ಹೊಸ ವರುಷ ಬರುತ್ತಿದಂತೆ ಕೆಲವರು ನಾವು ಈ ವರುಷದಿಂದ ಹೀಗೆ
ಬದುಕ ಬೇಕು ಎಂದು ಸಂಕಲ್ಪ ಮಾಡುತ್ತಾರೆ. ಮತ್ತು ಕೆಲವು
ನಿರ್ಧಾರವನ್ನು ಹೊಸ ವರುಷದಿಂದ ತೆಗೆದುಕೊಳ್ಳುತ್ತಾರೆ ಇಷ್ಟೇ ಅಲ್ಲದೆ ಸರ್ಕಾರ, ಸಂಘ ಸಂಸ್ಧೆಗಳು ಕೆಲವು ಹೊಸ ಯೋಜನೆಯನ್ನು ಹಾಕಿಕೊಳ್ಳುತ್ತವೆ
ಸಾಮಾನ್ಯವಾಗಿ ಇವೆಲ್ಲ ಕಾಕತಾಳೀಯ ಇರಬಹುದು ಇತ್ತೀಚಿಗೆ ಉತ್ತರ ಕೊರಿಯ
ಪ್ರಯೋಗಿಸಿದ ಹೈಡ್ರೋಜೆನ್
ಬಾಂಬ್ ಆ ದೇಶಕ್ಕೆ ಸಾಧನೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ ಎಂದು ಸಂತಸವಾದರೆ ಇನ್ನು ಕೆಲವು
ದೇಶಗಳಿಗೆ ಭಯ ಹುಟ್ಟಿಸಿರಬಹುದು. ಬಲಿಷ್ಟ ರಾಷ್ಟ್ರಗಳಾದ ಚೀನಾ, ಅಮೇರಿಕಾ, ಭಾರತ ಇದನ್ನು ತೀವ್ರವಾಗಿ ಖಂಡಿಸಿದರು. ತಮ್ಮ ತಮ್ಮ ದೇಶವನ್ನು ಇನ್ನಷ್ಟು ಪ್ರಬಲ ಮಾಡಲು ಏನಾದರು ಒಂದು
ತಂತ್ರ ಮಾಡಿರುತ್ತಾರೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ಇವೆಲ್ಲ ಅಷ್ಟು ಪರಿಣಾಮ ಆಗದಿದ್ದರು, ವಿಷಯ ಪತ್ರಿಕೆ, ನ್ಯೂಸ್
ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿದಂತೆ ಎಲ್ಲರ ಬಾಯಿಯಲ್ಲೂ ಹರಿದಾಡುತ್ತದೆ. ಏಕೆಂದರೆ ಎಲ್ಲರಿಗು ಪರಮಾಣು ಬಾಂಬ್ ಪರೀಕ್ಷೆಯೆಂದರೆ ಏನೋ ಕುತೂಹಲ. ನಿಶ್ಯಬ್ದವಾಗಿರುವಾಗ ನಮಗೆ ಅರಿವಿಲ್ಲದೆ ಯಾರಾದರು ಪಟಾಕಿ ಸಿಡಿಸಿದರೆ
ಅದರ ಶಬ್ದಕ್ಕೆ ಒಂದು ನಿಮಿಷ ತಳಮಳವಾಗುವುದು ಸಹಜ ಇನ್ನು ಪರಮಾಣು ಬಾಂಬ್ ಎಂದರೆ?!!
ರೈಫಲ್ನಲ್ಲಿ ಉಪಯೋಗಿಸುವ
ಬ್ಲ್ಯಾಕ್ ಪೌಡರ್‍ನಿಂದ ಶಕ್ತಿಯ ಪ್ರಮಾಣ ಅಳೆಯುವುದಾದರೆ ಬೇರೆ ಬೇರೆ ಸ್ಫೋಟಕಗಳ
ಹೋಲಿಕೆ ಇಲ್ಲಿ ಇದೆ.
ತಾಂತ್ರಿಕವಾಗಿ ಹೇಳುವುದಾದರೆ ಸ್ಫೋಟ ಎಂದರೆ ಅನಿಲವನ್ನು ಅತಿಶಬ್ದದ ವೇಗದಲ್ಲಿ ಹೊರಹಾಕುವುದು. ರೈಫಲ್ ನಿಂದ ಹೊರ ಹೊಮ್ಮುವ ಬುಲೆಟ್ ಸ್ಫೋಟಿಸದೆ ಢಟ್ಟವಾಗಿ ಸುಡುತ್ತದೆ ಇದಕ್ಕೆ ಕಾರಣ ಟ್ರಿಗರ್ ಒತ್ತಿದ ತಕ್ಷಣವೇ ಬುಲೆಟ್ ಸರಿಸಲು ಸಾಕಷ್ಟು ಎನರ್ಜಿ ಬೇಕಾಗುತ್ತದೆ, ಆದರೆ ರೈಫಲ್ ಹಾನಿಯಾಗುವಷ್ಟು ಎನರ್ಜಿ ಬೇಕಾಗುವುದಿಲ್ಲ. ಸಾಮಾನ್ಯವಾಗಿ ರೈಫಲ್ ಗಳಲ್ಲಿ ಬ್ಲಾಕ್ ಪೌಡರ್ ಅಥವಾ ಸ್ಮೊಕೆಲೆಸ್ಸ್ ಪೌಡರ್ ಉಪಯೋಗಿಸುತ್ತಾರೆ, ಸ್ಮೊಕೆಲೆಸ್ ಪೌಡರ್ ನನ್ನು ಸುಟ್ಟರೆ ಅತಿ ವೇಗದಲ್ಲಿ ಢಟ್ಟವಾಗಿ ಸುಡುತ್ತದೆ ಆದರೆ ಯಾವುದೇ ರೀತಿಯ ಶಾಕ್ ವೇವ್ಸ್ ಅಥವಾ ಶಬ್ದದ ವೇಗದಲ್ಲಿ ಯಾವುದೇ ಶಕ್ತಿ ಹೊರ ಬರುವುದಿಲ್ಲ ಇದನ್ನು ಡಿಫ಼್ಲಗ್ರೆಟ್ ಎಂದು ಕರೆಯುತ್ತಾರೆ.
ನೈಟ್ರೊ ಗ್ಲಿಸರಿನ್ ನನ್ನು ಒಂದು ಸುತ್ತಿ ಇಂದ ಹೊಡೆದರೆ ಅದರ ಪ್ರತಿಯೊಂದು ಕಣವು ಸ್ಫೋಟಿಸುತ್ತದೆ ಇದನ್ನು ಡಿಟೊನೆಟ್ ಎಂದು ಕರೆಯುತ್ತಾರೆ. ಡಿಫ಼್ಲಗ್ರೆಶನ್ ಗೆ ಭಿನ್ನವಾಗಿ ಡಿಟೊನೆಶನ್ ಶಾಕ್ ವೇವ್ಸ್ ನನ್ನು ಹೊರ ಹಾಕುತ್ತದೆ ಇದರ ತೀವ್ರತೆಯಿಂದ ಸುತ್ತಲು ಪ್ರದೇಶದಲ್ಲಿರುವ ನೀರಿನ ಅಂಶ ಕರಗಿ ಮೋಡವಾಗಿ ಪರಿವರ್ತಿಸುತ್ತದೆ.
ಟಿ ಎನ್ ಟಿ
ಎನ್ನುವುದು ಒಂದು ಸ್ಫೋಟಿಸಬಹುದಾದಂತ ರಾಸಾಯನಿಕ. ಇದನ್ನು
ಮಿಲಿಟರಿ, ಗಣಿಗಾರಿಕೆ, ಉದ್ಯಮಗಳಲ್ಲಿ
ಉಪಯೋಗಿಸುತ್ತಾರೆ. ಟಿಎನ್ ಟಿ ಸಮಾನಾಂತರ ಎಂದರೆ ಸ್ಫೋಟದ ಶಕ್ತಿಯ ಪ್ರಮಾಣ ಅಳೆಯುವ
ವಿಧಾನ, ಟನ್ ಆಫ್ ಟಿ ಎನ್ ಟಿ ಎನ್ನುವುದು ಶಕ್ತಿಯ ಏಕಾಂಶ 4.184 ಗೀಗ ಜೋವ್ಲ್ಸ್ ಸಮಾನವಾಗಿರುತ್ತದೆ. ಡೈನಾಮೈಟ್, ಪರಮಾಣು
ಬಾಂಬ್, ಉಲ್ಕಾಪಾತ ಅಥವಾ ಭೂಕಂಪ ಇವೆಲ್ಲವೂ ಆಗುವುದಕ್ಕೆ ಎಷ್ಟು ಮಟ್ಟದ
ಟಿ ಎನ್ ಟಿ (Trinitrotoluene) ಸ್ಫೋಟಿಸುತ್ತದೆ
ಎಂದು ಲೆಕ್ಕ ಹಾಕುತ್ತಾರೆ. ಅಮೆರಿಕಾದ ದಿಫೆನ್ಸೆ ಕಾಂಟ್ರಾಕ್ಟ್ ಒಂದು ಬಾರಿ ತಮ್ಮಲಿರುವ
ಸ್ಫೋಟಕಗಳನ್ನು ವಿಲೇವಾರಿ ಮಾಡಲು ಸುಮಾರು ಒಂದು ನೂರು ಟನ್ (90,700
ಕೆ ಜಿ) ಟಿ ಎನ್ ಟಿಯಷ್ಟನ್ನು ತೆರೆದ ಕ್ಷೇತ್ರದಲ್ಲಿ ಸ್ಫೋಟಿಸುತ್ತಾರೆ. ಅದೇ ರೀತಿ ನಮ್ಮ ಭಾರತದ ಫೋಕ್ರನ್ ೨ (1998) ರಲ್ಲಿ, ಪರಮಾಣು ಬಾಂಬ್
ಪರೀಕ್ಷಿಸಿದಾಗ ಅರವತ್ತು ಸಾವಿರ ಟನ್ ಟಿ ಎನ್ ಟಿಯಷ್ಟು ಶಕ್ತಿ ಬಿಡುಗಡೆಯಾಯಿತು. 1945 ರಲ್ಲಿ ಅಮೇರಿಕಾ, ಹಿರೋಷಿಮಾ
ಮೇಲೆ ಹಾಕಿದ ಪರಮಾಣು ಬಾಂಬ್ 15 ಸಾವಿರ ಟನ್ ಟಿ ಎನ್ ಟಿಯಷ್ಟು ಶಕ್ತಿ
ಬಿಡುಗಡೆಯಾಗಿತ್ತು ಮತ್ತು ಇದರಿಂದ ಸುಮಾರು ಎರಡು ಲಕ್ಷ
ಜನರು ಕೊಲ್ಲಲ್ಪಟ್ಟಿದ್ದರು. ಮಾನವನ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಮಾಣದ ಪರಮಾಣು ಬಾಂಬ್
ಪ್ರಯೋಗಿಸಿರುವ ದೇಶ ಸೋವಿಯಟ್
ಯೂನಿಯನ್, 1961ರಲ್ಲಿ 50 ಮೆಗಾ ಟನ್ ನಷ್ಟು ಟಿ ಎನ್ ಟಿ ಬಳಕೆಯ ತ್ಸಾರ್ ಬಾಂಬ್ ಒಂದನ್ನು
ಪ್ರಯೋಗಿಸಿದರು ಇದು ಹಿರೋಷಿಮಾ ಮತ್ತು ನಾಗಸಾಕಿ ನಾಶ ಮಾಡಿರುವ ಬಾಂಬ್ ಗಿಂತ ಸುಮಾರು 1570 ಪಟ್ಟು ಜಾಸ್ತಿ ಇತ್ತು ಇದರ ಉದ್ದ 26 ಅಡಿ ಮತ್ತು ತೂಕ 27000 ಕೆ
ಜಿ. ಇದನ್ನು 800 ಕೆ ಜಿ ಪ್ಯಾರಚುಟ್ ಒಂದಕೆ ಕಟ್ಟಿ 34000 ಅಡಿ ಮೇಲಿನಿಂದ ಹಾಕಲಾಗಿತ್ತು. ಇದರಿಂದ
ಉಂಟಾದ ಅಣಬೆಯಂತಹ ಮೋಡ ಸುಮಾರು 64 ಕಿಲೋಮೀಟರು ಎತ್ತರದವರೆಗೂ ಆವರಿಸಿಕೊಂಡಿತ್ತು (7 ಬಾರಿ ಮೌಂಟ್ ಎವರೆಸ್ಟ್ ಎತ್ತರದಷ್ಟು).
ಇದೆಲ್ಲ ಏನೇ ಇರಲಿ ನೈಸರ್ಗಿಕವಾಗಿ ಸಂಪೂರ್ಣ ನಕ್ಷತ್ರ ಸ್ಫೋಟಗೊಂಡಾಗ (ಸೂಪರ್‍ನೋವ) ಹೊರ ಹೊಮ್ಮುವ ಶಕ್ತಿ ಅಂದಾಜು 10 ಅಕ್ಟೆಲಿಯನ್ ಮಿಲಿಯನ್ ಟನ್ ನಷ್ಟು ಟಿ ಎನ್ ಟಿ, ಒಂದರ ಮುಂದೆ 39 ಸೊನೆ ಸೇರಿಸಬೇಕು. ಮಾನವ ತನ್ನ
ಬುದ್ಧಿ ಶಕ್ತಿ ಮತ್ತು ವಿಜ್ಞಾನ ಪ್ರಗತಿಯಿಂದ ಎಷ್ಟೇ
ಮುಂದೆ ಹೋದರು, ಎಷ್ಟೇ ಹೊಸ ವರುಷ ಕಳೆದರು, ಯಾರು
ಏನೇ ಸಂಕಲ್ಪ ಮಾಡಿಕೊಂಡರು ಉತ್ತರ ಕೊರಿಯಾ ದಂತಹ ಇನ್ನಷ್ಟು ದೇಶಗಳು ಎಷ್ಟೇ ಹೈಡ್ರೋಜನ್ ಬಾಂಬ್ ತಯಾರಿಸಿದರು
ಅವೆಲ್ಲ ಪ್ರಕೃತಿ ಮುಂದೆ ಒಂದು ಚಿಕ್ಕ ಬಿಂದುವಷ್ಟೇ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ