ಎ.ಪಿ.ಭಾರ್ಗವ್ (ಡಿಸೆಂಬರ್
2011ರಲ್ಲಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಜೀವ ಸಂಕುಲಗಳಿಂದ ಕೂಡಿದ ಚಿಕ್ಕದಾದ
ಕಾಡೊಂದು ಇದೆ ಎಂದರೆ ನಂಬುತ್ತೀರ?
ಅಗ್ನಿಶಿಖೆ |
ಹೌದು ಇದೆ.
ಈ ಕಾಡು ಬೆಂಗಳೂರು ದಕ್ಷಿಣ ಭಾಗದಲ್ಲಿ ತುರಹಳ್ಳಿ ಎನ್ನುವ ಗ್ರಾಮದ ಸಮೀಪವಿದೆ ಮತ್ತು ‘ತುರಹಳ್ಳಿ ಕಾಡು‘ ಹೆಸರನ್ನು ಪಡೆದು ಕೊಂಡಿದೆ. ಇದು ಬೆಂಗಳೂರು ಹೃದಯ ಭಾಗದಿಂದದ ಸುಮಾರು ಹದಿನೈದು ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿ, ರಘುವನಹಳ್ಳಿಯ ಬಳಿ ಉತ್ತರಹಳ್ಳಿ ಲಿಂಕ್ ರಸ್ತೆಯತ್ತ ತಿರುಗಿಕೊಂಡು ಸಾಗಿದರೆ ತುರಹಳ್ಳಿಯನ್ನು ತಲುಪಬಹುದು.
ಈ ಕಾಡು ಬೆಂಗಳೂರು ದಕ್ಷಿಣ ಭಾಗದಲ್ಲಿ ತುರಹಳ್ಳಿ ಎನ್ನುವ ಗ್ರಾಮದ ಸಮೀಪವಿದೆ ಮತ್ತು ‘ತುರಹಳ್ಳಿ ಕಾಡು‘ ಹೆಸರನ್ನು ಪಡೆದು ಕೊಂಡಿದೆ. ಇದು ಬೆಂಗಳೂರು ಹೃದಯ ಭಾಗದಿಂದದ ಸುಮಾರು ಹದಿನೈದು ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಕನಕಪುರ ರಸ್ತೆಯಲ್ಲಿ ಸಾಗಿ, ರಘುವನಹಳ್ಳಿಯ ಬಳಿ ಉತ್ತರಹಳ್ಳಿ ಲಿಂಕ್ ರಸ್ತೆಯತ್ತ ತಿರುಗಿಕೊಂಡು ಸಾಗಿದರೆ ತುರಹಳ್ಳಿಯನ್ನು ತಲುಪಬಹುದು.
ಕಾಮನ್ ಸಿಲ್ವರ್ ಲೈನ್ |
ತುರಹಳ್ಳಿ ಬಹಳ ವರ್ಷಗಳಿಂದ ಬೆಂಗಳೂರಿನ ಪರಿಸರ
ಪ್ರಿಯರಿಗೆ ನೆಚ್ಚಿನ ತಾಣ. ಇಲ್ಲಿಗೆ ಬಂಡೆಯನ್ನೇರುವವರು (Rock climbing), ಸೈಕ್ಲಿಂಗ್ ಮಾಡುವವರು, ಪ್ರಕೃತಿ ಛಾಯಾಗ್ರಾಹಕರು,
ಪಕ್ಷಿ, ಚಿಟ್ಟೆ ಮತ್ತು ಪರಿಸರ ವೀಕ್ಷಕರು ಬರುತ್ತಾರೆ. ಇದಲ್ಲದೆ ರಜದಿನದಂದು ಬದಲಾವಣೆ ಬಯಸಿ
ತಮ್ಮ ಮನೆಯವರೊಂದಿಗೆ ಬರುವವರು ಇದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಬಂದು ವಿಚಿತ್ರವಾಗಿ ಕಿರುಚಿ
ಕೀಟಲೆ ಮಾಡುವವರ ಸಂಖ್ಯೆಯೇನು ಕಡಿಮೆಯಿಲ್ಲ.
ಬೆಂಗಳೂರು ನಗರದ ಸಮೀಪವಿದ್ದರೂ ತುರಹಳ್ಳಿ
ಕಾಡಿನಲ್ಲಿನ ಜೀವರಾಶಿ ಆದ್ಭುತ ಶ್ರೀಮಂತವಾಗಿದೆ. ಹತ್ತು ಹಲವು ಜಾತಿಯ ಗಿಡ, ಮರ, ಹುಲ್ಲುಗಳು,
ನೂರಾರು ಬಗೆಯ ಕೀಟಗಳು, ಪಕ್ಷಿಗಳೇ ಅಲ್ಲದೆ ಕೆಲವು ಬಗೆಯ ಸಸ್ತನಿಗಳು ಇಲ್ಲಿ ಕಂಡು ಬರುತ್ತವೆ.
ಕಳ್ಳನಹಂಬಿನ ಹೂವನ್ನು ತಿನ್ನುತ್ತಿರುವ ಬ್ಲಿಸ್ಟರ್ ಬೀಟಲ್ |
ತುರಹಳ್ಳಿಯನ್ನು ಆನೆಗಳು ಈಗಲೂ ವಲಸೆ ಮಾರ್ಗವಾಗಿ ಬಳಸುತ್ತವೆ ಎಂಬುದೇ ಒಂದು
ವಿಸ್ಮಯ. ಕಳೆದ ವರ್ಷ ಸಹ ಆನೆಗಳು ತುರಹಳ್ಳಿಯ ಜಾಡು ಹಿಡಿದು ಸಾಗಿದ್ದವು. ಬನ್ನೇರುಘಟ್ಟದಿಂದ
ಇಲ್ಲಿಗೆ ಬರುವ ಆನೆಗಳು ಕೆಲವು ದಿನಗಳು ಬೀಡು ಬಿಟ್ಟು ಬಳಿಕ ಮರಳುತ್ತವೆ. ಇಲ್ಲಿ ಚುಕ್ಕೆ
ಜಿಂಕೆಗಳು ಕೂಡ ಕೆಲವು ಬಾರಿ ಕಾಣಿಸಿಕೊಂಡಿವೆ. ಚಿರತೆ ಮತ್ತು ಕಾಡುಹಂದಿಗಳೂ ಸಹ ಇಲ್ಲಿ ಇದ್ದರೆ
ಆಶ್ಚರ್ಯವೇನಿಲ್ಲ. ಇಲ್ಲಿ ಸಾಮಾನ್ಯವಾಗಿ ನೆಲೆಸಿರುವ ಇತರ ಸಸ್ತನಿಗಳೆಂದರೆ ನರಿ, ಮುಂಗುಸಿ
ಮತ್ತು ಕಾಡುಮೊಲ ಮುಂತಾದವು.
ತುರಹಳ್ಳಿಯಲ್ಲಿರುವ ಆರ್ಕಿಡ್ |
ಪಕ್ಷಿ ವೀಕ್ಷಕರಿಗಂತು ತುರಹಳ್ಳಿ ಸ್ವರ್ಗವೆಂದೆ ಹೇಳಬಹುದು. ಇಲ್ಲಿ ನವಿಲಿನ ಕೂಗು
ವಸಂತದ ಆಜೂ ಬಾಜೂ ಭೇಟಿ ಕೊಟ್ಟಾಗಲೆಲ್ಲ ಕೇಳಿಬರುತ್ತದೆ. ನವಿಲು, ಕಾಡುಕೋಳಿ, ಕವುಜುಗ, ಕೊಂಬಿನ
ಗೂಬೆ (great Indian owl), ಕೈರಾತ (bluefaced
malkoha), ಹೊಂಬೆನ್ನಿನ ಮರಕುಟಿಗ,
ಬಿಳಿಹುಬ್ಬಿನ ಪಿಕಳಾರ ಇಲ್ಲಿನ ವಿಶೇಷ ಹಕ್ಕಿಗಳು. ಕಾಜಾಣ, ಕೆಮ್ಮೀಸೆ ಪಿಕಳಾರ,
ಕೆಂಪುಕಿಬ್ಬೊಟ್ಟೆಯ ಪಿಕಳಾರ ಇಲ್ಲಿ ಸಾಮಾನ್ಯವಾಗಿ ಕಾಣುವ
ಹಕ್ಕಿಗಳು. ತುರಹಳ್ಳಿಯಲ್ಲಿ ಸುಮಾರು ೮೦ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ನೆಲೆಸಿವೆ. ಇಲ್ಲಿ ಹಲವು
ಜಾತಿಯ ಚಿಟ್ಟೆಗಳನ್ನು ನೋಡಬಹುದು. ಕ್ರಿಮ್ಸನ್ ರೋಸ್, ಟಾನಿ ಕೋಸ್ಟರ್, ಬ್ಯಾರೊನೆಟ್, ಕಾಮನ್
ಕ್ರೊ, ಕಾಮನ್ ಸಿಲ್ವರ್ ಲೈನ್ ಇನ್ನು ಮುಂತಾದ ಚಿಟ್ಟೆಗಳು ಸಾಮಾನ್ಯವಾಗಿ ಕಂಡು ಬರುತ್ತವೆ.
ತುರಹಳ್ಳಿಯಲ್ಲಿ UÀ, ಗುಲಗಂಜಿ, ಮುತ್ತುಗ,
ಆಲ, ಹೊಂಗೆ, ಗೋಣಿ, ಬೇವು, ಕಾಡು ಮಲ್ಲಿಗೆ, ಸೊಗಟ, ಚೆನ್ನಾಟ, ತಂಗಡಿ, ಕಳ್ಳನ ಹಂಬು (Ipomoea
obscura), ಮೂಗುತಿ ಬಳ್ಳಿ (Tridax
procumbens), ಅಹೇರು ಬಳ್ಳಿ (Asparagus
racemosus), ಗೌರಿ ಬೀಜ (Ipomoea nil) ಇನ್ನು ಮುಂತಾದ ಅಪರೂಪದ ಸಸ್ಯಗಳು ಇವೆ. ಹನ್ನೆರಡು ಬಗೆಯ ಹುಲ್ಲುಗಳು ತುರಹಳ್ಳಿ ಕಾಡಿನಲ್ಲಿ ಕಂಡು ಬರುತ್ತವೆ. ಇದಲ್ಲದೆ ಅರಣ್ಯ ಇಲಾಖೆ ಹಾಕಿರುವ ನೀಲಗಿರಿ ಮತ್ತು
ಅಕೇಶಿಯಾ ಮರಗಳು ತುರಹಳ್ಳಿಯ ತುಂಬೆಲ್ಲ ತುಂಬಿಕೊಂಡಿವೆ.
ತುರಹಳ್ಳಿಯ ಸುತ್ತೆಲ್ಲ ಅಣಬೆಯಂತೆ ಎದ್ದಿರುವ ಅಪಾರ್ಟಮೆಂಟ್ಗಳು |
ದಶ ದಿಕ್ಕುಗಳಿಗೂ ತನ್ನ ಕಬಂಧ ಬಾಹುಗಳನ್ನು
ಚಾಚಿಕೊಂಡು ಹಬ್ಬಿಕೊಳ್ಳುತ್ತಿರುವ ಬೆಂಗಳೂರಿನಂತಹ ನಗರದ ಸನಿಹದಲ್ಲಿ ತುರಹಳ್ಳಿಯಷ್ಟು
ಜೀವರಾಶಿಯನ್ನು ಹೊಂದಿರುವ ಪ್ರದೇಶ ಬೆಂಗಳೂರಿನ ಸಮೀಪ ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಸುಂದರ
ತುರಹಳ್ಳಿ ಕಾಡು ಎದುರಿಸುತ್ತಿರುವ ಅವನತಿಯ ಭಯವೆಂದರೆ ನಗರೀಕರಣ. ಇಲ್ಲಿಗೆ ಪಿಕ್ ನಿಕ್
ಹೆಸರಿನಲ್ಲಿ ಬರುವ ಜನ ತಾವು ತಂದು ತಿಂದ
ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಅಲ್ಲಿಯೇ ಬಿಸಾಡಿ ಹೋಗುತ್ತಾರೆ. ಅಲ್ಲದೆ ಇಲ್ಲಿಗೆ
ಕೆಲವು ಸಲ ಕಿಡಿಗೇಡಿಗಳು ಕಸದ ರಾಶಿಯನ್ನು ಸುರಿದು ಹೋಗಿದ್ದಾರೆ. ಈ ಜಾಗದ ಸುತ್ತಮುತ್ತವೆಲ್ಲ
ನಿವೇಶನ, ರಸ್ತೆಗಳು ನಿರ್ಮಾಣಗೊಂಡು ನಿಶ್ಯಬ್ದವಾಗಿದ್ದ ಈ ಜೀವಸಂಕುಲದ ಸುಂದರ ತಾಣ ಜನಸಂಚಾರದ ಅಪಾಯಕ್ಕೆ ಸಿಲುಕುತ್ತಿದೆ. ಇತ್ತೀಚೆಗೆ
ಕೆಲವು ಮಂದಿ ಮೋಟರ್ ಬೈಕ್ ಸಾಹಸ ಮಾಡಲು ಈ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ. ಬೆಳಗಿನಿಂದ
ಸಂಜೆಯವರೆಗು ಇವರು ಹೊರಡಿಸುವ ಕರ್ಕಶ ಸದ್ದು ಕಾಡಿನ ನೀರವತೆಯನ್ನು ಛಿದ್ರಗೊಳಿಸುತ್ತದೆ. ಖಾಸಗಿ ಕಂಪೆನಿಯೊಂದು ನಿರ್ಮಿಸಿರುವ ರಸ್ತೆಯಿಂದಾಗಿ
ತುರಹಳ್ಳಿ ಮತ್ತು ಇತರ ಕಾಡಿಗೆ ಸಂಪರ್ಕ ಕಡಿದು ಹೋಗಿ ಪ್ರಾಣಿಗಳ ವಲಸೆಯ ಮೇಲೆ ಅಪಾರ ಪರಿಣಾಮ
ಬೀರಿದೆ.
ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ತುರಹಳ್ಳಿ ಕಾಡು
ತನ್ನ ಜೀವರಾಶಿಯನ್ನು ಉಳಿಸಿಕೊಳ್ಳುವುದು ಅನುಮಾನ. ಈ ಕಾಡನ್ನು ವೈಜ್ಞಾನಿಕವಾಗಿ ಸಂಶೋಧಿಸುವ
ಅಗತ್ಯವಿದೆ. ಇಂತಹ ಸಂಶೋಧನೆಗಳು ಇಲ್ಲಿನ ಸಮಸ್ಯೆಗಳ ಮೇಲೆ ಇನ್ನಷ್ಟು ಬೆಳಕು ಚೆಲ್ಲಬಹುದು.
ಬೆಂಗಳೂರಿನಲ್ಲಿರುವ ಪ್ರಕೃತಿಪ್ರಿಯರು ಈ ಚಿಕ್ಕ, ಸುಂದರ ಕಾಡನ್ನು ಉಳಿಸಿಕೊಳ್ಳಲು ಮುಂದೆ
ಬರಬೇಕಾದ ಅವಶ್ಯಕತೆಯಿದೆ.
The orchid details: Roxburgh's Habenaria is an erect tuberous ground orchid, up to 30 cm tall. Leaves are circular, lying flat on the ground. Flowers are white, borne in elongated racemes. Roxburgh's Habenaria is commonly found in the undergrowth of forest in shady localities in the Eastern Ghats. Flowering: July–August.
ಪ್ರತ್ಯುತ್ತರಅಳಿಸಿ