ಬಿರು ಬೇಸಿಗೆಯಲ್ಲಿ ನಮ್ಮ ದೇಶವನ್ನೊಮ್ಮೆ ನೆನೆಸಿಕೊಳ್ಳಿ, ಭೂಮಿಯಲ್ಲಿ ಇದ್ದ ನೀರೆಲ್ಲ ಆವಿಯಾಗಿ ವಾತಾವರಣದಲ್ಲಿ ಸೇರಿಕೊಂಡಿರುತ್ತದೆ.
ಕುಡಿಯಲು ನೀರಿಲ್ಲದೆ ಸಕಲ ಜೀವಚರಗಳು ತತ್ತರಿಸುತ್ತಿದ್ದರೆ, ಸಣ್ಣ ಪುಟ್ಟ ಹುಲ್ಲು, ಗಿಡಗಳಂತು ಸಂಪೂರ್ಣವಾಗಿ ಒಣಗಿ ಸುರುಟಿರುತ್ತದೆ. ಎಲ್ಲೆಲ್ಲೂ ನೀರಿಗಾಗಿ ಆಹಾಕಾರ. ಹೀಗೆ ಬೇಸಿಗೆಯಲ್ಲಿ ದಿನ ದೂಡುವುದೆ ದುಸ್ತರ.
ಅಂತಹ ಒಂದು ಬೇಸಿಗೆಯ ಒಂದು ರಾತ್ರಿ, ಇದ್ದಕ್ಕಿದ್ದಂತೆಯೇ ಆಕಾಶದಲ್ಲಿ ಮೋಡಗಳು ಕೂಡಿಕೊಳ್ಳಲು ಆರಂಭಿಸುತ್ತದೆ. ನೋಡನೋಡುತ್ತಿದ್ದಂತೆ ಗಡುಗು ಮಿಂಚುಗಳೊಂದಿಗೆ ಮೊದಲ ಮಳೆ ಹನಿ ಭೂಮಿಗೆ ಬೀಳುತ್ತದೆ. ಮಣ್ಣಿನ ಸುವಾಸನೆ ಮೂಗಿಗೆ ಬಡಿಯುತ್ತದೆ. ವಾತಾವರಣ ತಣ್ಣಗಾಗುತ್ತದೆ. ಪರಿತಪಿಸುತ್ತಿದ್ದ ಪ್ರತಿಯೊಂದು ಜೀವಿಗೂ ಹೊಸ ಚೈತನ್ಯ ಮೂಡುತ್ತದೆ. ಜೀವನಚಕ್ರ ಮುಂದುವರಿಯುತ್ತದೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ