ಪ್ರಕೃತಿಯಲ್ಲಿ ಓಡಾಡುವುದು ನೆನೆಸಿಕೊಂಡರೆ ಸಂತಸವಾದರು, ಒಮ್ಮೊಮ್ಮೆ ಓಡಾಡುವಾಗ ಯಾಕಾದರು ಬಂದೆವೊ ಎಂದೆನಿಸಿಬಿಡುತ್ತದೆ. ಇದಕ್ಕೆ ಕಾರಣ ಪ್ರಕೃತಿ ಒಡ್ಡುವ ಕಷ್ಟಗಳು. ಆದರೆ ಮತ್ತೆ ಪ್ರಕೃತಿಯಲ್ಲಿ ಓಡಾಡಬೇಕೆಂಬ ಹಂಬಲ ಉಂಟಾಗಲು ಕಾರಣ ಪ್ರಕೃತಿ ನೀಡುವ ಅಚ್ಚರಿಗಳು. ಒಮ್ಮೆ ಹೀಗೆ ಒಂದು ಅಚ್ಚರಿಯಾಯಿತು.
ಪಕ್ಷಿಯನ್ನೊ, ಚಿಟ್ಟೆಯನ್ನೊ ಅರಸುತ್ತ ಸಾಗುತ್ತಿದ್ದ ನನಗೆ, ಒಂದು ಗಿಡದ ಮೇಲೆ ಬಿಳಿ ಬಣ್ಣದ ಎಂತದ್ದೊ ನೊರೆ ಕಂಡುಬಂತು. ನಮ್ಮ ದೇಶದಲ್ಲಿ ಸಿಕ್ಕ ಸಿಕ್ಕಲೆಲ್ಲ ಉಗಿಯುವುದು ಸರ್ವೇ ಸಾಮಾನ್ಯವಾದ್ದರಿಂದ, ಇದು ಅಂತದ್ದೆ ಕೆಲಸವೆಂದು ಅದನ್ನು ಅಲಕ್ಷಿಸಿ ಮುನ್ನಡೆದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಮತ್ತೊಮ್ಮೆ ಇದೇ ತರಹದ ನೊರೆ ಕಂಡುಬಂತು ಈಗ ಅದರ ಬಗ್ಗೆ ಕುತೂಹಲ ಮೂಡಲಾರಂಭಿಸಿತಾದರು, ಹೆಚ್ಚು ತಲೆಕೆಡಿಸಿಕೊಳ್ಳದೆ ಮುಂದುವರೆದೆ. ಇನ್ನೊಮ್ಮೆ ಇದು ಕಂಡುಬಂದಾಗ, ಇದು ಖಂಡಿತ ಮನುಷ್ಯನ ಕೆಲಸವಲ್ಲ ಎಂದು ಖಾತರಿಯಾಯಿತು. ಕುತೂಹಲ ತಾಳಲಾರದೆ ಅಲ್ಲೇ ಬಿದ್ದಿದ್ದ ಕಡ್ಡಿಯಿಂದ ನೊರೆಯನ್ನು ಸರಿಸಿ ನೋಡಿದಾಗಲೆ ನನಗೆ ಅಚ್ಚರಿಯಾಗಿದ್ದು. ಏಕೆಂದರೆ ಆ ನೊರೆಯನ್ನು ಸೂಸುತ್ತಿದ್ದ ಜೀವಿ ಒಂದು ಕೀಟವಾಗಿತ್ತು.
ಈ ಕೀಟಕ್ಕೆ ಇಂಗ್ಲೀಷಿನಲ್ಲಿ Spittlebug ಅಥವಾ Froghopper ಎನ್ನುತ್ತಾರೆ. ಇದು Cercopidae ಎನ್ನುವ ಕುಟುಂಬ ವರ್ಗಕ್ಕೆ ಸೇರುತ್ತದೆ. ಈ ಕುಟುಂಬ ಸದಸ್ಯರ ವಿಶೇಷವೇನೆಂದರೆ ತಮ್ಮ ಚಿಕ್ಕ ವಯಸ್ಸಿನಲ್ಲಿ (Nymph stage) ತಮ್ಮ ಸುತ್ತಲು ನೊರೆಯ ಹೊದಿಕೆಯನ್ನು ಮಾಡಿಕೊಳ್ಳುವುದು. ಈ ನೊರೆಯನ್ನು ಕೀಟ ಸ್ವತಃ ಉತ್ಪಾದಿಸುವುದಿಲ್ಲ ಬದಲಿಗೆ ಗಿಡದ ರಸವನ್ನು ಈ ರೀತಿ ನೊರೆಯಾಗಿ ಪರಿವರ್ತಿಸುತ್ತದೆ.
ನೊರೆಯ ಹೊದಿಕೆಯಿಂದ, ಅನೇಕ ಪ್ರಯೋಜನವುಂಟು. ಇದು ಶತ್ರುಗಳಿಂದ ಅಡಗಿಕೊಳ್ಳಲು ಸಹಾಯ ಮಾಡುತ್ತದೆ. ಇದರ ರುಚಿ ಅಸಹನೀಯವಾದ್ದರಿಂದ ಶತ್ರುಗಳು ಈ ಕೀಟದ ತಂಟೆಗೆ ಹೋಗುವುದಿಲ್ಲ. ಅಷ್ಟೇ ಅಲ್ಲದೆ ಇದು ಪರಿಸರದ ಉಷ್ಣತೆಯಿಂದಲು ರಕ್ಷಣೆ ನೀಡುತ್ತದೆ. ಒಂದು ವೇಳೆ ಈ ಹೊದಿಕೆ ಏನಾದರು ಇರದಿದ್ದ ಪಕ್ಷದಲ್ಲಿ ಕೀಟ ಒಣಗಿ ಸತ್ತೇ ಹೋಗುತ್ತದೆ. ಈ ಕೀಟ ಗಿಡದ ರಸವನ್ನು ಸೇವಿಸಿದರು ಸಾಮಾನ್ಯವಾಗಿ ಗಿಡಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಆದರೆ ಕೆಲವು ಪ್ರಬೇಧಗಳಿಂದ ವ್ಯವಸಾಯಕ್ಕೆ ಹಾನಿಯಾಗುತ್ತದೆ.
ಚಿಕ್ಕ ವಯಸ್ಸಿನಲ್ಲಿ (Nymph stage) ಹಸಿರು ಬಣ್ಣದಲ್ಲಿರುತ್ತದೆ. ಆದರೆ ವಯಸ್ಕ ಕೀಟವಾಗಿ ಮಾರ್ಪಾಡಾದ ನಂತರ ವರ್ಣಮಯವಾಗುತ್ತದೆ. ಈ ಕೀಟಗಳ ಇನ್ನೊಂದು ವಿಶೇಷತೆ ಏನು ಗೊತ್ತ? ಇವು ತಮ್ಮ ದೇಹದ ಉದ್ದಕ್ಕಿಂತ ನೂರು ಪಟ್ಟು ಹೆಚ್ಚು ದೂರಕ್ಕೆ ಜಿಗಿಯಬಲ್ಲವು!!!!

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ