಲಿದ್ದ ಅರಣ್ಯ ಇಲಾಖೆಯ ನರ್ಸರಿಯೊಂದರಲ್ಲಿ ಉಳಿದುಕೊಂಡಿದ್ದೆ. ನದಿಯ ಪಕ್ಕದಲ್ಲಿದ್ದ ಒಂದು ಬೆಂಚಿನ ಮೇಲೆ ಕುಳಿತಿದ್ದೆ. ಸುತ್ತಲೂ ದಟ್ಟ ಕಾಡು. ನದಿಯ ಹರಿವಿನ ಸದ್ದು, ಅಸಂಖ್ಯಾತ ಕೀಟಗಳ ನಿರಂತರ ಗಾಯನ, ಇಷ್ಟನ್ನು ಬಿಟ್ಟರೆ ಮತ್ತಾವ ಶಬ್ದವೂ ಇರಲಿಲ್ಲ. ಹೀಗೆ ಕಾಡಿನ ರಾತ್ರಿಯನ್ನು ಸುಮ್ಮನೆ ಕುಳಿತು ಆಲಿಸುವುದು ನನಗೆ ಇಷ್ಟದ ಚಟುವಟಿಕೆಗಳಲ್ಲೊಂದು. ಅಷ್ಟರಲ್ಲಿ ನನ್ನ ಹಿಂದೆ ಇದ್ದ ಪೊದೆಗಳಲ್ಲಿ ಸಣ್ಣದೊಂದು ಸದ್ದಾಯಿತು. ಹಿಂದೆ ತಿರುಗಿ ನೋಡಿದೆ. ನನ್ನ ಹೆಡ್‌ಲ್ಯಾಂಪಿನ ಬೆಳಕಿನಲ್ಲಿ ಎರಡು ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದವು. ಒಂದು ಕ್ಷಣ ಬೆಚ್ಚಿಬಿದ್ದೆ. ಅದು ಯಾವ ಪ್ರಾಣಿಯೆಂಬುದು ತಕ್ಷಣಕ್ಕೆ ಅರ್ಥವಾಗಲಿಲ್ಲ. ಇನ್ನೊಂದು ಕ್ಷಣ ಗಮನಿಸಿದಾಗ ಎಲ್ಲವೂ ಸ್ಪಷ್ಟವಾಯಿತು. ಅದು... ಅಟ್ಲಸ್ ಪತಂಗ! ವೈಜ್ಞಾನಿಕ ಹೆಸರು  Attacus taprobanis ಆದರೆ ಆ ಭೇಟಿ ಹೆಚ್ಚು ಹೊತ್ತು ಉಳಿಯಲಿಲ್ಲ. ಕೆಲವೇ ಕ್ಷಣಗಳಲ್ಲಿ ಅದು ರೆಕ್ಕೆ ಬಡಿದು ಕತ್ತಲೆಯೊಳಗೆ ಮರೆಯಾಯಿತು. ಆ ನಂತರ ಎರಡು ವರ್ಷಗಳ ಕಾಲ ಮತ್ತೊಮ್ಮೆ ಅದು ನನ್ನ ಕಣ್ಣಿಗೆ ಬೀಳಲೇ ಇಲ್ಲ. ಮತ್ತೆ 2014ರಲ್ಲಿ, ಕೊಟ್ಟಿಗೆಹಾರದ ಸಮೀಪದ ಒಂದು ಹಳ್ಳಿಯ ಹೊರಭಾಗದ ನಿರ್ಜನ ಪ್ರದೇಶದಲ್ಲಿ ರಾತ್ರಿ ನಡೆದ...

ಚಿಟ್ಟೆ ಉದ್ಯಾನದಲ್ಲಿ ಸಿಕ್ಕ ಹಮ್ಮಿಂಗ್‌ಬರ್ಡ್

ಕುಳಿತಿರುವ ಹಮ್ಮಿಂಗ್‌ಬರ್ಡ್ ಪತಂಗ - ಹಾರಾಡುವಾಗ ಮೊಬೈಲ್ ಮೂಲಕ ಈ ಪತಂಗದ ಫೋಟೋ ತೆಗೆಯುವುದು ಕಷ್ಟ ಚಿತ್ರ: © ಶ್ರೀಕಾಂತ   ಮಳೆಗಾಲದ ಒಂದು ದಿನ ಬೆಳುವಾಯಿಯಲ್ಲಿರುವ ಸಮ್ಮಿಲನ್ ಶೆಟ್ಟಿಯವರ ಚಿಟ್ಟೆ ಉದ್ಯಾನಕ್ಕೆ ಬರಬಹುದೇ ಎಂದು ಅವರಿಗೆ ಕರೆ ಮಾಡಿ ಕೇಳಿದೆ. ಅವರು ಅಷ್ಟೇನೂ ಉತ್ಸಾಹದಿಂದ ತೋರಲಿಲ್ಲ. ಅವರ ಉದ್ಯಾನದ ಸಮಯ ಆಗಲೇ ಮುಗಿದಿತ್ತು. ಹೇಗೋ ಕೊನೆಗೆ ಒಪ್ಪಿದರು. ನಾನು, ನವ್ಯ ಮತ್ತು ಅಭಿ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆಗೆ ಉದ್ಯಾನವನ್ನು ತಲುಪಿದೆವು. ಚಿಟ್ಟೆಗಳನ್ನು ನೋಡುವುದಕ್ಕೆ ಅದು ಸ್ವಲ್ಪ ತಡವಾದ ಸಮಯ. ಏಕೆಂದರೆ ಅವು ಬೆಳಗಿನ ಹೊತ್ತಿನಲ್ಲಿ ಹೆಚ್ಚು ಚಟುವಟಿಕೆಯಿಂದಿರುತ್ತವೆ. ಆ ದಿನವೂ ಮಳೆ ತನ್ನಿಷ್ಟದಂತೆ ಬರುತ್ತಾ ಹೋಗುತ್ತಿತ್ತು. ಮೋಡಗಳ ನಡುವೆ ಆಗಾಗ ಸೂರ್ಯನ ಕಿರಣಗಳು ಇಣುಕಿ ನೋಡುತ್ತಿದ್ದವು. ಒಳಗೆ ಹೋಗುವ ಮೊದಲು ಚಿಟ್ಟೆ ಜೀವನದ ವಿವಿಧ ಹಂತಗಳನ್ನು ಪರಿಚಯಿಸುವ ಒಂದು ಕಿರುಚಿತ್ರವನ್ನು ತೋರಿಸಿದರು. ನಂತರ ಸಮ್ಮಿಲನ್ ಶೆಟ್ಟಿಯವರು ಉದ್ಯಾನದ ಉದ್ದೇಶದ ಬಗ್ಗೆ ವಿವರವಾಗಿ ಮಾತನಾಡಿದರು. ನಮ್ಮ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ನಮ್ಮನ್ನು ಒಳಗೆ ಕರೆದುಕೊಂಡು ಹೋದರು. ನಮ್ಮ ದೇಶದಲ್ಲಿ ಕಾಣುವ ಅನೇಕ ಚಿಟ್ಟೆ ಉದ್ಯಾನಗಳಂತೆ ಇದು ಕೇವಲ ಚಿಟ್ಟೆಗಳನ್ನು ಪ್ರದರ್ಶಿಸುವ ಸ್ಥಳವಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬೆಳುವಾಯಿಯಲ್ಲಿರುವ ಈ ಉದ್ಯಾನವನ್ನು ಚಿಟ್ಟೆಗಳು ಸ್ವಾಭಾವಿಕವಾಗಿ ಸಂತಾನೋತ್ಪತ್ತಿ ಮಾಡುವಂತೆ ರೂಪಿಸಲ...

ಚಂದ್ರ ಪತಂಗ – ಕತ್ತಲು, ಮಳೆಯಲ್ಲಿ ಬೆಳಗಿದ ಚಂದಿರ

ಕತ್ತಲು ಮಳೆಯಲ್ಲಿ ಕಂಡ ಚಂದಿರ - ಚಂದ್ರ ಪತಂಗ ಚಿತ್ರ: © ಶ್ರೀಕಾಂತ   ಅದು ವಾಲ್ಪರೈನಲ್ಲಿ ಉಭಯವಾಸಿ ಸಮೀಕ್ಷೆಯ ಒಂದು ರಾತ್ರಿ. ಸಮೀಕ್ಷೆಗಾಗಿ ನಾವು ತಾಲನಾರ್ ಎಂಬ ಜಾಗಕ್ಕೆ ತೆರಳಿದ್ದೆವು. ನಮ್ಮೊಂದಿಗೆ Nature Conservation Foundationನ ಹಿರಿಯ ವಿಜ್ಞಾನಿ ಡಾ. ದಿವ್ಯಾ ಮುದ್ದಪ್ಪ ಅವರೂ ಇದ್ದರು. ಆರ್ಕಿಡ್‌ಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನದಿಂದ ದಾರಿಯುದ್ದಕ್ಕೂ ಕಾಣುವ ಪ್ರತಿಯೊಂದು ಆರ್ಕಿಡ್‌ನ ಕಥೆಯನ್ನು ಹೇಳುತ್ತಾ ಸಾಗುತ್ತಿದ್ದರು. ಆದರೆ ತಾಲನಾರ್‌ನ ಕಾಫಿ ತೋಟದ ರಸ್ತೆಗಳು ನನ್ನ ಸಂಪೂರ್ಣ ಗಮನವನ್ನು ವಾಹನ ಚಾಲನೆಯ ಮೇಲೆಯೇ ಕೇಂದ್ರೀಕರಿಸುವಂತೆ ಮಾಡಿದ್ದವು. ಹೀಗಾಗಿ ಆರ್ಕಿಡ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಅಪರೂಪದ ಅವಕಾಶವನ್ನು ಕೈಚೆಲ್ಲಬೇಕಾಯಿತು. ಅನಮಲೈ ಬೆಟ್ಟಗಳ ಈ ಭಾಗದಲ್ಲಷ್ಟೇ ಕಂಡುಬರುವ ಒಂದು ಕಪ್ಪೆಯನ್ನು ಹುಡುಕುತ್ತಿದ್ದೆವು. ಸಾಕಷ್ಟು ಹುಡುಕಿದರೂ ಆ ಕಪ್ಪೆ ಮಾತ್ರ ನಮ್ಮ ಕಣ್ಣಿಗೆ ಬೀಳಲಿಲ್ಲ. (ಆ ಕಪ್ಪೆಯ ಹೆಸರು ನೆನಪಾಗುತ್ತಿಲ್ಲ) ಆ ಕಪ್ಪೆಯನ್ನು ಹುಡುಕುವುದನ್ನು ಬಿಟ್ಟು ಎಂದಿನಂತೆ ನಾವು ಸಮೀಕ್ಷೆ ಶುರುಮಾಡಿದೆವು. ಸಮೀಕ್ಷೆಯುದ್ದಕ್ಕೂ ಮಳೆ ಸುರಿಯುತ್ತಲೇ ಇತ್ತು.  ಸಮೀಕ್ಷೆ ಮುಗಿಸಿ ಹಿಂತಿರುಗುವ ಪ್ರಯಾಣ ಇನ್ನಷ್ಟು ಕಠಿಣವಾಗಿತ್ತು. ಕೆಸರುಮಯವಾದ ದಾರಿ ಸವಾಲಾಗಿತ್ತು. ಎರಡು ಬಾರಿ ವಾಹನ ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿತು. ಅನಮಲೈ ಬೆಟ್ಟಗಳ ದಟ್ಟ ಕತ್ತಲಲ್ಲಿ ಹೇಗೋ ಅದನ್ನ...

ಹಣ್ಣಿನ ಮೇಲಿದ್ದ ಹಸಿರು ಅತಿಥಿ

ಸೀಬೆ ಹಣ್ಣಿನ ಮೇಲೆ ಕುಳಿತು ರಸ ಹೀರುತ್ತಿರುವ ಪತಂಗ ಚಿತ್ರ: © ಶ್ರೀಕಾಂತ   ಉಭಯವಾಸಿಗಳ ಸಮೀಕ್ಷೆಗಾಗಿ ರಾತ್ರಿ ಅಲೆದಾಡುತ್ತಿದ್ದಾಗಲೇ ಕೆಲವೊಮ್ಮೆ ಅನಿರೀಕ್ಷಿತ ಭೇಟಿಗಳು ಸಂಭವಿಸುತ್ತಿತ್ತು. ನಮ್ಮ ಗಮನ ಕಪ್ಪೆ, ಅಥವಾ ಹಾವಿನ ಮೇಲೆ ಇದ್ದರೂ, ಕೆಲವೊಮ್ಮೆ ದಾರಿಯ ಬದಿಯ ಮರಗಳೂ ಒಂದೊಂದು ಕಥೆಯನ್ನು ಹೇಳುತ್ತಿದ್ದವು. ಕೊಡಗಿನಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲೊಂದು ರಾತ್ರಿ, ಸೀಬೆಮರದ ಬಳಿ ಹಾದು ಹೋಗುತ್ತಿದ್ದಾಗ ಹಣ್ಣಿನ ಮೇಲೆ ಕುಳಿತಿದ್ದ ಜೀವಿಯೊಂದು ಕಣ್ಣಿಗೆ ಬಿತ್ತು. ಮೊದಲ ನೋಟಕ್ಕೆ ಅದು ಎಲೆಯೇ ಇರಬಹುದೆಂದು ಅನಿಸಿತು. ಹತ್ತಿರ ಹೋಗಿ ಬೆಳಕು ಚೆಲ್ಲಿದಾಗ ಅದು ಒಂದು ಸುಂದರ ಪತಂಗ ಎಂಬುದು ಗೊತ್ತಾಯಿತು. ಯಾವ ಪ್ರಭೇದ ಎಂಬುದು ಮಾತ್ರ ತಿಳಿದಿರಲಿಲ್ಲ. ಅದರ ಚಿತ್ರ ತೆಗೆದುಕೊಂಡು, ಮೊಬೈಲ್ ಜಾಲದ ಸಂಪರ್ಕ ಸಿಕ್ಕ ನಂತರ ಹುಡುಕಿದಾಗ ಅದರ ಹೆಸರು ತಿಳಿಯಿತು— Green Fruit-piercing Moth  ( Eudocima salaminia ). ಹೆಸರನ್ನು ಓದಿದ ಕ್ಷಣವೇ ನಗು ಬಂತು. ಏಕೆಂದರೆ ನಾನು ಅದನ್ನು ಮೊದಲು ಕಂಡದ್ದೇ ಹಣ್ಣಿನ ಮೇಲೆಯೇ ಕುಳಿತು ರಸ ಹೀರುತ್ತಿದ್ದಾಗ! ಈ ಪತಂಗದ ಜೀವನವೇ ಹಣ್ಣುಗಳೊಂದಿಗೆ ಬೆಸೆದುಕೊಂಡಿದೆ. ತನ್ನ ಬಲವಾದ Proboscisನಿಂದ (ಚಿಟ್ಟೆ, ಪತಂಗಗಳಲ್ಲಿರುವ ಉದ್ದವಾದ ಹೀರುಗೊಳವೆ) ಮಾಗಿದ ಹಣ್ಣುಗಳ ಸಿಪ್ಪೆಯನ್ನು ಚುಚ್ಚಿ ಒಳಗಿನ ರಸವನ್ನು ಹೀರುತ್ತದೆ. ಸೀಬೆ, ಮಾವು, ಕಿತ್ತಳೆ, ಮೋಸಂಬಿ, ಬಾಳೆ, ಪಪ್ಪಾಯಿ, ದಾಳಿಂಬೆ...

ಪಶ್ಚಿಮ ಘಟ್ಟಗಳ ಹಾರುಗಪ್ಪೆಗಳು

 ಮಳೆಗಾಲ ಆರಂಭವಾಗುವ ಹೊತ್ತಿಗೆ ಪಶ್ಚಿಮ ಘಟ್ಟಗಳ ಶಬ್ದ ಪ್ರಪಂಚ ಬದಲಾಗಿಬಿಡುತ್ತವೆ. ಮಳೆಯ ನಿರೀಕ್ಷೆಯಲ್ಲಿದ್ದ ಕಾಡು ಮೊದಲ ಮಳೆಯ ಹನಿಗಳನ್ನು ಸ್ವಾಗತಿಸುತ್ತದೆ. ಸೊರಗಿದ್ದ ಹಳ್ಳಗಳು ಮತ್ತೆ ನೀರಿನಿಂದ ತುಂಬುತ್ತವೆ. ಮರಗಳ ಎಲೆಗಳು ತೊಳೆದು ಹೊಳೆಯುತ್ತವೆ. ರಾತ್ರಿ ಹೊತ್ತಿಗೆ ಸಾವಿರಾರು ಕೀಟಗಳ ಸದ್ದು ಮತ್ತು ಕಪ್ಪೆಗಳ ಗಾಯನದಿಂದ ಜೀವಂತವಾಗುತ್ತದೆ. ಅಂತಹ ಮಳೆಗಾಲದ ರಾತ್ರಿಗಳಲ್ಲೇ ನನಗೆ ಅತ್ಯಂತ ಇಷ್ಟವಾದ ಜೀವಿಗಳಲ್ಲಿ ಒಂದಾದ ಹಾರುಗಪ್ಪೆಗಳನ್ನು ನೋಡುವ ಅವಕಾಶ ಸಿಕ್ಕಿತು. ಹಾರುಗಪ್ಪೆಗಳು ನಿಜವಾದ ಅರ್ಥದಲ್ಲಿ ಹಾರುವುದಿಲ್ಲ. ಪಕ್ಷಿಗಳು ಮತ್ತು ಬಾವಲಿಗಳಂತೆ ನಿರಂತರವಾಗಿ ರೆಕ್ಕೆ ಬಡಿಯುತ್ತಾ ಗಾಳಿಯಲ್ಲಿ ಹಾರುವ ಸಾಮರ್ಥ್ಯ ಇವುಗಳಿಗೆ ಇಲ್ಲ. ಬದಲಾಗಿ, ಎತ್ತರದ ಮರದಿಂದ ಮತ್ತೊಂದು ಮರದ ಕಡೆಗೆ ಗಾಳಿಯಲ್ಲಿ ಗ್ಲೈಡ್ (Glide) ಮಾಡುತ್ತವೆ. ಈ ಕಾರಣಕ್ಕಾಗಿಯೇ ಇವುಗಳನ್ನು ಹಾರುಗಪ್ಪೆಗಳು ಅಥವಾ ಗ್ಲೈಡಿಂಗ್ ಕಪ್ಪೆಗಳು ಎಂದು ಕರೆಯಲಾಗುತ್ತದೆ. ಇವುಗಳ ಅತ್ಯಂತ ಗಮನಾರ್ಹ ಲಕ್ಷಣವೆಂದರೆ ಕೈ ಮತ್ತು ಕಾಲುಗಳ ಬೆರಳುಗಳ ನಡುವಿನ ವಿಶಾಲವಾದ ಚರ್ಮದ ತೊಗಲು (webbing). ಸಾಮಾನ್ಯ ಕಪ್ಪೆಗಳಿಗಿಂತ ಈ ತೊಗಲು ಬಹಳ ದೊಡ್ಡದಾಗಿದ್ದು, ಗಾಳಿಯಲ್ಲಿ ಜಾರುವಾಗ ಅವು ಒಂದು ರೀತಿಯ "ಪ್ಯಾರಾಚೂಟ್"ನಂತೆ ಕಾರ್ಯನಿರ್ವಹಿಸುತ್ತವೆ. ಜಿಗಿಯುವ ಕ್ಷಣದಲ್ಲಿ ಕಪ್ಪೆಯು ತನ್ನ ನಾಲ್ಕೂ ಕಾಲುಗಳನ್ನು ಚಾಚಿಕೊಳ್ಳುತ್ತದೆ. ಆಗ ಬೆರಳುಗಳ ನಡುವಿನ ಪೊರೆಗಳು ವ...

ಮೆಸ್ಸಿಯರ್ 101

  ಚಿತ್ರ:  NASA , ESA , CFHT , NOAO ಚಾರ್ಲ್ಸ್ ಮೆಸ್ಸಿಯರ್‌ನ ಪ್ರಸಿದ್ಧ ಪಟ್ಟಿಯಲ್ಲಿ M101 ಎಂದು ನಮೂದಿಸಲ್ಪಟ್ಟಿರುವ ನೀಹಾರಿಕೆಯು ನಿಜವಾಗಿಯೂ ಒಂದು ದೊಡ್ಡದಾದ, ಸುಂದರವಾದ, ಸುರುಳಿಯಾಕಾರದ ಗ್ಯಾಲಕ್ಸಿಯಾಗಿದೆ. ಈ ಗ್ಯಾಲಕ್ಸಿಯು ಸುಮಾರು 170,000 ಬೆಳಕಿನ ವರ್ಷಗಳಷ್ಟು ಅಗಾಧವಾಗಿದೆ. ಇದು ನಮ್ಮದೇ ಆದ ಕ್ಷೀರಪಥ ಗ್ಯಾಲಕ್ಸಿಗಿಂತ ಎರಡು ಪಟ್ಟು ದೊಡ್ಡದಾಗಿದೆ. ಲಾರ್ಡ್ ರೋಸ್ಸೆಯವರು 19ನೇ ಶತಮಾನದಲ್ಲಿ ಐರ್ಲೆಂಡ್‌ನ ಪಾರ್ಸನ್‌ಟೌನ್‌ನಲ್ಲಿರುವ ಲೆವಿಯಾಥನ್‌ ದೂರದರ್ಶಕದಿಂದ ಗಮನಿಸಿದ ಸುರುಳಿಯಾಕಾರದ ನೀಹಾರಿಕೆಗಳಲ್ಲಿ M101 ಕೂಡ ಒಂದಾಗಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಹಬಲ್ ದೂರದರ್ಶಕದಿಂದ ತೆಗೆದ 51 ಚಿತ್ರಗಳನ್ನು ಸಂಯೋಜಿಸಿದ ಚಿತ್ರ ಇದಾಗಿದೆ. ಭೂಮಿಯ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾದ ದೂರದರ್ಶಕಗಳಿಂದ ಸಂಗ್ರಹಿಸಿದ ಮಾಹಿತಿಯಂತೆ ಈ ಗ್ಯಾಲಕ್ಸಿಯ ಮಧ್ಯಭಾಗವು ಸುಮಾರು 40,000 ಬೆಳಕಿನ ವರ್ಷಗಳಷ್ಟು ವ್ಯಾಪಿಸಿದೆ. ಹಬಲ್ ತೆಗೆದ ವಿವರವಾದ ಚಿತ್ರಗಳಲ್ಲಿ M101ರ ಚಿತ್ರವೂ ಸಹಾ ಒಂದು. ಗ್ಯಾಲಕ್ಸಿಯ ಪೂರ್ಣ ಸುರುಳಿ ನೋಟ, ಗ್ಯಾಲಕ್ಸಿಯ ಹಿನ್ನಲೆಯಲ್ಲಿ ಕಾಣುವ ಇನ್ನಿತರ ಗ್ಯಾಲಕ್ಸಿಗಳು, ಈ ರೀತಿ ಬೆರಗುಗೊಳಿಸುವ ವೈಶಿಷ್ಟ್ಯಗಳು ಈ ಚಿತ್ರದ ವಿಶೇಷ. ಪಿನ್‌ವ್ಹೀಲ್ (Pinwheel) ಗ್ಯಾಲಕ್ಸಿ ಎಂದೂ ಕರೆಯಲ್ಪಡುವ M101 ಉತ್ತರ ದಿಕ್ಕಿನ ನಕ್ಷತ್ರಪುಂಜ ಸಪ್ತರ್ಷಿ ಮಂಡಲ ಅಥವಾ Ursa Majorನ ಗಡಿಯೊಳಗೆ, ಸುಮಾರು 25 ಮಿ...