ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ISROLAYOUT LAKE (DEVARAKERE)

Little Cormorant basking under Sun Isro layout lake also called as Devarakere is situated in southern part of the Bangalore city (12.89N,77.55E).  It is a small lake stretched over an area of about 5 acres. I have been a regular visitor to this lake since 2002 and have witnessed how our ecosystem gets affected due to the unplanned growth or development of a city.

ಕನ್ನಡಿಯಲ್ಲಿ ಕಂಡ ಮುಖ..

ಪಕ್ಷಿಗಳು ಹೆಚ್ಚಾಗಿ ನಮ್ಮನ್ನ avoid ಮಾಡ್ಲಿಕ್ಕೆ ನೋಡ್ತಾವೆ. ಅದರ ಆ ಗುಣದಿಂದಲೇ ಕೆಲವೊಂದು ಸಾರಿ ಈ ಪಕ್ಷಿಗಳು ಏನೋ ಕಳ್ಳ ಕೆಲಸ ಮಾಡ್ತಿವೆ ಅನ್ನಿಸ್ತಿರುತ್ತೆ. ನಾನು ಒಂದ್ಸಾರಿ ಫಣಸೋಲಿ campನಲ್ಲಿ ಹಿಂಭಾಗದಲ್ಲಿ shaving ಮಾಡ್ಕೊಂಡು ನಿಂತಿದ್ದೆ. ನನ್ನ ಹಿಂದೆ ತೇಗ ಮರದ plantation ಇತ್ತು. ಯಾವುದೋ ಒಂದು ಮರದಿಂದ ಎನೋ ಸದ್ದು ಬರ್ತಿತ್ತು. ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಲ್ಲುತ್ತಿತ್ತು. ಅಂದ್ರೆ ಯಾವುದೋ ಪ್ರಾಣಿಯೋ ಪಕ್ಷಿಯೋ ನನ್ನ ಕಡೆ ಒಂದು ಕಣ್ಣು ಇಟ್ಕೊಂಡೇ ಏನೋ ಕೆಲಸ ಮಾಡ್ತಿದೆ! ಇಲ್ಲಾಂದ್ರೆ ನಾನು ತಿರುಗಿ ನೋಡಿದ ತಕ್ಷಣ ಅದ್ಯಾಕೆ ತನ್ನ ಕೆಲಸ ನಿಲ್ಲಿಸ್ಬೇಕು? ಆದ್ರೆ ಸದ್ದು ಎಲ್ಲಿಂದ ಬರ್ತಿದೆ ಅಂತ ಗೊತ್ತಾಗ್ಲಿಲ್ಲ. ಸುಮಾರು ಹೋತ್ತು ಗಮನಿಸಿದ ಮೇಲೆ ಅದು ಒಂದು ತೇಗದ ಮರದ ಮೇಲಿನಿಂದ ಬರ್ತಿದೆ ಅಂತ ಗೊತ್ತಾಯ್ತು. ಯಾವ್ದೋ ಪಕ್ಷಿ ಅದನ್ನ ಕುಟ್ಟುತ್ತಿದೆ ಅಂತ ತಿಳಿತು. ಆದ್ರೆ ಯಾವ ಪಕ್ಷಿ ಅಂತ ಗೊತ್ತಾಗ್ಲಿಲ್ಲ. ನನಗಿದ್ದ ಅಡಚಣೆ ಅಂದ್ರೆ ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಲ್ತಿತ್ತು. ಯಾವ್ದುಕ್ಕೂ ಇರಲಿ ಅಂತ ಒಳಗೆ ಹೋಗಿ ನನ್ನ binocular ತಂದೆ. ಆದ್ರೂ ನನಗೆ ಅದ್ಯಾವ ಪಕ್ಷಿ ಅಂತ ನೋಡ್ಲಿಕ್ಕೆ ಆಗ್ಲಿಲ್ಲ. ನಾನು ಹಿಂದೆ ತಿರುಗಿ ನೋಡಿದ್ರೆ ತಾನೆ ಆ ಪಕ್ಷಿ ಸದ್ದು ಮಾಡೋದು ನಿಲ್ಲಿಸ್ತಿದ್ದದ್ದು, ನಾನು shaving ಮಾಡ್ಕೋಳ್ತಿದ್ನಲ್ಲ, ನಾನು ನನ್ನ ಮುಂದಿ...

ಎಲ್ಲಿ ಹೋದವು ಇವೆಲ್ಲ?

ನಮ್ಮ ಬಳಿ ಇರುವ ಎಲ್ಲಾ ಇಲೆಕ್ಟ್ರಾನಿಕ್ ಗ್ಯಾಜೆಟ್ ಗಳು ಅತಿ ವೇಗದಲಿ ಬದಲಾಗುತ್ತಿವೆ , ದಿನಗಳು ಕಳೆಯುತ್ತಿರುವಂತೆ ಇವುಗಳು ಹಳೆಯದಾಗುತ್ತವೆ . ಮನುಷ್ಯನ ಗುಣವೇ ಹಾಗೆ ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಅವನ ಕೈಗೆ ಅತಿ ಕಮ್ಮಿ ಖರ್ಚಿನಲ್ಲಿ ಸಿಕ್ಕರೆ ಅದು ಅವನ ಮನೆಯಲ್ಲಿ ಇರುತ್ತದೆ ಕಾಲ ಕ್ರಮೇಣ ಅವುಗಳು ಹಳೆಯದಾದಂತೆ ಹೊಸ ವಸ್ತುಗಳಿಗೆ ಸ್ಥಾನ ಸಿಗುತ್ತದೆ .

ಕಾಡು ಮತ್ತು ನಾನು

ಎಷ್ಟೋ ಸಮಯ ಕಾಡಿನಲ್ಲಿ ಸುತ್ತಾಡ್ತಿನಲ್ಲ ಅದು ಯಾಕೆ ಖುಷಿ ಕೊಡುತ್ತೆ ಅಂತ ಆವಾಗ ಗೊತ್ತಾಗೊದಿಲ್ಲ .  ಸುಮಾರು ಸಾರಿ ಸಾಕಪ್ಪ ಈ ಕಾಡು ಅನ್ನಿಸಿಬಿಡುತ್ತೆ .

ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣ

ಪಕ್ಷಿಗಳೆಲ್ಲಾ ನಾವು ನೋಡ್ದಾಗ ಆಹಾರ ಹುಡುಕ್ಕೊಂಡೋ ಇಲ್ಲಾ ಗೂಡೂ ಮಾಡೋದ್ರಲ್ಲೋ busy ಆಗಿರ್ತಾವೆ . ಅದ್ರಲ್ಲಿ ಎಷ್ಟು involve ಆಗಿರುತ್ವೆ ಅಂದ್ರೆ ಒಂದೊಂದ್ಸಾರಿ ಯಾರು ಬಂದ್ರೂ ಗಮನಿಸೋದಿಲ್ಲ .

ಬೇಲಿಯೆ ಎದ್ದು ಹೊಲ ಮೇಯ್ದಾಗ!!!

ಇತ್ತೀಚಿಗೆ ನನ್ನ ಸ್ನೇಹಿತರೊಂದಿಗೆ ಸಿನಿಮಾಗಳ ಬಗೆ ಚರ್ಚಿಸುತ್ತಿದ್ದಾಗ ಅವರವರಿಗೆ ಉತ್ತಮವೆನಿಸಿದ ಸಿನಿಮಾಗಳನ್ನು ಹೇಳಲು ಆರಂಭಿಸಿದರು ನಾನು ನನ್ನ ಸೆಲ್ ಫೋನಿನಲ್ಲಿ ಅವುಗಳನ್ನು ಬರೆದುಕೊಂಡೆ . ಆ ಸಮಯದಲ್ಲಿ ಒಬ್ಬ ಮಾದಕ ವಸ್ತುಗಳನ್ನು ಆದರಿಸಿದ ಒಂದು ಸಿನಿಮಾದ ಹೆಸರನ್ನು ಹೇಳಿದ .

ಟಿಟ್ಟಿಭನ ಕಥೆ:

ಬಂಡೀಪುರದಲ್ಲಿ ಒಂದು ದಿನ Red Wattled Lapwing ( ಕನ್ನಡದಲ್ಲಿ ಟಿಟ್ಟಿಭ ) ಗೂಡು ನೋಡ್ದೆ . ಗೂಡು ಅಂದ್ರೆ ನಾವು ದಿನ ಓಡಾಡೋ ಜೀಪ್ ರೋಡಿನ ಒಂದು ಬದಿಯಲ್ಲಿ ಸ್ವಲ್ಪ ಹಳ್ಳ ಇರೋ ಕಡೆ ನಾಲ್ಕು ಮೊಟ್ಟೆ ಇಟ್ಟಿತ್ತು .

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಉಗುಳು ಕೀಟ

ಪ್ರಕೃತಿಯಲ್ಲಿ ಓಡಾಡುವುದು ನೆನೆಸಿಕೊಂಡರೆ ಸಂತಸವಾದರು, ಒಮ್ಮೊಮ್ಮೆ ಓಡಾಡುವಾಗ ಯಾಕಾದರು ಬಂದೆವೊ ಎಂದೆನಿಸಿಬಿಡುತ್ತದೆ. ಇದಕ್ಕೆ ಕಾರಣ ಪ್ರಕೃತಿ ಒಡ್ಡುವ ಕಷ್ಟಗಳು. ಆದರೆ ಮತ್ತೆ ಪ್ರಕೃತಿಯಲ್ಲಿ ಓಡಾಡಬೇಕೆಂಬ ಹಂಬಲ ಉಂಟಾಗಲು ಕಾರಣ ಪ್ರಕೃತಿ ನೀಡುವ ಅಚ್ಚರಿಗಳು. ಒಮ್ಮೆ ಹೀಗೆ ಒಂದು ಅಚ್ಚರಿಯಾಯಿತು.