ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತೆಳು ಗಾಳಿಗೆ - ಪಕ್ಷಿಗಳ ಉಗಮ

"ವೈ ಎವಲ್ಯೂಶನ್ ಈಸ್ ಟ್ರು ?” ಪುಸ್ತಕದ ಆಯ್ದ ಭಾಗ ಕನ್ನಡದಲ್ಲಿ ಅರ್ಧ ರೆಕ್ಕೆಯ ಪ್ರಯೋಜನವೇನು? ಇದು ಪ್ರಾಕೃತಿಕ ಆಯ್ಕೆ ಅಥವಾ ವಿಕಾಸವಾದದ ಬಗ್ಗೆ ಅನುಮಾನ ವ್ಯಕ್ತಪಡಿಸಲು ಡಾರ್ವಿನ್ ಕಾಲದಿಂದಲು ಪ್ರಚಲಿತವಿರುವ ಪ್ರಶ್ನೆ. ಜೀವ ವಿಜ್ಞಾನಿಗಳ ಪ್ರಕಾರ ಪಕ್ಷಿಗಳು ಆರಂಭಿಕ ಉರಗಗಳಿಂದ ವಿಕಾಸ ಹೊಂದಿವೆ. ಆದರೆ ಒಂದು ನೆಲವಾಸಿ ಪ್ರಾಣಿಯು ಹೇಗೆ ಹಾರುವ ಸಾಮರ್ಥ್ಯವನ್ನು ಪಡೆಯುತ್ತದೆ? ಪ್ರಾಕೃತಿಕ ಆಯ್ಕೆಯು ಈ ಪರಿವರ್ತನೆಯನ್ನು ವಿವರಿಸಲಾಗುವುದಿಲ್ಲ. ಏಕೆಂದರೆ ಇದಕ್ಕಾಗಿ ಜೀವಿಗಳು ಒಂದು ಮಧ್ಯಂತರ ಕಾಲಘಟ್ಟದಲ್ಲಿ ಕೇವಲ ಅಪೂರ್ಣಾವಸ್ಥೆಯಲ್ಲಿರುವ ರೆಕ್ಕೆಯನ್ನು ಹೊಂದಿರಬೇಕು. ಇದು ಆ ಜೀವಿಗೆ ಆಯ್ಕೆಯ ಪ್ರಯೋಜನಕ್ಕಿಂತ ಹೊರೆಯನ್ನೆ ಉಂಟುಮಾಡುತ್ತದೆ ಎಂದು ಸೃಷ್ಟಿ ವಾದಿಗಳು ವಾದಿಸುತ್ತಾರೆ.

ವೈ ಎವಲ್ಯೂಶನ್ ಈಸ್ ಟ್ರು ?

ವೈ ಎವಲ್ಯೂಶನ್ ಈಸ್ ಟ್ರು ? (ವಿಕಾಸ ನಿಜವೇಕೆ?) ನಾನು ಮೊದಲ ಬಾರಿ ಈ ಪುಸ್ತಕ ನೋಡಿದ್ದು ಲಂಡನ್ ನ ಒಂದು ಲೈಬ್ರರಿಯಲ್ಲಿ. ಜೀವವಿಕಾಸ ನನ್ನ ನೆಚ್ಚಿನ ವಿಷಯ ಗಳಲ್ಲೊಂದು ಹಾಗಾಗಿ ಕೈಗೆತ್ತಿಕೊಂಡೆ. ಮೊದಲ ಪುಟವೆ ಕುತೂಹಲ ಮೂಡಿಸಿ ಓದಿಸಿಕೊಂಡು ಹೋಯಿತು. ಈ ಮೊದಲು ನಾನು ಜೀವವಿಕಾಸದ ಕೆಲವು ಪುಸ್ತಕಗಳನ್ನು ಓದಿದ್ದೆ ಆದರು ಇದು ಕುತೂಹಲ ಮೂಡಿಸಿದ್ದು ಅದರ ಮುನ್ನುಡಿಯ ವಿಷಯಕ್ಕಾಗಿ. ಲೇಖಕರಾದ ಜೆರಿ ಎ ಕಾಯ್ನ್ ತಾವು ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಬರೆಯಬೇಕಾಗಿ ಬಂತು ಎಂದು ವಿವರಿಸುತ್ತ ವಿಕಾಸವಾದದ ಬಗ್ಗೆ ಕೆಲವರಿಗಿರುವ ವಿರೋಧಾಭಿಪ್ರಾಯದ ಬಗ್ಗೆ ಬರೆಯುತ್ತಾರೆ. ಅದು ಹೀಗಿದೆ: ೨೦೦೫ರಲ್ಲಿ ಡೋವರ್ ನ ಪೆನ್ಸಿಲ್ವೇನಿಯಾ ಸ್ಕೂಲ್ ಡಿಸ್ಟ್ರಿಕ್ಟ್ ನ ಆಡಳಿತಗಾರರು ಹೈಸ್ಕೂಲ್ ನ ಜೀವಶಾಸ್ತ್ರ ವಿಷಯಕ್ಕಾಗಿ ಯಾವ ಪಠ್ಯ ವನ್ನು ಆಯ್ಕೆ ಮಾಡಬೇಕು ಎಂದು ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಕೆಲವು ಧಾರ್ಮಿಕ ಸದಸ್ಯರು ಪ್ರಸ್ತುತ ಪಠ್ಯದಲ್ಲಿರುವ ಡಾರ್ವಿನ್ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದರ ಬದಲು ಬೈಬಲಿಕಲ್ ಸೃಷ್ಟಿವಾದದ ಪಠ್ಯವನ್ನು ನಿಯಮಿಸಬೇಕು ಎನ್ನುತ್ತಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿಕೊಡುತ್ತದೆ. ಕೊನೆಗೆ ಸಭೆ ಒಂದು ನಿರ್ಣಯ ಹೊರಡಿಸುತ್ತದೆ ಅದರಂತೆ ಜೀವಶಾಸ್ತ್ರದ ಶಿಕ್ಷಕರು ತರಗತಿಯಲ್ಲಿ ಈ ಹೇಳಿಕೆಯನ್ನು ಓದಬೇಕಾಗುತ್ತದೆ. "ಡಾರ್ವಿನ್ ವಿಕಾಸವಾದ ಕೇವಲ ವಾದವಷ್ಟೆ ಅದು ನಿಜವಲ್ಲ ಅದಿನ್ನೂ ಪರೀಕ್ಷೆಗೆ ಒ...

ಸ್ನೇಹ

' The Hidden Life of Trees' ಜರ್ಮನಿಯಲ್ಲಿ ವೃತ್ತಿಯಿಂದ ಫಾರೆಸ್ಟರ್ ಮತ್ತು ಲೇಖಕರೂ ಆದ Peter Wohlleben ಅವರ ಪುಸ್ತಕ. ಗಿಡ-ಮರಗಳು ಹೇಗೆ ಯೋಚಿಸುತ್ತವೆ, ಹೇಗೆ ಪರಸ್ಪರ ಸಂಭಾಷಿಸುತ್ತವೆ ಎನ್ನುವುದರ ಕುರಿತು ಹೇಳುತ್ತಾರೆ.ಈ ಪುಸ್ತಕವನ್ನು ಓದುತ್ತಾ ಹೋದಂತೆ ಮರ-ಗಿಡಗಳ ಜೀವನ ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪುಸ್ತಕ ಓದಿದ ನಂತರ ಮರ-ಗಿಡಗಳ ಬಗ್ಗೆ ನಮ್ಮ ದೃಷ್ಟಿಯೇ ಬದಲಾಗುತ್ತದೆ. ಈ ಪುಸ್ತಕದ ಹೆಚ್ಚುಗಾರಿಕೆಯಿರುವುದು ಅದರ ಸರಳತೆಯಲ್ಲಿ. ಪೀಟರ್ ಅವರು ತಾವು ಹೇಳುವ ಸಂಗತಿಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಕೊಡುತ್ತಾರಾದರೂ ಅವುಗಳನ್ನೇ ಯಥಾವತ್ತಾಗಿ ಹೇಳುವುದಿಲ್ಲ. ವಿಷಯವನ್ನು ಆದಷ್ಟು ಸರಳವಾಗಿ ಹೇಳುತ್ತಾಹೋಗುತ್ತಾರೆ. ಈ ಪುಸ್ತಕದ ಮೊದಲ ಅಧ್ಯಾಯದ ಕನ್ನಡ ಅನುವಾದ ಇಲ್ಲಿದೆ. ಕೆಲವು ವರ್ಷಗಳ ಹಿಂದೆ ನಾನು ಕಾಡಿನಲ್ಲಿ ನಡೆದಾಡುವಾಗ ಪಾಚಿಯಿಂದ ಆವೃತವಾದ ಕೆಲವು ಕಲ್ಲುಗಳನ್ನು ನೋಡಿದ್ದೆ. ಆ ಕಾಡು ಹಳೆಯ 'ಬೀಚ್' (ಹೊಂಗೆ ಮರ ಕುಟುಂಬಕ್ಕೆ - Fagaceae - ಸೇರಿದ, ಯೂರೋಪಿನ ಒಂದು ಮರ - Fagus sylvatica) ಮರಗಳ ಸಂರಕ್ಷಿತ ಜಾಗವಾಗಿತ್ತು ಮತ್ತು ಅದು ನನ್ನ ನಿರ್ವಹಣೆಯಲ್ಲಿತ್ತು. ನನಗೆ ತಿಳಿದಂತೆ ನಾನು ಹಲವಾರು ಬಾರಿ ಆ ಜಾಗದಲ್ಲಿ ಓಡಾಡಿದ್ದೆ. ಆದರೆ ಆ ಕಲ್ಲುಗಳ ಬಗ್ಗೆ ಯಾವುದೇ ಗಮನ ನೀಡಿರಲಿಲ್ಲ.ಅಂದು ಅದನ್ನು ಸರಿಯಾಗಿ ಗಮನಿಸಿದೆ. ಆ ಕಲ್ಲುಗಳು ವಿಚಿತ್ರ ಆಕಾರದಲ್ಲಿದ್ದವು. ಒಂದ...

ಕಾಡಿನಲ್ಲಿ ಕಂಡ ನೋಟಗಳು

ಕಾಡಿನಲ್ಲಿ ನಡೆಯುವ ಘಟನೆಗಳೆಲ್ಲವೂ ನಮಗೆ ಪೂರ್ತಿಯಾಗಿ ತೆರೆದುಕೊಳ್ಳುತ್ತದೆ ಎಂದೇನಿಲ್ಲ. ಕೆಲವು ಘಟನೆಗಳ ಒಂದು ಭಾಗವನ್ನಷ್ಟೇ ನಮಗೆ ಗೋಚರವಾಗಿ, ಪೂರ್ತಿಯಾಗಿ ಏನು ನಡೆಯಿತು ಎನ್ನುವುದನ್ನು ನಮ್ಮ ಕಲ್ಪನೆಯಲ್ಲಷ್ಟೇ ಉಳಿದುಬಿಡುತ್ತದೆ. ಗುಂಪಿನ ಬಲದಿಂದ ಕಾಡುನಾಯಿಗಳು ಕಾಟಿಯಂತಹ ದೊಡ್ಡ ಪ್ರಾಣಿಗಳನ್ನೂ ಬೇಟೆಯಾಡಬಲ್ಲವು. ಚಿತ್ರ: ಶ್ರೀಕಾಂತ ಒಂದು ದಿನ ನಾಗರಹೊಳೆಯಿಂದ ಕಾರ್ಮಾಡು ಎನ್ನುವ ಊರಿಗೆ ಹೋಗುವ ಕಾಡಿನ ದಾರಿಯಲ್ಲಿ ನಮ್ಮ ಕೆಲಸವಿತ್ತು. ಆ ದಾರಿಯಿಂದ ಹೊರಟ fire line ಒಂದಿತ್ತು. ಅಲ್ಲಿನ ಗಿಡ ಪೊದೆಗಳನ್ನೆಲ್ಲಾ ಕಡಿದು ದೂರದವರೆಗೂ ಕಾಣುವಂತೆ ಮಾಡಿದ್ದರು. ದೂರದಲ್ಲಿದ್ದ ಒಂದು ಏರಿಯಲ್ಲಿ ಆ fire line ಕಾಡಿನೊಳಗೆ ಕಣ್ಮರೆಯಾಗಿತ್ತು. ನಾನು ನಮ್ಮ ಕೆಲಸ ಮಾಡುತ್ತಲೇ ಆ fire line ನೋಡುತ್ತಾ ಕುಳಿತ್ತಿದ್ದೆ. ಆ ಏರು ಶುರುವಾಗುವ ಜಾಗದಲ್ಲಿ ಒಂದು ಕಾಡುನಾಯಿ ಕಾಡಿನಿಂದ ಹೊರಗೆ ಬಂತು. ಓಡುತ್ತಾ ಬಂದ ಆ ನಾಯಿಯ ಹಿಂದೆ ಕಾಟಿಯೊಂದು ಆ ನಾಯಿಯನ್ನೇ ಅಟ್ಟಿಕೊಂಡು ಬಂತು. ಎರಡು ಮೂರು ಕ್ಷಣಗಳಷ್ಟೇ.. ಒಂದು ಕಡೆಯಿಂದ ಬಂದ ಕಾಡುನಾಯಿ, ಕಾಟಿ ಮತ್ತೊಂದು ಕಡೆ ಮರೆಯಾಯ್ತು. ಅಲ್ಲಿ ಏನು ನಡೆದಿರುಬಹುದು ಎಂದು ಕಲ್ಪಿಸುತ್ತಾ ಕುಳಿತೆ. ಕಾಟಿಯ ಗುಂಪೊಂದಿರಬಹುದು. ಆ ಕಡೆಯೇ ಬಂದ ಕಾಡುನಾಯಿಯ ಗುಂಪೊಂದು ಕಾಟಿಗಳನ್ನು ನೋಡಿ ಸ್ವಲ್ಪ ಕಾಡಲು ನಿರ್ಧರಿಸಿ ಅವುಗಳನ್ನು ಬೆದರಿಸಲು ಪ್ರಯತ್ನಿಸಿರಬಹುದು. ಕಾಡು ನಾಯಿ ಗುಂಪಿನ ಹಲವಾರು ನಾಯಿಗಳಲ್ಲಿ...

ಕಣಗಿಲೆ ಗಿಡುಗ-ಪತಂಗ

ಕಣಗಿಲೆ ಅಥವಾ ನಂದಿಬಟ್ಟಲು ಗಿಡವನ್ನು ಬೆಳೆಸಿರುವವರಿಗೆ, ಸಾಮಾನ್ಯವಾಗಿ ಒಂದು ಕಂಬಳಿ ಹುಳು ಈ ಗಿಡಗಳನ್ನು ಅತಿಥೇಯವಾಗಿ ಬಳಸುವುದು ತಿಳಿದಿರುತ್ತದೆ. ನನಗೂ ಈ ಜೀವಿಯ ಪರಿಚಯವಾಗಿದ್ದು ಹೀಗೆ. ನಮ್ಮ ಮನೆಯಲ್ಲಿ ಕುಂಡದಲ್ಲಿ ಬೆಳೆಸಿದ್ದ ನಂದಿಬಟ್ಟಲಿನ ಗಿಡದ ಎಲೆಗಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದವು. ಹೀಗೆ ದಿಢೀರನೆ ಎಲೆಗಳನ್ನು ಕಳೆದುಕೊಂಡು ಕಾಷ್ಟವಾಗಿದ್ದ ಗಿಡ ನೋಡಿ ಆಶ್ಚರ್ಯ ಆಯಿತು.

ಕಾಮನ್ ಬ್ಯಾಂಡೆಡ್ ಆಲ್ (Hasora chromus)

ಹೊಂಗೆ ಮರ ತನ್ನ ಎಲೆಗಳನ್ನು ಉದುರಿಸಿ ಮತ್ತೆ ಚಿಗುರುವುದನ್ನು ನೋಡಿದಾಗ ನನ್ನ ನೆನಪು ಏಳೆಂಟು ವರ್ಷಗಳ ಹಿಂದೆ ಸರಿಯುತ್ತದೆ. ನಾವು ಹೊಂಗೆ ಸಸಿಯನ್ನು ನೆಟ್ಟು ಎರಡು ಮೂರು ವರ್ಷವಾಗಿತ್ತು ಅದು ಸಣ್ಣ ಮರವಾಗಿ ಬೆಳೆದಿತ್ತು. ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಎಲೆಯುದುರಿಸಿ ಹೊಸ ಎಲೆಗಳನ್ನು ತಾಳುತಿತ್ತು. ಹೊಸ ಎಲೆಗಳು ಮೊದಲು ಕೆಂಪು ಬಣ್ಣದಲ್ಲಿದ್ದು ಬೆಳೆದಂತೆಲ್ಲ ತೆಳು ಹಸಿರು ಬಣ್ಣಕ್ಕೆ ತಿರುಗುತ್ತವೆ. ದೂರದಿಂದ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಈ ಸಮಯದಲ್ಲಿ ಇದ್ದಕ್ಕಿದಂತೆ ಮರದ ತುಂಬೆಲ್ಲ ಒಂದು ಚಿಟ್ಟೆಯ ಮರಿಗಳು ಕಾಣಿಸಿಕೊಂಡವು.

ಚಿಪ್ಪು ಕೀಟಗಳು

ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ, ಕುಂಡಗಳಲ್ಲಿ ಹೂವಿನ ಗಿಡಗಳನ್ನು ಬೆಳಿಸಿದ್ದೆವು. ಇದರಲ್ಲಿ ನಂದಿಬಟ್ಟಲು ಗಿಡವು ಸೇರಿತ್ತು. ಮೂರು ಗಿಡಗಳಿಂದ ಒಂದಷ್ಟು ಹೂವುಗಳು ಸಿಗುತ್ತಿತ್ತು. ಕೆಲವು ವರ್ಷಗಳೊ ಅಥವಾ ತಿಂಗಳುಗಳೊ ಸರಿಯಾಗಿ ನೆನಪಿಲ್ಲ ಕಳೆದಿತ್ತು, ನಂದಿಬಟ್ಟಲಿನ ಗಿಡದ ಟೊಂಗೆಯ ಮೇಲೆ ಕಂದು ಬಣ್ಣದ ಗುಳ್ಳೆಗಳು ಮೂಡ ತೊಡಗಿದವು. ಗಿಡಕ್ಕೆ ಏನೊ ಖಾಹಿಲೆ ಬಂದಿದೆ ಎಂದುಕೊಂಡೆ. ಆ ಗುಳ್ಳೆಗಳನ್ನು ಕೀಳಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಈ ಗುಳ್ಳೆಗಳು ಹೆಚ್ಚಿದಂತೆಲ್ಲ ಗಿಡದ ಮೇಲೆ ಗೊದ್ದಗಳು ಓಡಾಡಲು ಶುರುಮಾಡಿದವು. ಕೆಲವೊಮ್ಮೆ ಗುಂಪಾಗಿ ಗಿಡದ ತುದಿಗಳಲ್ಲಿ ಅಥವಾ ಎಲೆಗಳ ಮರೆಯಲ್ಲಿ ತಟಸ್ಥ ವಾಗಿ ಕುಳಿತಿರುತ್ತಿದ್ದವು. ಹೀಗೆ ಅನೇಕ ದಿನಗಳವರೆಗು ಇದ್ದ ಇವನ್ನು ಕ್ರಮೇಣ ನಾನು ಮರೆತು ಬಿಟ್ಟೆ. 

ಜೋಳಿಗೆ ಹುಳು

ನಾವು ನಮ್ಮ ಮನೆಯ ಗೋಡೆ ಅಥವಾ ಕಾಂಪೌಡಿನ ಮೇಲೆ ಒಂದುರೀತಿ ಚಿಕ್ಕದಾಗಿ ಕಸ ಒಗ್ಗೂಡಿರುವುದನ್ನು ನೋಡಿರುತ್ತೇವೆ. ಇದನ್ನು ಬಹುತೇಕ ಜನ ಕಸವೆಂದು ಉಪೇಕ್ಷಿಸುವುದೆ ಹೆಚ್ಚು. ಆದರೆ ಸ್ವಲ್ಪ ತಾಳ್ಮೆಯಿಂದ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಜೀವಿಯೆಂದು ತಿಳಿಯುತ್ತದೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.