ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕನ್ನಡಿಯಲ್ಲಿ ಕಂಡ ಮುಖ..

  ಹೆಚ್ಚಿನ ಪಕ್ಷಿಗಳು ಮನುಷ್ಯರನ್ನು ಆದಷ್ಟು ದೂರವೇ ಇಡಲು ಪ್ರಯತ್ನಿಸುತ್ತವೆ. ಬಹುಶಃ ಅದಕ್ಕೇ ಕೆಲವೊಮ್ಮೆ ಅವು ಏನೋ ಕಳ್ಳ ಕೆಲಸ ಮಾಡುತ್ತಿರುವಂತೆ ಅನ್ನಿಸಿಬಿಡುತ್ತದೆ. ನಾವು ಗಮನಿಸುತ್ತಿಲ್ಲ ಎನ್ನುವವರೆಗೂ ತಮ್ಮ ಕೆಲಸದಲ್ಲಿ ತಲ್ಲೀನವಾಗಿರುತ್ತವೆ. ನಾವು ಅವುಗಳ ಕಡೆ ನೋಡಿದ ತಕ್ಷಣ ಎಲ್ಲವನ್ನೂ ನಿಲ್ಲಿಸಿಬಿಡುತ್ತವೆ. ಒಮ್ಮೆ ಫಣಸೋಲಿ ಕ್ಯಾಂಪ್‌ನ ಹಿಂಭಾಗದಲ್ಲಿ ನಿಂತು ಶೇವಿಂಗ್ ಮಾಡಿಕೊಳ್ಳುತ್ತಿದ್ದೆ. ನನ್ನ ಹಿಂದೆ ತೇಗದ ಮರಗಳ ತೋಟವಿತ್ತು. ಯಾವುದೋ ಒಂದು ಮರದಿಂದ "ಟಕ್... ಟಕ್... ಟಕ್..." ಎಂದು ಸದ್ದು ಬರುತ್ತಿತ್ತು. ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಂತುಹೋಗುತ್ತಿತ್ತು. ಮತ್ತೆ ಶೇವಿಂಗ್ ಮಾಡಿಕೊಳ್ಳಲು ಶುರು ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ಅದೇ ಸದ್ದು ಕೇಳಿಸುತ್ತಿತ್ತು. "ಯಾವುದೋ ಪಕ್ಷಿ ಅಥವಾ ಪ್ರಾಣಿ ನನ್ನ ಕಡೆ ಒಂದು ಕಣ್ಣಿಟ್ಟುಕೊಂಡೇ ತನ್ನ ಕೆಲಸ ಮಾಡುತ್ತಿದೆ," ಅನ್ನಿಸಿತು. ಇಲ್ಲದಿದ್ದರೆ ನಾನು ತಿರುಗಿ ನೋಡಿದ ತಕ್ಷಣ ಅದು ಯಾಕೆ ಕೆಲಸ ನಿಲ್ಲಿಸಬೇಕು? ಸದ್ದು ಎಲ್ಲಿಂದ ಬರುತ್ತಿದೆ ಎಂದು ಕಂಡುಹಿಡಿಯಲು ಸಾಕಷ್ಟು ಹೊತ್ತು ಪ್ರಯತ್ನಿಸಿದೆ. ಕೊನೆಗೆ ಅದು ಒಂದು ತೇಗದ ಮರದಿಂದ ಬರುತ್ತಿದೆ ಎಂದು ಗೊತ್ತಾಯಿತು. ಯಾವುದೋ ಮರಕುಟಿಗ ಹಕ್ಕಿ ಇರಬಹುದು ಎಂದು ಊಹಿಸಿದೆ. ಆದರೆ ಯಾವ ಜಾತಿಯದ್ದು ಎಂದು ಮಾತ್ರ ತಿಳಿಯಲಿಲ್ಲ. ಬೈನಾಕ್ಯುಲರ್ ತಂದು ನೋಡಿದರೂ ಪ್ರಯೋಜನವಾಗಲಿಲ್ಲ. ನಾನು ತಿರು...

ಎಲ್ಲಿ ಹೋದವು ಇವೆಲ್ಲ?

ನಮ್ಮ ಬಳಿ ಇರುವ ಎಲ್ಲಾ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅತಿ ವೇಗದಲಿ ಬದಲಾಗುತ್ತಿವೆ , ದಿನಗಳು ಕಳೆಯುತ್ತಿರುವಂತೆ ಇವುಗಳು ಹಳೆಯದಾಗುತ್ತವೆ . ಮನುಷ್ಯನ ಗುಣವೇ ಹಾಗೆ ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಅವನ ಕೈಗೆ ಅತಿ ಕಮ್ಮಿ ಖರ್ಚಿನಲ್ಲಿ ಸಿಕ್ಕರೆ ಅದು ಅವನ ಮನೆಯಲ್ಲಿ ಇರುತ್ತದೆ ಕಾಲ ಕ್ರಮೇಣ ಅವುಗಳು ಹಳೆಯದಾದಂತೆ ಹೊಸ ವಸ್ತುಗಳಿಗೆ ಸ್ಥಾನ ಸಿಗುತ್ತದೆ .

ಕಾಡು ಮತ್ತು ನಾನು

 ಎಷ್ಟೋ ಸಮಯ ಕಾಡಿನಲ್ಲಿ ಸುತ್ತಾಡುತ್ತಿರುತ್ತೇನೆ. ಆದರೆ ಅದು ನನಗೆ ಯಾಕೆ ಇಷ್ಟೊಂದು ಖುಷಿ ಕೊಡುತ್ತದೆ ಎಂದು ಆ ಕ್ಷಣದಲ್ಲಿ ಅರ್ಥವಾಗುವುದಿಲ್ಲ. ಕೆಲವೊಮ್ಮೆ ದಿನಗಟ್ಟಲೆ ಕಾಡಿನಲ್ಲೇ ಅಲೆದಾಡಿದ ಮೇಲೆ, "ಸಾಕಪ್ಪ ಈ ಕಾಡು!" ಅನ್ನಿಸಿಬಿಡುತ್ತದೆ. ಆದರೆ ಅದು ಹೆಚ್ಚು ಹೊತ್ತು ಇರುವುದಿಲ್ಲ. ಮತ್ತೆ ಸ್ವಲ್ಪ ದಿನಗಳಲ್ಲೇ ಕಾಡು ತನ್ನತ್ತ ಸೆಳೆಯಲು ಶುರು ಮಾಡುತ್ತದೆ. ಯಾಕೆಂದರೆ, ಕಾಡು ಪ್ರತಿಸಾರಿ ಹೊಸದೊಂದು ಅನುಭವವನ್ನು ಕೊಟ್ಟೇ ಕೊಡುತ್ತದೆ. ಒಮ್ಮೆ ಕ್ಯಾಸಲ್ ರಾಕ್ ಹತ್ತಿರದ ಕಾಡಿನಲ್ಲಿರುವ ಕುವೇಷಿ ಎಂಬ ಊರಿನಿಂದ ಹಿಂದಿರುಗುತ್ತಿದ್ದೆ. ದಾರಿಯಲ್ಲಿ ಒಂದು ಪುಟ್ಟ ಸೇತುವೆ ಇದೆ. ಅದರ ಕೆಳಗೆ ಒಂದು ನೀರಿನ ಕೊಳ. ಆ ಕೊಳದಲ್ಲಿ ಒಂದು ಪಕ್ಷಿ ನೀರಿನೊಳಗೆ ಏನನ್ನೋ ಹುಡುಕುತ್ತಾ ನಿಧಾನವಾಗಿ ಹೆಜ್ಜೆ ಹಾಕುತ್ತಿತ್ತು. ಮೊದಲ ನೋಟಕ್ಕೆ ಅದು ಒಂದು ಇಗ್ರೆಟ್ ( Egret ) ಇರಬಹುದು ಅನ್ನಿಸಿತು. ಆದರೆ ಅದರ ಮೈಬಣ್ಣ ಸಾಮಾನ್ಯವಾಗಿ ಕಾಣುವ ಇಗ್ರೆಟ್‌ಗಳಂತೆ ಬಿಳಿಯಾಗಿರಲಿಲ್ಲ. ಕಡು ಬೂದು ಬಣ್ಣದಲ್ಲಿತ್ತು. ನಾನು ಯಾವುದೇ ಸದ್ದು ಮಾಡದೆ ಸ್ವಲ್ಪ ದೂರದಲ್ಲೇ ನಿಂತು ಅದನ್ನೇ ಗಮನಿಸುತ್ತಿದ್ದೆ. ಬಹುಶಃ ನಾನು ಸಾಕಷ್ಟು ದೂರದಲ್ಲಿದ್ದ ಕಾರಣ, ನನ್ನ ಇರುವಿಕೆಯ ಬಗ್ಗೆ ಅದಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಅದು ತನ್ನ ಕೆಲಸದಲ್ಲಿ ತಲ್ಲೀನವಾಗಿ ನೀರಿನೊಳಗೆ ಆಹಾರ ಹುಡುಕುತ್ತಲೇ ಇತ್ತು. ಸ್ವಲ್ಪ ಹೊತ್ತಿನ ನಂತರ ಕ್ಯಾಮೆರಾ ತೆಗೆದು ಅದರ ಕೆಲವು ಚ...

ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣ

 ಪಕ್ಷಿಗಳನ್ನು ಗಮನಿಸಿದರೆ, ಅವು ಯಾವಾಗಲೂ ಏನಾದರೂ ಕೆಲಸದಲ್ಲೇ ತಲ್ಲೀನವಾಗಿರುತ್ತವೆ. ಒಂದೊಮ್ಮೆ ಆಹಾರ ಹುಡುಕುತ್ತಿದ್ದರೆ, ಮತ್ತೊಮ್ಮೆ ಗೂಡು ಕಟ್ಟುತ್ತಿರುತ್ತವೆ, ಇಲ್ಲವೇ ಮರಿಗಳಿಗೆ ಆಹಾರ ತಿನ್ನಿಸುತ್ತಿರುತ್ತವೆ. ಕೆಲವೊಮ್ಮೆ ತಮ್ಮ ಕೆಲಸದಲ್ಲಿ ಅಷ್ಟು ಮಗ್ನವಾಗಿಬಿಡುತ್ತವೆ, ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನೇ ಮರೆತುಬಿಡುತ್ತವೆ. ಕ್ಯಾಸಲ್ ರಾಕ್ ಹತ್ತಿರ ಇವೋಲಿ ಎಂಬ ಪುಟ್ಟ ಊರಿನ ಬಳಿ ಒಂದು ಸಣ್ಣ ಹೊಳೆಯಿದೆ. ಒಂದು ದಿನ ನಾನು ಜೀಪಿನಲ್ಲಿ ಆ ಹೊಳೆಯನ್ನು ದಾಟುತ್ತಿದ್ದೆ. ಸಾಮಾನ್ಯವಾಗಿ ಹೊಳೆ ಅಥವಾ ನದಿಯ ಹತ್ತಿರ ಯಾವುದಾದರೂ ಪಕ್ಷಿ ಅಥವಾ ಪ್ರಾಣಿ ಕಾಣಬಹುದು ಎಂಬ ಅನುಭವವಿರುವುದರಿಂದ, ಅಂತಹ ಜಾಗಗಳಲ್ಲಿ ನಾನು ಯಾವಾಗಲೂ ನಿಧಾನವಾಗಿಯೇ ಜೀಪ್ ಓಡಿಸುತ್ತೇನೆ. ಬಹಳ ಬಾರಿ ಆ ಅಭ್ಯಾಸಕ್ಕೆ ಪ್ರತಿಫಲವೂ ಸಿಕ್ಕಿದೆ. ಆ ದಿನವೂ ಹೊಳೆಯ ಹತ್ತಿರ ಬಂದ ತಕ್ಷಣ ಜೀಪಿನ ವೇಗ ಕಡಿಮೆ ಮಾಡಿದೆ. ಹೊಳೆಯ ಮಧ್ಯದಲ್ಲಿದ್ದ ಒಂದು ಕಲ್ಲಿನ ಮೇಲೆ   ಮಿಂಚುಳ್ಳಿ ( Common Kingfisher ) ಕುಳಿತಿತ್ತು. ಅದರ ದೃಷ್ಟಿಯೆಲ್ಲ ನೀರಿನ ಮೇಲೆಯೇ ಇತ್ತು. ಯಾವುದೋ ಮೀನು ಹತ್ತಿರ ಬರಬಹುದೆಂಬ ನಿರೀಕ್ಷೆಯಲ್ಲಿ ಸಂಪೂರ್ಣ ಏಕಾಗ್ರತೆಯಿಂದ ಹೊಂಚು ಹಾಕಿ ಕುಳಿತಿತ್ತು. ನಾನು ಜೀಪನ್ನು ನಿಲ್ಲಿಸಿದೆ. ಕೆಲವು ಕ್ಷಣಗಳ ನಂತರ ನಿಧಾನವಾಗಿ ಇನ್ನೂ ಹತ್ತಿರ ಕೊಂಡೊಯ್ದೆ. ಆಗಲೂ ಅದು ಹಾರಲಿಲ್ಲ. ನನ್ನ ಜೀಪಿನ ಕಡೆ ಒಮ್ಮೆ ಕೂಡ ನೋಡಲಿಲ್ಲ. "ಇನ್ನೂ ಸ್ವಲ್ಪ ಹ...

ಬೇಲಿಯೆ ಎದ್ದು ಹೊಲ ಮೇಯ್ದಾಗ!!!

ಇತ್ತೀಚಿಗೆ ನನ್ನ ಸ್ನೇಹಿತರೊಂದಿಗೆ ಸಿನಿಮಾಗಳ ಬಗೆ ಚರ್ಚಿಸುತ್ತಿದ್ದಾಗ ಅವರವರಿಗೆ ಉತ್ತಮವೆನಿಸಿದ ಸಿನಿಮಾಗಳನ್ನು ಹೇಳಲು ಆರಂಭಿಸಿದರು ನಾನು ನನ್ನ ಸೆಲ್ ಫೋನಿನಲ್ಲಿ ಅವುಗಳನ್ನು ಬರೆದುಕೊಂಡೆ . ಆ ಸಮಯದಲ್ಲಿ ಒಬ್ಬ ಮಾದಕ ವಸ್ತುಗಳನ್ನು ಆದರಿಸಿದ ಒಂದು ಸಿನಿಮಾದ ಹೆಸರನ್ನು ಹೇಳಿದ .

ಟಿಟ್ಟಿಭನ ಕಥೆ

     ಬಂಡೀಪುರದಲ್ಲಿ ಒಂದು ದಿನ ಜೀಪ್ ರಸ್ತೆಯ ಬದಿಯಲ್ಲಿ ಟಿಟ್ಟಿಭ ( Red-wattled Lapwing ) ಗೂಡು ಕಂಡಿತು. "ಗೂಡು" ಎಂದರೆ ಮರದ ಮೇಲೆ ಕಟ್ಟಿದ ಗೂಡಲ್ಲ. ನಾವು ಪ್ರತಿದಿನ ಓಡಾಡುವ ಮಣ್ಣಿನ ರಸ್ತೆಯ ಅಂಚಿನಲ್ಲಿ, ಸ್ವಲ್ಪ ಹಳ್ಳವಾಗಿದ್ದ ಜಾಗದಲ್ಲಿ ನೆಲದ ಮೇಲೆಯೇ ನಾಲ್ಕು ಮೊಟ್ಟೆಗಳನ್ನು ಇಟ್ಟಿತ್ತು. ಸುತ್ತಲೂ ಇದ್ದ ಒಣಮಣ್ಣು ಮತ್ತು ಸಣ್ಣ ಕಲ್ಲುಗಳ ಬಣ್ಣವೇ ಮೊಟ್ಟೆಗಳು ಇದ್ದ ಕಾರಣ ಅಷ್ಟೇನೂ ಸುಲಭವಾಗಿ ಕಣ್ಣಿಗೆ ಬೀಳುವಂತಿರಲಿಲ್ಲ. ನಾನು ಜೀಪ್ ನಿಲ್ಲಿಸಿ ಗೂಡಿನ ಕಡೆ ನಡೆದುಕೊಂಡು ಹೋದೆ. ತಾಯಿ ಟಿಟ್ಟಿಭ ಯಾವುದೇ ಸದ್ದು ಮಾಡದೆ ಸುಮ್ಮನೆ ಎದ್ದು ಪಕ್ಕದಲ್ಲಿದ್ದ ಪೊದೆಯೊಳಗೆ ಓಡಿ ಮರೆಯಾಯಿತು. ನಾನು ಮೊಟ್ಟೆಗಳ ಕೆಲವು ಚಿತ್ರಗಳನ್ನು ತೆಗೆದು ಅಲ್ಲಿಂದ ಹೊರಟೆ. ಸುಮಾರು ಒಂದು ವಾರ ಆ ಕಡೆ ಹೋಗುವ ಅವಕಾಶವೇ ಬರಲಿಲ್ಲ. ಮತ್ತೆ ಅದೇ ರಸ್ತೆಯಲ್ಲಿ ಹೋಗಬೇಕಾದಾಗ ಕುತೂಹಲದಿಂದ ಜೀಪ್ ನಿಲ್ಲಿಸಿ ಗೂಡಿನತ್ತ ನೋಡಿದೆ. ನಾಲ್ಕು ಮೊಟ್ಟೆಗಳಲ್ಲಿ ಮೂರು ಮರಿಗಳಾಗಿದ್ದವು. ಆದರೆ ಈ ಬಾರಿ ತಾಯಿ ಹಕ್ಕಿಯ ವರ್ತನೆ ಸಂಪೂರ್ಣ ಬದಲಾಗಿತ್ತು. ಹಿಂದಿನಂತೆ ಸುಮ್ಮನೆ ಓಡಿ ಹೋಗಲಿಲ್ಲ. ಸ್ವಲ್ಪ ದೂರ ನಿಂತು ಜೋರಾಗಿ ಕೂಗತೊಡಗಿತು. ಅದರ ಎಚ್ಚರಿಕೆಯ ಕೂಗು ಕೇಳುತ್ತಿದ್ದಂತೆಯೇ ಗೂಡಿನಲ್ಲಿ ಮೌನವಾಗಿ ಕುಳಿತಿದ್ದ ಮರಿಗಳು ಎದ್ದು ಬೇರೆ ಬೇರೆ ದಿಕ್ಕುಗಳಿಗೆ ಓಡಿ ಚೆಲ್ಲಾಪಿಲ್ಲಿಯಾದವು. ಕ್ಷಣಾರ್ಧದಲ್ಲಿ ಅವು ನೆಲದ ಬಣ್ಣದಲ್ಲೇ ಬೆರೆತುಹೋದವು. ಮ...

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಉಗುಳು ಕೀಟ

ಪ್ರಕೃತಿಯಲ್ಲಿ ಓಡಾಡುವುದು ನೆನೆಸಿಕೊಂಡರೆ ಸಂತಸವಾದರು, ಒಮ್ಮೊಮ್ಮೆ ಓಡಾಡುವಾಗ ಯಾಕಾದರು ಬಂದೆವೊ ಎಂದೆನಿಸಿಬಿಡುತ್ತದೆ. ಇದಕ್ಕೆ ಕಾರಣ ಪ್ರಕೃತಿ ಒಡ್ಡುವ ಕಷ್ಟಗಳು. ಆದರೆ ಮತ್ತೆ ಪ್ರಕೃತಿಯಲ್ಲಿ ಓಡಾಡಬೇಕೆಂಬ ಹಂಬಲ ಉಂಟಾಗಲು ಕಾರಣ ಪ್ರಕೃತಿ ನೀಡುವ ಅಚ್ಚರಿಗಳು. ಒಮ್ಮೆ ಹೀಗೆ ಒಂದು ಅಚ್ಚರಿಯಾಯಿತು.

ಇರುವೆ ಸಿಂಗ (ANTLION)

ನೀವು ಕೆಲವು ಬಾರಿ ಮಣ್ಣಿನಲ್ಲಿ ಕೋನ್ ಆಕೃತಿಯ ಚಿಕ್ಕ ಹಳ್ಳವನ್ನು ನೋಡಬಹುದು. ಇದು ಒಂದು ಕೀಟದ ಕೆಲಸವೆಂದರೆ ನಂಬಲೇಬೇಕು.

ನಗರಕ್ಕೆ ಹೊಂದಿಕೊಂಡ ವಿಸ್ಮಯ- ತುರಹಳ್ಳಿ ಕಾಡು

ಎ.ಪಿ.ಭಾರ್ಗವ್ ( ಡಿಸೆಂಬರ್ 2011ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ) ಬೆಂಗಳೂರು ನಗರಕ್ಕೆ ಹೊಂ ದಿಕೊಂಡಂತೆ ಜೀವ ಸಂಕುಲಗಳಿಂದ ಕೂಡಿದ ಚಿಕ್ಕದಾದ ಕಾಡೊಂದು ಇದೆ ಎಂದರೆ ನಂಬುತ್ತೀರ? ಅಗ್ನಿಶಿಖೆ ಹೌದು ಇದೆ.