ನೀವು ಕೆಲವು ಬಾರಿ ಮಣ್ಣಿನಲ್ಲಿ ಕೋನ್ ಆಕೃತಿಯ ಚಿಕ್ಕ ಹಳ್ಳವನ್ನು ನೋಡಬಹುದು. ಇದು ಒಂದು ಕೀಟದ ಕೆಲಸವೆಂದರೆ ನಂಬಲೇಬೇಕು.
ಈ ಕೀಟದ ಹೆಸರು ಇರುವೆ ಸಿಂಗ. ಇದು ಪ್ರಪಂಚದಾದ್ಯಂತ ಕಂಡು ಬರುತ್ತವೆ. ಮರಳುಗಾಡು ಹಾಗು ಒಣ ಪ್ರದೇಶ ಇದರ ಸ್ವಭಾವಿಕ ನೆಲೆ.
ಇರುವೆ ಸಿಂಗ ಮೈರ್ಮೆಲಿಯೋಂಟಿಡೆ. (Myrmeleontidae) ಎನ್ನುವ ಕುಟುಂಬಕ್ಕೆ ಸೇರುತ್ತದೆ. ಹಳ್ಳವನ್ನು ತೋಡುವುದು ಈ ಜೀವಿಯ ಲಾರ್ವಗಳು. ಉದ್ದೇಶ ತನ್ನ ಬೇಟೆಯನ್ನು ಹಿಡಿಯಲೆಂದು. ಹಳ್ಳವನ್ನು ತೋಡಿದ ನಂತರ ಲಾರ್ವ, ಹಳ್ಳದ ಮಧ್ಯದ ಮಣ್ಣಿನಲ್ಲಿ ಅಡಗಿಕೊಳ್ಳುತ್ತದೆ. ಇದರ ಹರಿತವಾದ ದವಡೆ (Mandible) ಮಾತ್ರ ಮಣ್ಣಿನಿಂದ ಹೊರಗಿರುತ್ತದೆ.
ತನ್ನ ಆಹಾರವನ್ನು ಅರಸುತ್ತ ಓಡಾಡುತ್ತಿರುವ ಇರುವೆಯೇನಾದರು ಹಳ್ಳದೊಳಗೆ ಕಾಲಿಟ್ಟರೆ ಅದರ ಕಥೆ ಅಲ್ಲಿಗೆ ಮುಗಿಯುತ್ತದೆ. ಏಕೆಂದರೆ ಹಳ್ಳದ ಒಳಗಿನ ಮಣ್ಣು ಮೃಧುವಾಗಿದ್ದು, ಇರುವೆ ಹೊರ ಬರಲು ಪ್ರಯತ್ನಿಸಿದಂತೆಲ್ಲ ಮತ್ತಷ್ಟು ಒಳ ಸರಿಯುತ್ತದೆ. ಇನ್ನು ಕೆಲವೊಮ್ಮೆ ಲಾರ್ವ ಮಣ್ಣನ್ನು ಸಡಿಲಿಸಿ ಇರುವೆ ತನ್ನ ಹತ್ತಿರ ಬೇಗ ಬರುವಂತೆ ಮಾಡುತ್ತದೆ. ಲಾರ್ವ ಬೆಳೆದಂತೆಲ್ಲ ಅದು ತೋಡುವ ಹಳ್ಳವು ದೊಡ್ಡದಾಗುತ್ತದೆ. ಕೊನೆಗೊಂದು ಲಾರ್ವ ಗೂಡನ್ನು ನಿರ್ಮಿಸಿ ಆನಂತರ ವಯಸ್ಕ ಕೀಟವಾಗಿ ಮಾರ್ಪಾಡಾಗುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ