ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹಂತಕ

ಮಾನವ ತನ್ನ ಬುದ್ಧಿಮತ್ತೆಯಿಂದ ಪ್ರಕೃತಿಯ ಮೇಲೆ ಒಂದು ರೀತಿಯ ಹಿಡಿತ ಸಾಧಿಸಿದ್ದಾನೆ . ಆದರೆ ಪ್ರಕೃತಿಯನ್ನು ಸಂಪೂರ್ಣವಾಗಿ ಗೆಲ್ಲಲಾಗಿಲ್ಲ . ಮಾನವ ಪ್ರಕೃತಿಯನ್ನು ಎಷ್ಟೇ ದಮನ ಮಾಡಲು ಯತ್ನಿಸಿದರು ಅದು ಮತ್ತೆ ಎದ್ದು ನಿಲ್ಲುತ್ತದೆ . ನಾವು ಸಹಜವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಏನನ್ನಾದರು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುತ್ತಿರುತ್ತೇವೆ . ಮೇಲ್ನೋಟಕ್ಕೆ ಇದು ಆ ಪರಿಸರದಲ್ಲಿನ ಜೀವಿಗಳಿಗೆ ಮಾರಕವಾಗಿ ಕಂಡುಬಂದರು , ಕಾಲ ಕಳೆದಂತೆ ಆ ಬದಲಾವಣೆಗೆ ಹೊಂದಿಕೊಳ್ಳಲು ಜೀವಿಗಳು ಯತ್ನಿಸುತ್ತವೆ ಮತ್ತು ಬಹುತೇಕ ಯಶಸ್ವಿಯಾಗುತ್ತವೆ .

ನೇಚರ್ ಇಸ್ ಗ್ರೇಟ್

ಹೊಸ ವರುಷ ಬರುತ್ತಿದಂತೆ ಕೆಲವರು ನಾವು ಈ ವರುಷದಿಂದ ಹೀಗೆ ಬದುಕ ಬೇಕು ಎಂದು ಸಂಕಲ್ಪ ಮಾಡುತ್ತಾರೆ . ಮತ್ತು ಕೆಲವು ನಿರ್ಧಾರವನ್ನು ಹೊಸ ವರುಷದಿಂದ ತೆಗೆದುಕೊಳ್ಳುತ್ತಾರೆ ಇಷ್ಟೇ ಅಲ್ಲದೆ ಸರ್ಕಾರ , ಸಂಘ ಸಂಸ್ಧೆಗಳು ಕೆಲವು ಹೊಸ ಯೋಜನೆಯನ್ನು ಹಾಕಿಕೊಳ್ಳುತ್ತವೆ ಸಾಮಾನ್ಯವಾಗಿ ಇವೆಲ್ಲ ಕಾಕತಾಳೀಯ ಇರಬಹುದು ಇತ್ತೀಚಿಗೆ ಉತ್ತರ ಕೊರಿಯ

ಕುಟುರ ಪಕ್ಷಿ ಮತ್ತು ಮೈನಾ ಪಕ್ಷಿಯ ಜಗಳ

 ಇದು ಎರಡು ಪಕ್ಷಿಗಳ ನಡುವಿನ ಜಗಳದ ಕಥೆ .  ನಾನುಶಾಲೆಯಲ್ಲಿ ಓದುತ್ತಿರುಬೇಕಾದರೆ   corporation ನವರು ನಮ್ಮ ಮನೆಯ ಮುಂದೆ   Fern Leaf Jacaranda  ಅನ್ನೋ ಬ್ರೆಜಿಲ್ ದೇಶ ಮೂಲದ ಒಂದು ಗಿಡ ನೆಟ್ಟಿದ್ರು .  ನೀವು ನೋಡಿರಬಹುದು ಆ ಗಿಡನ . ಚಳಿಗಾಲದಲ್ಲಿ ನೇರಳೆ ಬಣ್ಣದ ಹೂಗಳನ್ನು ಬಿಟ್ಟು ,  ನೆಲದ ಮೇಲೆಲ್ಲಾ ಚೆಲ್ಲಿ ,  ದೂರದಿಂದ ನೋಡಿದರೆ ಹೂವಿನ ಹಾಸಿಗೆ ಹಾಸಿದಂತೆ ತುಂಬಾ ಚೆನ್ನಾಗಿರುತ್ತೆ .  ಆಮೇಲೆ ನಾನು ಸುಮಾರು ವರ್ಷಗಳಾದಮೇಲೆ   bird watching  ಅಂತೆಲ್ಲಾ ಪ್ರಜ್ಞೆ ಬರುವ ಹೊತ್ತಿಗೆ ಆ ಗಿಡ ಮರವಾಗಿ ಬೆಳೆದಿತ್ತು .  ನಾನು ಮೊದಲಿಗೆ   bird watching  ಶುರು ಮಾಡಿದ್ದು ಅದೇ ಮರದ ಮೇಲಿನ ಪಕ್ಷಿಗಳನ್ನ ನೋಡಿಯೇ !  ಆ ಮರ ಸ್ವಲ್ಪ ಮೆದು ,  ಹಾಗಾಗಿ ಒಂದು   White Cheeked Barbet  ಆ ಮರದಲ್ಲಿ ಪೊಟರೆ ಕೊರೆಯಲು ಆರಂಭಿಸಿತು .  ನಾನಾಗ   10 th   ಓದುತ್ತಿದ್ದೆ .  ಪ್ರತಿದಿನ ಬೆಳಗ್ಗೆ ಬೇಗ ಎದ್ದು ಓದಲಿಕ್ಕೆ ಕೂರುವಾಗ್ಲೆಲ್ಲಾ ಈ ಪಕ್ಷಿ ಪೊಟರೆ ಕೊರೆಯುತ್ತಿತ್ತು .  ಸುಮಾರು ದಿನ ಕೊರೆದ ಮೇಲೆ ಆ ಪಕ್ಷಿ ಒಳಗೆ ಹೋಗಿ ಬರುವಷ್ಟು ದೊಡ್ಡದಾದ ಪೊಟರೆ   ready  ಆಯ್ತು .  ಆದ್ರೆ ಒಂದು ದಿನ ಒಂದು ಜೋಡಿ   Common Myna  ಆ   Barb...

Ruddy breasted crake

ಬಿಳಿಗಿರಿರಂಗನ ಬೆಟ್ಟದಲ್ಲಿ ಬೇಡಗುಳಿ ಅಂತ ಒಂದು   coffee estate  ಇದೆ .  ಅದು   tiger reserve  ಮಧ್ಯೆ ಇರೋದ್ರಿಂದ ಅಲ್ಲಿಗೆ ಎಲ್ಲಾ ಜನ ಬೇಕಾದಂತೆ ಹೋಗ್ಲಿಕ್ಕೆ ಆಗೋದಿಲ್ಲ . Coffee estate ನಲ್ಲಿ ಕೆಲಸ ಮಾಡೋ ಜನ , estate management ನ   ಕೆಲವು ಜನ ಮಾತ್ರ ಅಲ್ಲಿಗೆ ಹೋಗ್ತಾರೆ . ಚಾಮರಾಜನಗರದಿಂದ ಕೊಯಮತ್ತೂರಿಗೆ ಹೋಗೋ ದಾರಿಯಲ್ಲಿ ಪುಣಜನೂರಿನಿಂದ ಒಳಗೆ ಹೋದ್ರೆ ಬೇಡಗುಳಿಗೆ   ಹೋಗಲು ಸುಮಾರು ಹನ್ನೆರಡು ಕಿಲೋಮೀಟರ್ ಆಗುತ್ತೆ .  ಪೂರ್ತಿ ಕಾಡು ದಾರಿ ಅದು .  ಬೇಡಗುಳಿಗೆ ಹೋಗೊ ದಾರಿಯಲ್ಲಿ ನಮ್ಮ ಎರಡು   camera trap location  ಇದೆ .  ರೋಡೆಲ್ಲಾ ಗುಂಡಿ ಬಿದ್ದು ಹಾಳಾಗಿದೆ ,  ಯಾವ ಕಾಲದಲ್ಲೋ ಹಾಕಿದ ಟಾರು ರಸ್ತೆ ಅದು .  ಮಳೆಗಾಲದಲ್ಲಿ ಗುಂಡಿಗಳೆಲ್ಲಾ ಕೆಂಪು ನೀರು ತುಂಬಿಕೊಂಡಿರುತ್ವೆ .  ನಾನು ಒಂದು ದಿನ ಜೀಪಿನಲ್ಲಿ ಬರೋವಾಗ ಅಂತಹ ಒಂದು ಗುಂಡಿಯಲ್ಲಿ ಒಂದು ಪಕ್ಷಿ ಸ್ನಾನ ಮಾಡ್ತಿತ್ತು .  ತುಂಬಾ ಹತ್ರ ಹೋದ್ರೆ ಅದು ಹಾರಿಹೋಗಬಹುದು ಅಂತ ಸ್ವಲ್ಪ ದೂರದಲ್ಲಿಯೇ ಜೀಪ್ ನಿಲ್ಲಿಸ್ದೆ ,  ಹಾಗಾಗಿ ಅದು ಯಾವ ಪಕ್ಷಿ ಅಂತ ಸರಿಯಾಗಿ ಗೊತ್ತಾಗ್ಲಿಲ್ಲ .  ಒಂದೆರಡು   photo  ಕೂಡ ತೆಗೆದೆ .  ಅಷ್ಟು ಚೆನ್ನಾಗಿ ಬಂದಿಲ್ಲ .  ಇಟ್ಟಿಗೆ ಬಣ್ಣದ ಅದು ಯಾವ್ದೋ   water bird...

ನೂರು ವರ್ಷದ ಹೊಸ ಸಿದ್ಧಾಂತ

ಮಾನವ ತನ್ನ ಇತಿಹಾಸದುದ್ದುಕ್ಕು ಹೊಸದನ್ನು ಹುಡುಕುಲು ಯತ್ನಿಸುತ್ತಲೆ ಬಂದಿದ್ದಾನೆ. ಮೊದಲಲ್ಲಿ ಅವನಿಗೆ ಹೊಸ ಅನ್ವೇಷಣೆಗಳು ತನ್ನ ಜೀವನ ಹೋರಾಟಕ್ಕಾಗಿ ಅವಶ್ಯವಾಗಿತ್ತು, ಮುಂದೆ ಮನುಷ್ಯ ಯಶಸ್ವಿಯಾಗಿ ಬದುಕಲು ಕಲಿತ ಮೇಲೂ ತನ್ನ ಕುತೂಹಲಕ್ಕಾಗಿ ಪ್ರಕೃತಿ ಒಡ್ಡುವ ವಿಸ್ಮಯಗಳಿಗೆ ಉತ್ತರಗಳನ್ನು ಹುಡುಕುತ್ತಲೆ ಬಂದ. ದಾಖಲಾದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನಮಗೆ ಜಗತ್ತೇ ಬೆರಗಾಗುವಂತೆ ಮಾಡಿದ ಅನೇಕ ಹೆಸರುಗಳು ಸಿಗುತ್ತವೆ.

ಪೆಲಿಕಾನ್ ಹಕ್ಕಿ

              ಲಾಲ್‌ಬಾಗ್ ಕೆರೆಯಲ್ಲಿ ಒಂದು ಸುಂದರ ಮುಂಜಾನೆ ಪೆಲಿಕಾನ್ ಹಕ್ಕಿಗಳ ವಿಹಾರ

ದೊಡ್ಡಕಾಡಿನಲ್ಲೊಂದು ಪುಟ್ಟ ನಾಟಕ

 ಕಾಡಿನಲ್ಲಿ ಸುತ್ತಾಡುವಾಗ ಹಲವಾರು ಚಟುವಟಿಕೆಗಳಲ್ಲಿ ಮುಳುಗಿ ಹೋಗಿ ಕೆಲವೊಮ್ಮೆ ನಮಗೆ ಪ್ರಿಯವಾದ ಚಟುವಟಿಕೆಗಳನ್ನೇ ಮರೆತು ಹೋಗಿರುತ್ತೇವೆ. ಉದಾಹರಣೆಗೆ ಒಂದು ವರ್ಷ ನಾಗರಹೊಳೆಯಲ್ಲಿದ್ದಾಗ ಸುಮಾರು ಒಂದು ತಿಂಗಳು ನನಗೆ ಇಷ್ಟವಾದ ಪಕ್ಷಿವೀಕ್ಷಣೆಯನ್ನೇ ಮಾಡಿರಲಿಲ್ಲ. ನೆಲದ ಮೇಲೆ ಬಿದ್ದಿರುವ ಮರದ ಕೊಂಬೆಯನ್ನೋ ಅಥವಾ ಕಲ್ಲನ್ನೋ ಎತ್ತಿ ನೋಡುವುದು, ಹಾಗೆ ಎತ್ತಿ ನೋಡಿದಾಗ ಅಲ್ಲಿರುವ ಬಗೆಬಗೆಯ ಕೀಟಗಳು, ಚೇಳು, ಪುಟ್ಟ ಹಾವುಗಳು, ಕಪ್ಪೆ ಇವುಗಳನ್ನು ಹುಡುಕುವುದರಲ್ಲೇ ಸಮಯ ಹೋಗುತಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಧ್ಯಾಹ್ನದ ಊಟಕ್ಕೆ ಸರಿಯಾಗಿ ಸಮಯ ಕೊಡದಂತಾಗಿ, ಊಟವನ್ನು ಸ್ವಲ್ಪ ಸ್ವಲ್ಪವಾಗಿ ತುಂಬಾ ಸಮಯದವರೆಗೂ ಮಾಡುವಂತಾಗಿತ್ತು. ಒಂದು ಬಾರಿ ಮಧ್ಯಾಹ್ನದ ಹೊತ್ತುಊಟಕ್ಕೆಂದು ಒಂದು ನೀರು ಹರಿಯುವ ಜಾಗದಲ್ಲಿ ಜೀಪನ್ನು ನಿಲ್ಲಿಸಿದೆವು. ನನ್ನೊಡನಿದ್ದ ಹುಡುಗರು ಇಬ್ಬರು ಊಟಕ್ಕೆಂದು ಹಳ್ಳದ ಒಂದು ಬದಿಗೆ ಹೋದರು. ನಾನು ಸುತ್ತ-ಮುತ್ತ ಏನಾದರು ಕಾಣುತ್ತೆದೆಯೋ ಎಂದು ಹುಡುಕುತ್ತಾ ನನ್ನ ಊಟದ ಡಬ್ಬಿಗೆ ಕೈ ಹಾಕಿದೆ. ಅಲ್ಲೇನಿದೆ!? ಅವತ್ತು ನಾನು ಊಟವನ್ನೇ ತಂದಿರಲಿಲ್ಲ. ನನ್ನ ಡಬ್ಬಿಗೆ ಊಟವನ್ನು ತುಂಬಿದ್ದು ನೆನಪಿತ್ತು, ಆದರೆ ಆ ಡಬ್ಬವನ್ನು ತೆಗೆದುಕೊಳ್ಳಲು ಮರೆತಿದ್ದೆ. ನನ್ನೊಡನಿದ್ದ ಇಬ್ಬರ ಊಟದಲ್ಲಿ ಸ್ಪಲ್ಪ ಕೇಳೋಣವೆಂದುಕೊಂಡೆ, ಆದರೆ ಅವರು ಆಗಲೇ ಊಟ ಶುರು ಮಾಡಿರುತ್ತಾರೆ ಎಂದುಕೊಂಡು ಸುಮ್ಮನಾದೆ. ತಕ್ಷಣವೇ ನನ...

ನ್ಯೂ ಹೊರೈಜನ್: ಕತ್ತಲ ಲೋಕದ ಅನಾವರಣ

ನ್ಯೂ ಹೊರೈಜನ್‍ ಗಗನ ನೌಕೆ.  Image Credit: NASA ಅಕ್ಟೋಬರ್ 1991, ಯು ಎಸ್ ಪಿ ಎಸ್ (United States Postal Service) ನಾಸಾದ ಸೌರ ಮಂಡಲದ ಅನ್ವೇಷಣೆ ಕುರಿತು ಅಂಚೆಚೀಟಿಯ ಸರಣಿಯನ್ನು ಹೊರತಂದಿತು . ಅದರಲ್ಲಿ ಒಂದು ಚೀಟಿ ಬಹುತೇಕ ಜನರ ಗಮನ ಸೆಳೆಯಿತು ಏಕೆಂದರೆ ಆ ಚೀಟಿ ಪ್ಲೂಟೊ ಕುರಿತಾಗಿತ್ತು ಮತ್ತು ಅದರಲ್ಲಿ “ ಪ್ಲೂಟೊ - ಇನ್ನು ಅನ್ವೇಷಿಸಲಾಗಿಲ್ಲ ” ಎಂಬ ಬರಹವಿತ್ತು . ಇದಕ್ಕೆ ಕಾರಣ ಅಂದಿನವರೆಗು ನಾಸಾ ಹೊರಗಿನ ಸೌರಮಂಡಲವನ್ನು ಅನ್ವೇಷಿಸಲು   ಕಳುಹಿಸಿದ್ದ ಯಾವುದೆ ಆಕಾಶಕಾಯ ಕೂಡ ಪ್ಲೂಟೊ ಸಮೀಪ ಸಾಗಿರಲಿಲ್ಲ !!!

ರಣಹದ್ದುಗಳು

  ರಣಹದ್ದುಗಳೆಂದರೆ ಸತ್ತ ಜೀವಿಗಳ ಸ್ವಚ್ಛಗೊಳಿಸುವ ಜಾಡಮಾಲಿಗಳು. ಕಾಡಿನಲ್ಲಿ ಅಥವಾ ಹಳ್ಳಿಯ ಸುತ್ತಮುತ್ತ ಎಲ್ಲೋ ಒಂದು ಪ್ರಾಣಿ ಸತ್ತರೆ, ಕೆಲವೇ ಗಂಟೆಗಳಲ್ಲಿ ಆಕಾಶದಲ್ಲಿ ಸುತ್ತುವ ರಣಹದ್ದುಗಳು ಅದನ್ನು ಪತ್ತೆಹಚ್ಚುತ್ತವೆ. ಅವುಗಳ ತೀಕ್ಷ್ಣ ದೃಷ್ಟಿ ಮತ್ತು ಪ್ರಕೃತಿಯಲ್ಲಿನ ವಿಶಿಷ್ಟ ಪಾತ್ರವೇ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಮಹತ್ತರವಾಗಿದೆ. ಒಂದು ಬೆಳಗ್ಗೆ ನಾಗರಹೊಳೆಯ ಹಸಿರು ಗದ್ದೆ ರಸ್ತೆಯಲ್ಲಿ ಕಾಟಿಯೊಂದು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿತ್ತು. ಆ ಭಾಗದಲ್ಲಿ ತನ್ನ ಎರಡು ಮರಿಗಳೊಂದಿಗೆ ಓಡಾಡುತ್ತಿದ್ದ ಹೆಣ್ಣು ಹುಲಿಯ ಬಗ್ಗೆ ನಮಗೆ ಈಗಾಗಲೇ ಮಾಹಿತಿ ಇದ್ದುದರಿಂದ, ಈ ಬೇಟೆ ಅದರದ್ದೇ ಇರಬಹುದು ಎನ್ನಿಸಿತು. ಆದರೆ ಮೊದಲು ಕಣ್ಣಿಗೆ ಬಿದ್ದದ್ದು ಸತ್ತು ಬಿದ್ದಿದ್ದ ಕಾಟಿಯಲ್ಲ. ಅದರ ಸುತ್ತ ನೆರೆದಿದ್ದ ಸುಮಾರು ಮೂವತ್ತು ಬಿಳಿ ಎದೆಯ ರಣಹದ್ದುಗಳು ( White-rumped Vulture )! ಹುಲಿ ಹೊಟ್ಟೆ ತುಂಬಿದ ನಂತರ ಬಿಟ್ಟುಹೋದ ಸುಮಾರು ಅರ್ಧದಷ್ಟು ಕಾಟಿಯ ಕಳೇಬರ ಆ ರಣಹದ್ದುಗಳಿಗೆ ಭರ್ಜರಿ ಭೋಜನವಾಗಿತ್ತು. ಕೆಲವೇ ಸಮಯದಲ್ಲಿ ಅವು ಉಳಿದ ಮಾಂಸವನ್ನು ಸಂಪೂರ್ಣವಾಗಿ ತಿಂದು ಪರಿಸರದಲ್ಲಿ ಲೀನವಾಗುವಂತೆ ಮಾಡುತ್ತವೆ. ನಾಗರಹೊಳೆಯ ರಸ್ತೆಯೊಂದರಲ್ಲಿ ಕುಳಿತಿರುವ ಬಿಳಿ ಎದೆಯ ರಣಹದ್ದುಗಳ ಗುಂಪು. ಎಡಭಾಗದಲ್ಲಿ ಕಾಟಿಯ ಕಳೇಬರ ಕಾಣಿಸುತ್ತದೆ. ಚಿತ್ರ: © ಶ್ರೀಕಾಂತ ಇನ್ನೊಂದು ಬಾರಿ ಬಂಡೀಪುರದಲ್ಲಿ ಸುತ್ತಾಡುವಾಗ, ಕಾಡುನಾಯ...

ಕಾಗೆ

ಚಿತ್ರ: © ಶ್ರೀಕಾಂತ ಕಾಗೆ. ನಮ್ಮೊಡನೆ ಬದುಕುತ್ತಿರುವ ಬುದ್ಧಿವಂತ ಪಕ್ಷಿ. ಪ್ರಸಿದ್ಧ ಪಂಚತಂತ್ರ ಕಥೆಗಳಲ್ಲಿ ಇದರ ಉಲ್ಲೇಖವಿದೆ. ಜಾಢಮಾಲಿ. ಕಾಗೆಗಳಿಲ್ಲದ ನಮ್ಮ ನಗರಗಳು ಈಗಿರುವದಕ್ಕಿಂತ ಅಧ್ವಾನವಾಗಿರುತ್ತಿತ್ತು. ಅವಕಾಶವಾದಿ. ನಗರದ ಗದ್ದಲಕ್ಕೆ ಹೆದರಿ ಕಣ್ಮರೆಯಾದ ಗುಬ್ಬಿಯಂತಲ್ಲದೆ ಸಿಕ್ಕ ಸಣ್ಣ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾಗಿ ಬದುಕುತ್ತಿರುವ ಪಕ್ಷಿ. ಒಂದು ಕಾಗೆ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಕೃತಕ ಮರದ ಮೇಲೆ ಗೂಡು ಮಾಡಿ ಸುದ್ದಿ ಮಾಡಿತ್ತು. ನಮ್ಮ ಮನೆ ಹತ್ತಿರ ಇದ್ದ ಎರಡು ತೆಂಗಿನ ಮರದಲ್ಲಿನ ಕಾಗೆಗಳಿಗೂ ನನಗೂ ತುಂಬಾ ಜಗಳವಾಗಿತ್ತು. ಯಾವುದೋ ಕಾರಣಕ್ಕೆ ನಾನು ಹೊರಗೆ ಬಂದ ಕ್ಷಣ ಗದ್ದಲ ಮಾಡಿ, ಕುಟುಕಲು ಪ್ರಯತ್ನಿಸುತ್ತಿತ್ತು. ನಾನು ದ್ವೇಷ ತೀರಿಸಿಕೊಳ್ಳಲು ರಾತ್ರಿಯ ಹೊತ್ತು ಅದರ ಗೂಡುಗಳನ್ನೆಲ್ಲಾ ಹಾಳು ಮಾಡಿದ್ದೇನೆ. ನಮ್ಮ ಮನೆ ಕಟ್ಟುವಾಗ ಮರಗಳನ್ನೆಲ್ಲಾ ಕಡಿದು ಹಾಕಿದೆವು. ಇವೆಲ್ಲಾ ನಡೆದು ಹತ್ತು ವರ್ಷಗಳೇ ಆಯ್ತು.ಈಗಲೂ ಕಾಗೆಗಳು ಸುತ್ತ ಮುತ್ತಲಿರುವ ಸಣ್ಣ ಮರಗಳಲ್ಲಿ ಗೂಡು ಮಾಡಿಕೊಂಡಿದೆ. ಈಗಲೂ ಒಮ್ಮೊಮ್ಮೆ ನನ್ನ ನೋಡಿ ಗದ್ದಲ ಮಾಡುತ್ತವೆ. ಇದು ಅದೇ ಕಾಗೆಯೇ? ಕಾಗೆಗೆಷ್ಟು ವಯಸ್ಸು? ನಾವೆಲ್ಲಾ ಕಾಗೆಗಳನ್ನು ನೋಡಿದ ಕ್ಷಣ ಅವೆಲ್ಲಾ ಒಂದೇ ರೀತಿಯದ್ದೆಂದು ತಿಳಿಯುತ್ತೇವೆ. ಆದರೆ ಅದರಲ್ಲೂ ಎರಡು ಜಾತಿಯ ಕಾಗೆಗಳಿವೆ.ಒಂದು ಕತ್ತಿನ ಸುತ್ತ ಬೂದು ಬಣ್ಣದ ಪಟ್ಟಿಯಿರುವ ಊರುಕಾಗೆ ...