ವಿಷಯಕ್ಕೆ ಹೋಗಿ

'ಕುಟುರ ಮತ್ತು ಕುಟಿಗ'ರ ಜಗಳ

ಶ್ರೀಕಾಂತ ಬರೆದಿರುವ ಕುಟುರ ಪಕ್ಷಿ ಮತ್ತು ಮೈನಾ ಪಕ್ಷಿಯ ಜಗಳ ಓದಿದ ನಂತರ ನನಗೂ ಇಂತಹದೇ ಇನ್ನೊಂದು ಘಟನೆ ನೆನಪಿಗೆ ಬಂತು. ಸುಮಾರು ಐದಾರು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಂಪೆನಿ ಒಂದು ಟೆಕ್‌ಪಾರ್ಕ್‌‍‌ನಲ್ಲಿ ಕೆಂಗೇರಿ ಬಳಿ ಮೈಸೂರು ರಸ್ತೆಯಲ್ಲಿತ್ತು. ಆ ಟೆಕ್‌ಪಾರ್ಕ್ ಮೊದಲು ಒಂದು ತೋಟವಾಗಿತ್ತು. ಆ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡದೆ ಕೆಲವು ಮರಗಳನ್ನು ಹಾಗೆ ಉಳಿಸಿಕೊಳ್ಳಲಾಗಿತ್ತು. ಹಾಗಾಗಿ ಆ ಟೆಕ್‌ಪಾರ್ಕ್ ಇತರ ಟೆಕ್‌ಪಾರ್ಕ್‌ಗಳಂತೆ ಕೃತಕವಾಗಿರದೆ ನೈಜವಾಗಿತ್ತು.
ತನ್ನ ಪರಿಸರದಿಂದಾಗಿ ಈ ಜಾಗ ಹಲವು ಪಕ್ಷಿಗಳಿಗ ಮನೆಯಾಗಿತ್ತು. ಪಿಕಳಾರ, ಸೂರ್ಹಕ್ಕಿ, ಕುಟುರ, ಕಮ್ಮಾರ, ಚೋರೆ, ಮರಕುಟಿಗ ಇನ್ನು ಮುಂತಾದ ಹಕ್ಕಿಗಳು ಸಾಮಾನ್ಯವಾಗಿ ಕಾಣಸಿಗುತ್ತಿದ್ದವು. ಇದರಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದ ಹಕ್ಕಿ ಎಂದರೆ ಅದು ಕುಟುರ. ನಾನು ಕುಳಿತು ಕೆಲಸ ಮಾಡುತ್ತಿದ್ದ ಜಾಗದ ಎದುರಿಗೆ ಗಾಜಿನ ಕಿಟಕಿಯಿತ್ತು. ಅದರಾಚೆಗೊಂದು ಮರ. ಆ ಮರದ ಮೇಲೆ ಇರುತ್ತಿದ್ದ ಕುಟುರ ಒಮ್ಮೊಮ್ಮೆ ಗಾಜಿನಲ್ಲಿ ಕಾಣುತ್ತಿದ್ದ ತನ್ನದೇ ಪ್ರತಿಬಿಂಬವನ್ನು ನೋಡಿ ಅದನ್ನು ಕಟ್ಟುತ್ತಿತ್ತು. ಹಾಗಾಗಿ ಇದು ಎಲ್ಲರ ಗಮನವನ್ನು ಸೆಳೆದಿತ್ತು.





ಮರಕುಟಿಗ (ಸಾಂದರ್ಭಿಕ ಚಿತ್ರ)

ನಾವು ಗಾಡಿಗಳನ್ನು ನಿಲ್ಲಿಸುತ್ತಿದ್ದ ಜಾಗದಲ್ಲಿ ಎತ್ತರದ ಮರಗಳು ಬೆಳೆದಿದ್ದವು. ಅದೊಂದು ದಿನ ಬೆಳಗ್ಗೆ ನಾನು ಗಾಡಿಯನ್ನು ನಿಲ್ಲಿಸುತ್ತಿರಬೇಕಾದರೆ, ನನ್ನ ಸನಿಹದಲ್ಲೇ ಏನೋ ಮೇಲಿಂದ ಧೊಪ್ಪೆಂದು ಕೆಳಗೆ ಬಿದ್ದಂತಾಯಿತು. ಒಂದೆರಡು ಕ್ಷಣ ಅಲ್ಲಿ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ಆ ಜಾಗದಲ್ಲಿ ಜೋರು ದನಿಯಲ್ಲಿ ಎರಡು ಪಕ್ಷಿಗಳು ಕೂಗುತ್ತಿರುವುದು ತಿಳಿಯಿತು. ಕೆಳಗೆ ಬಿದ್ದಿದ್ದ ಆ ಪಕ್ಷಿಗಳು ಒಂದರ ಮೇಲೆ ಒಂದು ಹೊಡೆಯುತ್ತಿದ್ದವು. ಆ ಪಕ್ಷಿಗಳು ಯಾವುದೆಂದು ಮೊದಲಿಗೆ ತಿಳಿಯಲಿಲ್ಲವಾದರು ನಂತರ ಸ್ಪಷ್ಟವಾಯಿತು ಒಂದು ಕುಟುರ (Psilopogon viridis) ಮತ್ತೊಂದು ಮರಕುಟಿಗ (Dinopium benghalense) ಎಂದು. ಇದೆಲ್ಲ ನಡೆದದ್ದು ಒಂದರ್ಧ ನಿಮಿಷದಲ್ಲಷ್ಟೆ ಅಷ್ಟರಲ್ಲಿ ಅವು ತಾವಿದ್ದ ಜಾಗದ ಅಪಾಯವನ್ನು ಅರಿತು ಬೇರೆ ಬೇರೆ ದಿಕ್ಕಿನಲ್ಲಿ ಹಾರಿ ಹೋದವು. ಅದಕ್ಕೆ ಮುನ್ನ ಅನೇಕ ಬಾರಿ ಒಂದು ಪಕ್ಷಿ ಇನ್ನೊಂದನ್ನು ಅಟ್ಟುವದನ್ನು ನೋಡಿದ್ದೆ ಆದರೆ ಈ ರೀತಿಯ ಕಾದಾಟ ಅದೆ ಮೊದಲ ಬಾರಿಗೆ ನೋಡಿದ್ದು.

ಈ ಎರಡು ಸನ್ನಿವೇಶಗಳಲ್ಲಿ ಕಾಣುವ ಸಂಘರ್ಷ ಏಕೆ ಉಂಟಾಗುತ್ತದೆ? ಇದು ಕೇವಲ ಆಕಸ್ಮಿಕವಲ್ಲ. ಇದು ಪ್ರಕೃತಿಯಲ್ಲಿ ಕಾಣಿಸುವ ಸಾಮಾನ್ಯ ಕ್ರಿಯೆ. ಎಲ್ಲ ಪ್ರಾಣಿಗಳಿಗು ಬದುಕಲು ಕೆಲವು ಅವಶ್ಯಕತೆಗಳಿರುತ್ತವೆ. ಇದು ನೀರು, ಆಹಾರ, ಸಂಗಾತಿ ಅಥವಾ ನೆಲೆಯಾಗಿರಬಹುದು ( ನೆಲೆ ಬಹುತೇಕ ಎಲ್ಲವನ್ನೂ ಒಳಗೊಳ್ಳುತ್ತದೆ) ಎರಡು ಜೀವಿಗಳು ಸಾಮಾನ್ಯ ಅಗತ್ಯಗಳಿಗೆ ಸ್ಫರ್ಧಿಸಿದಾಗ ಅವುಗಳ ನಡುವೆ ಸಂಘರ್ಷವಾಗುತ್ತದೆ. ಇಂತಹ ಸಂಘರ್ಷ ಜೀವಿಗಳ ಮೇಲೆ ಒತ್ತಡ ಹೇರುತ್ತದೆ ಮತ್ತು ಒತ್ತಡ ಜೀವಿಗಳ ಉಗಮಕ್ಕೆ ಕಾರಣವಾಗುತ್ತದೆ.




ಕುಟುರ (ಸಾಂದರ್ಭಿಕ ಚಿತ್ರ)

ಈ ಎರಡು ಸನ್ನಿವೇಶಗಳಲ್ಲು ಸಾಮಾನ್ಯ ಅಗತ್ಯವಿದಿದ್ದು ನೆಲೆಗಾಗಿ ಅಂದರೆ ಗೂಡು ಮಾಡಲು ಮರದ ಕೊಂಬೆಗಾಗಿ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಕ್ಕೆ - ಪ್ರಕೃತಿ ಸಂಭ್ರಮಿಸುವ ಪರಿ

ಏಪ್ರಿಲ್-ಮೇ ತಿಂಗಳು ಬಹುತೇಕ ಮರಗಳು ಹೊಸದಾಗಿ‌ ಚಿಗುರಿ ಪ್ರಕೃತಿ ಸಂಭ್ರಮಿಸುವ ಸಮಯ. ವಸಂತಕಾಲದ ಬೆಳಗಿನ ಹೊತ್ತು ಮರಗಳಲ್ಲಿ ತೂರಿಬರುವ ಸೂರ್ಯನ ಕಿರಣಗಳು ಬಣ್ಣ ಬಣ್ಣದ ಚಿಗುರೆಲೆ, ಹೂಗಳ ಮೇಲೆ ಬಿದ್ದು ಇಡೀ ವಾತಾವರಣವೇ ಪ್ರಜ್ವಲಿಸುತ್ತದೆ. ಮರಗಳಲ್ಲಿ ಎಲೆಗಳ ಚಿಗುರು ಕೆಂಪು, ತಿಳಿಹಸಿರು ಹೀಗೆ‌ ವಿವಿಧ ಬಣ್ಣದ್ದಾದರೆ, 'ಕಾಡಿನ ಬೆಂಕಿ' ಎಂದೇ ಕರೆಯಲಾಗುವ ಮುತ್ತುಗ, ಬೂರುಗ, ಮಂದಾರ ಮರಗಳಲ್ಲಿ ಅರಳುವ ಹೂಗಳ ಸೊಗಸು. 'ಚಿನ್ನದ ಮಳೆ' ಎಂದು ಹೆಸರಿಸುವ ಕಕ್ಕೆಯ ಮರದ ಹೂವಿನದ್ದೇ ಇನ್ನೊಂದು‌ ಸೊಗಸು. ಕಕ್ಕೆ ಮರದ ಮೂಲ ಭಾರತ ಉಪಖಂಡ. ನೆರೆಯ ಶ್ರೀಲಂಕಾ, ಮ್ಯಾನ್ಮಾರ್, ಪಾಕಿಸ್ತಾನ, ಥೈಲ್ಯಾಂಡ್ ದೇಶಗಳಲ್ಲಿಯೂ ಬೆಳೆಯುತ್ತದೆ. ಒಣ ಎಲೆಯುದುರುವ ಮತ್ತು ತೇವಾಂಶಭರಿತ ಎಲೆಯುದುರುವ ಪರಿಸರದಲ್ಲಿ‌ ಬೆಳೆಯುವ ಕಕ್ಕೆ ಮರ ಥೈಲ್ಯಾಂಡ್ ದೇಶದ ರಾಷ್ಟ್ರೀಯ ಮರ ಮತ್ತು ಅದರ ಹೂವು ರಾಷ್ಟ್ರೀಯ ಪುಷ್ಪ. ನಮ್ಮ ದೇಶದ ಕೇರಳ ರಾಜ್ಯದ ರಾಜ್ಯ ಪುಷ್ಪವೂ ಕಕ್ಕೆ. Cassia fistula ಕಕ್ಕೆ ಮರದ ವೈಜ್ಞಾನಿಕ ಹೆಸರು. ಸುಮಾರು 15-20 ಮೀಟರ್ ಎತ್ತರಕ್ಕೆ ಬೆಳೆಯುವ ಸಾಮಾನ್ಯ ಗಾತ್ರದ ಮರ. ಇದರ ಎಲೆಗಳು ಋತುಮಾನಕ್ಕೆ‌ ತಕ್ಕಂತೆ ಉದುರುವ (deciduous) ವರ್ಗಕ್ಕೆ ಸೇರಿದೆ. ಇದರ ಹಳದಿ ಹೂಗಳು 'ಪೆಂಡ್ಯೂಲಮ್'ನಂತೆ ಇಳಿಬಿಟ್ಟು, 4-7 ಸೆಂಟಿಮೀಟರ್ ವ್ಯಾಸವಿರುತ್ತದೆ. ಸಮಾನ ಗಾತ್ರದ 5 ಪಕಳೆಗಳಿರುತ್ತದೆ. ಇದು ದ್ವಿದಳ ಬೀಜಬ...

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ಮಕರ ಸಂಕ್ರಾಂತಿ ಮತ್ತು ಉತ್ತರಾಯಣ

ಸಂಕ್ರಾಂತಿ ಹಬ್ಬವನ್ನು ಭಾರತದ ಬೇರೆ ಭಾಗಗಳಲ್ಲಿ ಬೇರೆ ಹೆಸರಿನಲ್ಲಿ ಆಚರಿಸುತ್ತಾರೆ . ಸಂಕ್ರಾಂತಿಯನ್ನು ಸಾಮಾನ್ಯವಾಗಿ ಉತ್ತರಾಯಣ ಪುಣ್ಯಕಾಲವೆಂದೂ ಆಚರಿಸುತ್ತಾರೆ . ಸಂಕ್ರಾಂತಿ ಮತ್ತು ಉತ್ತರಾಯಣ ನಡುವಿನ ಸಂಬಂಧವೇನು ? ಇದನ್ನು ತಿಳಿದುಕೊಳ್ಳಬೇಕಾದರೆ ಸಂಕ್ರಾಂತಿ ಮತ್ತು ಉತ್ತರಾಯಣ ಎಂದರೇನು ತಿಳಿಯೋಣ . ಮಕರ ಸಂಕ್ರಾಂತಿ : ಭೂಮಿಯು ಸೂರ್ಯನನ್ನು ಸುತ್ತುವ ಸಮತಲವನ್ನು ಅಂತರಿಕ್ಷಕ್ಕೆ ವಿಸ್ತರಿಸಿ ಆ ಕಾಲ್ಪನಿಕ ವೃತ್ತಕ್ಕೆ ಕ್ರಾಂತಿವೃತ್ತ (Ecliptc) ಎನ್ನಲಾಗಿದೆ . ಕ್ರಾಂತಿವೃತ್ತವನ್ನು ಸರಿಯಾಗಿ 12 ಭಾಗಗಳನ್ನಾಗಿ ವಿಭಜಿಸಿ , ಆ ಭಾಗಗಳನ್ನು ಕ್ರಮವಾಗಿ ಮೇಷರಾಶಿ , ವೃಷಭರಾಶಿ ,.. ಮೀನರಾಶಿಗಳೆಂದು ಕರೆಯುತ್ತೇವೆ . ಸೂರ್ಯನು ಒಂದೊಂದು ರಾಶಿಯನ್ನು ಪ್ರವೇಶಿಸುವ ಪರ್ವಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಹೆಸರು . ಈ 12 ರಾಶಿಗಳ ಗಣನೆಯು ಕ್ರಾಂತಿವೃತ್ತದಲ್ಲಿ ಬಿಂದುವೊಂದನ್ನು ಸ್ಥಿರವಾದ ಸ್ಥಾನವೆಂದು ಪರಿಗಣಿಸಿ , ಆ ಬಿಂದುವಿನಿಂದ ಆರಂಭಿಸಿ , ಭಾರತೀಯ ಸೌರಮಾನ ಪದ್ಧತಿಯಲ್ಲಿ ಸೂರ್ಯನು ಮೇಷರಾಶಿಯನ್ನು ಪ್ರವೇಶಮಾಡಿದ ಅಂದರೆ ಮೇಷ ಸಂಕ್ರಮಣದ ಸಮಯದಿಂದ ಸೌರವರ್ಷವು ಪ್ರಾರಂಭವಾಗುತ್ತದೆ . ಇದೇ ' ಸೌರಮಾನ ಯುಗಾದಿ ' ಎಂದು ಆಚರಿಸಲ್ಪಡುತ್ತದೆ . ಈ ಪದ್ಧತಿಯು ಮುಖ್ಯವಾಗಿ ತಮಿಳುನಾಡಿನಲ್ಲಿ ಚಲಾವಣೆಯಲ್ಲಿದೆ . ಕರ್ನಾಟಕದಲ್ಲಿಯೂ ಕೆಲವು ಭಾಗಗಳಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಾರೆ . ಈ ಸೌರವರ್ಷದ ಪ...