ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಚಿತ್ರ: © ಶ್ರೀಕಾಂತ ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. ಚಿತ್ರ: © ಶ್ರೀಕಾಂತ Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5...

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

 ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ್ರ...

ಅತ್ತಿ

ನಾನು ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಾಲೆಯ ಮುಂದೆ ದೊಡ್ಡ ಮರವೊಂದಿತ್ತು. ಆ ಮರದ ಕೆಳಗೆ ಅದರ ಹಣ್ಣುಗಳು ಸದಾ ಬಿದ್ದಿರುತ್ತಿದ್ದವು. ಒಳ್ಳೆಯ ಪರಿಮಳವಿದ್ದ ಆ ಹಣ್ಣನ್ನು ತಿನ್ನಬಹುದೆ ಎಂಬ ಕುತೂಹಲದಿಂದ ಬಿಡಿಸಿದರೆ ಅದರ ತುಂಬಾ ಹುಳುಗಳು ಇದ್ದದ್ದು ನೋಡಿ ನಿರಾಸೆ ಉಂಟಾಯಿತು. ಕೆಳಗೆ ಬಿದ್ದ ಹಣ್ಣಾದ್ದರಿಂದ ಹುಳು ಹಿಡಿದಿದೆ ಮರದಿಂದ ನೇರವಾಗಿ ಕಿತ್ತ ಹಣ್ಣನ್ನು ತಿನ್ನಬಹುದು ಎಂಬ ದೂರದಾಸೆ ಇನ್ನೂ ಇತ್ತು ಆದರೆ ಕೈಗೆಟುಕುವ ಅಂತರದಲ್ಲಿ ಹಣ್ಣುಗಳು ಇರಲಿಲ್ಲ.

ಮುಡಿಗೆ ಮಿಡತೆ

ಸಾಮಾನ್ಯವಾಗಿ ಪ್ರಾಣಿಗಳು ತಮ್ಮ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಥವಾ ಬೇಟೆಯನ್ನು ಹಿಡಿಯಲು ಕಂಡುಕೊಂಡಿರುವ ಒಂದು ಮಾರ್ಗವೆಂದರೆ ಅದು ಮರೆಮಾಚಿಕೊಳ್ಳುವುದು. ಮರೆಮಾಚಿಕೊಳ್ಳುವುದು ಎಂದರೆ ಇತರರ ಕಣ್ಣಿಗೆ ಸರಿಯಾಗಿ ಕಾಣದ ಹಾಗೆ ತನ್ನ ಸುತ್ತಲಿನ ಪರಿಸರದಲ್ಲಿ ಲೀನವಾಗುವುದು. ತನ್ನ ದೇಹದ ಬಣ್ಣ ತನ್ನ ಸುತ್ತಲಿನ ಪರಿಸರದ ಬಣ್ಣವೆ ಆಗಿದ್ದರೆ ನಮ್ಮ ಕಣ್ಣಿಗೆ ಅದು ಕಾಣುವುದಿಲ್ಲ. ಆದರೆ ಇದು ಇಷ್ಟಕ್ಕೆ ನಿಲ್ಲದೆ ದೇಹದ ಆಕಾರವು ತನ್ನ ಸುತ್ತಲಿನ ಪರಿಸರದಂತೆ ಬದಲಾದರೆ ಅಂತಹ ಪ್ರಾಣಿಯನ್ನು ಹುಡುಕುವುದು ಇನ್ನು ಕಷ್ಟವಾಗುತ್ತದೆ. ಅಂತಹ ಒಂದು ಕೀಟವೆ ಮುಡಿಗೆ ಮಿಡತೆ.

ಏಪ್‌ಫ್ಲೈ ಅಥವಾ ಮಂಗನ ಮುಖದ ಚಿಟ್ಟೆ (Spalgis epius)

ನಾನು ಚಿಪ್ಪು ಕೀಟಗಳು ಬರೆದು ಕೆಲವು ತಿಂಗಳಾಗಿತ್ತು ಅಷ್ಟೇ ನನಗೆ ಇದರೊಂದಿಗೆ ಮತ್ತೊಮ್ಮೆ ಎದುರಾಗುವ ಸಂದರ್ಭ ಬಂತು. ನಾನು ಲಾಲ್ ಬಾಗ್ ನಿಂದ ಒಂದು ದಾಸವಾಳದ ಗಿಡ ತಂದು ಕುಂಡದಲ್ಲಿ ನೆಟ್ಟು ಬೆಳೆಸತೊಡಗಿದೆ. ಚೆನ್ನಾಗಿ ಹೂ ಬಿಡುತ್ತ ಬೆಳೆಯುತ್ತಿದ್ದ ಗಿಡ ಕೆಲವೆ ವಾರಗಳಲ್ಲಿ ಚಿಪ್ಪು ಕೀಟದ ಆಕ್ರಮಣಕ್ಕೆ ಒಳಗಾಯಿತು. ಈ ಬಾರಿ ಕಾಣಿಸಿಕೊಂಡ ಕೀಟ ಹಿಂದೆ ನೋಡಿದ್ದ ಚಿಪ್ಪು ಕೀಟಗಳಂತೆ ಇರದೆ ಭಿನ್ನವಾಗಿತ್ತು. ಇದಕ್ಕೆ ಇಂಗ್ಶೀಷಿನಲ್ಲಿ ಮೀಲಿ ಬಗ್ ಎನ್ನುತ್ತಾರೆ. ನೋಡಲು ಬಿಳಿ ಬಣ್ಣದ ಕೀಟಗಾಳಾಗಿದ್ದ ಇವು ಯಾವುದೋ ಪುಡಿಯನ್ನು ಮೈ ಮೇಲೆ ಬಳಿದು ಕೊಂಡಂತೆ ಕಾಣುತ್ತಿದ್ದವು. ನೋಡುತ್ತಿದ್ದಂತೆ ಇವು ಸಂಖ್ಯೆ ಹೆಚ್ಚಾಗತೊಡಗಿತು ಹೀಗೆ ಬಿಟ್ಟರೆ ದಾಸವಾಳದ ಗಿಡವನ್ನು ಮುಗಿಸಿಬಿಡುತ್ತದೆ ಎಂದು ಅವುಗಳ ನಿರ್ಮೂಲನೆಗೆ ಕೆಲವು ಕ್ರಮಗಳನ್ನು ಕೈಗೊಂಡೆ. ಆದರೆ ಇವು ಅಷ್ಟು ಸುಲಭವಾಗಿ ಜಗ್ಗಲಿಲ್ಲ.

ಸಿಲ್ವರ್‌ಫಿಶ್(Lepisma saccharina)

ಪುಸ್ತಕಗಳನ್ನು ಓದುವ ಹವ್ಯಾಸ ಇರುವವರಿಗೆ ಅದರಲ್ಲು ಹಳೆಯ ಪುಸ್ತಕಗಳನ್ನು ಓದವವರಿಗೆ ಒಂದು ಜೀವಿಯ ಪರಿಚಯ ಇದ್ದೆ ಇರುತ್ತದೆ. ಪುಟಗಳನ್ನು ತಿರುವಿದಾಗ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಇವು ಬುಳ ಬುಳನೆ ಓಡಾಡಿ ಗಾಬರಿಯನ್ನು ಉಂಟುಮಾಡಬಹುದು. ಹೀಗೆ ಮಾಡಿ ಆತಂಕಗೊಂಡ ಓದುಗರ ಕೋಪಕ್ಕೆ ಬಲಿಯಾಗಲುಬಹುದು. ಈ ರೀತಿ ಪುಸ್ತಕಗಳಲ್ಲಿ ನಮಗೆ ಎದುರಾಗುವ ಜೀವಿ ಸಿಲ್ವರ್ ಫಿಶ್.

ಕಾಡಿನ ಸುಂದರ ಗಾಯನಗಳು

 ನಾನು ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಬೆಳಕು ಹರಿದಿಲ್ಲದ, ಕತ್ತಲು ತುಂಬಿದ ಬೆಳಗಿನ ಜಾವ. ರಾತ್ರಿಯಿಡಿ ತಮ್ಮ ಆಹಾರ ಅರಸುತ್ತಾ ಕಾಡೆಲ್ಲಾ ಸುತ್ತಾಡಿದ ನಿಶಾಚರ ಪಕ್ಷಿಗಳಿಗೆ ವಿಶ್ರಾಂತಿಯ ಸಮಯ. ಪ್ರಮುಖವಾಗಿ ನಮ್ಮ ಕ್ಯಾಂಪಿನ ಬಳಿ ಮೂರು ಪಕ್ಷಿಗಳ ಕೂಗು ಕೇಳುತ್ತಿದೆ. Brown Hawk Owl, Oriental Scops Owl ಮತ್ತು Jerdon’s Nightjar ಕೂಗುಗಳು ಇನ್ನೂ ರಾತ್ರಿಯ ಅನುಭವವನ್ನೇ ಕಟ್ಟಿಕೊಡುತ್ತಿದೆ. ರಾತ್ರಿಯೆಂದರೆ ಬರಿಯ ಕತ್ತಲು ಮಾತ್ರವಲ್ಲ, ಅದು ನಿಗೂಢ. ಸಮಯ ಸರಿಯುತ್ತಿದೆ. ಆಕಾಶ ಸ್ವಲ್ಪವೇ ಬೆಳಗಾಗಿದ್ದರೂ ಮಬ್ಬು ಮಬ್ಬು. ದೈತ್ಯ ಮರಗಳಿರುವ ಕಾಡು, ರಸ್ತೆ, ಕ್ಯಾಂಪಿನ ಸುತ್ತ ಮುತ್ತ ಎಲ್ಲವೂ ಇನ್ನೂ ಕತ್ತಲು. ಇಲ್ಲೇ ಹೀಗಿದ್ದರೆ ಕಾಡಿನ ಒಳಗಿನ ನನ್ನ ಮೆಚ್ಚಿನ ಕೆಲವು ಸ್ಥಳಗಳು ಹೇಗಿರಬಹುದೆಂದು ಊಹಿಸುತ್ತಿದ್ದೇನೆ. ಭಯವಾಗುತ್ತದೆ. ಅಬ್ಬಾ! ಸದ್ಯ ನಾನು ಅಲ್ಲಿಲ್ಲವಲ್ಲ. ಈಗ ಸ್ವಲ್ಪ ಬೆಳಕಾಗಿದೆ. ಅದರೆ Brown Hawk Owlಗಳಿಗೇನೋ ಅಸಹನೆ ಅನಿಸುತ್ತದೆ. ಕತ್ತಲನ್ನು ಬಿಟ್ಟುಕೊಡಲು ಸಿದ್ದವಿಲ್ಲದಂತೆ ಕೂಗುತ್ತಿದೆ. ಅರೆ! ಶುರುವಾಗಿಯೇ ಬಿಟ್ಟಿತು ಕಾಜಣಗಳ ಅಲಾಪ. ಅದು ಸತತವಾಗಿಯಲ್ಲ, ಈಗ ಕೂಗಿದರೆ ಮತ್ತೆರಡು ನಿಮಿಷ ಬಿಟ್ಟು, ವಿರಳವಾಗಿ. ಇಂತಹ ಸಮಯದಲ್ಲೇ ನಮ್ಮ ಕ್ಯಾಂಪಿನ ಗೋಡೆಯ ಸಂದಿಯಲ್ಲಿರುವ ಬಿಲದಲ್ಲಿ ವಾಸವಾಗಿರುವ ಬಾವಲಿಗಳೆರಡು ಒಳಗೆ ನುಗ್ಗಲು ಹವಣಿಸುತ್ತಿವೆ. ನಿಶಾಚರ ಪಕ್ಷಿಗಳ ಸದ್ದೆಲ್ಲಾ ಈ...

ಕಾಮನ್ ಮಾರ್ಮನ್ (Papilio polytes)

ನಮ್ಮ ತೋಟದಲ್ಲಿ ಕರಿಬೇವಿನ ಸಸಿಯನ್ನು ನೆಡಲಾಗಿತ್ತು. ಇದು ಸ್ವಲ್ಪ ನಿಧಾನವಾಗಿ ಬೆಳೆಯುವ ಮರ. ಹಾಗಾಗಿ ಒಂದೆರಡು ವರ್ಷವಾಗಿದ್ದರು ಅಂತಹ ಎತ್ತರ ಬೆಳೆದಿರಲಿಲ್ಲ. ನಾನು ಅನೇಕ ವೇಳೆ ಈ ಗಿಡದ ಎಲೆಗಳ ಮೇಲೆ ಹಕ್ಕಿಯ ಹಿಕ್ಕೆ ಬಿದ್ದಿರುವುದು ಗಮನಿಸುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಪಾರಿವಾಳಗಳ ಸಂಖ್ಯಾಸ್ಫೋಟದಿಂದಾಗಿ ಎಲ್ಲೆಂದರಲ್ಲಿ ಅವುಗಳ ಹಿಕ್ಕೆ ಬಿದ್ದಿರುತ್ತಿತ್ತು. ಹೀಗಾಗಿ ಕರಿಬೇವಿನ ಎಲೆಗಳ ಮೇಲಿರುವ ಹಕ್ಕಿಯ ಹಿಕ್ಕೆ ವಿಶೇಷವಾಗಿ ನನ್ನ ಗಮನ ಸೆಳೆದಿರಲಿಲ್ಲ. 

ತೆಳು ಗಾಳಿಗೆ - ಪಕ್ಷಿಗಳ ಉಗಮ

"ವೈ ಎವಲ್ಯೂಶನ್ ಈಸ್ ಟ್ರು ?” ಪುಸ್ತಕದ ಆಯ್ದ ಭಾಗ ಕನ್ನಡದಲ್ಲಿ ಅರ್ಧ ರೆಕ್ಕೆಯ ಪ್ರಯೋಜನವೇನು? ಇದು ಪ್ರಾಕೃತಿಕ ಆಯ್ಕೆ ಅಥವಾ ವಿಕಾಸವಾದದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಡಾರ್ವಿನ್ ಕಾಲದಿಂದಲು ಪ್ರಚಲಿತವಿರುವ ಪ್ರಶ್ನೆ. ಜೀವ ವಿಜ್ಞಾನಿಗಳ ಪ್ರಕಾರ ಪಕ್ಷಿಗಳು ಆರಂಭಿಕ ಉರಗಗಳಿಂದ ವಿಕಾಸ ಹೊಂದಿವೆ. ಆದರೆ ಒಂದು ನೆಲವಾಸಿ ಪ್ರಾಣಿಯು ಹೇಗೆ ಹಾರುವ ಸಾಮರ್ಥ್ಯವನ್ನು ಪಡೆಯುತ್ತದೆ? ಪ್ರಾಕೃತಿಕ ಆಯ್ಕೆಯು ಈ ಪರಿವರ್ತನೆಯನ್ನು ವಿವರಿಸಲಾಗುವುದಿಲ್ಲ. ಏಕೆಂದರೆ ಇದಕ್ಕಾಗಿ ಜೀವಿಗಳು ಒಂದು ಮಧ್ಯಂತರ ಕಾಲಘಟ್ಟದಲ್ಲಿ ಕೇವಲ ಅಪೂರ್ಣಾವಸ್ಥೆಯಲ್ಲಿರುವ ರೆಕ್ಕೆಯನ್ನು ಹೊಂದಿರಬೇಕು. ಇದು ಆ ಜೀವಿಗೆ ಆಯ್ಕೆಯ ಪ್ರಯೋಜನಕ್ಕಿಂತ ಹೊರೆಯನ್ನೆ ಉಂಟುಮಾಡುತ್ತದೆ ಎಂದು ಸೃಷ್ಟಿ ವಾದಿಗಳು ವಾದಿಸುತ್ತಾರೆ.

ವೈ ಎವಲ್ಯೂಶನ್ ಈಸ್ ಟ್ರು ?

ವೈ ಎವಲ್ಯೂಶನ್ ಈಸ್ ಟ್ರು ? (ವಿಕಾಸ ನಿಜವೇಕೆ?) ನಾನು ಮೊದಲ ಬಾರಿ ಈ ಪುಸ್ತಕ ನೋಡಿದ್ದು ಲಂಡನ್ ನ ಒಂದು ಲೈಬ್ರರಿಯಲ್ಲಿ. ಜೀವವಿಕಾಸ ನನ್ನ ನೆಚ್ಚಿನ ವಿಷಯ ಗಳಲ್ಲೊಂದು ಹಾಗಾಗಿ ಕೈಗೆತ್ತಿಕೊಂಡೆ. ಮೊದಲ ಪುಟವೆ ಕುತೂಹಲ ಮೂಡಿಸಿ ಓದಿಸಿಕೊಂಡು ಹೋಯಿತು. ಈ ಮೊದಲು ನಾನು ಜೀವವಿಕಾಸದ ಕೆಲವು ಪುಸ್ತಕಗಳನ್ನು ಓದಿದ್ದೆ ಆದರು ಇದು ಕುತೂಹಲ ಮೂಡಿಸಿದ್ದು ಅದರ ಮುನ್ನುಡಿಯ ವಿಷಯಕ್ಕಾಗಿ. ಲೇಖಕರಾದ ಜೆರಿ ಎ ಕಾಯ್ನ್ ತಾವು ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಬರೆಯಬೇಕಾಗಿ ಬಂತು ಎಂದು ವಿವರಿಸುತ್ತ ವಿಕಾಸವಾದದ ಬಗ್ಗೆ ಕೆಲವರಿಗಿರುವ ವಿರೋಧಾಭಿಪ್ರಾಯದ ಬಗ್ಗೆ ಬರೆಯುತ್ತಾರೆ. ಅದು ಹೀಗಿದೆ: ೨೦೦೫ರಲ್ಲಿ ಡೋವರ್ ನ ಪೆನ್ಸಿಲ್ವೇನಿಯಾ ಸ್ಕೂಲ್ ಡಿಸ್ಟ್ರಿಕ್ಟ್ ನ ಆಡಳಿತಗಾರರು ಹೈಸ್ಕೂಲ್ ನ ಜೀವಶಾಸ್ತ್ರ ವಿಷಯಕ್ಕಾಗಿ ಯಾವ ಪಠ್ಯ ವನ್ನು ಆಯ್ಕೆ ಮಾಡಬೇಕು ಎಂದು ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಕೆಲವು ಧಾರ್ಮಿಕ ಸದಸ್ಯರು ಪ್ರಸ್ತುತ ಪಠ್ಯದಲ್ಲಿರುವ ಡಾರ್ವಿನ್ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದರ ಬದಲು ಬೈಬಲಿಕಲ್ ಸೃಷ್ಟಿವಾದದ ಪಠ್ಯವನ್ನು ನಿಯಮಿಸಬೇಕು ಎನ್ನುತ್ತಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿಕೊಡುತ್ತದೆ. ಕೊನೆಗೆ ಸಭೆ ಒಂದು ನಿರ್ಣಯ ಹೊರಡಿಸುತ್ತದೆ ಅದರಂತೆ ಜೀವಶಾಸ್ತ್ರದ ಶಿಕ್ಷಕರು ತರಗತಿಯಲ್ಲಿ ಈ ಹೇಳಿಕೆಯನ್ನು ಓದಬೇಕಾಗುತ್ತದೆ. "ಡಾರ್ವಿನ್ ವಿಕಾಸವಾದ ಕೇವಲ ವಾದವಷ್ಟೆ ಅದು ನಿಜವಲ್ಲ ಅದಿನ್ನೂ ಪರೀಕ್ಷೆಗೆ ಒ...