ಪಕ್ಷಿಗಳು ಹೆಚ್ಚಾಗಿ ನಮ್ಮನ್ನ avoid ಮಾಡ್ಲಿಕ್ಕೆ ನೋಡ್ತಾವೆ. ಅದರ ಆ ಗುಣದಿಂದಲೇ ಕೆಲವೊಂದು ಸಾರಿ ಈ ಪಕ್ಷಿಗಳು ಏನೋ ಕಳ್ಳ ಕೆಲಸ ಮಾಡ್ತಿವೆ ಅನ್ನಿಸ್ತಿರುತ್ತೆ. ನಾನು ಒಂದ್ಸಾರಿ ಫಣಸೋಲಿ campನಲ್ಲಿ ಹಿಂಭಾಗದಲ್ಲಿ shaving ಮಾಡ್ಕೊಂಡು ನಿಂತಿದ್ದೆ. ನನ್ನ ಹಿಂದೆ ತೇಗ ಮರದ plantation ಇತ್ತು. ಯಾವುದೋ ಒಂದು ಮರದಿಂದ ಎನೋ ಸದ್ದು ಬರ್ತಿತ್ತು. ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಲ್ಲುತ್ತಿತ್ತು. ಅಂದ್ರೆ ಯಾವುದೋ ಪ್ರಾಣಿಯೋ ಪಕ್ಷಿಯೋ ನನ್ನ ಕಡೆ ಒಂದು ಕಣ್ಣು ಇಟ್ಕೊಂಡೇ ಏನೋ ಕೆಲಸ ಮಾಡ್ತಿದೆ! ಇಲ್ಲಾಂದ್ರೆ ನಾನು ತಿರುಗಿ ನೋಡಿದ ತಕ್ಷಣ ಅದ್ಯಾಕೆ ತನ್ನ ಕೆಲಸ ನಿಲ್ಲಿಸ್ಬೇಕು? ಆದ್ರೆ ಸದ್ದು ಎಲ್ಲಿಂದ ಬರ್ತಿದೆ ಅಂತ ಗೊತ್ತಾಗ್ಲಿಲ್ಲ. ಸುಮಾರು ಹೋತ್ತು ಗಮನಿಸಿದ ಮೇಲೆ ಅದು ಒಂದು ತೇಗದ ಮರದ ಮೇಲಿನಿಂದ ಬರ್ತಿದೆ ಅಂತ ಗೊತ್ತಾಯ್ತು. ಯಾವ್ದೋ ಪಕ್ಷಿ ಅದನ್ನ ಕುಟ್ಟುತ್ತಿದೆ ಅಂತ ತಿಳಿತು. ಆದ್ರೆ ಯಾವ ಪಕ್ಷಿ ಅಂತ ಗೊತ್ತಾಗ್ಲಿಲ್ಲ. ನನಗಿದ್ದ ಅಡಚಣೆ ಅಂದ್ರೆ ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಲ್ತಿತ್ತು. ಯಾವ್ದುಕ್ಕೂ ಇರಲಿ ಅಂತ ಒಳಗೆ ಹೋಗಿ ನನ್ನ binocular ತಂದೆ. ಆದ್ರೂ ನನಗೆ ಅದ್ಯಾವ ಪಕ್ಷಿ ಅಂತ ನೋಡ್ಲಿಕ್ಕೆ ಆಗ್ಲಿಲ್ಲ. ನಾನು ಹಿಂದೆ ತಿರುಗಿ ನೋಡಿದ್ರೆ ತಾನೆ ಆ ಪಕ್ಷಿ ಸದ್ದು ಮಾಡೋದು ನಿಲ್ಲಿಸ್ತಿದ್ದದ್ದು, ನಾನು shaving ಮಾಡ್ಕೋಳ್ತಿದ್ನಲ್ಲ, ನಾನು ನನ್ನ ಮುಂದಿ...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ