ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನೆಲದ ಮೇಲಿನ ಪಕ್ಷಿಗಳು

 ಬಂಡಿಪುರದ ಮೋಯಾರ್ ಕುರುಚಲು ಕಾಡು, ಹುಲ್ಲುಗಾವಲಿನಲ್ಲಿ ಸುತ್ತಾಡುವಾಗ ಎಷ್ಟೊಂದು ಪಕ್ಷಿಗಳು ಹಾರಿ ಮರೆಯಾಗುತ್ತಿದ್ದವು. ಎಲ್ಲೋ ಮರದ ಮೇಲೆ ಕುಳಿತರೆ ಹುಡುಕಬಹುದೇನೋ, ಆದರೆ ಹುಲ್ಲುಗಳ ನಡುವೆ, ಪೊದೆಗಳ ಮಧ್ಯೆ ಅಡಗಿ ಕುಳಿತ ಅವುಗಳನ್ನು ಹುಡುಕಲು ಅಸಾಧ್ಯವಾದುದಕ್ಕೆ ಆ ಪಕ್ಷಿಗಳ ಬಣ್ಣವೂ ಕಾರಣ. ಅಲ್ಲಿನ ಹುಲ್ಲು, ಪೊದೆ, ನೆಲದ ಮಣ್ಣಿನ ಬಣ್ಣ ಇವುಗಳಲ್ಲಿ ಕರಗಿ ಹೋಗುತ್ತದೆ. ಆದರೆ ಆ ಪಕ್ಷಿಗಳು ತುಂಬಾ ದೂರದವರೆಗೂ ಹಾರುವುದಿಲ್ಲ. ಸ್ವಲ್ಪದೂರ ಹಾರಿ, ಸ್ವಲ್ಪ ದೂರ ಓಡಿ ಪೊದೆಗಳಲ್ಲಿ ಮರೆಯಾಗುತ್ತದೆ. ಕೆಲವೊಮ್ಮೆ ಹತ್ತಿರ ಹೋಗುವವರೆವಿಗೂ ಸುಮ್ಮನಿದ್ದು, ತುಂಬಾ ಹತ್ತಿರವಾದಾಗ ಸದ್ದು ಮಾಡಿ ಹಾರುತ್ತದೆ. ನಾನು ಗೊತ್ತಿಲ್ಲದೆ ಈ ರೀತಿ ಪಕ್ಷಿಗಳ ತುಂಬಾ ಹತ್ತಿರ ಹೋಗಿ, ಅವುಗಳು ಹಾರಿ ಹೋದಾಗ ಬೆಚ್ಚಿ ಬಿದ್ದಿದ್ದೇನೆ. ಮೋಯಾರ್ ಕಾಡಿನಲ್ಲಿ ಒಂದು ಬೆಳಗ್ಗೆ ಬರುತ್ತಿದ್ದಾಗ Indian Thick-knee ನೋಡಿದ್ದೆ. ಅದು ನಮ್ಮನ್ನು ನೋಡಿ ರಸ್ತೆಯಲ್ಲೇ ಸ್ವಲ್ಪ ದೂರ ಓಡಿ, ನಾಮಕಾವಸ್ಥೆಗೆ ಸ್ವಲ್ಪ ದೂರ ಹಾರಿ, ರಸ್ತೆಯಿಂದ ಸ್ವಲ್ಪ ಒಳಗೆ ಕುಳಿತುಕೊಂಡಿತು. ಚಿತ್ರ: © ಶ್ರೀಕಾಂತ ಕಾವೇರಿ ತೀರದ ಕುರುಚಲು ಕಾಡುಗಳಲ್ಲಿ Painted Sandgrouse ನಾವು ಹೋಗುತ್ತಿದ್ದಂತೆ, ನಮ್ಮಿಂದ ಸ್ವಲ್ಪ ದೂರ ಓಡಿ, ನಮಗೆ ಬೆನ್ನು ಹಾಕಿ, ಇನ್ನೇನು ಹಾರುವ ಭಂಗಿಯಲ್ಲಿ ಕುಳಿತಿತ್ತು. ಚಿತ್ರ: © ಶ್ರೀಕಾಂತ ಟಿಟ್ಟಿಭ - Red-wattled Lapwing ತುಂಬಾ ಗಲಾ...

ಚಂದ್ರನ ಚಲನೆಗಳು

ನಮಗೆ ತಿಳಿದಿರುವಂತೆ ನಮ್ಮ ಗೆಲಾಕ್ಸಿಯಲ್ಲಿ ಎಲ್ಲಾ ನಕ್ಷತ್ರಗಳು ಗೆಲಾಕ್ಸಿಯ ಕೇಂದ್ರದ ಸುತ್ತ, ಗ್ರಹಗಳು ನಕ್ಷತ್ರಗಳ ಸುತ್ತ, ಆ ಗ್ರಹಗಳನ್ನು ಕೆಲವು ಉಪಗ್ರಹಗಳು ಸುತ್ತುತ್ತಾ ಎಲ್ಲವೂ ಸತತ ಚಲನೆಯಲ್ಲಿವೆ. ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಸೂರ್ಯನ ಸುತ್ತ ಪ್ರಮುಖವಾಗಿ ಎಂಟು ಗ್ರಹಗಳು, ಕುಬ್ಜಗ್ರಹಗಳು (Dwarf Planets – Pluto ಈಗ ಒಂದು ಕುಬ್ಜಗ್ರಹ ಪಟ್ಟಿಯಲ್ಲಿರುವ ಗ್ರಹ), ಧೂಮಕೇತುಗಳು, ಅನೇಕ ಕ್ಷುದ್ರಗ್ರಹಗಳು (ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಪಟ್ಟಿ), ಸುತ್ತುತ್ತಿವೆ.

ಹೊಳೆ ದಾಸವಾಳ

ಹೂವುಗಳು ಗೊಂಚಲಾಗಿ , ಗುಲಾಬಿ ಅಥವ ನೇರಳೆ ಬಣ್ಣದಲ್ಲಿ ಇರುತ್ತದೆ . ಹೊಳೆ ದಾಸವಾಳ ಸುಂದರವಾದ ಹೂವುಗಳನ್ನು ತಳೆಯುವ ಮರ. ಇದು ಭಾರತ, ಬಾಂಗ್ಲಾದೇಶ, ಚೈನ, ಥಾಯ್ಲೆಂಡ್, ಶ್ರೀಲಂಕಾ, ಮಲೇಶಿಯಾ ಇನ್ನು ಮುಂತಾದ ಆಗ್ನೇಯ ಏಶಿಯದ ದೇಶಗಳಲ್ಲಿ ಕಂಡುಬರುತ್ತದೆ. ಇದರ ಕನ್ನಡದ ಮತ್ತೊಂದು ಹೆಸರು ಹೊಳೆ ಮತ್ತಿ. ಇದಕ್ಕೆ ಇಂಗ್ಲೀಷ್‌ನಲ್ಲಿ ಕ್ವೀನ್ಸ್ ಪ್ಲವರ್, ಕ್ವೀನ್ ಆಫ್ ಪ್ಲವರ್, ಕ್ವೀನ್ ಕ್ರೇಪ್ ಮೈರ್ಟಲ್ ಮತ್ತು ಪ್ರೈಡ್ ಆಫ್ ಇಂಡಿಯಾ ಎಂಬ ಹೆಸರಿವೆ. ಹಿಂದಿಯಲ್ಲಿ ಇದರ ಹೆಸರು "ಜರುಲ್". ಇದರ ವೈಜ್ಞಾನಿಕ ಹೆಸರು "ಲ್ಯಾಗರ್ಸ್ಟ್ರೋಮಿಯ ಸ್ಪೀಸಿಯೋಸ". ಇದು ಮಹಾರಾಷ್ಟ್ರದ ರಾಜ್ಯ ಪುಷ್ಪ. ತೊಗಟೆಯಲ್ಲಿ ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಹೊಳೆ ದಾಸವಾಳ ಮಧ್ಯಮ ಗಾತ್ರದ ಅಂದರೆ ಸುಮಾರು ೪೦ ಮೀ. ಎತ್ತರಕ್ಕೆ ಬೆಳೆಯುವ ಮರ. ಸಾಮಾನ್ಯವಾಗಿ ಈ ಮರ ಬೆಳೆಯುವುದು ತುಂಬಾ ನಿಧಾನ. ನೀರಿನ ಹರಿವಿರುವ ಕಡೆ ಇದು ವೇಗ ಮತ್ತು ಎತ್ತರವಾಗಿ ಬೆಳೆಯುತ್ತದೆ. ಆದರೆ ಒಣ ಪ್ರದೇಶದಲ್ಲಿ ಬೆಳವಣಿಗೆ ಕುಂಠಿತಗೊಂಡು ಕುಬ್ಜವಾಗಿರುತ್ತದೆ. ಹೊಳೆ ದಾಸವಾಳ ಎಲೆಯುದುರಿಸುವ ಮರ. ಇದರ ತೊಗಟೆ ಬೂದು ಬಣ್ಣದಾಗಿದ್ದು ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಎಲೆಗಳು ಸರಳವಾಗಿದ್ದು ಉದ್ದಕೆ ದೀರ್ಘವೃತ್ತಾಕಾರವಾಗಿರುತ್ತದೆ. ಇದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ನಲ್ಲಿ ಹೂ ತಳೆಯುತ್ತದೆ. ಇದರ ಹೂವುಗಳು ಗೊಂಚಲಾ...

ಹೊಂಗೆ

ಹೊಂಗೆ ಅನೇಕ ಕೀಟಗಳನ್ನು ಆಕರ್ಷಿಸುತ್ತದೆ .  ನಮ್ಮ ದೇಶದಲ್ಲಿ ಅದರಲ್ಲು ದಕ್ಷಿಣ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವ ಮರ ಯಾವುದು ಎಂದರೆ ಅದು ಹೊಂಗೆ ಎಂದೆ ಹೇಳಬಹುದು . ಈ ಮರಗಳು ಏಶಿಯಾದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಕಂಡು ಬರುತ್ತದೆ . ಭಾರತ , ಚೈನ , ಮಲೇಶಿಯಾ , ಇಂಡೋನೇಶಿಯಾ ದೇಶಗಳು ಈ ಮರದ ಆವಾಸ ಸ್ಥಾನ . ಈ ಮರಕ್ಕೆ ಹಿಂದಿಯಲ್ಲಿ ಕರಂಜ್ , ತಮಿಳಿನಲ್ಲಿ ಪುಂಗೈ , ತೆಲುಗಿನಲ್ಲಿ ಕಾನುಗ ಮತ್ತು ಸಂಸ್ಕೃತದಲ್ಲಿ ನಕ್ತಮಾಲ ಎಂಬ ಹೆಸರಿವೆ . ವೈಜ್ಞಾನಿಕವಾಗಿ ಮಿಲ್ಲೆಟಿಯ ಪಿನ್ನಾಟ (Milletia pinnata) ಎಂಬ ಹೆಸರಿದೆ .

ಮೊದಲ ಮಳೆ!!!

ಬಿರು ಬೇಸಿಗೆಯಲ್ಲಿ ನಮ್ಮ ದೇಶವನ್ನೊಮ್ಮೆ ನೆನೆಸಿಕೊಳ್ಳಿ, ಭೂಮಿಯಲ್ಲಿ ಇದ್ದ ನೀರೆಲ್ಲ ಆವಿಯಾಗಿ ವಾತಾವರಣದಲ್ಲಿ ಸೇರಿಕೊಂಡಿರುತ್ತದೆ.

ಹರ್ಮಿಟ್ ಏಡಿ

ನೀಲಿ ಸಾಗರದ ಮಧ್ಯೆ ಹಸಿರು ಅಟಾಲ್ ಗಳಿಂದ , ಮಾಲೆಯಂಥ ಆಕಾರವನ್ನು ಹೊಂದಿರುವ ಮಾಲ್ಡೀವ್ಸ್‌ನ ಬಿಳಿ ತೀರದ ಮೇಲೆ ಕುಳಿತು ನಮ್ಮನ್ನು ಕರೆದುಕೊಂಡು ಹೋಗಬೇಕಿದ್ದ ಹಾಯಿದೋಣಿಗಾಗಿ ಕಾಯುತ್ತಿದ್ದೆವು

ಬ್ಲ್ಯಾಕ್ ಕರೆಂಟ್

ಸುಮಾರು ಒಂದೂವರೆ ಶತಮಾನದ ಹಿಂದೆ ಇನ್ನು ವಿಶ್ವದ ಬಹುತೇಕ ಜನರು ಮೇಣದ ಬತ್ತಿಯ ಅಥವಾ ಎಣ್ಣೆ ದೀಪದ ಮೇಲೆ ಅವಲಂಬಿತಾರಗಿದ್ದ ಸಮಯದಲ್ಲಿ ಆಲ್ಟರ್ನೇಟಿಂಗ್ ಕರೆಂಟ್ (ಪರ್ಯಾಯ ವಿದ್ಯುತ್ ಪ್ರವಾಹ)ಅನ್ನು ಕಂಡುಹಿಡಿಯಲಾಯಿತು.

ISROLAYOUT LAKE (DEVARAKERE)

Little Cormorant basking under Sun Isro layout lake also called as Devarakere is situated in southern part of the Bangalore city (12.89N,77.55E).  It is a small lake stretched over an area of about 5 acres. I have been a regular visitor to this lake since 2002 and have witnessed how our ecosystem gets affected due to the unplanned growth or development of a city.

ಕನ್ನಡಿಯಲ್ಲಿ ಕಂಡ ಮುಖ..

  ಹೆಚ್ಚಿನ ಪಕ್ಷಿಗಳು ಮನುಷ್ಯರನ್ನು ಆದಷ್ಟು ದೂರವೇ ಇಡಲು ಪ್ರಯತ್ನಿಸುತ್ತವೆ. ಬಹುಶಃ ಅದಕ್ಕೇ ಕೆಲವೊಮ್ಮೆ ಅವು ಏನೋ ಕಳ್ಳ ಕೆಲಸ ಮಾಡುತ್ತಿರುವಂತೆ ಅನ್ನಿಸಿಬಿಡುತ್ತದೆ. ನಾವು ಗಮನಿಸುತ್ತಿಲ್ಲ ಎನ್ನುವವರೆಗೂ ತಮ್ಮ ಕೆಲಸದಲ್ಲಿ ತಲ್ಲೀನವಾಗಿರುತ್ತವೆ. ನಾವು ಅವುಗಳ ಕಡೆ ನೋಡಿದ ತಕ್ಷಣ ಎಲ್ಲವನ್ನೂ ನಿಲ್ಲಿಸಿಬಿಡುತ್ತವೆ. ಒಮ್ಮೆ ಫಣಸೋಲಿ ಕ್ಯಾಂಪ್‌ನ ಹಿಂಭಾಗದಲ್ಲಿ ನಿಂತು ಶೇವಿಂಗ್ ಮಾಡಿಕೊಳ್ಳುತ್ತಿದ್ದೆ. ನನ್ನ ಹಿಂದೆ ತೇಗದ ಮರಗಳ ತೋಟವಿತ್ತು. ಯಾವುದೋ ಒಂದು ಮರದಿಂದ "ಟಕ್... ಟಕ್... ಟಕ್..." ಎಂದು ಸದ್ದು ಬರುತ್ತಿತ್ತು. ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಂತುಹೋಗುತ್ತಿತ್ತು. ಮತ್ತೆ ಶೇವಿಂಗ್ ಮಾಡಿಕೊಳ್ಳಲು ಶುರು ಮಾಡಿದರೆ ಸ್ವಲ್ಪ ಹೊತ್ತಿನಲ್ಲೇ ಅದೇ ಸದ್ದು ಕೇಳಿಸುತ್ತಿತ್ತು. "ಯಾವುದೋ ಪಕ್ಷಿ ಅಥವಾ ಪ್ರಾಣಿ ನನ್ನ ಕಡೆ ಒಂದು ಕಣ್ಣಿಟ್ಟುಕೊಂಡೇ ತನ್ನ ಕೆಲಸ ಮಾಡುತ್ತಿದೆ," ಅನ್ನಿಸಿತು. ಇಲ್ಲದಿದ್ದರೆ ನಾನು ತಿರುಗಿ ನೋಡಿದ ತಕ್ಷಣ ಅದು ಯಾಕೆ ಕೆಲಸ ನಿಲ್ಲಿಸಬೇಕು? ಸದ್ದು ಎಲ್ಲಿಂದ ಬರುತ್ತಿದೆ ಎಂದು ಕಂಡುಹಿಡಿಯಲು ಸಾಕಷ್ಟು ಹೊತ್ತು ಪ್ರಯತ್ನಿಸಿದೆ. ಕೊನೆಗೆ ಅದು ಒಂದು ತೇಗದ ಮರದಿಂದ ಬರುತ್ತಿದೆ ಎಂದು ಗೊತ್ತಾಯಿತು. ಯಾವುದೋ ಮರಕುಟಿಗ ಹಕ್ಕಿ ಇರಬಹುದು ಎಂದು ಊಹಿಸಿದೆ. ಆದರೆ ಯಾವ ಜಾತಿಯದ್ದು ಎಂದು ಮಾತ್ರ ತಿಳಿಯಲಿಲ್ಲ. ಬೈನಾಕ್ಯುಲರ್ ತಂದು ನೋಡಿದರೂ ಪ್ರಯೋಜನವಾಗಲಿಲ್ಲ. ನಾನು ತಿರು...

ಎಲ್ಲಿ ಹೋದವು ಇವೆಲ್ಲ?

ನಮ್ಮ ಬಳಿ ಇರುವ ಎಲ್ಲಾ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅತಿ ವೇಗದಲಿ ಬದಲಾಗುತ್ತಿವೆ , ದಿನಗಳು ಕಳೆಯುತ್ತಿರುವಂತೆ ಇವುಗಳು ಹಳೆಯದಾಗುತ್ತವೆ . ಮನುಷ್ಯನ ಗುಣವೇ ಹಾಗೆ ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಅವನ ಕೈಗೆ ಅತಿ ಕಮ್ಮಿ ಖರ್ಚಿನಲ್ಲಿ ಸಿಕ್ಕರೆ ಅದು ಅವನ ಮನೆಯಲ್ಲಿ ಇರುತ್ತದೆ ಕಾಲ ಕ್ರಮೇಣ ಅವುಗಳು ಹಳೆಯದಾದಂತೆ ಹೊಸ ವಸ್ತುಗಳಿಗೆ ಸ್ಥಾನ ಸಿಗುತ್ತದೆ .