(ಅಮೆರಿಕನ್ ಮಾನವ ಶಾಸ್ತ್ರಜ್ಞ Stephen Jay Gould ಅವರ ಬರೆದಿರುವ Ever Since Darwin ಪುಸ್ತಕದ Human Baby as Embryos ಆಧ್ಯಾಯದ ಅನುವಾದ) ಸ್ವಿಸ್ ಪ್ರಾಣಿಶಾಸ್ತ್ರಜ್ಞ ಅಡಾಲ್ಫ್ ಪೋರ್ಟ್‌ಮನ್ ನನ್ನ ನೆಚ್ಚಿನ ವಿಜ್ಞಾನಿಗಳಲ್ಲಿ ಒಬ್ಬರು. ಪೋರ್ಟ್‌ಮನ್ ತಮ್ಮ ಅಧ್ಯಯನದಲ್ಲಿ, ಸಸ್ತನಿಗಳ ಸಂತಾನೋತ್ಪತ್ತಿ ತಂತ್ರಗಳ ಎರಡು ಮೂಲ ಮಾದರಿಗಳನ್ನು ಗುರುತಿಸಿದ್ದಾರೆ. "ಆದಿಮ" (Primitive) ಎಂದು ಗುರುತಿಸಲ್ಪಡುವ ಕೆಲವು ಸಸ್ತನಿಗಳು, ಕಡಿಮೆ ಗರ್ಭಾವಧಿ ಹೊಂದಿರುತ್ತವೆ ಮತ್ತು ಪೂರ್ಣವಾಗಿ ಬೆಳವಣಿಗೆಯಾಗಿರದ (ಚಿಕ್ಕ ಗಾತ್ರದ, ಕೂದಲುರಹಿತ, ಮುಚ್ಚಿದ ಕಣ್ಣು, ಮುಚ್ಚಿದ ಕಿವಿಗಳನ್ನು ಹೊಂದಿದ ಮತ್ತು ಅಸಹಾಯಕ) ಹೆಚ್ಚಿನ ಸಂಖ್ಯೆಯ ಮರಿಗಳಿಗೆ ಜನ್ಮ ನೀಡುತ್ತದೆ. ಈ ಸಸ್ತನಿಗಳ ಜೀವಿತಾವಧಿಯು ಅಲ್ಪಾವಧಿಯದಾಗಿದ್ದು, ದೇಹದ ಗಾತ್ರಕ್ಕೆ ಹೋಲಿಸಿದರೆ ಚಿಕ್ಕ ಮೆದುಳನ್ನು ಹೊಂದಿರುತ್ತವೆ ಮತ್ತು ಅವುಗಳ ಸಾಮಾಜಿಕ ನಡವಳಿಕೆಯು ಸರಳವಾಗಿರುತ್ತದೆ. ಪೋರ್ಟ್‌ಮನ್ ಈ ಮಾದರಿಯನ್ನು ಆಲ್ಟ್ರಿಷಿಯಲ್ (Altricial) ಎಂದು ಉಲ್ಲೇಖಿಸುತ್ತಾರೆ. ಮತ್ತೊಂದೆಡೆ, ಅನೇಕ "ಮುಂದುವರಿದ" ಸಸ್ತನಿಗಳು ದೀರ್ಘಾವಧಿಯ ಗರ್ಭಧಾರಣೆ, ದೀರ್ಘಾವಧಿಯ ಜೀವಿತಾವಧಿ, ದೊಡ್ಡ ಮೆದುಳು, ಸಂಕೀರ್ಣವಾದ ಸಾಮಾಜಿಕ ನಡವಳಿಕೆಗಳನ್ನು ಹೊಂದಿರುವ, ಮತ್ತು ಕೆಲವು ಪ್ರಾಣಿಗಳು ಚೆನ್ನಾಗಿ ಬೆಳವಣಿಗೆಯಾದ, ಕಡಿಮೆ ಸಂಖ್ಯೆಯ ಶಿಶುಗಳಿಗೆ ಜನ್ಮ ನೀಡುತ್ತವೆ ಮತ್ತು ಅ